ಫಾಲೋವರ್​ಗಳನ್ನು ಸೀಮಿತಗೊಳಿಸಲಾಗುತ್ತಿದೆ ಎಂಬ ರಾಹುಲ್ ಗಾಂಧಿ ಆರೋಪವನ್ನು ನಿರಾಕರಿಸಿದ ಟ್ವಿಟರ್; ಇಲ್ಲಿದೆ ಪೂರ್ಣ ಮಾಹಿತಿ

Rahul Gandhi | Twitter: ಸರ್ಕಾರದ ಒತ್ತಡದಿಂದ ಟ್ವಿಟರ್ ಫಾಲೋವರ್​ಗಳ ಸಂಖ್ಯೆ ಸೀಮಿತಗೊಳಿಸುತ್ತಿದೆ ಎಂದು ರಾಹುಲ್ ಗಾಂಧಿ ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್​ಗೆ ಪತ್ರ ಬರೆದಿದ್ದರು. ಇದೀಗ ಟ್ವಿಟರ್​ ಇದಕ್ಕೆ ಪ್ರತಿಕ್ರಿಯೆ ನೀಡಿದೆ.

 ಫಾಲೋವರ್​ಗಳನ್ನು ಸೀಮಿತಗೊಳಿಸಲಾಗುತ್ತಿದೆ ಎಂಬ ರಾಹುಲ್ ಗಾಂಧಿ ಆರೋಪವನ್ನು ನಿರಾಕರಿಸಿದ ಟ್ವಿಟರ್; ಇಲ್ಲಿದೆ ಪೂರ್ಣ ಮಾಹಿತಿ
ಟ್ವಿಟರ್ ಲಾಂಛನ, ರಾಹುಲ್ ಗಾಂಧಿ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: shivaprasad.hs

Updated on:Jan 27, 2022 | 11:34 AM

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಾಗ್ ಅಗರ್ವಾಲ್​ಗೆ ಬರೆದ ಪತ್ರಕ್ಕೆ ಟ್ವಿಟರ್ ಸಂಸ್ಥೆ (Twitter) ಪ್ರತಿಕ್ರಿಯಿಸಿದ್ದು, ಅವರು ಮಾಡಿದ್ದ ಆರೋಪವನ್ನು ನಿರಾಕರಿಸಿದೆ. ಈ ಕುರಿತು ಎಎನ್​ಐ ವರದಿ ಮಾಡಿದ್ದು, ಸಂಸ್ಥೆಯ ವಕ್ತಾರರ ಹೇಳಿಕೆಯನ್ನು ಉಲ್ಲೇಖಿಸಿದೆ. ಟ್ವಿಟರ್​ನಲ್ಲಿ ಅನುಯಾಯಿಗಳ ಸಂಖ್ಯೆ ನಿಖರವಾಗಿದೆ. ಟ್ವಿಟರ್​​ ಸ್ಪ್ಯಾಮ್​ಗಳಿಗೆ ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ರಾಹುಲ್ ಗಾಂಧಿ ಪರಾಗ್ ಅಗರ್ವಾಲ್​ಗೆ ಬರೆದ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಟ್ವಿಟರ್ ಮೇಲೆ ಪ್ರಭಾವ ಬೀರಿ ತಮ್ಮ ಫಾಲೋವರ್​ಗಳ ಸಂಖ್ಯೆ ಸೀಮಿತಗೊಳಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ರಾಹುಲ್ ಗಾಂಧಿ ಅಂಕಿಅಂಶಗಳನ್ನೂ ನೀಡಿದ್ದರು. ಇದೀಗ ರಾಹುಲ್ ಹೇಳಿಕೆಗೆ ಟ್ವಿಟರ್ ತನ್ನ ಪ್ರತಿಕ್ರಿಯೆ ನೀಡಿ, ಆರೋಪ ನಿರಾಕರಿಸಿದೆ.

ರಾಹುಲ್ ಆರೋಪಕ್ಕೆ ಟ್ವಿಟರ್ ಪ್ರತಿಕ್ರಿಯೆ ಏನು?: ಎಎನ್​ಐ ಸುದ್ದಿಸಂಸ್ಥೆ ವರದಿ ಮಾಡಿರುವಂತೆ, ಟ್ವಿಟರ್ ವಕ್ತಾರರು ರಾಹುಲ್ ಗಾಂಧಿಯವರಿಗೆ ಸಂಸ್ಥೆಯ ನೀತಿಯನ್ನು ಉಲ್ಲೇಖಿಸಿ ಪ್ರತಿಕ್ರಿಯೆ ನೀಡಿದ್ದಾರೆ. ‘‘ಟ್ವಿಟರ್​ ಸ್ಪಾಮ್ ಹಾಗೂ ನಕಲಿ ಫಾಲೋವರ್​ಗಳ ಹೆಚ್ಚಳದ ಕುರಿತಂತೆ ಅತ್ಯುನ್ನತ ತಂತ್ರಜ್ಞಾನದ ಮೂಲಕ ನಿಗಾವಹಿಸುತ್ತದೆ. ಇದರಿಂದಾಗಿ ಫಾಲೋವರ್​ಗಳ ಸಂಖ್ಯೆಯಲ್ಲಿ ಏರಿಳಿತವಾಗುತ್ತದೆ’’ ಎಂದು ವಕ್ತಾರರು ತಿಳಿಸಿದ್ದಾರೆ.

