ರೈಲ್ವೇ ನೇಮಕಾತಿ ಮಂಡಳಿ ಫಲಿತಾಂಶದ ವಿರುದ್ಧ ಪ್ರತಿಭಟನೆ: ಶುಕ್ರವಾರ ಬಿಹಾರ ಬಂದ್​​ಗೆ ವಿದ್ಯಾರ್ಥಿ ಸಂಘಟನೆಗಳ ಕರೆ

Bihar Railway Protests ಆದಾಗ್ಯೂ, ಉದ್ಯೋಗಕ್ಕೆ ಅರ್ಜಿಹಾಕಿರುವವರು ಎತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ರೈಲ್ವೆ ಸಚಿವಾಲಯವು ಉನ್ನತ-ಮಟ್ಟದ ಸಮಿತಿಯನ್ನು ರಚಿಸಿತು. ಮಾರ್ಚ್ 4 ರೊಳಗೆ ಸಮಿತಿಯು ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ

ರೈಲ್ವೇ ನೇಮಕಾತಿ ಮಂಡಳಿ ಫಲಿತಾಂಶದ ವಿರುದ್ಧ ಪ್ರತಿಭಟನೆ: ಶುಕ್ರವಾರ ಬಿಹಾರ ಬಂದ್​​ಗೆ ವಿದ್ಯಾರ್ಥಿ ಸಂಘಟನೆಗಳ ಕರೆ
ರೈಲು ಬೋಗಿಗಳಿಗೆ ಬೆಂಕಿ ಇಟ್ಟ ಪ್ರತಿಭಟನಾಕಾರರು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 27, 2022 | 10:52 AM

ಪಟನಾ: ರೈಲ್ವೇ ನೇಮಕಾತಿ ಮಂಡಳಿಯ (RRB) ಎನ್‌ಟಿಪಿಸಿ ಹಂತ 1 ಪರೀಕ್ಷೆಯ ಫಲಿತಾಂಶಗಳಲ್ಲಿನ ಅಕ್ರಮಗಳನ್ನು ಪ್ರತಿಭಟಿಸಿ ಆಲ್ ಇಂಡಿಯಾ ಸ್ಟೂಡೆಂಟ್ಸ್ ಯೂನಿಯನ್ (AISA) ಮತ್ತು ಇತರ ಯುವ ಸಂಘಟನೆಗಳು ಶುಕ್ರವಾರ ‘ಬಿಹಾರ ಬಂದ್’ಗೆ (Bihar Bandh) ಕರೆ ನೀಡಿವೆ. ವಿದ್ಯಾರ್ಥಿಗಳ ಕಳವಳಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸುವ ರೈಲ್ವೆ ಸಚಿವಾಲಯದ ಕ್ರಮವನ್ನು ವಿದ್ಯಾರ್ಥಿಗಳ ಸಂಸ್ಥೆಗಳು “ಮೋಸ” ಎಂದು ಬಣ್ಣಿಸಿದೆ. ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಉದ್ಯೋಗ ಆಕಾಂಕ್ಷಿಗಳು ಬುಧವಾರ ಬೃಹತ್ ಪ್ರತಿಭಟನೆಗಳನ್ನು ನಡೆಸಿದ ನಂತರ ರೈಲ್ವೆ ಸಚಿವಾಲಯವು ತಾಂತ್ರಿಕವಲ್ಲದ ಜನಪ್ರಿಯ ವರ್ಗಗಳು (NTPC) ಮತ್ತು ಹಂತ 1 ಪರೀಕ್ಷೆಗಳನ್ನು ಅಮಾನತುಗೊಳಿಸುವುದಾಗಿ ಘೋಷಿಸಿತು. ಬಿಹಾರದ ಗಯಾದಲ್ಲಿ ಪ್ರತಿಭಟನಾಕಾರರು ರೈಲಿನ ನಾಲ್ಕು ಬೋಗಿಗಳಿಗೆ ಬೆಂಕಿ ಹಚ್ಚಿರುವ ಘಟನೆಯೂ ಬುಧವಾರ ನಡೆದಿದೆ. ಎಐಎಸ್ಎ ಮತ್ತು ಇತರ ಯುವ ಸಂಘಟನೆಗಳು ಪತ್ರಿಕಾ ಹೇಳಿಕೆಯಲ್ಲಿ ಸಚಿವಾಲಯವು ರಚಿಸಿರುವ ಸಮಿತಿಯು ಉತ್ತರ ಪ್ರದೇಶದ ಚುನಾವಣೆಯವರೆಗೆ ವಿಷಯವನ್ನು ಮುಂದೂಡುವ “ಪಿತೂರಿ” ಎಂದು ಹೇಳಿದೆ. ಇದು ತೀವ್ರ ನಿರುದ್ಯೋಗವನ್ನು ಎದುರಿಸುತ್ತಿರುವ ವಿದ್ಯಾರ್ಥಿ ಯುವಜನರ ಬೃಹತ್ ಆಂದೋಲನ ಎಂದು ಹೇಳುವ ಮೂಲಕ ಸರ್ಕಾರದ ಭರವಸೆಯ ಹೊರತಾಗಿಯೂ ಮಣಿಯಲು ಸಂಘಟನೆಗಳು ನಿರಾಕರಿಸಿವೆ.

