Bihar bandh ರೈಲ್ವೇ ಉದ್ಯೋಗ ಪರೀಕ್ಷೆ ವಿವಾದ; ಪಟನಾದಲ್ಲಿ ರಸ್ತೆ ತಡೆ, ಟೈರ್‌ ಸುಟ್ಟುಹಾಕಿ ಪ್ರತಿಭಟಿಸಿದ ಉದ್ಯೋಗಾಕಾಂಕ್ಷಿಗಳು

ರೈಲ್ವೇ ನೇಮಕಾತಿ ಮಂಡಳಿಯ ತಾಂತ್ರಿಕೇತರ ಜನಪ್ರಿಯ ವರ್ಗಗಳು ಪರೀಕ್ಷೆ 2021 ರಲ್ಲಿನ ಅಕ್ರಮಗಳನ್ನು ವಿರೋಧಿಸಿ ಎಡಪಕ್ಷ ಬೆಂಬಲಿತ ಅಖಿಲ ಭಾರತ ವಿದ್ಯಾರ್ಥಿಗಳ ಸಂಘ ಸೇರಿದಂತೆ ಹಲವಾರು ವಿದ್ಯಾರ್ಥಿಗಳ ಸಂಘಟನೆಗಳು ಬಂದ್ ಕರೆಗೆ ಜತೆಯಾಗಿವೆ.

Bihar bandh ರೈಲ್ವೇ ಉದ್ಯೋಗ ಪರೀಕ್ಷೆ ವಿವಾದ; ಪಟನಾದಲ್ಲಿ ರಸ್ತೆ ತಡೆ, ಟೈರ್‌ ಸುಟ್ಟುಹಾಕಿ ಪ್ರತಿಭಟಿಸಿದ ಉದ್ಯೋಗಾಕಾಂಕ್ಷಿಗಳು
ಬಿಹಾರ ಬಂದ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jan 28, 2022 | 11:06 AM

ಪಟನಾ: ರೈಲ್ವೇ ನೇಮಕಾತಿ ಪರೀಕ್ಷೆಗಳಲ್ಲಿ(Railway Recruitment) ಲೋಪವಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿ ಬೆಂಬಲಿತ ಗುಂಪುಗಳು ಮತ್ತು ರಾಜಕೀಯ ಪಕ್ಷಗಳು ಕರೆ ನೀಡಿದ್ದ ಬಂದ್‌ಗೆ ಬೆಂಬಲವಾಗಿ ಪ್ರತಿಭಟನಾಕಾರರು ಶುಕ್ರವಾರ ಪಟನಾದಲ್ಲಿ ರಸ್ತೆಗಳನ್ನು ತಡೆದು ಟೈರ್‌ಗಳನ್ನು ಸುಟ್ಟುಹಾಕಿದರು.  ರೈಲ್ವೇ ನೇಮಕಾತಿ ಮಂಡಳಿಯ ತಾಂತ್ರಿಕೇತರ ಜನಪ್ರಿಯ ವರ್ಗಗಳ (RRB-NTPC) ಪರೀಕ್ಷೆ 2021 ರಲ್ಲಿನ ಅಕ್ರಮಗಳನ್ನು ವಿರೋಧಿಸಿ ಎಡಪಕ್ಷ ಬೆಂಬಲಿತ ಅಖಿಲ ಭಾರತ ವಿದ್ಯಾರ್ಥಿಗಳ ಸಂಘ (AISA) ಸೇರಿದಂತೆ ಹಲವಾರು ವಿದ್ಯಾರ್ಥಿಗಳ ಸಂಘಟನೆಗಳು ಬಂದ್ ಕರೆಗೆ ಜತೆಯಾಗಿವೆ. ಈ ವಾರದ ಆರಂಭದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಸಮಯದಲ್ಲಿ ಗಲಭೆ ವರದಿಗಳ ನಡುವೆಯೇ, ವಿಧ್ವಂಸಕ ಕೃತ್ಯಕ್ಕಾಗಿ ಕನಿಷ್ಠ ನಾಲ್ವರನ್ನು ಬಂಧಿಸಲಾಗಿದೆ. ಆದರೆ ಪ್ರಮುಖ ಕೋಚಿಂಗ್ ಸಂಸ್ಥೆಗಳ ಶಿಕ್ಷಕರು ಸೇರಿದಂತೆ ಹಲವರ ಮೇಲೆ ಹಿಂಸಾಚಾರವನ್ನು ಪ್ರಚೋದಿಸುವ ಮತ್ತು ತೊಡಗಿಸಿಕೊಂಡಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.  ಏತನ್ಮಧ್ಯೆ, ರಾಜ್ಯದ ವಿರೋಧ ಪಕ್ಷಗಳ ಮಹಾಮೈತ್ರಿಕೂಟವು ವಿದ್ಯಾರ್ಥಿಗಳ ನೇತೃತ್ವದ ಬಂದ್ ಕರೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದೆ. ಆದರೆ ಆಡಳಿತಾರೂಢ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರದ ಹಲವಾರು ಘಟಕಗಳು ಪ್ರತಿಭಟನಾಕಾರರ ವಿರುದ್ಧದ ಎಲ್ಲಾ ದೂರುಗಳನ್ನು ಹಿಂಪಡೆಯುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಆಂದೋಲನಕಾರರು, ಹೆಚ್ಚಾಗಿ ರೈಲ್ವೇ ಉದ್ಯೋಗದ ಆಕಾಂಕ್ಷಿಗಳು, ಗಯಾದಲ್ಲಿ ನಿಂತ ರೈಲಿನ ನಾಲ್ಕು ಖಾಲಿ ಬೋಗಿಗಳಿಗೆ ಬೆಂಕಿ ಹಚ್ಚಿದರು ಮತ್ತು ಗಯಾ ಮತ್ತು ಜೆಹಾನಾಬಾದ್ ನಡುವೆ ರೈಲು ಸಂಚಾರವನ್ನು ಬುಧವಾರ ನಿರ್ಬಂಧಿಸಿದ್ದಾರೆ. ಅವರಲ್ಲಿ ಹಲವರು ರಾಜೇಂದ್ರ ನಗರ-ನವದೆಹಲಿ ತೇಜಸ್ ರಾಜಧಾನಿ ಎಕ್ಸ್‌ಪ್ರೆಸ್, ಸಂಪೂರ್ಣ ಕ್ರಾಂತಿ ಎಕ್ಸ್‌ಪ್ರೆಸ್, ಸೌತ್ ಬಿಹಾರ ಎಕ್ಸ್‌ಪ್ರೆಸ್ ಮತ್ತು ಮುಂಬೈಗೆ ಹೋಗುವ ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್‌ನ್ನೂ ತಡೆದಿದ್ದಾರೆ.

