Migrant Labourers: ಈ ಸಲವಾದರೂ ಸಿಕ್ಕೀತೆ ಆಸರೆ: ಬಜೆಟ್​ನಿಂದ ವಲಸೆ ಕಾರ್ಮಿಕರ ನಿರೀಕ್ಷೆಗಳೇನು

Union Budget 2022: ದೇಶದಲ್ಲಿ ವಲಸೆ ಕಾರ್ಮಿಕರಿಗೂ ಅಸ್ತಿತ್ವವಿದೆ. ಅದು ಚಿಂತಿಸಬೇಕಾಗ ಗಂಭೀರ ಸಮಸ್ಯೆ ಎಂದು ಎಲ್ಲರಿಗೂ ಅನ್ನಿಸಿದ್ದು ಲಾಕ್​ಡೌನ್ ವೇಳೆ ರಸ್ತೆಗಳಲ್ಲಿ ಕಾರ್ಮಿಕರ ಉದ್ದುದ್ದ ಸಾಲು ಕಾಣಿಸಿದ ನಂತರವೇ.

Migrant Labourers: ಈ ಸಲವಾದರೂ ಸಿಕ್ಕೀತೆ ಆಸರೆ: ಬಜೆಟ್​ನಿಂದ ವಲಸೆ ಕಾರ್ಮಿಕರ ನಿರೀಕ್ಷೆಗಳೇನು
ಬಸ್​ಗಾಗಿ ಕಾಯುತ್ತಿರುವ ವಲಸೆ ಕಾರ್ಮಿಕರು (ಸಂಗ್ರಹ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 24, 2022 | 7:07 PM

Budget Expectations: ವಲಸೆ ಕಾರ್ಮಿಕ ಅರವಿಂದ್ ಕನಸು ತುಂಬಾ ಚಿಕ್ಕದು. ತನಗೆ ಕಾಯಂ ಕೆಲಸ ಸಿಗಬೇಕು, ರೈತರಂತೆ ತನ್ನಂಥ ವಲಸೆ ಕಾರ್ಮಿಕರಿಗಾಗಿಯೂ (Migrant Labourers) ಈ ಬಾರಿಯ ಬಜೆಟ್​ನಲ್ಲಿ ಸರ್ಕಾರ ಏನಾದರೂ ಯೋಜನೆ ಆರಂಭಿಸಬೇಕು ಎನ್ನುವುದು ಅವರ ಆಶಯ. ತಮಗೆ ಕೆಲಸ ಕೊಟ್ಟಿದ್ದವರು ತಮ್ಮನ್ನು ಕೆಲಸದಿಂದ ತೆಗೆದ ಸಂದರ್ಭದಲ್ಲಿ ಕೈಲಿ ಒಂದಿಷ್ಟು ಸಿಗುವಂತೆ ಆಗಬೇಕು. ಅದರಿಂದ ತುರ್ತು ಸಂದರ್ಭದಲ್ಲಿ ಹಣದ ಆಸರೆ ಸಿಕ್ಕಂತೆ ಆಗುತ್ತದೆ ಎನ್ನುವುದು ಅವರ ಅಭಿಪ್ರಾಯ. ಲಾಕ್​ಡೌನ್ (Coronavirus Lockdown) ನಂತರ ರಸ್ತೆಗಳಲ್ಲಿ ಕಾರ್ಮಿಕರು ಸಾಲುಗಟ್ಟಿದಾಗಲೇ ಜನರಿಗೆ ವಲಸೆ ಕಾರ್ಮಿಕರ ಸಂಖ್ಯೆ ಎಷ್ಟು ದೊಡ್ಡದಿದೆ ಎನ್ನುವುದು ಹಾಗೂ ಅವರು ಅದೆಷ್ಟು ಸಂಕಷ್ಟ ಪರಿಸ್ಥಿತಿ ಅನುಭವಿಸುತ್ತಿದ್ದಾರೆ ಎಂಬ ಮಾಹಿತಿ ತಿಳಿದಿದ್ದು. ದೇಶದಲ್ಲಿ ವಲಸೆ ಕಾರ್ಮಿಕರಿಗೂ ಅಸ್ತಿತ್ವವಿದೆ. ಅದು ಚಿಂತಿಸಬೇಕಾಗ ಗಂಭೀರ ಸಮಸ್ಯೆ ಎಂದು ಎಲ್ಲಿರಿಗೂ ಅನ್ನಿಸಿದ್ದೂ ಆಗಲೇ. ಇದೆಲ್ಲಾ ಆಗಿ, ಈಗ ಎರಡು ವರ್ಷಗಳಾಗಿವೆ. ಈ ಅವಧಿಯಲ್ಲಿ ಅವರಿಗೆ ಏನು ದೊರೆಯಿತು ಎನ್ನುವುದನ್ನು ಈಗ ವಿಮರ್ಶಿಸಬೇಕಿದೆ.

