ದೇಶದಲ್ಲಿ ಕಡಿಮೆಯಾದ ಕೊರೊನಾ ಪ್ರಕರಣಗಳು; ಇಂದು 2,51,209 ಹೊಸ ಪ್ರಕರಣ ಪತ್ತೆ, 627 ಜನರು ಸೋಂಕಿನಿಂದ ನಿಧನ

ದೇಶದಲ್ಲಿ ಹೊಸದಾಗಿ 2,51,209 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 627 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಶುಕ್ರವಾರದ ಅಂಕಿಅಂಶದ ಕುರಿತ ಮಾಹಿತಿ ಇಲ್ಲಿದೆ.

ದೇಶದಲ್ಲಿ ಕಡಿಮೆಯಾದ ಕೊರೊನಾ ಪ್ರಕರಣಗಳು; ಇಂದು 2,51,209 ಹೊಸ ಪ್ರಕರಣ ಪತ್ತೆ, 627 ಜನರು ಸೋಂಕಿನಿಂದ ನಿಧನ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shivaprasad.hs

Updated on:Jan 28, 2022 | 9:49 AM

ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 2,51,209 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದೆ. ನಿನ್ನೆಗಿಂತ (ಗುರುವಾರ) ಸುಮಾರು 35,000 ಕಡಿಮೆ ಪ್ರಕರಣಗಳು ಇಂದು ವರದಿಯಾಗಿದೆ. ಸುಮಾರು ಕೇಂದ್ರ ಆರೋಗ್ಯ ಸಚಿವಾಲಯ (Ministry of Health) ಶುಕ್ರವಾರ ಹೊಸ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದು, ದೇಶದಲ್ಲಿ ಕೊರೊನಾ ಪ್ರಕರಣಗಳ (Corona Cases) ಕುರಿತು ಮಾಹಿತಿ ಹಂಚಿಕೊಂಡಿದೆ. ಒಂದು ದಿನದ ಅವಧಿಯಲ್ಲಿ ಸೋಂಕಿನಿಂದ 627 ಜನರು ಮೃತಪಟ್ಟಿದ್ದು, ಇದುವರೆಗೆ ಒಟ್ಟು 4,92,327 ಜನರು ಸಾವನ್ನಪ್ಪಿದ್ದಾರೆ.  3,47,443 ಜನರು ಗುಣಮುಖರಾಗಿದ್ದು, ಈ ಮೂಲಕ ಗುಣಮುಖರಾದವರ ಸಂಖ್ಯೆ 3,80,24,771ಕ್ಕೆ ತಲುಪಿದೆ. ದೇಶದಲ್ಲಿ ಪ್ರಸ್ತುತ ಸಕ್ರಿಯ ಪ್ರಕಣಗಳ ಸಂಖ್ಯೆ 21,05,611 ಕ್ಕೆ ತಲುಪಿದೆ. ದೈನಂದಿನ ಪಾಸಿಟಿವಿಟಿ ದರ 15.88% ದಾಖಲಾಗಿದೆ. ದೇಶದಲ್ಲಿ ಲಸಿಕೆ ನೀಡಿಕೆಯು ವೇಗದಿಂದ ಸಾಗುತ್ತಿದ್ದು, ಇದುವರೆಗೆ ಒಟ್ಟು 164.44 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ. ಕಳೆದ ಒಂದು ದಿನದ ಅವಧಿಯಲ್ಲಿ ಸುಮಾರು 57 ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ನೀಡಲಾಗಿದೆ.

ಎಎನ್​ಐ ಈ ಕುರಿತು ಹಂಚಿಕೊಂಡಿರುವ ಟ್ವೀಟ್:

ಕರ್ನಾಟಕದಲ್ಲಿ ಎಷ್ಟು ಕೊರೊನಾ ಪ್ರಕರಣಗಳಿವೆ?

ಬೆಂಗಳೂರು: ಕರ್ನಾಟಕದಲ್ಲಿ ಗುರುವಾರ (ಜ.27) ಒಟ್ಟು 38,754 ಮಂದಿಯಲ್ಲಿ ಕೊವಿಡ್ ಸೋಂಕು ದೃಢಪಟ್ಟಿದ್ದು, 49 ಜನರು ಸಾವನ್ನಪ್ಪಿದ್ದಾರೆ. 67,236 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 32,083 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ಪ್ರಮಾಣ ಶೇ 20.44 ಇದೆ. ರಾಜ್ಯದಲ್ಲಿ ಪ್ರಸ್ತುತ 3,28,711 ಸಕ್ರಿಯ ಸೋಂಕು ಪ್ರಕರಣಗಳಿವೆ. ಬೆಂಗಳೂರಿನಲ್ಲಿ ಹೊಸದಾಗಿ 185 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಮಿಕ್ರಾನ್​​ ಸೋಂಕಿತರ ಸಂಖ್ಯೆ 1,115ಕ್ಕೆ ಏರಿಕೆಯಾಗಿದೆ ಎಂದು ಟ್ವಿಟರ್​​ನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.

ಬೆಂಗಳೂರು ನಗರದಲ್ಲಿ 17,717 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 43,997 ಜನರು ಚೇತರಿಸಿಕೊಂಡಿದ್ದಾರೆ. 12 ಜನರು ಸಾವನ್ನಪ್ಪಿದ್ದಾರೆ. ನಗರದಲ್ಲಿ ಪ್ರಸ್ತುತ 1,89,853 ಸಕ್ರಿಯ ಪ್ರಕರಣಗಳಿವೆ. ನಗರದಲ್ಲಿ ಈವರೆಗೆ 16,66,475 ಮಂದಿಯಲ್ಲಿ ಕೊವಿಡ್ ದೃಢಪಟ್ಟಿದ್ದು, 14,60,075 ಜನರು ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 16,546 ಜನರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:

Covid New Guidelines: ಕೊವಿಡ್ ಪರೀಕ್ಷೆ ಮಾರ್ಗಸೂಚಿಗೆ ಪರಿಷ್ಕಾರ: ಇಂಥವರಿಗೆ ಟೆಸ್ಟ್ ಅಗತ್ಯ ಎಂದು ಸ್ಪಷ್ಟಪಡಿಸಿದ ಸರ್ಕಾರ

Covid 19 Karnataka Update: ಕರ್ನಾಟಕದಲ್ಲಿ 38 ಸಾವಿರ ಮಂದಿಗೆ ಕೊವಿಡ್ ಸೋಂಕು: 49 ಜನರು ಸಾವು

Published On - 9:42 am, Fri, 28 January 22