ಕ್ಷೀರಪಥದಲ್ಲಿ ಕಂಡುಬಂತು ಇದುವರೆಗೆ ಕಂಡೇ ಇರದ ವಸ್ತು; ಏನಿದು? ಇಲ್ಲಿದೆ ಕುತೂಹಲಕರ ಹೊಸ ಸಮಾಚಾರ!

ಬಾಹ್ಯಾಕಾಶದಲ್ಲಿ ಅಚ್ಚರಿಯ ವಿದ್ಮಾನವೊಂದು ಜರುಗಿದ್ದು ಕ್ಷೀರಪಥದಲ್ಲಿ ಇದುವರೆಗೂ ನೋಡಿರದ ವಿದ್ಯಮಾನವೊಂದು ಗೋಚರವಾಗಿದೆ. ಏನಿದು ವಿಚಾರ? ಇದರ ಪರಿಣಾಮ ಏನು? ಇಲ್ಲಿದೆ ಕುತೂಹಲಕರ ಮಾಹಿತಿ.

ಕ್ಷೀರಪಥದಲ್ಲಿ ಕಂಡುಬಂತು ಇದುವರೆಗೆ ಕಂಡೇ ಇರದ ವಸ್ತು; ಏನಿದು? ಇಲ್ಲಿದೆ ಕುತೂಹಲಕರ ಹೊಸ ಸಮಾಚಾರ!
ಸಂಶೋಧಕರು ಹಂಚಿಕೊಂಡ ಚಿತ್ರ
Follow us
| Updated By: shivaprasad.hs

Updated on: Jan 27, 2022 | 4:00 PM

ಬಾಹ್ಯಾಕಾಶದಲ್ಲಿ ಅಚ್ಚರಿಯ ವಿದ್ಮಾನವೊಂದು ಜರುಗಿದ್ದು, ಪ್ರಪಂಚದೆಲ್ಲೆಡೆ ತೀವ್ರ ಕುತೂಹಲ ಹುಟ್ಟುಹಾಕಿದೆ. ಆಸ್ಟ್ರೇಲಿಯಾದ ಸಂಶೋಧಕರು ಈ ವಿದ್ಯಮಾನವನ್ನು ಗುರುತಿಸಿದ್ದಾರೆ. ಏನಿದು ಹೊಸ ವಿದ್ಯಮಾನ ಅಂತೀರಾ? ಕ್ಷೀರಪಥದಲ್ಲಿ ಇದುವರೆಗೂ ನೋಡಿರದ ವಸ್ತುವೊಂದು ಗೋಚರವಾಗಿದೆ (ಮೇಲಿನ ಚಿತ್ರದಲ್ಲಿ ಗಮನಿಸಬಹುದು). ಈ ವಿದ್ಯಮಾನವನ್ನು ಗಮನಿಸಿದ್ದು ವಿಶ್ವವಿದ್ಯಾಲಯದಲ್ಲಿ ಪದವಿ ಓದುತ್ತಿರುವ ಒಬ್ಬ ವಿದ್ಯಾರ್ಥಿ. ಪ್ರತೀ ಗಂಟೆಗೆ ಮೂರು ಬಾರಿ ಇದು ಸಂಭವಿಸಿದೆ ಎಂದು ಹೇಳಲಾಗಿದೆ. ‘‘ಪ್ರತೀ 18.18 ನಿಮಿಷಕ್ಕೆ ಅರ್ಥಾತ್ ಗಡಿಯಾರದ ಸುತ್ತುವಿಕೆಯಂತೆ ಆ ಬೆಳಕು ಕಾಣಿಸಿಕೊಂಡಿದೆ ಎಂದಿದ್ದಾರೆ ಖಗೋಳ ಭೌತಶಾಸ್ತ್ರಜ್ಞೆ ನತಾಶಾ ಹರ್ಲಿ-ವಾಕರ್. ಮರ್ಚಿಸನ್ ವೈಡ್‌ಫೀಲ್ಡ್ ಅರೇ ಎಂದು ಕರೆಯಲ್ಪಡುವ ಪಶ್ಚಿಮ ಆಸ್ಟ್ರೇಲಿಯಾದ ಹೊರವಲಯದಲ್ಲಿರುವ ದೂರದರ್ಶಕವನ್ನು ಬಳಸಿಕೊಂಡು ಇದನ್ನು ಗಮನಿಸಲಾಗಿದೆ. ಬ್ರಹ್ಮಾಂಡದಲ್ಲಿ ಪಲ್ಸರ್‌ಗಳಂತಹ ಸ್ವಿಚ್ ಆನ್ ಮತ್ತು ಆಫ್ ಆಗುವಂತೆ ತೋರುವ ಇತರ ವಸ್ತುಗಳು ಇದ್ದರೂ- ಈಗ ಗುರುತಿಸಿದ ವಿದ್ಯಮಾನ ಮೊದಲ ಬಾರಿಗೆ ಗೋಚರಿಸಿದೆ ಎಂದಿದ್ದಾರೆ ಹರ್ಲಿ-ವಾಕರ್. ಇದುವರೆಗೆ ಈ ರೀತಿಯದ್ದು ಕಂಡೇ ಇಲ್ಲ. ಆದ್ದರಿಂದ ಇದು ಪ್ರತೀ ಖಗೋಳ ಶಾಸ್ತ್ರಜ್ಞರನ್ನು ಒಂದು ರೀತಿಯಲ್ಲಿ ಬೆಚ್ಚಿ ಬೀಳಿಸಿದೆ ಎಂದರೆ ತಪ್ಪಿಲ್ಲ ಎಂದೂ ಅವರು ಹೇಳಿದ್ದಾರೆ. ಸಂಶೋಧನಾ ತಂಡವು ಈಗ ಅವರು ಕಂಡುಕೊಂಡಿದ್ದನ್ನು ಅರ್ಥಮಾಡಿಕೊಳ್ಳಲು ಕೆಲಸ ಮಾಡುತ್ತಿದೆ.