ಮೊದಲ ಲಾಕ್‌ಡೌನ್ ಸಮಯದಲ್ಲಿ ಗುರುಗ್ರಾಮದಲ್ಲಿ ತಾವು ಕೆಲಸ ಮಾಡುತ್ತಿದ್ದ ಕಾರ್ಖಾನೆಗಳು ಕೆಲಸ ನಿಲ್ಲಿಸಿದಾಗ ಅರವಿಂದ್​ ಅವರಂಥ ಸಾವಿರಾರು ಕಾರ್ಮಿಕರು ಬಿಹಾರದ ಜಮುಯಿಗೆ ಕಾಲ್ನಡಿಗೆಯಲ್ಲಿ ಹೊರಟಿದ್ದರು. ಆ ದುಃಖದ ದೃಶ್ಯವನ್ನು ನೆನೆಸಿಕೊಂಡು ಅವರು ಇಂದಿಗೂ ನಡುಗುತ್ತಾರೆ. ಅಂದಿನ 1200 ಕಿಲೋಮೀಟರ್ ದೂರದ ಪ್ರಯಾಣವು ತುಂಬಾ ನೋವಿನಿಂದ ಕೂಡಿತ್ತು. ಗ್ರಾಮವನ್ನು ತಲುಪಿದ ನಂತರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದೆ ಎಂದು ಅರವಿಂದ್ ಹೇಳಿದರು. ಅಲ್ಲಿ ನನ್ನ ತಂದೆ ಉದ್ಯೋಗ ಖಾತ್ರಿ (MNREGA) ಯೋಜನೆಯಡಿ ಕೆಲಸ ಸಿಗುತ್ತಿದೆ. ನನಗೆ ಕೆಲಸ ಸಿಗುತ್ತಿಲ್ಲ. ಅಲ್ಲೀವರೆಗೆ ದೂರದ ದೆಹಲಿಯಲ್ಲಿ ದುಡಿದು ಮನೆಗೆ ಹಣ ಕಳಿಸುತ್ತಿದ್ದ ಅರವಿಂದ್ ಮನೆಯ ಆರ್ಥಿಕ ಆಸರೆ ಎನಿಸಿಕೊಂಡಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿತ್ತು.

