ಪಟನಾ: ರೈಲ್ವೇ ನೇಮಕಾತಿ ಅಭಿಯಾನಕ್ಕೆ ಸಂಬಂಧಿಸಿದ ಪ್ರತಿಭಟನೆಯಲ್ಲಿ ಎಂಟು ವಿದ್ಯಾರ್ಥಿಗಳನ್ನು ಬಂಧಿಸಿ ಕೋಚಿಂಗ್ ಸೆಂಟರ್‌ಗಳ ಮಾಲೀಕರನ್ನು ಬಂಧಿಸಿದ ಒಂದು ದಿನದ ನಂತರ, ಖಾನ್ ಸರ್ ಎಂದು ಕರೆಯಲ್ಪಡುವ ಫೈಸಲ್ ಖಾನ್ ಬಿಹಾರ ಬಂದ್ (Bihar Bandh) ಹಿಂಪಡೆಯುವಂತೆ ಆಕಾಂಕ್ಷಿಗಳಿಗೆ ಮನವಿ ಮಾಡಿದ್ದಾರೆ. ಖಾನ್ ಸರ್ (Khan Sir)ವಿರುದ್ದವೂ ಎಫ್ಐಆರ್ ದಾಖಲಿಸಲಾಗಿದೆ. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwini vaishnaw) ಅವರು ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರಿಗೆ ಎರಡನೇ ಪರೀಕ್ಷೆ ನಡೆಸುವುದಿಲ್ಲ ಮತ್ತು ಎನ್ಟಿಪಿಸಿ-ಸಿಬಿಟಿ-1 (NTPC-CBT-I) ಪರೀಕ್ಷಾ ಫಲಿತಾಂಶವನ್ನು ಪರಿಷ್ಕರಿಸಲಾಗುವುದು ಎಂದು ಈಗಾಗಲೇ ಭರವಸೆ ನೀಡಿರುವುದರಿಂದ ಪ್ರತಿಭಟನೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಯೂಟ್ಯೂಬ್‌ನಲ್ಲಿ ವಿಡಿಯೊ ಮೂಲಕ ಖಾನ್ ವಿದ್ಯಾರ್ಥಿಗಳಿಗೆ ಹೇಳಿದ್ದಾರೆ. ಯೂಟ್ಯೂಬ್‌ನಲ್ಲಿ ಸುಮಾರು 14.5 ಮಿಲಿಯನ್ ಫಾಲೋವರ್ ಗಳನ್ನು ಹೊಂದಿರುವ ಖಾನ್ ಸರ್ ಅವರು ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿಯವರ ಟ್ವೀಟ್ ಅನ್ನು ಉಲ್ಲೇಖಿಸಿದ್ದಾರೆ. ಅದರಲ್ಲಿ ಅವರು ಕೇಂದ್ರ ರೈಲ್ವೆ ಸಚಿವರೊಂದಿಗಿನ ಸಂಭಾಷಣೆಯ ಬಗ್ಗೆ ಮಾತನಾಡಿದ್ದಾರೆ. ವಿದ್ಯಾರ್ಥಿಗಳ ಎಲ್ಲ ಬೇಡಿಕೆಗಳಿಗೆ ಸರಕಾರ ಮನ್ನಣೆ ನೀಡಿದೆ. ಆದ್ದರಿಂದ, ಶುಕ್ರವಾರದ ಬಿಹಾರ ಬಂದ್ ಅನ್ನು ಕೈಬಿಡುವಂತೆ ನಾನು ಅವರನ್ನು ಒತ್ತಾಯಿಸುತ್ತೇನೆ. ಕೆಲ ಕಿಡಿಗೇಡಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ರಾಜ್ಯದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ? ವಿದ್ಯಾರ್ಥಿಗಳು ಅಪಖ್ಯಾತಿ ಪಡೆಯುವುದನ್ನು ನಾವು ಎಂದಿಗೂ ಬಯಸುವುದಿಲ್ಲ. ಬಂದ್ ವೇಳೆ ಯಾವುದೇ ಹಿಂಸಾಚಾರ ನಡೆದರೆ ಶಿಕ್ಷಕರಿಗೆ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಲ್ಲುವುದು ಕಷ್ಟವಾಗುತ್ತದೆ ಎಂದು ಖಾನ್ ವಿಡಿಯೊದಲ್ಲಿ ಹೇಳಿದ್ದಾರೆ. ಈ ವಿಡಿಯೋಗೆ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವು ವಿದ್ಯಾರ್ಥಿಗಳು ಖಾನ್ ಮಾತಿಗೆ ಒಪ್ಪಿಗೆ ಸೂಚಿಸಿದ್ದಾರೆ. ಆದಾಗ್ಯೂ, ವಿದ್ಯಾರ್ಥಿಗಳ ಪ್ರತಿಕ್ರಿಯೆಗಳಿಗೆ ರೈಲ್ವೆ ನೇಮಕಾತಿ ಮಂಡಳಿಯನ್ನು ಖಾನ್ ದೂಷಿಸಿದ್ದಾರೆ.