ದತ್ತಾಂಶಗಳ ಮೂಲಕ ಸಂಶೋಧಕರು ಕೆಲವು ಸತ್ಯಗಳನ್ನು ಈಗ ಕಂಡುಕೊಂಡಿದ್ದಾರೆ. ಅದರ ಅನ್ವಯ ವಸ್ತುವು ಭೂಮಿಯಿಂದ ಸುಮಾರು 4,000 ಜ್ಯೋತಿರ್ವರ್ಷ ದೂರದಲ್ಲಿದೆ. ಹಾಗೂ ನಂಬಲಾಗದಷ್ಟು ಪ್ರಕಾಶಮಾನವಾಗಿದೆ ಮತ್ತು ಅತ್ಯಂತ ಬಲವಾದ ಕಾಂತೀಯ ಕ್ಷೇತ್ರವನ್ನು ಹೊಂದಿದೆ. ಆದರೆ ಇನ್ನೂ ಹಲವು ರಹಸ್ಯಗಳು ಮತ್ತಷ್ಟು ಅಧ್ಯಯನದ ನಂತರವೇ ತಿಳಿಯಬೇಕಿದೆ.

‘‘ನೀವು ಎಲ್ಲಾ ಲೆಕ್ಕಾಚಾರ ಮಾಡಿದರೂ, ಪ್ರತಿ 20 ನಿಮಿಷಗಳಿಗೊಮ್ಮೆ ಈ ರೀತಿಯ ರೇಡಿಯೊ ತರಂಗಗಳನ್ನು ಉತ್ಪಾದಿಸಲು ಅದಕ್ಕೆ ಸಾಕಷ್ಟು ಶಕ್ತಿ ಇರಬಾರದು’’ ಎಂದಿದ್ದಾರೆ ಹರ್ಲಿ-ವಾಕರ್. ಆಬ್ಜೆಕ್ಟ್ ಅಸ್ತಿತ್ವದಲ್ಲಿರಬಹುದು ಎಂದು ಸಂಶೋಧಕರು ಈ ಹಿಂದೆ ಸಿದ್ಧಾಂತದಲ್ಲಿ ತಿಳಿಸಿರಬಹುದು. ಆದರೆ ‘ಅಲ್ಟ್ರಾ-ಲಾಂಗ್ ಪೀರಿಯಡ್ ಮ್ಯಾಗ್ನೆಟರ್’ ಎಂದೆಂದಿಗೂ ನೋಡಿಲ್ಲ ಎಂದು ಅವರು ಹೇಳಿದ್ದಾರೆ. ಇದು ಬಿಳಿ ಕುಬ್ಜ ಅಥವಾ ಹಳೆಯ ನಕ್ಷತ್ರದ ಅವಶೇಷವೂ ಆಗಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇಷ್ಟು ವಿವರಿಸಿರುವ ಸಂಶೋಧಕಿ ಹರ್ಲಿ ವಾಕರ್ ಮತ್ತೊಂದು ಸಾಧ್ಯತೆಯನ್ನೂ ತೆರೆದಿಟ್ಟಿದ್ದಾರೆ. ಈ ಎಲ್ಲಾ ಅಂಶಗಳು ಇದುವರೆಗೆ ಕಂಡುಕೊಂಡ ಅಂಶಗಳಿಂದ ವಿವರಿಸಿದವುಗಳು. ಆದರೆ ಇದು ನಾವು ಈವರೆಗೆ ಎಂದೂ ಯೋಚಿಸಿದ ಹೊಸ ವಿದ್ಯಮಾನ/ ವಿಷಯವೂ ಆಗಿರಬಹುದು ಎಂದು ಅವರು ಹೇಳಿದ್ದಾರೆ.

