Rahul Gandhi: ಮಜವಾದ ಚರ್ಚೆಗೆ ಕಾರಣವಾಯ್ತು ರಾಹುಲ್ ಗಾಂಧಿ ಟ್ವಿಟರ್​​ಗೆ ಬರೆದ ಪತ್ರ; ನೆಟ್ಟಿಗರು ಹೇಳಿದ್ದೇನು? ಇಲ್ಲಿದೆ ನೋಡಿ

Twitter: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್​ಗೆ ಬರೆದ ಪತ್ರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ನೆಟ್ಟಿಗರು ಇದಕ್ಕೆ ಮಜವಾಗಿ ಪ್ರತಿಕ್ರಿಯಿಸಿದ್ದಾರೆ.

Rahul Gandhi: ಮಜವಾದ ಚರ್ಚೆಗೆ ಕಾರಣವಾಯ್ತು ರಾಹುಲ್ ಗಾಂಧಿ ಟ್ವಿಟರ್​​ಗೆ ಬರೆದ ಪತ್ರ; ನೆಟ್ಟಿಗರು ಹೇಳಿದ್ದೇನು? ಇಲ್ಲಿದೆ ನೋಡಿ
ಟ್ವಿಟರ್ ಲಾಂಛನ, ರಾಹುಲ್ ಗಾಂಧಿ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: shivaprasad.hs

Updated on:Jan 28, 2022 | 10:41 AM

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್​ ಸಿಇಒ ಪರಾಗ್ ಅಗರ್ವಾಲ್ (Parag Agarwal) ಅವರಿಗೆ ಫಾಲೋವರ್​ಗಳ ಸಂಖ್ಯೆ ಇಳಿಮುಖವಾಗುತ್ತಿರುವ ಕುರಿತಂತೆ ಪತ್ರ ಬರೆದಿದ್ದರು. ಸರ್ಕಾರದ ಒತ್ತಡದಿಂದ ಟ್ವಿಟರ್ ತಮ್ಮ ಫಾಲೋವರ್​ಗಳ ಸಂಖ್ಯೆ ಸೀಮಿತಗೊಳಿಸುತ್ತಿದೆ ಎಂಬುದು ಅವರ ಆರೋಪವಾಗಿತ್ತು. ನಂತರದಲ್ಲಿ ಇದಕ್ಕೆ ಸ್ಪಷ್ಟನೆ ನೀಡಿದ ಟ್ವಿಟರ್ ವಕ್ತಾರರು, ರಾಹುಲ್ ಗಾಂಧಿ (Rahul Gandhi) ಆರೋಪವನ್ನು ತಳ್ಳಿ ಹಾಕಿದ್ದರು. ಟ್ವಿಟರ್ ಸ್ಪಾಮ್ ಹಾಗೂ ನಕಲಿ ಖಾತೆಗಳನ್ನು ತೆಗೆಯಲು ಆಧುನಿಕ ತಂತ್ರಜ್ಞಾನಗಳನ್ನು ಬಳಸುತ್ತಿದೆ. ಇದರಿಂದ ಫಾಲೋವರ್​ಗಳ ಸಂಖ್ಯೆ ಹೆಚ್ಚು ಅಥವಾ ಕಡಿಮೆ ಆಗಬಹುದು ಎಂದು ಪ್ರತಿಕ್ರಿಯೆ ನೀಡಿತ್ತು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ರಾಹುಲ್ ಗಾಂಧಿ ತಮ್ಮ ಫಾಲೋವರ್​ಗಳ ಸಂಖ್ಯೆ ಹೆಚ್ಚಾಗುತ್ತಿಲ್ಲ ಎಂದ ವಿಚಾರ ಸಖತ್ ಚರ್ಚೆಯಾಗುತ್ತಿದೆ. ಅದರಲ್ಲೂ ಹಲವರು ತಮಾಷೆಯಾಗಿ ಮತ್ತೆ ಕೆಲವರು ಖಾರವಾಗಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಅಂತಹ ಟ್ವೀಟ್​ಗಳು ಇಲ್ಲಿವೆ.

