Crime Update: ರೇಡಿಯಂ ಲೇಪಿತ ವೈರ್ ರೂಪದಲ್ಲಿ ಚಿನ್ನ ಸಾಗಿಸಲು ಯತ್ನ, ಕೇರಳದಲ್ಲಿ ನಾಪತ್ತೆಯಾಗಿದ್ದ ಬಾಲಕಿ ಬೆಂಗಳೂರಲ್ಲಿ ಪತ್ತೆ
ಶಾರ್ಜಾದಿಂದ ಬಂದಿದ್ದ ವ್ಯಕ್ತಿಯು ₹ 46.48 ಲಕ್ಷ ಮೌಲ್ಯದ 927.77 ಗ್ರಾಂ ಚಿನ್ನ ತಂದಿದ್ದ. ಪ್ರಯಾಣಿಕನ ಬ್ಯಾಗ್ ತಪಾಸಣೆಗೆ ಒಳಪಡಿಸಿದಾಗ ಚಿನ್ನ ಪತ್ತೆಯಾಗಿತ್ತು.
ಬೆಂಗಳೂರು: ರೇಡಿಯಂ ಲೇಪಿತ ವೈರ್ ರೂಪದಲ್ಲಿ ಸಾಗಿಸುತ್ತಿದ್ದ ಚಿನ್ನ ಜಪ್ತಿ ಮಾಡಿರುವ ಕಸ್ಟಮ್ಸ್ ಅಧಿಕಾರಿಗಳು ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶಾರ್ಜಾದಿಂದ ಬಂದಿದ್ದ ವ್ಯಕ್ತಿಯು ₹ 46.48 ಲಕ್ಷ ಮೌಲ್ಯದ 927.77 ಗ್ರಾಂ ಚಿನ್ನ ತಂದಿದ್ದ. ಪ್ರಯಾಣಿಕನ ಬ್ಯಾಗ್ ತಪಾಸಣೆಗೆ ಒಳಪಡಿಸಿದಾಗ ಚಿನ್ನ ಪತ್ತೆಯಾಗಿತ್ತು.
ಪತ್ನಿ ಸಾವಿನಿಂದ ಮನನೊಂದ ಪತ್ನಿ ಆತ್ಮಹತ್ಯೆ ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದಲ್ಲಿ ಹೆಂಡತಿ ಸಾವಿನಿಂದ ಮನನೊಂದು ಮನೆಯಲ್ಲಿ ನೇಣುಹಾಕಿಕೊಂಡು ವಿಜಯೇಂದ್ರ (38) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೂದಿಗೆರೆ ಗ್ರಾಮದ ಸಿದ್ದಗಂಗಾ ಶಾಲೆಯ ಸಮೀಪ ಘಟನೆ ನಡೆದಿದೆ. ಹೆಂಡತಿ ಲಾವಣ್ಯ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೆಂಡತಿ ಸಾವನ್ನು ಯಾರಿಗೂ ತಿಳಿಸಿದೇ ಮನನೊಂದಿದ್ದ ಗಂಡ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಈ ಜೋಡಿ 9 ವರ್ಷಗಳ ಹಿಂದೆ ಮದುವೆಯಾಗಿತ್ತು.
ಅಂಬರ್ಗ್ರಿಸ್ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ ಅಕ್ರಮವಾಗಿ ಅಂಬರ್ಗ್ರಿಸ್ ಮಾರಾಟಕ್ಕೆ ಯತ್ನಿಸಿದ ಇಬ್ಬರನ್ನು ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ರಿಯಾಜ್, ಮೊಹಮ್ಮದ್ ಗೌಸ್ ಬಂಧಿತರು. ಇವರಿಂದ 3.6 ಕೆಜಿ ಅಂಬರ್ ಗ್ರಿಸ್ ಜಪ್ತಿ ಮಾಡಲಾಗಿದೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವಪತ್ತೆ ಬೆಂಗಳೂರು: ಎಚ್ಎಸ್ಆರ್ ಲೇಔಟ್ ಠಾಣಾ ವ್ಯಾಪ್ತಿಯ ಹರೀಶ್ ಲೇಔಟ್ನಲ್ಲಿ ಮನೆಯೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪೂಜಾ (30) ಎಂಬುವವರ ಮೃತದೇಹ ಪತ್ತೆಯಾಗಿದೆ. ಎಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಸೆಂಚರ್ ಕಂಪನಿ ಉದ್ಯೋಗಿಯಾಗಿದ್ದ ಪೂಜಾ ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಕೇರಳದಲ್ಲಿ ನಾಪತ್ತೆಯಾಗಿದ್ದ ಬಾಲಕಿ ಬೆಂಗಳೂರಲ್ಲಿ ಪತ್ತೆ ಬೆಂಗಳೂರು: ಕೇರಳದ ಚಿಲ್ಡ್ರನ್ ಹೋಮ್ನಿಂದ ನಾಪತ್ತೆಯಾಗಿದ್ದ ಆರು ಬಾಲಕಿಯರ ಪೈಕಿ ಓರ್ವ ಬಾಲಕಿ ಬೆಂಗಳೂರಿನ ಮಡಿವಾಳ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದಾರೆ. ಕೊಯಿಕ್ಕೊಡ್ನ ಸರ್ಕಾರಿ ಚಿಲ್ಡ್ರನ್ ಹೋಮ್ನಿಂದ ಬಾಲಕಿಯರು ನಾಪತ್ತೆಯಾಗಿದ್ದರು. ಈ ಪೈಕಿ ಒಬ್ಬ ಬಾಲಕಿ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾಳೆ. ಸದ್ಯ ಮಡಿವಾಳ ಪೊಲೀಸರ ವಶದಲ್ಲಿದ್ದಾಳೆ.
