AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

325 ಗ್ರಾಂ ತೂಕವಿರುವ ಶಿಶುವಿಗೆ ಜನ್ಮ ನೀಡಿದ 17ರ ಬಾಲಕಿ

17 ವರ್ಷದ ಬಾಲಕಿಯೊಬ್ಬಳು 325 ಗ್ರಾಂ ತೂಕದ ಮಗುವಿಗೆ ಜನ್ಮ ನೀಡಿದ ಅಪರೂಪದ ಘಟನೆ ಯುನೈಟೆಡ್​ ಕಿಂಗ್​ಡಮ್​ನಲ್ಲಿ ನಡೆದಿದೆ.  ಈ ಮಗುವನ್ನು ಕಳೆದ 20 ವರ್ಷದಲ್ಲಿ ಯುಕೆಯಲ್ಲಿ ಜನಿಸಿದ ಅತ್ಯಂತ ಸಣ್ಣ ಶಿಶು ಎಂದು ಹೇಳಲಾಗಿದೆ.

325 ಗ್ರಾಂ ತೂಕವಿರುವ ಶಿಶುವಿಗೆ ಜನ್ಮ ನೀಡಿದ 17ರ ಬಾಲಕಿ
ಯುಕೆಯಲ್ಲಿ ಜನಿಸಿದ ಮಗು
TV9 Web
| Edited By: |

Updated on: Jan 12, 2022 | 7:05 PM

Share

17 ವರ್ಷದ ಬಾಲಕಿಯೊಬ್ಬಳು 325 ಗ್ರಾಂ ತೂಕದ ಮಗುವಿಗೆ ಜನ್ಮ ನೀಡಿದ ಅಪರೂಪದ ಘಟನೆ ಯುನೈಟೆಡ್​ ಕಿಂಗ್​ಡಮ್​ನಲ್ಲಿ ನಡೆದಿದೆ.  ಈ ಮಗುವನ್ನು ಕಳೆದ 20 ವರ್ಷದಲ್ಲಿ ಯುಕೆಯಲ್ಲಿ ಜನಿಸಿದ ಅತ್ಯಂತ ಸಣ್ಣ ಶಿಶು ಎಂದು ಹೇಳಲಾಗಿದೆ. ಎಲ್ಲೀ ಪ್ಯಾಟೀನ್​ ಎನ್ನುವ 17 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಕೇವಲ 25 ವಾರಗಳಲ್ಲಿ ಮಗುವಿಗೆ ಜನ್ಮ ನೀಡಿದ್ದು ಮಗುವಿಗೆ ಹನ್ನಾ ಎಂದು ನಾಮಕರಣ ಮಾಡಲಾಗಿದೆ.  ಅವಧಿ ಪೂರ್ವ ಶಿಶು ಬದುಕುವ ಸಾಧ್ಯತೆ ಶೇ. 20 ರಷ್ಟು ಮಾತ್ರ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಐಸಿಯುವಿನಲ್ಲಿರುವ ಮಗು ಸಾವು ಬದುಕಿನ ಮಧ್ಯೆ ಹೋರಾಡುತ್ತಿದೆ.

ಎಲ್ಲೀ ಮತ್ತು ಬ್ರ್ಯಾಂಡನ್​ ಸ್ಟಿಬಲ್ಸ್​ ಎನ್ನುವ ಜೋಡಿಗೆ ಈ ಮಗು ಜನಿಸಿದೆ. 22ನೇ ವಾರದಲ್ಲಿ ದಂಪತಿ ಸ್ಕ್ಯಾನಿಂಗ್​ ಮಾಡಿಸಿದಾಗ ಮಗು ಚಿಕ್ಕದಾಗಿದೆ ಇನ್ನೂ ಪೂರ್ತಿಯಾಗಿ ಬೆಳವಣಿಗೆಯಾಗಿಲ್ಲ ಎಂದು ವೈದ್ಯರು ತಿಳಿಸಿದ್ದರು. ಆದರೆ ಡಿಸೆಂಬರ್​ 29ರಂದು ಎಲ್ಲೀ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕಾರಣ ಐರ್ಲೆಂಡ್​ನ ಕ್ರಾಸ್​ ಹೌಸ್​  ಎನ್ನುವ ಆಸ್ತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರವಾದ ಕೆಳಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕಾರಣ ರಾಣಿ ಎಲಿಜಬೇತ್​ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು.  ಡಿ 30ರಂದು ಎಲ್ಲೀ ಶಿಶುವಿಗೆ ಜನ್ಮ ನೀಡಿದ್ದಾಳೆ ಎಂದು ವರದಿ ತಿಳಿಸಿದೆ.

ಈ ಮೊದಲು 2003ರಲ್ಲಿ ಜನಿಸಿದ ಆಲಿಯಾ ಅತಿ ಕಿರಿಯ ಮಗು ಎಂದು ಗುರುತಿಸಲಾಗಿದೆ. ಆಲಿಯಾ ಮಗು ಜನಿಸುವಾಗ ಕೇವಲ 340 ಗ್ರಾಂ ತೂಕವಿತ್ತು. ಇದೀಗ ಜನಿಸಿದ ಶಿಶು 325 ಗ್ರಾಂ ತೂಕವಿದ್ದು 20 ವರ್ಷಗಳ ಬಳಿಕ ಜನಸಿದ ಸಣ್ಣ ಶಿಶು ಎನ್ನಲಾಗಿದೆ. ಮಗು ಬದುಕುವ ಅವಕಾಶ ಕಡಿಮೆಯಿದೆ ಎಂದು ವೈದ್ಯರು ತಿಳಿಸಿದ್ದರೂ ಎಲ್ಲೀ ದಂಪತಿ ಮಗುವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ.

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್