ಮಂಗಳವಾರ ಮತ್ತು ಬುಧವಾರದಂದು ಸುಮಾರು ಐದು ಗಂಟೆಗಳ ಕಾಲ ಪಟನಾ, ಭಾಗಲ್ಪುರ್ ಮತ್ತು ಸಸಾರಾಮ್, ಗಯಾ, ಭೋಜ್‌ಪುರ, ಬಕ್ಸರ್, ಮುಜಾಫರ್‌ಪುಟ್ ಮತ್ತು ಸಮ್ಸ್ತಿಪುರ್ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆದವು.

ರೈಲ್ವೆ ಸಚಿವಾಲಯವು ಪ್ರತಿಭಟನಾ ನಿರತ ಆಕಾಂಕ್ಷಿಗಳ ಸಮಸ್ಯೆಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಿದೆ. ಜನವರಿ 25, 2022 ರಂದು ಸಚಿವಾಲಯವು ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿದ ಒಂದು ದಿನದ ನಂತರ, ‘ವಿಧ್ವಂಸಕತೆ/ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ರೈಲ್ವೇ ಉದ್ಯೋಗ ಆಕಾಂಕ್ಷಿಗಳು ಸರ್ಕಾರಿ ಉದ್ಯೋಗಗಳಿಂದ ಜೀವಮಾನದ ನಿಷೇಧವನ್ನು ಎದುರಿಸಬೇಕಾಗುತ್ತದೆ’ ಎಂದು ತಿಳಿಸಲಾಗಿದೆ.

ಆರ್‌ಆರ್‌ಬಿ ಎನ್‌ಟಿಪಿಸಿ ಫಲಿತಾಂಶಗಳಲ್ಲಿ ಲೋಪವಾಗಿದೆ ಎಂದು ಆರೋಪಿಸಿ ಮಹುವಾದ ಆರ್‌ಜೆಡಿ ಶಾಸಕ ಡಾ ಮುಕೇಶ್ ರೌಶನ್ ತಮ್ಮ ಬೆಂಬಲಿಗರೊಂದಿಗೆ ‘ಬಿಹಾರ ಬಂದ್’ ಭಾಗವಾಗಿ ರಾಮಶಿಶ್ ಚೌಕ್‌ನಲ್ಲಿ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: Union Budget 2022: ಈ ಬಾರಿಯ ಬಜೆಟ್​ನಲ್ಲಿ ರೈಲ್ವೆ ಇಲಾಖೆಗೆ ಶೇ. 20ರಷ್ಟು ಅನುದಾನ ಹೆಚ್ಚಳ ಸಾಧ್ಯತೆ