ಆದಾಗ್ಯೂ, ಉದ್ಯೋಗಕ್ಕೆ ಅರ್ಜಿಹಾಕಿರುವವರು ಎತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ರೈಲ್ವೆ ಸಚಿವಾಲಯವು ಉನ್ನತ-ಮಟ್ಟದ ಸಮಿತಿಯನ್ನು ರಚಿಸಿತು. ಮಾರ್ಚ್ 4 ರೊಳಗೆ ಸಮಿತಿಯು ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.  ಮುಂದಿನ ತಿಂಗಳು ನಿಗದಿಯಾಗಿದ್ದ ಎನ್ ಟಿಪಿಸಿ ಪರೀಕ್ಷೆಗಳನ್ನು ಮುಂದೂಡಿದ ಕೇಂದ್ರವು ಉದ್ಯೋಗ ಆಕಾಂಕ್ಷಿಗಳಿಗೆ ತಮ್ಮ ಕಳವಳಗಳನ್ನು ಸಲ್ಲಿಸಲು ಮೂರು ವಾರಗಳ (ಫೆಬ್ರವರಿ 16 ರವರೆಗೆ) ಸಮಯವನ್ನು ನೀಡಿದೆ.

ಬುಧವಾರ ನಡೆದ ಪ್ರತಿಭಟನೆಯಲ್ಲಿ ಉದ್ಯೋಗಾಕಾಂಕ್ಷಿಗಳು ನವದೆಹಲಿ-ಕೋಲ್ಕತ್ತಾ ಮುಖ್ಯ ರೈಲು ಹಳಿಗಳನ್ನು ತಡೆದರು. ಈ ಆಂದೋಲನಗಳು ಪೂರ್ವ ಉತ್ತರ ಪ್ರದೇಶದ ಗಡಿ ಪ್ರದೇಶಗಳಿಗೂ ಹರಡಿತು. ಗಯಾ, ಜೆಹಾನಾಬಾದ್, ಭಾಗಲ್ಪುರ್, ಸಸಾರಾಮ್, ಸಮಸ್ತಿಪುರ್ ಮತ್ತು ಛಾಪ್ರಾ ಜಿಲ್ಲೆಗಳಲ್ಲಿ ರೈಲ್ವೆ ಆಸ್ತಿಗಳಿಗೆ ಹಾನಿಯಾಗಿದೆ ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ. ಪ್ರತಿಭಟನಾಕಾರರು ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಪ್ರತಿಭಟನಾಕಾರರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದು, ಬಿಜೆಪಿ ಸರ್ಕಾರದ ನೀತಿಗಳ ವಿರುದ್ಧ ನಾನು ಅವರೊಂದಿಗಿದ್ದೇನೆ ಎಂದು ಹೇಳಿದರು. ಆದರೆ, ಹಿಂಸೆಯೇ ಮಾರ್ಗವಲ್ಲ ಎಂದು ಹೇಳಿದರು.

ಆರ್‌ಆರ್‌ಬಿಯ ಎನ್‌ಟಿಪಿಸಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳು ಮಂಗಳವಾರವೂ ಬಿಹಾರ ಷರೀಫ್ ರೈಲು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದರು. ಅವರು ಪಾಟ್ನಾದ ರಾಜೇಂದ್ರ ನಗರ ಟರ್ಮಿನಲ್‌ನಲ್ಲಿ ಕೋಲ್ಕತ್ತಾ-ನವದೆಹಲಿ ಮುಖ್ಯ ರೈಲು ಮಾರ್ಗವನ್ನು ತಡೆದಿದ್ದರು.  ಮೊದಲ ಹಂತದಲ್ಲಿ ಉತ್ತೀರ್ಣರಾದವರಿಗೆ ಎರಡನೇ ಹಂತದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಎರಡು ಹಂತಗಳಲ್ಲಿ ಪರೀಕ್ಷೆ ನಡೆಸಲು ರೈಲ್ವೆ ನಿರ್ಧಾರವನ್ನು ಉದ್ಯೋಗ ಆಕಾಂಕ್ಷಿಗಳು ವಿರೋಧಿಸಿದ್ದಾರೆ. ಕಳೆದ ವರ್ಷ ನಡೆದ ಕಂಪ್ಯೂಟರ್ ಆಧಾರಿತ ಪರೀಕ್ಷೆ-1 (CBT-1) ಪರೀಕ್ಷೆಯ ಫಲಿತಾಂಶಗಳನ್ನು CBT-2 ಗೆ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲು ಜನವರಿ 15 ರಂದು ಬಿಡುಗಡೆ ಮಾಡಲಾಯಿತು.

ಇದನ್ನೂ ಓದಿ: ಪ್ರಧಾನಿ ಮೋದಿ ಸರ್ಕಾರದ ಒತ್ತಡದಿಂದ ಟ್ವಿಟರ್​ ಫಾಲೋವರ್​ಗಳ ಸಂಖ್ಯೆ ಸೀಮಿತಗೊಳಿಸುತ್ತಿದೆ: ರಾಹುಲ್ ಗಾಂಧಿ ಗಂಭೀರ ಆರೋಪ

Published On - 10:35 am, Thu, 27 January 22