Senior Citizen FD Scheme: ಎಸ್​ಬಿಐ, ಎಚ್​ಡಿಎಫ್​ಸಿ ಹಾಗೂ ಐಸಿಐಸಿಐ ಬ್ಯಾಂಕ್​ನ ಹಿರಿಯ ನಾಗರಿಕರ ಎಫ್​ಡಿ ಬಡ್ಡಿ ದರಗಳಿವು

ಭಾರತದ ಪ್ರಮುಖ ಬ್ಯಾಂಕ್​ಗಳಲ್ಲಿ ಹಿರಿಯ ನಾಗರಿಕರಿಗಾಗಿ ಇರುವ ಫಿಕ್ಸೆಡ್​ ಡೆಪಾಸಿಟ್​ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲಿದೆ. ಇದು ವಿಶೇಷ ಎಫ್​ಡಿ ಯೋಜನೆ ಆಗಿದೆ.

Senior Citizen FD Scheme: ಎಸ್​ಬಿಐ, ಎಚ್​ಡಿಎಫ್​ಸಿ ಹಾಗೂ ಐಸಿಐಸಿಐ ಬ್ಯಾಂಕ್​ನ ಹಿರಿಯ ನಾಗರಿಕರ ಎಫ್​ಡಿ ಬಡ್ಡಿ ದರಗಳಿವು
ಸಾಂದರ್ಭಿಕ ಚಿತ್ರ
Follow us
| Updated By: Srinivas Mata

Updated on: Jan 27, 2022 | 2:45 PM

ಈಗಿನ ಸನ್ನಿವೇಶದಲ್ಲಿ ಮಾರುಕಟ್ಟೆಯಲ್ಲಿ ಹಲವಾರು ಹಣಕಾಸು ಯೋಜನೆಗಳು ಲಭ್ಯ ಇದ್ದು, ವಿವಿಧ ಬಡ್ಡಿದರಗಳನ್ನು ನೀಡುವುದರಿಂದ ಆಯ್ಕೆಯು ಖಂಡಿತವಾಗಿ ಬಹಳ ಕಠಿಣ ಇರುತ್ತದೆ. ಆದರೆ ದೀರ್ಘಾವಧಿ ಹೂಡಿಕೆ ಕುರಿತು ಯೋಚಿಸುವಾಗ ಎಂದಿಗೂ ಮೊದಲನೇ ಆಯ್ಕೆಯಾಗಿ ಮನಸ್ಸಿಗೆ ಬರುವ ಒಂದು ಯೋಜನೆ ನಿಶ್ಚಿತ ಠೇವಣಿ ಅಥವಾ ಫಿಕ್ಸೆಡ್​ ಡೆಪಾಸಿಟ್ (Fixed Deposits). ಈಗಂತೂ ಕೊವಿಡ್ -19 ಸಾಂಕ್ರಾಮಿಕದ ಕಾರಣಕ್ಕೆ ಬಹುಪಾಲು ಜನರು ತಮ್ಮ ಉಳಿತಾಯ, ಹೂಡಿಕೆಗಳನ್ನು ನಗದು ಮಾಡಿಸಿಕೊಳ್ಳುವಂತಾಗಿದೆ. ಈ ಹಿನ್ನೆಲೆಯಲ್ಲಿ, ಹಲವಾರು ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳು ಹಿರಿಯ ನಾಗರಿಕರಿಗಾಗಿ ವಿಶೇಷ ಎಫ್‌ಡಿ ಯೋಜನೆಗಳನ್ನು ಪರಿಚಯಿಸಿದವು. ಇವು ಈಗಾಗಲೇ ಅಸ್ತಿತ್ವದಲ್ಲಿರುವ ಯೋಜನೆಗಳಿಗಿಂತ ಉತ್ತಮ ಬಡ್ಡಿದರಗಳನ್ನು ನೀಡುತ್ತವೆ. 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕ್ ತಮ್ಮ ವಿಶೇಷ ಎಫ್‌ಡಿಗಳನ್ನು ಹಿರಿಯ ನಾಗರಿಕರಿಗೆ ಟರ್ಮ್ ಡೆಪಾಸಿಟ್‌ಗಳ ಮೇಲಿನ ಹೆಚ್ಚಿನ ಬಡ್ಡಿ ದರಗಳೊಂದಿಗೆ ಪರಿಚಯಿಸಿವೆ. ಆ ಹಣಕಾಸು ಸಂಸ್ಥೆಗಳು ನೀಡುತ್ತಿರುವ ಬಡ್ಡಿ ದರಗಳ ವಿವರ ಇಲ್ಲಿದೆ:

ಹಿರಿಯ ನಾಗರಿಕರಿಗಾಗಿ ಎಸ್‌ಬಿಐನ ‘ವಿ ಕೇರ್’ ಯೋಜನೆ ಭಾರತದ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾವು ಈ ವಿಶೇಷ ಯೋಜನೆಯನ್ನು 2020ರ ಮೇ ತಿಂಗಳಲ್ಲಿ ಪ್ರಾರಂಭಿಸಿತು. ಈ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ ಇರುವುದು 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ. 5 ವರ್ಷಗಳ ಅವಧಿಗೆ ಠೇವಣಿಗಳ ಮೇಲೆ ಹೆಚ್ಚುವರಿ 30 ಬೇಸಿಸ್​ ಪಾಯಿಂಟ್​ಗಳನ್ನು (ಶೇಕಡಾ 1=100 ಬೇಸಿಸ್ ಪಾಯಿಂಟ್​ಗಳು) ಬಡ್ಡಿ ದರವನ್ನು ನೀಡುತ್ತಿದೆ. ಈ ಯೋಜನೆಯಡಿ ಹಿರಿಯ ನಾಗರಿಕರು ವಾರ್ಷಿಕವಾಗಿ ಶೇಕಡಾ 6.20 ಬಡ್ಡಿ ದರವನ್ನು ಪಡೆಯುತ್ತಾರೆ. ಈ ಯೋಜನೆಯು ಮಾರ್ಚ್ 31, 2022ರ ವರೆಗೆ ಇರುತ್ತದೆ.

ಎಚ್​ಡಿಎಫ್​ಸಿ ಬ್ಯಾಂಕ್‌ನ ಹಿರಿಯ ನಾಗರಿಕರ ಕೇರ್ ಎಫ್​ಡಿ 2020ರ ಮೇ ತಿಂಗಳಲ್ಲಿ ಆರಂಭ ಆಗಿರುವ ಈ ಯೋಜನೆಯಡಿ ಠೇವಣಿ ಮೇಲೆ ಎಚ್​ಡಿಎಫ್​ಸಿ ಬ್ಯಾಂಕ್ 75 ಬೇಸಿಸ್ ಪಾಯಿಂಟ್‌ಗಳ ಹೆಚ್ಚಿನ ಬಡ್ಡಿದರವನ್ನು ನೀಡುತ್ತದೆ. ಈ ಯೋಜನೆಯಲ್ಲಿ 5 ವರ್ಷಗಳ ಅವಧಿಗೆ ಠೇವಣಿಗಳ ಮೇಲೆ ಶೇ 6.35ರಷ್ಟು ಬಡ್ಡಿ ದರ ನೀಡಲಾಗುತ್ತದೆ. ಈ ಯೋಜನೆಯು ಮಾರ್ಚ್ 31, 2022ರವರೆಗೆ ಇರುತ್ತದೆ.

ಹಿರಿಯ ನಾಗರಿಕರಿಗಾಗಿ ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ಸ್ ಯೋಜನೆ 2020ರ ಮೇ ತಿಂಗಳಿನಿಂದ ಪ್ರಾರಂಭವಾದ ಈ ಯೋಜನೆಯು ಸದ್ಯದ ಬಡ್ಡಿದರಗಳಿಗಿಂತ 80 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚು ನೀಡುತ್ತದೆ. ಈ ಯೋಜನೆಯಡಿ ಹಿರಿಯ ನಾಗರಿಕರು ಶೇಕಡಾ 6.35ರ ಬಡ್ಡಿದರವನ್ನು ಪಡೆಯುತ್ತಾರೆ. ಐಸಿಐಸಿಐ ಬ್ಯಾಂಕ್‌ನ ಕೊಡುಗೆಯು ಏಪ್ರಿಲ್ 8, 2022ರ ವರೆಗೆ ಮಾನ್ಯವಾಗಿರುತ್ತದೆ. ಈ ವಿಶೇಷ ಎಫ್‌ಡಿ ಯೋಜನೆಗಳನ್ನು ಬ್ಯಾಂಕ್‌ಗಳು ಸಾಂಕ್ರಾಮಿಕ ರೋಗದ ನಂತರ ಹಿರಿಯ ನಾಗರಿಕರಿಗೆ ಸುರಕ್ಷಿತ ಮತ್ತು ಯೋಗ್ಯವಾದ ಲಾಭವನ್ನು ನೀಡುವ ಮೂಲಕ ಪರಿಚಯಿಸಿದರೆ, ಇತರ ಹಣಕಾಸು ಇನ್​ಸ್ಟ್ರುಮೆಂಟ್​ಗಳು ಸಹ ಮಾರುಕಟ್ಟೆಯಲ್ಲಿ ಲಭ್ಯವಿವೆ.

ಅಂತಹ ಒಂದು ಇನ್​ಸ್ಟ್ರುಮೆಂಟ್ ಅಂದರೆ ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS). ಅಲ್ಲದೆ, ಎಫ್‌ಡಿಗಳಿಗೆ ಇತರ ಪರ್ಯಾಯಗಳನ್ನು ಹುಡುಕುವ ಹಿರಿಯ ನಾಗರಿಕರು ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್‌ಗಳು ಅಥವಾ ಗಿಲ್ಟ್ ಫಂಡ್‌ಗಳನ್ನು ಸಹ ಪರಿಶೀಲಿಸಬಹುದು.

ಇದನ್ನೂ ಓದಿ: Fixed Deposits: ಆಕ್ಸಿಸ್​ ಬ್ಯಾಂಕ್, ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕ್, ಕೊಟಕ್​ ಮಹೀಂದ್ರಾ ಬ್ಯಾಂಕ್​ ಎಫ್​ಡಿ ಬಡ್ಡಿ ದರ ಇಲ್ಲಿದೆ

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