ಪಟನಾ ಡಿಎಂ ಚಂದ್ರಶೆಲ್ಹಾರ್ ಸಿಂಗ್ ಗುರುವಾರ ಕೋಚಿಂಗ್ ಸೆಂಟರ್‌ಗಳ ಮಾಲೀಕರು ಮತ್ತು ಅದರ ಅಸೋಸಿಯೇಷನ್‌ನ ಏನು ಹೇಳುತ್ತದೆ ಎಂದು ಕೇಳಲು ಭೇಟಿಯಾಗಿದ್ದರು. ಪಟನಾದಲ್ಲಿ ನಡೆದ ಪ್ರತಿಭಟನೆಗಾಗಿ ಖಾನ್ ಸರ್ ಸೇರಿದಂತೆ ಆರು ಶಿಕ್ಷಕರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಏತನ್ಮಧ್ಯೆ, ಇಂದಿನ ಬಿಹಾರ ಬಂದ್‌ಗೆ ಆರ್‌ಜೆಡಿ ನೇತೃತ್ವದ ಮಹಾಮೈತ್ರಿಕೂಟ ಬೆಂಬಲ ನೀಡಿದೆ. “ನಮ್ಮ ಕಾರ್ಯಕರ್ತರು ಬೀದಿಗಿಳಿಯುವುದಿಲ್ಲ, ಆದರೆ ನಾವು ವಿದ್ಯಾರ್ಥಿಗಳ ಹೋರಾಟವನ್ನು ಬೆಂಬಲಿಸುತ್ತೇವೆ. ಯಾವುದೇ ಹಿಂಸಾಚಾರ ನಡೆದರೆ ಅದಕ್ಕೆ ರಾಜ್ಯ ಸರಕಾರವೇ ಹೊಣೆಯಾಗಲಿದೆ ಎಂದು ಆರ್‌ಜೆಡಿ ವಕ್ತಾರ ಮೃತ್ಯುಂಜಯ್ ತಿವಾರಿ ಹೇಳಿದ್ದಾರೆ.
ಯಾರು ಈ ಖಾನ್ ಸರ್?