ಇದು ಏಲಿಯನ್​ಗಳು ಕಳುಹಿಸಿದ ಸಿಗ್ನಲ್ ಆಗಿರಬಹುದೇ?: ಈ ಬೆಳಕು ಬೇರೆ ಗ್ರಹದ ಜೀವಿಗಳು ಸತತವಾಗಿ ಕಳುಹಿಸುತ್ತಿರುವ ರೇಡಿಯೋ ಸಿಗ್ನಲ್ ಆಗಿರಬಹುದೇ ಎಂಬ ಪ್ರಶ್ನೆಯೂ ಹರ್ಲಿ ವಾಕರ್ ಅವರಿಗೆ ಕೇಳಲಾಗಿತ್ತು. ಇದಕ್ಕೆ ಅವರು ಅಚ್ಚರಿಯ ಉತ್ತರ ನೀಡಿದ್ದು, ಇದು ಏಲಿಯನ್​ಗಳಾಗಿರಬಹುದೇ ಎಂದು ಕಳವಳಗೊಂಡಿದ್ದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಸಂಶೋಧಕರು ಇದನ್ನು ದೊಡ್ಡ ಮಟ್ಟದ ಸಿಗ್ನಲ್ ಆಗಿ ಕಂಡುಕೊಂಡಿದ್ದಾರೆ. ಆದ್ದರಿಂದ ಇದು ಪ್ರಾಕೃತಿಕವಾಗಿರಬೇಕೇ ಹೊರತು ಕೃತಕವಾಗಿರುವುದು ಅಸಾಧ್ಯ ಎಂದಿದ್ದಾರೆ ಹರ್ಲಿ ವಾಕರ್.

ಇದರ ಮುಂದಿನ ಸಂಶೋಧನೆಗಳ ಕುರಿತು ಮಾಹಿತಿ ನೀಡಿದ ಅವರು, ಬ್ರಹ್ಮಾಂಡದಲ್ಲಿ ಇಂತಹ ಮತ್ತಷ್ಟು ವಸ್ತುಗಳು ಹಾಗೂ ವಿದ್ಯಮಾನಗಳನ್ನು ನಾವು ಹುಡುಕುತ್ತೇವೆ ಎಂದು ಹೇಳಿದ್ದಾರೆ. ಇದರಿಂದ ಇಂತಹ ಘಟನೆಗಳು ಅಪರೂಪವೇ ಅಥವಾ ಹಿಂದೆಂದೂ ಕಂಡಿರದ ಹೊಸ ಬೆಳವಣಿಗೆಯೇ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದು ಹರ್ಲಿ ವಾಕರ್ ಹೇಳಿದ್ದಾರೆ.

ಇದನ್ನೂ ಓದಿ:

Viral: ಆಲೂಗಡ್ಡೆ ಪದಾರ್ಥ ಎಸೆದು ಕಿತ್ತಾಡಿಕೊಂಡ ಮಹಿಳಾ ಖೈದಿಗಳು; ಅವರಿಗೆ ನ್ಯಾಯಾಲಯ ವಿಧಿಸಿದ ದಂಡವೆಷ್ಟು ಗೊತ್ತಾ?

Senior Citizen FD Scheme: ಎಸ್​ಬಿಐ, ಎಚ್​ಡಿಎಫ್​ಸಿ ಹಾಗೂ ಐಸಿಐಸಿಐ ಬ್ಯಾಂಕ್​ನ ಹಿರಿಯ ನಾಗರಿಕರ ಎಫ್​ಡಿ ಬಡ್ಡಿ ದರಗಳಿವು