Fixed Deposits: ಆಕ್ಸಿಸ್​ ಬ್ಯಾಂಕ್, ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕ್, ಕೊಟಕ್​ ಮಹೀಂದ್ರಾ ಬ್ಯಾಂಕ್​ ಎಫ್​ಡಿ ಬಡ್ಡಿ ದರ ಇಲ್ಲಿದೆ

ಆಕ್ಸಿಸ್ ಬ್ಯಾಂಕ್, ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕ್, ಕೊಟಕ್​ ಮಹೀಂದ್ರಾ ಬ್ಯಾಂಕ್​ನಲ್ಲಿನ ಎಫ್​ಡಿ ಮೇಲಿನ ವಿವಿಧ ಅವಧಿಯ ಬಡ್ಡಿ ದರ ಇಲ್ಲಿದೆ.

Fixed Deposits: ಆಕ್ಸಿಸ್​ ಬ್ಯಾಂಕ್, ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕ್, ಕೊಟಕ್​ ಮಹೀಂದ್ರಾ ಬ್ಯಾಂಕ್​ ಎಫ್​ಡಿ ಬಡ್ಡಿ ದರ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jan 24, 2022 | 1:06 PM

ನಿಶ್ಚಿತ ಠೇವಣಿ (Fixed Deposits) ಎಂಬುದು ನಿಯಮಿತವಾಗಿ ಹಾಗೂ ನಿಗದಿತವಾಗಿ ಆದಾಯ ದೊರಕಿಸುತ್ತದೆ. ನಿಶ್ಚಿತ ಠೇವಣಿ (ಎಫ್‌ಡಿ) ಎಂಬುದು ಬ್ಯಾಂಕ್‌ಗಳು ಹೂಡಿಕೆದಾರರಿಗೆ ನೀಡುವ ಹೂಡಿಕೆ ಉತ್ಪನ್ನವಾಗಿದೆ. ಫಿಕ್ಸೆಡ್​ ಡೆಪಾಸಿಟ್​ಗಳಲ್ಲಿ ಹೂಡಿಕೆಯ ಸಮಯದಲ್ಲಿ ನೀವು ಯಾವ ಬಡ್ಡಿದರವನ್ನು ಪಡೆಯುತ್ತೀರಿ ಮತ್ತು ಮುಕ್ತಾಯದ ಸಮಯದಲ್ಲಿ ಎಷ್ಟು ಹಣವನ್ನು ಪಡೆಯುತ್ತೀರಿ ಎಂದು ನಿಮಗೆ ತಿಳಿದಿರುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India), ಎಚ್​ಡಿಎಫ್​ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಕೊಟಕ್ ಮಹೀಂದ್ರಾ ಬ್ಯಾಂಕ್ 2022ರ ಜನವರಿಯಲ್ಲಿ ಟರ್ಮ್ ಡೆಪಾಸಿಟ್​ಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿವೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

ಆಕ್ಸಿಸ್ ಬ್ಯಾಂಕ್ ಇತ್ತೀಚಿನ ಎಫ್​.ಡಿ. ಬಡ್ಡಿ ದರಗಳು 20ನೇ ಜನವರಿ 2022ರಿಂದ ಜಾರಿಗೆ ಬಂದಿದೆ. ಆಕ್ಸಿಸ್ ಬ್ಯಾಂಕ್ 7 ದಿನಗಳಿಂದ 10 ವರ್ಷಗಳ ಅವಧಿಯ ಎಫ್​ಡಿ ಮೇಲೆ ಶೇ 2.5ರಿಂದ ಶೇ 5.75ರ ವರೆಗೆ ಬಡ್ಡಿದರಗಳನ್ನು ನೀಡುತ್ತದೆ.