ಸಿಗದ ಕೆಲಸ: ಭರವಸೆ ಭಗ್ನ ಕೊವಿಡ್​ಗೆ ಮೊದಲು ನಗರ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸರಾಸರಿ 5 ಸಾವಿರದಿಂದ 15 ಸಾವಿರ ರೂಪಾಯಿವರೆಗೆ ಆದಾಯ ಪಡೆಯುತ್ತಿದ್ದರು. ಈ ಪೈಕಿ ಐದರಿಂದ ಏಳು ಸಾವಿರ ರೂಪಾಯಿ ಹಳ್ಳಿಗಳನ್ನು ತಲುಪುತ್ತಿತ್ತು. ಇದು ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಶೇ 2ರಷ್ಟು ಆಗುತ್ತಿತ್ತು. ಕೊವಿಡ್​ ಮೊದಲ ಅಲೆ ಅಪ್ಪಳಿಸಿ ಸಾಕಷ್ಟು ದಿನಗಳಾಗಿದ್ದರೂ, ನಗರದಿಂದ ಹಳ್ಳಿಗಳಿಗೆ ತಲುಪುತ್ತಿರುವ ಹಣದ ಪ್ರಮಾಣ ಕೊವಿಡ್ ಮೊದಲಿನ ಸ್ಥಿತಿಗೆ ಬರಲೇ ಇಲ್ಲ. ಹಳ್ಳಿಗಳಲ್ಲಿ ಉದ್ಯೋಗ ಸೃಜನೆ ಆಗದ ಕಾರಣ ಹರೀಶ್ ಅವರು ಭರವಸೆಯನ್ನೂ ಕಳೆದುಕೊಳ್ಳುವಂತೆ ಆಯಿತು.

ಸಿಗಲಿಲ್ಲ ನಗದು ಸಹಾಯ ಕೊರೊನಾ ಪಿಡುವು ಆವರಿಸಿದ್ದಾಗ ನಮಗೆ ಆಹಾರಕ್ಕೆ ತೊಂದರೆಯಾಗಲಿಲ್ಲ. ಏಕೆಂದರೆ ಹಳ್ಳಿಗಳಲ್ಲಿ ನಗದು ಪಡಿತರ ಸಿಗುತ್ತಿತ್ತು. ಆದರೆ ನಗದು ರೂಪದಲ್ಲಿ ಯಾವುದೇ ಸಹಾಯ ಸಿಗಲಿಲ್ಲ. ಮತ್ತೆ ಗುರುಗ್ರಾಮಕ್ಕೆ ಬಂದಾಗ ಹಳೆಯ ಜಾಗದಲ್ಲಿ ಕೆಲಸವೇನೋ ಸಿಕ್ಕಿತು. ಆದರೆ ಲಾಕ್​ಡೌನ್​ ವೇಳೆ ಪಡೆದಿದ್ದ ₹ 10 ಸಾವಿರ ರೂಪಾಯಿ ಸಾಲವನ್ನು ತೀರಿಸಲು ಆಗಲಿಲ್ಲ. ಲಾಕ್‌ಡೌನ್ ಸಮಯದಲ್ಲಿ ಪಡೆದಿದ್ದ ಈ ಸಾಲಕ್ಕೆ ಇಂದಿಗೂ ಅವರು ತಿಂಗಳಿಗೆ ಒಂದು ಸಾವಿರ ರೂಪಾಯಿ ಬಡ್ಡಿ ತೆರುತ್ತಿದ್ದಾರೆ.

ಬಜೆಟ್​ನಲ್ಲಿ ಅರವಿಂದ್​ ಅವರಂಥವರಿಗೆ ಏನು ಸಿಗುತ್ತೆ? ಬಜೆಟ್ ಪ್ರಸ್ತಾವಗಳು ಸಾಮಾನ್ಯವಾಗಿ ಎರಡು ಮುಖ್ಯ ಭಾಗಗಳನ್ನು ಹೊಂದಿರುತ್ತವೆ. ಒಂದರಲ್ಲಿ ಸರ್ಕಾರವು ನೀತಿಗಳ ಮೂಲಕ ಪ್ರೋತ್ಸಾಹ ಅಥವಾ ಪೂರಕ ವಾತಾವರಣ ನಿರ್ಮಿಸಲು ಹೆರವಾಗುತ್ತದೆ. ಇನ್ನೊಂದರಲ್ಲಿ ಬಜೆಟ್‌ನಿಂದ ನೇರವಾಗಿ ಸಹಾಯಧನಗಳನ್ನು ನೀಡಲಾಗುತ್ತದೆ, ಅಂದರೆ ಸರ್ಕಾರವು ಸಹಾಯ ಮಾಡಲು ಅಥವಾ ಹೂಡಿಕೆ ಮಾಡಲು ತನ್ನ ಖಜಾನೆಯಿಂದ ಹಣವನ್ನು ಖರ್ಚು ಮಾಡುತ್ತದೆ. ಅರವಿಂದ್ ಅವರಂಥವರಿಗೆ ಈ ಎರಡನೇ ಭಾಗವೇ ಮಹತ್ವದ್ದು.