ಎಸ್ಪಿ ಕಾರು ಕಳಿಸಿದ್ದ ಪ್ರಕರಣ: ಸಿಪಿಐ ಅಮಾನತು ತುಮಕೂರು: ತುರುವೇಕೆರೆ ತಾಲ್ಲೂಕು ದಂಡಿನಶಿವರ ಪೊಲೀಸ್ ಠಾಣೆಗೆ ಎಸ್ಪಿಯೇ ಸ್ವತಃ ಕಾರ್ ಕಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತುರುವೇಕೆರೆ ಸಿಪಿಐ ನವೀನ್ ಅವರನ್ನು ಅಮಾನತು ಮಾಡಿ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಆದೇಶ ಮಾಡಿದ್ದಾರೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕರೆತರಲು ದೂರುದಾರರಿಗೆ ಬಾಡಿಗೆ ಕಾರ್ ತರಲು ಸಿಪಿಐ ಕೇಳಿದ್ದರು. ವಿಷಯ ತಿಳಿದ ಎಸ್ಪಿ ತಮ್ಮ ಕಾರನ್ನೇ ಕಳಿಸಿದ್ದರು. ಎಸ್ಪಿ ಕಾರ್ ಕಳಿಸಿದ್ದಕ್ಕೆ ಸಂಬಂಧಿಸಿದಂತೆ ಟಿವಿ9 ವರದಿ ಪ್ರಸಾರ ಮಾಡಿತ್ತು. ಕರ್ತವ್ಯಲೋಪ ಹಿನ್ನೆಲೆಯಲ್ಲಿ ಸಿಪಿಐ ನವೀನ್ ಅವರನ್ನು ಅಮಾನತು ಮಾಡಿ ಎಸ್ಪಿ ಆದೇಶ ಹೊರಡಿಸಿದ್ದಾರೆ.
ಸೋದರನನ್ನೇ ಕೊಲೆ ಮಾಡಿದ್ದ ಆರೋಪಿಯ ಬಂಧನ ದಾವಣಗೆರೆ: ತಾನು ಮದುವೆಯಾಗುವ ಹುಡುಗಿ ಜೊತೆ ತಮ್ಮನಿಗೆ ಸಂಬಂಧ ಇದೆ ಎಂದು ಶಂಕಿಸಿ ಸೋದರನನ್ನೇ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮದುವೆ ಬಟ್ಟೆ ಖರೀದಿಗೆಂದು ಬೈಕ್ನಲ್ಲಿ ತಮ್ಮ ಮೊಹಮದ್ ಅಲ್ತಾಫ್ನನ್ನು ಕರೆತಂದಿದ್ದ ಅಣ್ಣ ಇಬ್ರಾಹಿಂ, ಕುಂದವಾಡ ಕೆರೆ ಬಳಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಮಾರ್ಚ್ 21ಕ್ಕೆ ಇಬ್ರಾಹಿಂ ಮದುವೆ ನಿಶ್ಚಯವಾಗಿತ್ತು. ಬಟ್ಟೆ ಖರೀದಿಗೆಂದು ಹರಿಹರದಿಂದ ದಾವಣಗೆರೆಗೆ ಇಬ್ಬರೂ ಬಂದಿದ್ದರು.
ಇದನ್ನೂ ಓದಿ: Crime News: ಪ್ರವಾಹ ಕಾಮಗಾರಿಗಳಲ್ಲಿ ಅಕ್ರಮ ಎಸಗಿದ 20 ಸಿಬ್ಬಂದಿ ಅಮಾನತು, ಚಿನ್ನದ ಸರವಿದ್ದ ಬ್ಯಾಗ್ ಕಳವು, ವಿಷ ಸೇವಿಸಿ ದಂಪತಿ ಆತ್ಮಹತ್ಯೆ ಇದನ್ನೂ ಓದಿ: Cyber crime: ಲಿಂಕ್ ಕಳುಹಿಸಿ ವೈದ್ಯನಿಗೆ ಲಕ್ಷ ರೂಪಾಯಿ ವಂಚನೆ: ಸೈಬರ್ ಠಾಣೆಯಲ್ಲಿ ದಾಖಲಾಯ್ತು ದೂರು