7 ದಿನಗಳಿಂದ 14 ದಿನಗಳು- ಶೇ 2.50

15 ದಿನಗಳಿಂದ 29 ದಿನಗಳು- ಶೇ 2.50

30 ದಿನಗಳಿಂದ 45 ದಿನಗಳು- ಶೇ 3.00

46 ದಿನಗಳಿಂದ 60 ದಿನಗಳು- ಶೇ 3.00

61 ದಿನಗಳು < 3 ತಿಂಗಳು- ಶೇ 3.00

3 ತಿಂಗಳ ಮೇಲೆ 4 ತಿಂಗಳ ಒಳಗೆ- ಶೇ 3.50

4 ತಿಂಗಳ ಮೇಲೆ 5 ತಿಂಗಳ ಒಳಗೆ- ಶೇ 3.50

5 ತಿಂಗಳ ಮೇಲೆ 6 ತಿಂಗಳ ಒಳಗೆ- ಶೇ 3.50

6 ತಿಂಗಳ ಮೇಲೆ 7 ತಿಂಗಳ ಒಳಗೆ- ಶೇ 4.40

7 ತಿಂಗಳ ಮೇಲೆ 8 ತಿಂಗಳ ಒಳಗೆ- ಶೇ 4.40

8 ತಿಂಗಳ ಮೇಲ್ಪಟ್ಟು 9 ತಿಂಗಳ ಒಳಗೆ- ಶೇ 4.40

9 ತಿಂಗಳ ಮೇಲ್ಪಟ್ಟು 10 ತಿಂಗಳು ಒಳಗೆ- ಶೇ 4.40

10 ತಿಂಗಳ ಮೇಲ್ಪಟ್ಟು 11 ತಿಂಗಳ ಒಳಗೆ- ಶೇ 4.40

11 ತಿಂಗಳ ಮೇಲ್ಪಟ್ಟು 11 ತಿಂಗಳ 25 ದಿನಗಳ ಒಳಗೆ- ಶೇ 4.40

11 ತಿಂಗಳು 25 ದಿನಗಳಿಂದ 1 ವರ್ಷದ ಒಳಗೆ- ಶೇ 4.40

1 ವರ್ಷದಿಂದ 1 ವರ್ಷ 5 ದಿನಗಳ ಒಳಗೆ- ಶೇ 5.10

1 ವರ್ಷ 5 ದಿನಗಳಿಂದ 1 ವರ್ಷ 11 ದಿನಗಳ ಒಳಗೆ- ಶೇ 5.15

1 ವರ್ಷ 11 ದಿನಗಳಿಂದ 1 ವರ್ಷ 25 ದಿನಗಳೊಳಗೆ- ಶೇ 5.25

1 ವರ್ಷ 25 ದಿನಗಳಿಂದ 13 ತಿಂಗಳ ಒಳಗೆ- ಶೇ 5.15

13 ತಿಂಗಳಿಂದ 14 ತಿಂಗಳೊಳಗೆ- ಶೇ 5.15

14 ತಿಂಗಳಿಂದ 15 ತಿಂಗಳೊಳಗೆ – ಶೇ 5.15

15 ತಿಂಗಳಿಂದ 16 ತಿಂಗಳೊಳಗೆ- ಶೇ 5.20

16 ತಿಂಗಳಿಂದ 17 ತಿಂಗಳೊಳಗೆ- ಶೇ 5.20

17 ತಿಂಗಳಿಂದ 18 ತಿಂಗಳೊಳಗೆ- ಶೇ 5.20

18 ತಿಂಗಳಿಂದ 2 ವರ್ಷಗಳೊಳಗೆ- ಶೇ 5.25

2 ವರ್ಷಗಳಿಂದ 30 ತಿಂಗಳೊಳಗೆ- ಶೇ 5.40

30 ತಿಂಗಳಿಂದ 3 ವರ್ಷಗಳೊಳಗೆ- ಶೇ 5.40

3 ವರ್ಷಗಳಿಂದ 5 ವರ್ಷಗಳ ಒಳಗೆ- ಶೇ 5.40

5 ವರ್ಷದಿಂದ 10 ವರ್ಷಗಳೊಳಗೆ- ಶೇ 5.75