ಕಾರ್ಮಿಕರಿಗೆ ಸಹಾಯ ಮಾಡುವ ಯೋಜನೆಗಳ ಬಗ್ಗೆ ಕೇಳಿದಾಗ, ಅರವಿಂದ್ ಅವರು ಅದರ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎನ್ನುತ್ತಾರೆ. ಲಾಕ್‌ಡೌನ್‌ನಿಂದ ಕೆಲಸ ಕಳೆದುಕೊಂಡ ಬೀದಿಬದಿ ವ್ಯಾಪಾರಿಗಳಿಗಾಗಿ ಸರ್ಕಾರವು ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ ಆರಂಭಿಸಿದೆ. ಇದರಲ್ಲಿ ಸಂತ್ರಸ್ತರಿಗೆ 10 ಸಾವಿರ ರೂಪಾಯಿವರೆಗೆ ಸಾಲ ನೀಡಲು ಅವಕಾಶ ಕಲ್ಪಿಸಲಾಗಿತ್ತು.

ಲಾಕ್‌ಡೌನ್‌ನಲ್ಲಿ ಯೋಜನೆಗಳು ಕಾರ್ಯನಿರ್ವಹಿಸಲಿಲ್ಲ ಉದ್ಯೋಗ ಖಾತ್ರಿ (MNREGA), ಆಯುಷ್ಮಾನ್ ಭಾರತ್, ಕೈಗೆಟುಕುವ ವಸತಿ, ವಿಮೆ, ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹ ಸೇರಿದಂತೆ ಸರ್ಕಾರದ ಹಲವು ಯೋಜನೆಗಳು ಸಾರ್ವತ್ರಿಕವಾಗಿ ದೇಶಾದ್ಯಂತ ಜಾರಿಯಲ್ಲಿವೆ. ಯಾವುದೇ ಭಾರತೀಯ ಈ ಯೋಜನೆಗಳ ಫಲಾನುಭವಿ ಆಗಬಹುದು. ಅದರೆ ಈ ಯೋಜನೆಗಳಲ್ಲಿ ಯಾವುದೂ ನೇರವಾಗಿ ಅರವಿಂದ್‌ ಅವರಂಥ ಅಸಂಘಟಿತ ವಲಯದ ಕಾರ್ಮಿಕರಿಗೆ ಉದ್ಯೋಗ ಒದಗಿಸಲಿಲ್ಲ. ಉದ್ಯೋಗನಷ್ಟವಾದ ಹಿನ್ನೆಲೆಯಲ್ಲಿ ಅವರಿಗೆ ಆಪತ್ತಿನ ಸಮಯದಲ್ಲಿ ನಗದು ರೂಪದ ಸಹಾಯ, ಸಾಲಸೌಲಭ್ಯ ದೊರೆಯಲಿಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ಈ ಯೋಜನೆಗಳ ಉದ್ದೇಶವೇ ಈಡೇರಲಿಲ್ಲ.

