PSL 2022: ಪಿಎಸ್ಎಲ್​ನಲ್ಲಿ ಕೊರೊನಾ ಸ್ಫೋಟ; ಶಾಹಿದ್ ಅಫ್ರಿದಿಗೆ ಕೊರೊನಾ, ರಿಯಾಜ್-ಹೈದರ್ ಕೂಡ ಪಾಸಿಟಿವ್!

PSL 2022: ಪಿಎಸ್ಎಲ್​ನಲ್ಲಿ ಕೊರೊನಾ ಸ್ಫೋಟ; ಶಾಹಿದ್ ಅಫ್ರಿದಿಗೆ ಕೊರೊನಾ, ರಿಯಾಜ್-ಹೈದರ್ ಕೂಡ ಪಾಸಿಟಿವ್!
ಶಾಹಿದ್ ಅಫ್ರಿದಿ

PSL 2022: ವಹಾಬ್ ರಿಯಾಜ್ ಮತ್ತು ಹೈದರ್ ಅಲಿ ಕೊರೊನಾ ಪಾಸಿಟಿವ್ ಆದ ನಂತರ ಇದೀಗ ಶಾಹಿದ್ ಅಫ್ರಿದಿ ಕೂಡ ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ. ಶಾಹಿದ್ ಅಫ್ರಿದಿ ಈಗ 7 ದಿನಗಳ ಕಾಲ ಪ್ರತ್ಯೇಕವಾಗಿರಬೇಕಾಗುತ್ತದೆ.

TV9kannada Web Team

| Edited By: pruthvi Shankar

Jan 27, 2022 | 5:38 PM

ಪಾಕಿಸ್ತಾನ್ ಸೂಪರ್ ಲೀಗ್ (PSL 2022) ನ ಏಳನೇ ಸೀಸನ್ ಆರಂಭಕ್ಕೂ ಮುನ್ನವೇ ವಿಘ್ನ ಎದುರಾಗಿದೆ. ವಾಸ್ತವವಾಗಿ, ಪಿಎಸ್ಎಲ್ನಲ್ಲಿ ಮತ್ತೊಮ್ಮೆ ಕೊರೊನಾ ಬಾಂಬ್ ಸ್ಫೋಟಗೊಂಡಿದೆ. ವಹಾಬ್ ರಿಯಾಜ್ ಮತ್ತು ಹೈದರ್ ಅಲಿ ಕೊರೊನಾ ಪಾಸಿಟಿವ್ ಆದ ನಂತರ ಇದೀಗ ಶಾಹಿದ್ ಅಫ್ರಿದಿ ಕೂಡ ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ. ಶಾಹಿದ್ ಅಫ್ರಿದಿ ಈಗ 7 ದಿನಗಳ ಕಾಲ ಪ್ರತ್ಯೇಕವಾಗಿರಬೇಕಾಗುತ್ತದೆ. ನೆಗೆಟಿವ್ ಆದ ನಂತರವೇ ಅವರು ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವನ್ನು ಸೇರಲು ಸಾಧ್ಯವಾಗುತ್ತದೆ ಎಂಬ ಸುದ್ದಿಯನ್ನು ಕ್ರಿಕೆಟ್ ಪಾಕಿಸ್ತಾನ ಖಚಿತಪಡಿಸಿದೆ. ಇದರರ್ಥ ಅಫ್ರಿದಿ ಈಗ ಪಿಎಸ್‌ಎಲ್‌ನ ಆರಂಭಿಕ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಶಾಹಿದ್ ಅಫ್ರಿದಿ ಮೊದಲು, ಪಿಎಸ್‌ಎಲ್‌ಗೆ ಸಂಬಂಧಿಸಿದ 8 ಜನರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್‌ನ ಮೊದಲ ಪಂದ್ಯವು ಕರಾಚಿ ಕಿಂಗ್ಸ್ ಮತ್ತು ಮುಲ್ತಾನ್ ಸುಲ್ತಾನ್ಸ್ ನಡುವೆ ಜನವರಿ 27 ರಂದು ನಡೆಯಲಿದೆ.

