ಕೆನಡಾ-ಅಮೆರಿಕ ಗಡಿ ಬಳಿ ತೀವ್ರ ಚಳಿಗೆ ಸಿಲುಕಿ ಸಾವಿಗೀಡಾದ ಭಾರತೀಯ ಕುಟುಂಬದ ಗುರುತು ಪತ್ತೆ

ಕೆನಡಾದ ಅಧಿಕಾರಿಗಳು ವೈದ್ಯಕೀಯ ಪರೀಕ್ಷೆಯ ನಂತರ ಸಂದರ್ಭಗಳ ಆಧಾರದ ಮೇಲೆ, ಎಲ್ಲಾ ವ್ಯಕ್ತಿಗಳ ಸಾವು ಹೊರಗಿನ ವಾತಾವರಣಕ್ಕೆ  ಒಡ್ಡಿಕೊಳ್ಳುವುದರಿಂದ ಸಂಭವಿಸಿದೆ ಎಂದು ನಿರ್ಧರಿಸಲಾಗಿದೆ ಎಂದು ಭಾರತೀಯ ಹೈಕಮಿಷನ್ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಕೆನಡಾ-ಅಮೆರಿಕ ಗಡಿ ಬಳಿ ತೀವ್ರ ಚಳಿಗೆ ಸಿಲುಕಿ ಸಾವಿಗೀಡಾದ ಭಾರತೀಯ ಕುಟುಂಬದ ಗುರುತು ಪತ್ತೆ
ಭಾರತೀಯ ಕುಟುಂಬ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jan 28, 2022 | 2:34 PM

ನ್ಯೂಯಾರ್ಕ್: ಕೆನಡಾ-ಅಮೆರಿಕ ಗಡಿಯಲ್ಲಿ (Canada/US border) ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ನಾಲ್ವರು ಭಾರತೀಯರ ಕುಟುಂಬವನ್ನು ಗುರುತಿಸಲಾಗಿದ್ದು, ಆ ಕುಟುಂಬವು ಕೆಲ ಕಾಲ ದೇಶಾದ್ಯಂತ ಸುತ್ತಾಡಿದ್ದು, ಇವರು ಕಾನೂನು ಬಾಹಿರವಾಗಿ ಯಾರದ್ದೋ ಸಲಹೆಯಂತೆ ಗಡಿಯನ್ನು ದಾಟುವ ವೇಳೆ ಆ ಪ್ರಕರಣ ಸಂಭವಿಸಿದೆ ಎಂದು ಕೆನಡಾ ಅಧಿಕಾರಿಗಳು ಹೇಳಿದ್ದಾರೆ. ಕೆನಡಾ- ಅಮೆರಿಕ ಗಡಿಯಿಂದ ಸುಮಾರು 12 ಮೀಟರ್ ದೂರದಲ್ಲಿರುವ ಮ್ಯಾನಿಟೋಬಾದ ಎಮರ್ಸನ್ ಬಳಿ ಒಂದೇ ಕುಟುಂಬದ ಜಗದೀಶ್ ಬಲದೇವ್‌ಭಾಯ್ ಪಟೇಲ್(39), ವೈಶಾಲಿಬೆನ್ ಜಗದೀಶ್‌ಕುಮಾರ್ ಪಟೇಲ್ (37), ವಿಹಂಗಿ ಜಗದೀಶ್‌ಕುಮಾರ್ ಪಟೇಲ್(11) ಮತ್ತು 3 ವರ್ಷದ ಧಾರ್ಮಿಕ್ ಜಗದೀಶ್‌ಕುಮಾರ್ ಪಟೇಲ್ ಜನವರಿ 19ರಂದು ಶವವಾಗಿ ಪತ್ತೆಯಾಗಿದ್ದಾರೆ ಎಂದು ಮ್ಯಾನಿಟೋಬಾ ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸರು (Manitoba Royal Canadian Mounted Police) ಹೇಳಿದ್ದಾರೆ.  ಈ ಹಿಂದೆ ಈ ಕುಟುಂಬದಲ್ಲಿ ವಯಸ್ಕ ಪುರುಷ, ವಯಸ್ಕ ಮಹಿಳೆ ಹದಿಹರೆಯದ ಬಾಲಕ ಮತ್ತು ಮಗು ಇದೆ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ಈಗ ಸಾವಿಗೀಡಾದವರಲ್ಲಿ ಹದಿಹರೆಯದ ಬಾಲಕ ಅಲ್ಲ ಬಾಲಕಿ ಇದ್ದಾಳೆ ಎಂದು ಹೇಳಿದ್ದಾರೆ.  ಸಾವಿಗೀಡಾದವರ ಗುರುತುಗಳನ್ನು ಕೆನಡಾದ ಅಧಿಕಾರಿಗಳು ದೃಢಪಡಿಸಿದರು ಮತ್ತು ಜನವರಿ 26 ರಂದು ಶವಪರೀಕ್ಷೆಗಳನ್ನು ಪೂರ್ಣಗೊಳಿಸಲಾಯಿತು.  ಮ್ಯಾನಿಟೋಬಾದ ಮುಖ್ಯ ವೈದ್ಯಕೀಯ ಪರೀಕ್ಷಕರ ಕಚೇರಿಯು ಸಾವಿಗೆ ಹೊರಗಿನ ವಾತಾವರಣಕ್ಕೆಒ ಒಡ್ಡುವಿಕೆಯೇ ಕಾರಣ ಎಂದು ದೃಢಪಡಿಸಿದೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೋಲಿಸ್ (RCMP) ಯ ಹೇಳಿಕೆಯು ಗುರುವಾರ ತಿಳಿಸಿದೆ.   ಕೆನಡಾದ ಒಟ್ಟಾವಾದಲ್ಲಿರುವ ಭಾರತದ ಹೈಕಮಿಷನ್ ಪತ್ರಿಕಾ ಪ್ರಕಟಣೆಯಲ್ಲಿ ನಾಲ್ವರನ್ನು ಗುರುತಿಸಿದ್ದು ಸಂತ್ರಸ್ತರ ಕುಟುಂಬಕ್ಕೆ ತಿಳಿಸಲಾಗಿದೆ ಎಂದು ಹೇಳಿದರು. 

ಟೊರೊಂಟೊದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಸಂತ್ರಸ್ತರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಎಲ್ಲಾ ಬೆಂಬಲವನ್ನು ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.    “ಹೈಕಮಿಷನ್ ಸಂತ್ರಸ್ತರ ಕುಟುಂಬಕ್ಕೆ ಪ್ರಾಮಾಣಿಕ ಸಂತಾಪವನ್ನು ನೀಡುತ್ತದೆ” ಎಂದು ಅದು ಹೇಳಿದೆ.

ಕೆನಡಾದ ಅಧಿಕಾರಿಗಳು ವೈದ್ಯಕೀಯ ಪರೀಕ್ಷೆಯ ನಂತರ ಸಂದರ್ಭಗಳ ಆಧಾರದ ಮೇಲೆ, ಎಲ್ಲಾ ವ್ಯಕ್ತಿಗಳ ಸಾವು ಹೊರಗಿನ ವಾತಾವರಣಕ್ಕೆ  ಒಡ್ಡಿಕೊಳ್ಳುವುದರಿಂದ ಸಂಭವಿಸಿದೆ ಎಂದು ನಿರ್ಧರಿಸಲಾಗಿದೆ ಎಂದು ಭಾರತೀಯ ಹೈಕಮಿಷನ್ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಪಟೇಲ್ ಕುಟುಂಬವು ಜನವರಿ 12, 2022 ರಂದು ಟೊರೊಂಟೊಗೆ ಆಗಮಿಸಿತು ಮತ್ತು ಅಲ್ಲಿಂದ ಅವರು ಜನವರಿ 18 ರ ಸುಮಾರಿಗೆ ಎಮರ್ಸನ್‌ಗೆ ತೆರಳಿದರು ಎಂದು ಆರ್​​ಸಿಎಂಪಿ ದೃಢಪಡಿಸಿತು. ಗಡಿಯ ಕೆನಡಾದ ಭಾಗದಲ್ಲಿ ಯಾವುದೇ ಬಿಟ್ಟು ಹೋದ ವಾಹನ ಇರಲಿಲ್ಲ. ಯಾರೋ ಕುಟುಂಬವನ್ನು ಗಡಿಗೆ ಕರೆದೊಯ್ದಿದ್ದರು ಮತ್ತು ನಂತರ ಅವರನ್ನು ಅಲ್ಲಿ ಬಿಟ್ಟು ಹೋಗಿದ್ದರು ಎಂದು ಇದು ಸೂಚಿಸುತ್ತದೆ, ಈ ಕುಟುಂಬ ಟೊರೊಂಟೊದಿಂದ ಎಮರ್ಸನ್‌ಗೆ ಹೇಗೆ ಪ್ರಯಾಣಿಸಿದರು ಎಂಬುದನ್ನು ನಾವು ಪತ್ತೆಹಚ್ಚುತ್ತಿದ್ದೇವೆ ಎಂದು ಆರ್‌ಸಿಎಂಪಿ ಹೇಳಿದೆ.