ಕಳೆದ ಬಜೆಟ್‌ನಲ್ಲಿ ನಿಮಗೆ ಸಿಕ್ಕಿದ್ದೇನು? ಮೊದಲ ಲಾಕ್‌ಡೌನ್‌ ವೇಳೆ ಉಂಟಾದ ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ಳಲು ಬಹುತೇಕ ಕಾರ್ಮಿಕರಿಗೆ ಸಾಧ್ಯವಾಗಲೇ ಇಲ್ಲ. ಈ ವರ್ಗಕ್ಕೆ ಪರಿಹಾರ ನೀಡಲು ಸರ್ಕಾರವು ಕಳೆದ ಬಜೆಟ್‌ನಲ್ಲಿ ‘ಒಂದು ದೇಶ, ಒಂದು ಪಡಿತರ ಚೀಟಿ’ ಯೋಜನೆ ಪ್ರಾರಂಭಿಸಿತು. ಪ್ರಸ್ತುತ ನಮ್ಮ ದೇಶದ 80 ಕೋಟಿ ಜನರು ಆಹಾರ ಭದ್ರತಾ ಕಾಯ್ದೆಯ ವ್ಯಾಪ್ತಿಯಲ್ಲಿದ್ದಾರೆ. ಈ ಪೈಕಿ ಶೇ 86ರಷ್ಟು ಜನರು ಒಂದು ದೇಶ ಒಂದು ಪಡಿತರ ಚೀಟಿ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ.

ಅರವಿಂದ್ ಅವರಂತಹವರು ಉದ್ಯೋಗ ಖಾತ್ರಿ (MNREGA) ಯೋಜನೆಯಿಂದ ಸ್ವಲ್ಪ ಸಹಾಯ ಪಡೆದರು, ಆದರೆ ಕೆಲಸಕ್ಕೆ ಹೆಚ್ಚಿನ ಬೇಡಿಕೆ ಮತ್ತು ಉದ್ಯೋಗ ಸೃಜನೆ ಕಡಿಮೆಯಾದ ಕಾರಣ ಇವರಿಗೆ ಬಿಕ್ಕಟ್ಟಿನ ಸಮಯದಲ್ಲಿ ಹೆಚ್ಚಿನ ನೆರವು ಸಿಗಲಿಲ್ಲ. ಕೊವಿಡ್ ನಂತರ, ನಿರುದ್ಯೋಗಿಗಳ ಸೌಲಭ್ಯಕ್ಕಾಗಿ ಸರ್ಕಾರವು ಸ್ವಾವಲಂಬಿ ಭಾರತ ಉದ್ಯೋಗ ಯೋಜನೆಯನ್ನು ಆರಂಭಿಸಿತು. ಈ ಯೋಜನೆಯಲ್ಲಿ ನವೆಂಬರ್ 27, 2021ರವರೆಗೆ 1.16 ಲಕ್ಷ ಘಟಕಗಳ ಮೂಲಕ ಒಟ್ಟು 39.59 ಲಕ್ಷ ಜನರಿಗೆ ಉದ್ಯೋಗ ನೀಡಲಾಗಿದೆ. ಬೆಳೆಯುತ್ತಿರುವ ನಿರುದ್ಯೋಗಿಗಳ ಸಂಖ್ಯೆಯನ್ನು ಪರಿಗಣಿಸಿದರೆ ಈ ಪ್ರಮಾಣ ಸಾಕಷ್ಟು ಇಲ್ಲ ಎನ್ನುವುದು ಮನದಟ್ಟಾಗುತ್ತದೆ.