ರಾಹುಲ್ ಗಾಂಧಿ ಚುನಾವಣೆಯಲ್ಲಿ ಸೋತಾಗ ಇವಿಎಂ ಅನ್ನು ದೂಷಿಸಿದರು. ಚುನಾವಣೆಯಲ್ಲಿ ಪಾರ್ಟಿ ಸೋತಾಗ ಮತದಾರರನ್ನು ದೂಷಿಸಿದರು. ಇದೀಗ ಫಾಲೋವರ್​​ಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಟ್ವಿಟರ್​ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ರಿಶಿ ಬಾಗ್ರೀ ಎನ್ನುವವರು ಬರೆದಿದ್ದಾರೆ.

ರಾಹುಲ್ ಶಿವಶಂಕರ್ ಎಂಬುವವರು ಟ್ವೀಟ್ ಮಾಡಿ, ರಾಹುಲ್ ಗಾಂಧಿಯವರ ಆರೋಪವನ್ನು ಈ ಹಿಂದೆ ಚುನಾವಣಾ ಆಯೋಗ ಇವಿಎಂ ಕುರಿತ ಆರೋಪವನ್ನು ನಿರಾಕರಿಸಿದಂತೆಯೇ ಟ್ವಿಟರ್ ಕೂಡ ನಿರಾಕರಿಸಿದೆ ಎಂದು ಬರೆದಿದ್ದಾರೆ.

ರೋಹನ್ ದುವಾ ಎಂಬುವವರು ರಾಹುಲ್ ಗಾಂಧಿ ಟ್ವೀಟ್ ಅನ್ನು ಪತ್ರಿಕೆಯೊಂದು ವರದಿ ಮಾಡಿದ ಬಗೆಯ ಕುರಿತು ಅಚ್ಚರಿ ಹೊರಹಾಕಿದ್ದಾರೆ. ಅಲ್ಲದೇ ದೇಶವನ್ನು ಆಳಿದ, ದೊಡ್ಡ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್​ ನಾಯಕರ ನುಡಿಯ ಬಗ್ಗೆಯೂ ಅಚ್ಚರಿ ಹೊರಹಾಕಿದ್ದಾರೆ.

ರಾಹುಲ್ ಗಾಂಧಿ ನಿಜ ಜೀವನದ ನಂತರ ವರ್ಚುವಲ್ ಜಗತ್ತಿನಲ್ಲೂ ಪ್ರಭಾವ ಕಳೆದುಕೊಳ್ಳುತ್ತಿದ್ದಾರೆಯೇ ಎಂದು ಅಮಿತ್ ಮಾಳವೀಯ ಎಂಬುವವರು ಪ್ರಶ್ನಿಸಿದ್ದಾರೆ. ಅಲ್ಲದೇ ಹಲವರು ರಾಹುಲ್ ಗಾಂಧಿ ಮುಂದೆ ಚುನಾವಣಾ ಅಧಿಕಾರಿಗಳನ್ನು ದೂಷಿಸಬಹುದು ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.

ಟ್ವಿಟರ್ ಪ್ರತಿಕ್ರಿಯೆಯನ್ನು ಉಲ್ಲೇಖಿಸಿದ ಓರ್ವರು, ರಾಹುಲ್ ಗಾಂಧಿ ಅವರು ನಕಲಿ ಫಾಲೋವರ್​ಗಳನ್ನು ಹೊಂದಿದ್ದರು ಎಂದು ಪರೋಕ್ಷವಾಗಿ ತಿಳಿಸಿದೆ ಎಂದು ಕಾಲೆಳೆದಿದ್ದಾರೆ.

ಒಟ್ಟಿನಲ್ಲಿ ರಾಹುಲ್ ಗಾಂಧಿ ಬರೆದ ಪತ್ರ ಹಾಗೂ ಟ್ವಿಟರ್ ವಕ್ತಾರರ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿರುವುದಂತೂ ಹೌದು.

ಇದನ್ನೂ ಓದಿ:

 ಫಾಲೋವರ್​ಗಳನ್ನು ಸೀಮಿತಗೊಳಿಸಲಾಗುತ್ತಿದೆ ಎಂಬ ರಾಹುಲ್ ಗಾಂಧಿ ಆರೋಪವನ್ನು ನಿರಾಕರಿಸಿದ ಟ್ವಿಟರ್; ಇಲ್ಲಿದೆ ಪೂರ್ಣ ಮಾಹಿತಿ

Published On - 10:39 am, Fri, 28 January 22