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಇತ್ತೀಚಿನ ಫಿಕ್ಸೆಡ್ ಡೆಪಾಸಿಟ್​ ಬಡ್ಡಿದರಗಳು 15 ಜನವರಿ 2022ರಿಂದ ಜಾರಿಗೆ ಬಂದಿದೆ. 7 ದಿನಗಳಿಂದ 10 ವರ್ಷಗಳ ಮಧ್ಯದ ಎಸ್‌ಬಿಐ ಎಫ್‌ಡಿಗಳು ಸಾಮಾನ್ಯ ಗ್ರಾಹಕರಿಗೆ ಶೇ 2.9ರಿಂದ ಶೇ 5.4ರ ವರೆಗೆ ನೀಡುತ್ತದೆ. ಈ ಠೇವಣಿಗಳ ಮೇಲೆ ಹಿರಿಯ ನಾಗರಿಕರು 50 ಬೇಸಿಸ್ ಪಾಯಿಂಟ್‌ಗಳನ್ನು (ಬಿಪಿಎಸ್) ಹೆಚ್ಚುವರಿಯಾಗಿ ಪಡೆಯುತ್ತಾರೆ. ಈ ದರಗಳು 12 ಜನವರಿ 2022ರಿಂದ ಜಾರಿಗೆ ಬಂದಿವೆ.

7 ದಿನಗಳಿಂದ 45 ದಿನಗಳು – ಶೇ 2.9

46 ದಿನಗಳಿಂದ 179 ದಿನಗಳು – ಶೇ 3.9

180 ದಿನಗಳಿಂದ 210 ದಿನಗಳು – ಶೇ 4.4

211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ – ಶೇ 4.4

1 ವರ್ಷದಿಂದ 2 ವರ್ಷಗಳಿಗಿಂತ ಕಡಿಮೆ – ಶೇ 5.1

2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ – ಶೇ 5.1

3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ – ಶೇ 5.3

5 ವರ್ಷದಿಂದ ಮತ್ತು 10 ವರ್ಷಗಳವರೆಗೆ – ಶೇ 5.4

ಎಚ್​ಡಿಎಫ್​ಸಿ ಬ್ಯಾಂಕ್ ಇತ್ತೀಚಿನ ಎಫ್​ಡಿ ಬಡ್ಡಿ ದರಗಳು ಜನವರಿ 12, 2022ರಿಂದ ಜಾರಿಗೆ ಬಂದಿವೆ. ಎಚ್​ಡಿಎಫ್​ಸಿ ಬ್ಯಾಂಕ್ 7 ದಿನಗಳಿಂದ 10 ವರ್ಷಗಳವರೆಗೆ ಮೆಚ್ಯೂರ್​ ಆಗುವ ಠೇವಣಿಗಳ ಮೇಲೆ ಶೇ 2.50ರಿಂದ ಶೇ 5.60ರ ವರೆಗೆ ಬಡ್ಡಿಯನ್ನು ನೀಡುತ್ತದೆ. ಎಚ್​ಡಿಎಫ್​ಸಿ ಬ್ಯಾಂಕ್ ಹಿರಿಯ ನಾಗರಿಕರಿಗೆ 7 ದಿನಗಳಿಂದ 10 ವರ್ಷಗಳಲ್ಲಿ ಮೆಚ್ಯೂರ್ ಆಗುವ ಎಫ್​ಡಿಗಳ ಮೇಲೆ ಶೇ 3ರಿಂದ ಶೇ 6.25ರ ವರೆಗೆ ಬಡ್ಡಿ ದರಗಳನ್ನು ನೀಡುತ್ತದೆ.

