ಬೆಂಗಳೂರಿನಲ್ಲಿ ಹೊಸದಾಗಿ 185 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 1,115ಕ್ಕೆ ಏರಿಕೆಯಾಗಿದೆ ಎಂದು ಟ್ವಿಟರ್ನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ. ಬೆಂಗಳೂರು ನಗರದಲ್ಲಿ 17,717 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 43,997 ಜನರು ಚೇತರಿಸಿಕೊಂಡಿದ್ದಾರೆ. 12 ಜನರು ಸಾವನ್ನಪ್ಪಿದ್ದಾರೆ. ನಗರದಲ್ಲಿ ಪ್ರಸ್ತುತ 1,89,853 ಸಕ್ರಿಯ ಪ್ರಕರಣಗಳಿವೆ. ನಗರದಲ್ಲಿ ಈವರೆಗೆ 16,66,475 ಮಂದಿಯಲ್ಲಿ ಕೊವಿಡ್ ದೃಢಪಟ್ಟಿದ್ದು, 14,60,075 ಜನರು ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 16,546 ಜನರು ಸಾವನ್ನಪ್ಪಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಬೆಂಗಳೂರು ನಗರ 17,717, ಬಾಗಲಕೋಟೆ 345, ಬಳ್ಳಾರಿ 651, ಬೆಳಗಾವಿ 480, ಬೆಂಗಳೂರು ಗ್ರಾಮಾಂತರ 1091, ಬೀದರ್ 250, ಚಾಮರಾಜನಗರ 763, ಚಿಕ್ಕಬಳ್ಳಾಪುರ 665, ಚಿಕ್ಕಮಗಳೂರು 244, ಚಿತ್ರದುರ್ಗ 286, ದಕ್ಷಿಣ ಕನ್ನಡ 678, ದಾವಣಗೆರೆ 257, ಧಾರವಾಡ 1155, ಗದಗ 267, ಹಾಸನ 1452, ಹಾವೇರಿ 184, ಕಲಬುರ್ಗಿ 812, ಕೊಡಗು 707, ಕೋಲಾರ 572, ಕೊಪ್ಪಳ 500, ಮಂಡ್ಯ 1802, ಮೈಸೂರು 2587, ರಾಯಚೂರು 261, ರಾಮನಗರ 279, ಶಿವಮೊಗ್ಗ 626, ತುಮಕೂರು 1584, ಉಡುಪಿ 948, ಉತ್ತರ ಕನ್ನಡ 567, 223, ಯಾದಗಿರಿ 130.
ಇಂದಿನ 27/01/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/QI1LM2IMTj @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/JCLNtgjLSl
— K’taka Health Dept (@DHFWKA) January 27, 2022
ಯಾವ ಜಿಲ್ಲೆಯಲ್ಲಿ ಎಷ್ಟು?
ಬೆಂಗಳೂರು ನಗರ 12, ಬಳ್ಳಾರಿ, ಮೈಸೂರು 5, ದಕ್ಷಿಣ ಕನ್ನಡ, ಹಾಸನ 4, ಮಂಡ್ಯ, ರಾಯಚೂರು, ತುಮಕೂರು, ಉಡುಪಿ, ಉತ್ತರ ಕನ್ನಡ 2, ಬೆಳಗಾವಿ, ಬಾಗಲಕೋಟೆ, ಚಿತ್ರದುರ್ಗ, ಧಾರವಾಡ, ಕಲಬುರ್ಗಿ, ರಾಮನಗರ, ಶಿವಮೊಗ್ಗ, ಕೊಡಗು 1.
ಇದನ್ನೂ ಓದಿ: ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 2,86,384 ಕೊರೊನಾ ಪ್ರಕರಣ ಪತ್ತೆ, 573 ಜನರು ಸೋಂಕಿನಿಂದ ಸಾವು
ಇದನ್ನೂ ಓದಿ: PSL 2022: ಪಿಎಸ್ಎಲ್ನಲ್ಲಿ ಕೊರೊನಾ ಸ್ಫೋಟ; ಶಾಹಿದ್ ಅಫ್ರಿದಿಗೆ ಕೊರೊನಾ, ರಿಯಾಜ್-ಹೈದರ್ ಕೂಡ ಪಾಸಿಟಿವ್!