ಕೆನಡಾದಲ್ಲಿ ಅವರ ಚಟುವಟಿಕೆ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸಂಭವಿಸಿದ ಬಂಧನದಿಂದಾಗಿ ಇದು ಮಾನವ ಕಳ್ಳಸಾಗಣೆಯ ಪ್ರಕರಣ ಎಂದು ನಾವು ಭಾವಿಸಿದ್ದೇವೆ ಎಂದು ಅದು ಹೇಳಿದೆ.

ಪಟೇಲ್ ಕುಟುಂಬವು ಸ್ವಲ್ಪ ಸಮಯದಿಂದೀಚೆಗೆ ಕೆನಡಾಕ್ಕೆ ಸ್ಥಳಾಂತರಗೊಂಡಿತು ಮತ್ತು “ಅವರೊಂದಿಗೆ ಭೇಟಿಯಾಗಿರುವ ಜನರನ್ನು ನಾವು ಹುಡುಕುತ್ತಿದ್ದೇವೆ” ಎಂದು ಆರ್​​ಸಿಎಂಪಿ ಹೇಳಿದೆ. ಮಾನವ ಕಳ್ಳಸಾಗಣೆ ಆರೋಪ ಹೊತ್ತಿರುವ 47 ವರ್ಷದ ಅಮೆರಿಕ ಪ್ರಜೆ ಸ್ಟೀವ್ ಶಾಂಡ್ ವಿರುದ್ಧ ಮಿನ್ನೇಸೋಟ ಜಿಲ್ಲೆಯ ಯುಎಸ್ ಜಿಲ್ಲಾ ನ್ಯಾಯಾಲಯದಲ್ಲಿ ಕಳೆದ ವಾರ ಕ್ರಿಮಿನಲ್ ದೂರು ದಾಖಲಿಸಲಾಗಿದೆ.

“ದಾಖಲೆಯಿಲ್ಲದ ವಿದೇಶಿ ಪ್ರಜೆಗಳ ಶಂಕಿತ ಕಳ್ಳಸಾಗಾಣಿಕೆದಾರ” ಶಾಂಡ್ ಅವರನ್ನು ಜನವರಿ 19 ರಂದು ಅಮೆರಿಕ-/ಕೆನಡಾದ ಗಡಿಯ ಬಳಿ ಅಮೆರಿಕನ್ ಅಧಿಕಾರಿಗಳು ಅಮೆರಿಕದಲ್ಲಿ ಅಕ್ರಮವಾಗಿ ಹಾಜರಿದ್ದ ಇಬ್ಬರು ಭಾರತೀಯ ಪ್ರಜೆಗಳನ್ನು ಸಾಗಿಸಲು ಬಂಧಿಸಿದರು.

ದೂರಿನಲ್ಲಿ ಇಬ್ಬರು ಭಾರತೀಯ ಪ್ರಜೆಗಳನ್ನು ‘ಎಸ್‌ಪಿ’ ಮತ್ತು ‘ವೈಪಿ’ ಎಂದು ಗುರುತಿಸಲಾಗಿದೆ. ಶಾಂಡ್‌ನ ಬಂಧನದ ಸಮಯದಲ್ಲಿ “ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕಾನೂನುಬಾಹಿರವಾಗಿ ಉಪಸ್ಥಿತರಿರುವ ಐದು ಭಾರತೀಯ ಪ್ರಜೆಗಳ ಗುಂಪನ್ನು ಗುರುತಿಸಲಾಯಿತು ಮತ್ತು ಬಂಧಿಸಲಾಯಿತು”.