7 ದಿನದಿಂದ 14 ದಿನಗಳು- ಶೇ 2.50

15 ದಿನಗಳಿಂದ 29 ದಿನಗಳು- ಶೇ 2.50

30 ದಿನಗಳಿಂದ 45 ದಿನಗಳು- ಶೇ 3

61 ದಿನಗಳಿಂದ 90 ದಿನಗಳು- ಶೇ 3

91 ದಿನಗಳಿಂದ 6 ತಿಂಗಳು- ಶೇ 3.5

6 ತಿಂಗಳು 1 ದಿನದಿಂದ 9 ತಿಂಗಳು- ಶೇ 4.4

9 ತಿಂಗಳು 1 ದಿನದಿಂದ 1 ವರ್ಷದೊಳಗೆ- ಶೇ 4.4

1 ವರ್ಷಕ್ಕೆ – ಶೇ 4.9

1 ವರ್ಷ 1 ದಿನದಿಂದ 2 ವರ್ಷ- ಶೇ 5

2 ವರ್ಷಗಳ 1 ದಿನದಿಂದ 3 ವರ್ಷಗಳು- ಶೇ 5.20

3 ವರ್ಷ 1 ದಿನದಿಂದ 5 ವರ್ಷ- ಶೇ 5.40

5 ವರ್ಷಗಳು 1 ದಿನದಿಂದ 10 ವರ್ಷಗಳು- ಶೇ 5.60

ಕೊಟಕ್ ಮಹೀಂದ್ರಾ ಬ್ಯಾಂಕ್ ಇತ್ತೀಚಿನ ಎಫ್​ಡಿ ಬಡ್ಡಿ ದರಗಳು ಜನವರಿ 6, 2022ರಿಂದ ಜಾರಿಗೆ ಬಂದಿದೆ. ಕೊಟಕ್ ಮಹೀಂದ್ರಾ ಬ್ಯಾಂಕ್ 7 ದಿನಗಳಿಂದ 10 ವರ್ಷಗಳ ಅವಧಿಯ ಎಫ್​ಡಿಗಳ ಮೇಲೆ ಶೇ 2.5ರಿಂದ ಶೇ 5.30ರ ವರೆಗೆ ಬಡ್ಡಿದರಗಳನ್ನು ನೀಡುತ್ತದೆ.

7ರಿಂದ 14 ದಿನಗಳು- ಶೇ 2.50

15ರಿಂದ 30 ದಿನಗಳು- ಶೇ 2.50

31ರಿಂದ 45 ದಿನಗಳು- ಶೇ 2.75

46ರಿಂದ 90 ದಿನಗಳು- ಶೇ 2.75

91ರಿಂದ 120 ದಿನಗಳು- ಶೇ 3

121ರಿಂದ 179 ದಿನಗಳು- ಶೇ 3.25

180 ದಿನಗಳು- ಶೇ 4.3

181 ದಿನಗಳಿಂದ 269 ದಿನಗಳು- ಶೇ 4.40

270 ದಿನಗಳು- ಶೇ 4.40

271 ದಿನಗಳಿಂದ 363 ದಿನಗಳು- ಶೇ 4.40

364 ದಿನಗಳು- ಶೇ 4.5

365 ದಿನಗಳಿಂದ 389 ದಿನಗಳು- ಶೇ 4.9

390 ದಿನಗಳು (12 ತಿಂಗಳು 25 ದಿನಗಳು)- ಶೇ 5

391 ದಿನಗಳಿಂದ 23 ತಿಂಗಳಿಗಿಂತ ಕಡಿಮೆ- ಶೇ 5

23 ತಿಂಗಳು- ಶೇ 5.10

23 ತಿಂಗಳು 1 ದಿನದಿಂದ 2 ವರ್ಷಕ್ಕಿಂತ ಕಡಿಮೆ- ಶೇ 5.10

2 ವರ್ಷಗಳಿಗಿಂದ 3 ವರ್ಷಗಳಿಗಿಂತ ಕಡಿಮೆ- ಶೇ 5.15

3 ವರ್ಷ ಮತ್ತು ಮೇಲ್ಪಟ್ಟು ಆದರೆ 4 ವರ್ಷಕ್ಕಿಂತ ಕಡಿಮೆ- ಶೇ 5.3

4 ವರ್ಷ ಮತ್ತು ಮೇಲ್ಪಟ್ಟ ಆದರೆ 5 ವರ್ಷಕ್ಕಿಂತ ಕಡಿಮೆ- ಶೇ 5.3

5 ವರ್ಷಗಳು ಮತ್ತು ಮೇಲ್ಪಟ್ಟ ಮತ್ತು 10 ವರ್ಷಗಳವರೆಗೆ- ಶೇ 5.3

ಇದನ್ನೂ ಓದಿ: Post Office Savings Scheme: ಪೋಸ್ಟ್​ ಆಫೀಸ್​ನ ಈ SCSS ಯೋಜನೆಯಡಿ ತಿಂಗಳಿಗೆ ರೂ. 8,334 ಉಳಿಸಿದರೆ 5 ವರ್ಷದಲ್ಲಿ 7 ಲಕ್ಷ ರೂ.