ಶಾಹಿದ್ ಅಫ್ರಿದಿ ಬೆನ್ನು ನೋವಿನಿಂದಾಗಿ ಪಿಎಸ್‌ಎಲ್‌ನ ಬಯೋ ಬಬಲ್ ಅನ್ನು ತೊರೆದಿದ್ದಾರೆ. ಆಫ್ರಿದಿ ಬುಧವಾರ ವೈದ್ಯಕೀಯ ತಪಾಸಣೆಗೆ ಹೋಗಿದ್ದ ವೇಳೆ ಅವರಿಗೆ ಕೊರೊನಾ ತಗುಲಿರುವುದು ಪತ್ತೆಯಾಗಿದೆ. ಅಫ್ರಿದಿ ಕೊರೊನಾ ತಗುಲಿರುವುದು ಕ್ವೆಟ್ಟಾ ಗ್ಲಾಡಿಯೇಟರ್ಸ್‌ಗೆ ದೊಡ್ಡ ಹಿನ್ನಡೆಯಾಗಿದೆ. ಈ ತಂಡವು ತನ್ನ ಮೊದಲ ಪಂದ್ಯವನ್ನು ಜನವರಿ 28 ರಂದು ಪೇಶಾವರ್ ಝಲ್ಮಿ ವಿರುದ್ಧ ಆಡಬೇಕಾಗಿದೆ. ಪೇಶಾವರ್ ಝಲ್ಮಿ ತಂಡದ ನಾಯಕ ವಹಾಬ್ ರಿಯಾಜ್ ಮತ್ತು ಹೈದರ್ ಅಲಿ ಈಗಾಗಲೇ ಕೊರೊನಾಗೆ ತುತ್ತಾಗಿದ್ದಾರೆ. ಹೀಗಾಗಿ ಈ ಇಬ್ಬರು ಮೊದಲ ಪಂದ್ಯದಲ್ಲಿ ಆಡುವುದು ಖಚಿತವಾಗಿಲ್ಲ.

ಕೊರೊನಾಗೆ ಸಂಬಂಧಿಸಿದಂತೆ PSL ನಲ್ಲಿ ಹೊಸ ನಿಯಮಗಳು ಕೊರೊನಾ ಪ್ರಕರಣಗಳ ಹೊರತಾಗಿಯೂ ಪಂದ್ಯಗಳನ್ನು ಮುಂದೂಡುವುದಿಲ್ಲ ಎಂದು ಪಾಕಿಸ್ತಾನ್ ಸೂಪರ್ ಲೀಗ್‌ನ ಸಂಘಟಕರು ನಿರ್ಧರಿಸಿದ್ದಾರೆ. ಆದರೆ, ಒಂದು ತಂಡದ 12 ಆಟಗಾರರು ಆಡಲು ಲಭ್ಯವಿದ್ದರೆ, ಪಂದ್ಯದ ವೇಳಾಪಟ್ಟಿಯನ್ನು ಬದಲಾಯಿಸಲಾಗುವುದಿಲ್ಲ. ಬಿಗ್ ಬ್ಯಾಷ್ ಲೀಗ್ ಕೂಡ ಕೊರೊನಾ ನೆರಳಿನಲ್ಲಿ ನಡೆಯಿತು. ಅನೇಕ ಆಟಗಾರರು ಸಹ ಈ ರೋಗದ ಹಿಡಿತಕ್ಕೆ ಒಳಗಾದರು. ಆದಾಗ್ಯೂ, ಪಂದ್ಯಾವಳಿಯು ಮುಂದುವರೆಯಿತು ಮತ್ತು ಕೆಲವು ಪಂದ್ಯಗಳನ್ನು ಮುಂದೂಡಬೇಕಾಯಿತು. ಬಿಗ್ ಬ್ಯಾಷ್ ಲೀಗ್‌ನ ಚಾಲೆಂಜರ್ ಪಂದ್ಯದಲ್ಲಿ, ಆರಂಭಿಕ ಆಟಗಾರ ಜೋಶ್ ಫಿಲಿಪ್ಪಿ ಅವರು ಪಂದ್ಯದ ಕೆಲವೇ ಗಂಟೆಗಳ ಮೊದಲು ಕೊರೊನಾ ಪಾಸಿಟಿವ್ ಎಂದು ಕಂಡುಬಂದರು, ನಂತರ ಸಿಡ್ನಿ ಸಿಕ್ಸರ್ಸ್ ತಮ್ಮ ಸಹಾಯಕ ತರಬೇತುದಾರನನ್ನು ಆಡುವ XI ಗೆ ಸೇರಿಸಬೇಕಾಯಿತು. ಪಾಕಿಸ್ತಾನ ಸೂಪರ್ ಲೀಗ್‌ನಲ್ಲೂ ಇದೇ ರೀತಿಯದ್ದನ್ನು ಕಾಣಬಹುದು ಮತ್ತು ಇದು ಮುಂಬರುವ ಐಪಿಎಲ್‌ನ ಋತುವಿನಲ್ಲಿಯೂ ಸಂಭವಿಸಬಹುದು.

Follow us on

Most Read Stories

Click on your DTH Provider to Add TV9 Kannada