ಶಾಂಡ್ ಅವರನ್ನು ಬಂಧಿಸಿದ ದಿನ, ಯುಎಸ್ ಬಾರ್ಡರ್ ಪೆಟ್ರೋಲ್ ಅಧಿಕಾರಿಗಳು ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್‌ನಿಂದ ವರದಿಯನ್ನು ಸ್ವೀಕರಿಸಿದರು, ಪಟೇಲ್ ಕುಟುಂಬದ ದೇಹಗಳು ಕೆನಡಾದ ಅಂತರಾಷ್ಟ್ರೀಯ ಗಡಿಯೊಳಗೆ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಕಂಡುಬಂದಿವೆ. ಶಾಂಡ್ ಅವರನ್ನು ಷರತ್ತುಬದ್ಧವಾಗಿ ಮತ್ತು ಬಾಂಡ್ ಪಾವತಿಸದೆ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ದೇಹಗಳು ಪತ್ತೆಯಾದ ನಂತರ, ತಕ್ಷಣವೇ ವ್ಯಾಪಕವಾದ ತನಿಖೆಯನ್ನು ಪ್ರಾರಂಭಿಸಲಾಯಿತು ಮತ್ತು ಎಮರ್ಸನ್ ಆರ್ ಸಿಎಂಪಿ ಡಿಟ್ಯಾಚ್ಮೆಂಟ್, ಇಂಟಿಗ್ರೇಟೆಡ್ ಬಾರ್ಡರ್ ಎನ್ಫೋರ್ಸ್ಮೆಂಟ್ ಟೀಮ್ (IBET) ಮತ್ತು ಪ್ರಮುಖ ಅಪರಾಧ ಸೇವೆಗಳ ಅಧಿಕಾರಿಗಳು ಸೇರಿದಂತೆ ಮ್ಯಾನಿಟೋಬಾ ಆರ್​​ಸಿಎಂಪಿ ಅಮೆರಿಕ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ ಮತ್ತು ಯುಎಸ್ ಡಿಪಾರ್ಟ್ಮೆಂಟ್ ಆಫ್ ಹೋಮ್ಲ್ಯಾಂಡ್ ಸೆಕ್ಯುರಿಟಿ  ತನಿಖೆ ನಡೆಸುತ್ತದೆ.

ಆರ್‌ಸಿಎಂಪಿಯು ಭಾರತದ ನವದೆಹಲಿ ಮತ್ತು ವಾಷಿಂಗ್ಟನ್ ಡಿಸಿಯಲ್ಲಿನ ಆರ್‌ಸಿಎಂಪಿ ಸಂಪರ್ಕ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ ಮತ್ತು ಭಾರತೀಯ ಕಾನ್ಸುಲರ್ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದೆ ಎಂದು ಆರ್‌ಸಿಎಂಪಿ ಹೇಳಿದೆ. ಭಾರತೀಯ ಹೈಕಮಿಷನ್ ಮತ್ತು ಟೊರೊಂಟೊದಲ್ಲಿರುವ ಭಾರತದ ಕಾನ್ಸುಲೇಟ್ ಈ ಘಟನೆಯ ತನಿಖೆಯ ಎಲ್ಲಾ ಅಂಶಗಳ ಬಗ್ಗೆ ಕೆನಡಾದ ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.

ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್‌ನ ಹಿರಿಯ ಕಾನ್ಸುಲರ್ ಅಧಿಕಾರಿಯ ನೇತೃತ್ವದ ವಿಶೇಷ ತಂಡವು ಕೆನಡಾದ ಏಜೆನ್ಸಿಗಳ ನಡೆಯುತ್ತಿರುವ ತನಿಖೆಗಳಿಗೆ ಸಹಾಯ ಮಾಡಲು ಮತ್ತು ಸಂತ್ರಸ್ತರಿಗೆ ಯಾವುದೇ ಕಾನ್ಸುಲರ್ ಸೇವೆಗಳನ್ನು ನೀಡಲು ಮ್ಯಾನಿಟೋಬಾದಲ್ಲಿ ಕ್ಯಾಂಪ್ ಮಾಡುತ್ತಿದೆ ಎಂದು ಹೈ ಕಮಿಷನ್ ತಿಳಿಸಿದೆ.