ಖಾನ್ ಸರ್ ತಮ್ಮ ನಿಜವಾದ ಹೆಸರನ್ನು ಬಹಿರಂಗಪಡಿಸಿಲ್ಲ. ಈ ಹಿಂದೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅವರ ಹೆಸರು ಅಮಿತ್ ಸಿಂಗ್ ಎಂದು ಹೇಳಿಕೊಂಡಿದ್ದರು. ಆದಾಗ್ಯೂ, ಕೆಲವರು ಆತನ ಹೆಸರು ಫೈಸಲ್ ಖಾನ್, ಉತ್ತರ ಪ್ರದೇಶದ ಗೋರಖ್‌ಪುರದ ನಿವಾಸಿ ಎಂದು ಹೇಳಿಕೊಂಡಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಈ ಬಗ್ಗೆ ಕೇಳಿದಾಗ, ಖಾನ್ ಸರ್ ಅವರು ಕಲಿಸುತ್ತಿರುವ ಕೋಚಿಂಗ್ ಇನ್ಸ್ಟಿಟ್ಯೂಟ್ ತನ್ನ ನಿಜವಾದ ಹೆಸರನ್ನು ಬಹಿರಂಗಪಡಿಸದಂತೆ ಅಥವಾ ಅವರ ವೈಯಕ್ತಿಕ ಸಂಖ್ಯೆಯನ್ನು ಹಂಚಿಕೊಳ್ಳದಂತೆ ಕೇಳಿದೆ ಎಂದು ಹೇಳಿದರು. ಕೆಲವು ವಿದ್ಯಾರ್ಥಿಗಳು ನನ್ನನ್ನು ಖಾನ್ ಸರ್ ಎಂದು ಸಂಬೋಧಿಸಲು ಪ್ರಾರಂಭಿಸಿದರು . “ಸಮಯ ಬಂದಾಗ, ಎಲ್ಲರಿಗೂ ನನ್ನ ನಿಜವಾದ ಹೆಸರು ತಿಳಿಯುತ್ತದೆ ಎಂದು ಹೇಳಿದ್ದರು.
ಉದ್ಯೋಗ ಆಕಾಂಕ್ಷಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯೂಟ್ಯೂಬ್‌ನಲ್ಲಿ ಕೋಚಿಂಗ್ ನೀಡುವ ಪಟನಾ ಮೂಲದ ಶಿಕ್ಷಕ ಖಾನ್ ಸರ್ ಬಿಹಾರ ಪೊಲೀಸರ ಸ್ಕ್ಯಾನರ್‌ನಲ್ಲಿರುವ ಪ್ರಮುಖ ವ್ಯಕ್ತಿ. RRB NTPC ಪರೀಕ್ಷೆಗಳಲ್ಲಿ ಆಕಾಂಕ್ಷಿಗಳ ನಡುವೆ ಹಿಂಸಾಚಾರವನ್ನು ಪ್ರಚೋದಿಸಿದ ಪ್ರಮುಖ ಆರೋಪಿ ಎಂದು ಎಫ್ಐಆರ್ ನಲ್ಲಿ ಹೇಳಲಾಗಿದೆ.
ಈ ವ್ಯಕ್ತಿ ಪಟನಾದಲ್ಲಿ ‘ಖಾನ್ ಜಿಎಸ್ ರಿಸರ್ಚ್ ಸೆಂಟರ್’ ಎಂಬ ಹೆಸರಿನಲ್ಲಿ ಜನಪ್ರಿಯ ಕೋಚಿಂಗ್ ಸೆಂಟರ್ ಅನ್ನು ನಡೆಸುತ್ತಿದ್ದಾರೆ ಮತ್ತು ಅದರ ವಿಶಿಷ್ಟ ಬೋಧನಾ ಶೈಲಿಗೆ ಸಾಕಷ್ಟು ಹೆಸರುವಾಸಿಯಾಗಿದ್ದಾರೆ. ಸೋಮವಾರ ಹಿಂಸಾಚಾರ ಭುಗಿಲೆದ್ದ ನಂತರ, ಖಾನ್ ಸರ್ ಸ್ಪಷ್ಟವಾಗಿ ವಿದ್ಯಾರ್ಥಿಗಳು/ಆಕಾಂಕ್ಷಿಗಳು ತಮ್ಮ ಪ್ರತಿಭಟನೆಗಳನ್ನು ಶಾಂತಿಯುತ ರೀತಿಯಲ್ಲಿ ನಡೆಸುವಂತೆ ಮನವಿ ಮಾಡುವ ವಿಡಿಯೊವನ್ನು ಬಿಡುಗಡೆ ಮಾಡಿದರು. ಹಿಂಸಾಚಾರದತ್ತ ಮುಖ ಮಾಡಿದರೆ ಯಾರೂ ಬೆಂಬಲಿಸುವುದಿಲ್ಲ ಎಂದು ಖಾನ್ ಹೇಳಿದ್ದಾರೆ.