ಮ್ಯಾನಿಪ್ಯುಲೇಷನ್ ಮತ್ತು ಸ್ಪ್ಯಾಮ್‌ ಮೂಲಕ ಟ್ವಿಟರ್​ನ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರತಿ ವಾರ ಲಕ್ಷಾಂತರ ಖಾತೆಗಳನ್ನು ತೆಗೆದುಹಾಕುತ್ತೇವೆ ಎಂದು ತಿಳಿಸಿರುವ ವಕ್ತಾರರು, ಹೆಚ್ಚಿನ ವಿವರಕ್ಕೆ ಟ್ವಿಟರ್ ಟ್ರಾನ್ಸ್ಪರೆನ್ಸಿ ಸೆಂಟರ್​ಅನ್ನು ಗಮನಿಸಬಹುದು ಎಂದು ತಿಳಿಸಿದ್ದಾರೆ. ಅಲ್ಲದೇ ಟ್ವಿಟರ್​ನ ಈ ಕಾರ್ಯನಿರ್ವಹಣೆಯಿಂದ ಕೆಲವು ಖಾತೆಗಳಲ್ಲಿ ಸಣ್ಣ ಬದಲಾವಣೆಯಾಗಿದ್ದರೆ, ಮತ್ತೆ ಕೆಲವು ಖಾತೆಗಳು ಹೆಚ್ಚಿನ ಪರಿಣಾಮ ಎದುರಿಸಿವೆ ಎಂದೂ ಅವರು ಹೇಳಿದ್ದಾರೆ.

ಪರಾಗ್ ಅಗರ್ವಾಲ್​ಗೆ ಬರೆದ ಪತ್ರದಲ್ಲಿ ರಾಹುಲ್ ಗಾಂಧಿ ಹೇಳಿದ್ದೇನು?: ಸರ್ಕಾರದ ಒತ್ತಡದಿಂದ ತಮ್ಮ ಟ್ವಿಟರ್ ಫಾಲೋವರ್​​ಗಳ ಸಂಖ್ಯೆಯನ್ನು ಸೀಮಿತಗೊಳಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್​ನ ಸಿಇಒ ಪರಾಗ್ ಅಗರ್ವಾಲ್​ಗೆ ಪತ್ರ ಬರೆದಿದ್ದರು. ಮೊದಲಿಗೆ ರಾಹುಲ್ ಗಾಂಧಿಯವರ ಖಾತೆಯನ್ನು ಪ್ರತಿ ತಿಂಗಳು ಸುಮಾರು 2 ಲಕ್ಷ ಹೊಸಬರು ಟ್ವಿಟರ್​ನಲ್ಲಿ ಫಾಲೋ ಮಾಡುತ್ತಿದ್ದರು. ಆದರೆ 2021ರ ಆಗಸ್ಟ್ ನಂತರ ಈ ಸಂಖ್ಯೆ ಕೇವಲ 2,500ರ ಆಸುಪಾಸಿನಲ್ಲಿದೆ. ಅರ್ಥಾತ್ ಸುಮಾರು 2,500 ಜನರು ಮಾತ್ರ ಪ್ರತಿ ತಿಂಗಳು ರಾಹುಲ್ ಗಾಂಧಿ ಖಾತೆಯನ್ನು ಹೊಸದಾಗಿ ಫಾಲೋ ಮಾಡುತ್ತಿದ್ದಾರೆ. ಅಲ್ಲದೇ ಕೆಲ ಸಮಯದಿಂದ ಟ್ವಿಟರ್ ಫಾಲೋವರ್​​ಗಳ ಸಂಖ್ಯೆ 19.5 ಮಿಲಿಯನ್​ನಲ್ಲೇ ಸ್ಥಿರವಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.

ಪರೇಶ್ ಅಗರವಾಲ್​ಗೆ ಬರೆದ ಪತ್ರದಲ್ಲಿ ರಾಹುಲ್ ಗಾಂಧಿ, ‘‘ಭಾರತದಲ್ಲಿ ನಿರಂಕುಶಾಧಿಕಾರದ ಬೆಳವಣಿಗೆಗೆ ಟ್ವಿಟರ್ ಸಕ್ರಿಯವಾಗಿ ಸಹಾಯ ಮಾಡದಂತೆ ನೋಡಿಕೊಳ್ಳುವ ಅಗಾಧ ಜವಾಬ್ದಾರಿ ನಿಮ್ಮ ಮೇಲಿದೆ’’ ಎಂದು ಬರೆದಿದ್ದರು. ‘‘ಜಗತ್ತಿನಾದ್ಯಂತ ಉದಾರವಾದಿ ಪ್ರಜಾಪ್ರಭುತ್ವ ಮತ್ತು ನಿರಂಕುಶಾಧಿಕಾರದ ನಡುವಿನ ಸೈದ್ಧಾಂತಿಕ ಯುದ್ಧವನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ರೂಪಿಸಲಾಗುತ್ತಿದೆ. ಇದು ಟ್ವಿಟರ್‌ನಂತಹ ದೊಡ್ಡ ಕಂಪನಿಗಳ ಮೇಲೆ ಬಹುದೊಡ್ಡ ಜವಾಬ್ದಾರಿ ಹೊರಿಸಿದೆ’’ ಎಂದು ರಾಹುಲ್ ಗಾಂಧಿ ಹೇಳಿದ್ದರು.

ಇದನ್ನೂ ಓದಿ:

ಪ್ರಧಾನಿ ಮೋದಿ ಸರ್ಕಾರದ ಒತ್ತಡದಿಂದ ಟ್ವಿಟರ್​ ಫಾಲೋವರ್​ಗಳ ಸಂಖ್ಯೆ ಸೀಮಿತಗೊಳಿಸುತ್ತಿದೆ: ರಾಹುಲ್ ಗಾಂಧಿ ಗಂಭೀರ ಆರೋಪ

ಗುರೂಜಿ ಆರ್ಯವೇದಿಕ್ ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿ 13 ಪುಟ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣು

Published On - 11:24 am, Thu, 27 January 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್