ಭಾರತೀಯ ವಲಸಿಗರು ಮತ್ತು ವಿದ್ಯಾರ್ಥಿಗಳಿಗೆ ಕೆನಡಾ ಆದ್ಯತೆಯ ತಾಣವಾಗಿರುವುದರಿಂದ ಈ ದುರಂತವು ಸುರಕ್ಷಿತ ಮತ್ತು ಕಾನೂನುಬದ್ಧ ವಲಸೆಯ ಸಮಸ್ಯೆಗಳನ್ನು ಎತ್ತಿ ತೋರಿಸಿದೆ ಎಂದು ಹೈ ಕಮಿಷನ್ ಹೇಳಿದೆ. “ಈ ದುರಂತವು ಗಮನಕ್ಕೆ ತಂದಿರುವ ದೀರ್ಘಾವಧಿಯ ಸಮಸ್ಯೆಗಳ ಮೇಲೆ (ಅಂದರೆ) ವಲಸೆ ಮತ್ತು ಚಲನಶೀಲತೆಯನ್ನು ಸುರಕ್ಷಿತ ಮತ್ತು ಕಾನೂನುಬದ್ಧಗೊಳಿಸಲಾಗಿದೆ ಮತ್ತು ಅಂತಹ ದುರಂತಗಳು ಮರುಕಳಿಸದಂತೆ ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಭಾರತ ಮತ್ತು ಕೆನಡಾ ನಡುವೆ ಹಲವಾರು ವಿಚಾರಗಳು ಚರ್ಚೆಯಲ್ಲಿವೆ ಎಂದು ಹೈಕಮಿಷನ್ ಹೇಳಿದೆ.

ಅನಿಯಮಿತ ವಲಸೆ, ವಲಸಿಗರ ಕಳ್ಳಸಾಗಣೆ ಮತ್ತು ಮಾನವ ಕಳ್ಳಸಾಗಣೆಯನ್ನು ತಡೆಗಟ್ಟಲು ಮತ್ತು ನಿಗ್ರಹಿಸಲು ಮತ್ತು ಸುಸ್ಥಿರ ಮತ್ತು ವೃತ್ತಾಕಾರದ ಚಲನಶೀಲತೆಯನ್ನು ಸುಲಭಗೊಳಿಸಲು, ಭಾರತವು ಕೆನಡಾಕ್ಕೆ ಸಮಗ್ರ ವಲಸೆ ಮತ್ತು ಚಲನಶೀಲ ಪಾಲುದಾರಿಕೆ ಒಪ್ಪಂದವನ್ನು (MMPA) ಪ್ರಸ್ತಾಪಿಸಿದೆ, ಇದು ಕೆನಡಾ ಸರ್ಕಾರದ ಪರಿಗಣನೆಯಲ್ಲಿದೆ.

ಭಾರತ-ಕೆನಡಾ ದ್ವಿಪಕ್ಷೀಯ ಸಂಬಂಧಗಳಲ್ಲಿ ಜನರಿಂದ ಜನರ ಸಂಬಂಧಗಳು ಪ್ರಮುಖ ಆಧಾರಸ್ತಂಭವಾಗಿದೆ. ಭಾರತೀಯ ವಲಸಿಗರು ಮತ್ತು ವಿದ್ಯಾರ್ಥಿಗಳಿಗೆ ಕೆನಡಾ ಆದ್ಯತೆಯ ತಾಣವಾಗಿದೆ. ಭಾರತ ಮತ್ತು ಕೆನಡಾ  ಎಲ್ಲಾ ಭಾರತೀಯ ವಲಸಿಗರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಒಟ್ಟಾಗಿ ಕೆಲಸ ಮಾಡುತ್ತವೆ. ಉಭಯ ದೇಶಗಳು ನಿಯಮಿತ ಕಾನ್ಸುಲರ್ ಸಂವಾದವನ್ನು ಹೊಂದಿವೆ, ಇದು ವಲಸೆ ಮತ್ತು ಪರಸ್ಪರರ ಪ್ರದೇಶಗಳಲ್ಲಿ ನಾಗರಿಕರ ಕಲ್ಯಾಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತೆಗೆದುಕೊಳ್ಳುತ್ತದೆ, ”ಎಂದು ಹೈ ಕಮಿಷನ್ ಹೇಳಿದೆ.

ಇದನ್ನೂ ಓದಿ: Bihar bandh ಬಿಹಾರ ಬಂದ್ ಕೈ ಬಿಡುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದ ಶಿಕ್ಷಕ; ಯಾರು ಈ ಖಾನ್​​​​​ ಸರ್?

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?