ಅರವಿಂದ್ ಅವರಂತಹವರಿಗೆ ನೆರವಾಗುವ ಗಟ್ಟಿ ಯೋಜನೆಗಳು ಯಾವುದೂ ಇಲ್ಲ ಎನ್ನುವ ವಾಸ್ತವ ಅಂಶವನ್ನು ಕೊವಿಡ್ ನಂತರ ಸರ್ಕಾರ ಅರ್ಥಮಾಡಿಕೊಂಡಿದೆ. ದೇಶದಲ್ಲಿ ಅರವಿಂದ್ ಅವರಂಥ ಕೂಲಿಕಾರ್ಮಿಕರು ಅದೆಷ್ಟು ಜನರಿದ್ದಾರೆ ಎನ್ನುವ ಬಗ್ಗೆಯೂ ಸರ್ಕಾರದಲ್ಲಿ ಯಾವುದೇ ಮಾಹಿತಿಯಿಲ್ಲ. ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪ್ರಕಾರ, ಭಾರತದಲ್ಲಿ ಒಟ್ಟು ಕಾರ್ಮಿಕ ಬಲದ ಶೇ 28.3ರಷ್ಟು ಜನರು ವಸಸೆ ಕಾರ್ಮಿಕರೇ ಆಗಿದ್ದಾರೆ. 2017ರ ಆರ್ಥಿಕ ಸಮೀಕ್ಷೆಯ ಪ್ರಕಾರ, 2011 ಮತ್ತು 2016ರ ನಡುವೆ ಪ್ರತಿವರ್ಷ ಸುಮಾರು 90 ಲಕ್ಷ ಜನರು ದೇಶದ ಒಳಗೆ, ಆಂತರಿಕವಾಗಿ (ವಿವಿಧ ರಾಜ್ಯ ಅಥವಾ ಪ್ರದೇಶ) ವಲಸೆ ಹೋಗಿದ್ದಾರೆ.

ಸುಮಾರು 10 ಕೋಟಿ ಆಂತರಿಕ ವಲಸಿಗರು ದೇಶಾದ್ಯಂತ ವಿವಿಧ ನಗರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಅರವಿಂದ್ ಬಗ್ಗೆ ಸರ್ಕಾರಕ್ಕೆ ಮಾಹಿತಿ ಸಿಕ್ಕಿದೆ. ಅಸಂಘಟಿತ ವಲಯದ ಕಾರ್ಮಿಕರ ಸರಿಯಾದ ಚಿತ್ರಣವನ್ನು ಪ್ರಸ್ತುತಪಡಿಸಲು ಮತ್ತು ಅವರಿಗೆ ಪರಿಹಾರ ನೀಡಲು, ಸರ್ಕಾರವು ಕಳೆದ ಬಜೆಟ್‌ನಲ್ಲಿ ಇ-ಶ್ರಮ್ ಪೋರ್ಟಲ್ ಪ್ರಾರಂಭಿಸಿತ್ತು. ಈವರೆಗೆ 21 ಕೋಟಿಗೂ ಹೆಚ್ಚು ಕಾರ್ಮಿಕರು ಇದರಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಈ ಕಾರ್ಮಿಕರಿಗೆ ಮೂಲ ಸೌಕರ್ಯ ಒದಗಿಸುವ ಉದ್ದೇಶದಿಂದ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೆ ಸರ್ಕಾರದ ಕ್ರಮಗಳು ಅಂಕಿಅಂಶಗಳ ಹಂತದಿಂದ ವಾಸ್ತವ ನೆಲೆಗಟ್ಟಿಗೆ ತಲುಪಿಯೇ ಇಲ್ಲ. ಅರವಿಂದ್ ಅವರಂಥ ವಲಸೆ ಕಾರ್ಮಿಕರಿಗೆ ಈವರೆಗೆ ಏನೂ ಸಿಕ್ಕಿಯೇ ಇಲ್ಲ. ಒಂದು ವೇಳೆ ಸರ್ಕಾರದ ಸೌಲಭ್ಯಗಳು ಅವರಿಗೆ ಸರಿಯಾದ ರೀತಿಯಲ್ಲಿ ಸಿಕ್ಕಿದ್ದಿರೆ ಈ ಹೊತ್ತಿಗೆ ಅವರ ಪರಿಸ್ಥಿತಿ ಸಾಕಷ್ಟು ಸುಧಾರಿಸುತ್ತಿತ್ತು. ವಿಶ್ವದ ಹಲವು ದೇಶಗಳಲ್ಲಿ ಅಲ್ಲಿನ ಸರ್ಕಾರಗಳು ಕಾರ್ಮಿಕರಿಗೆ ನೇರವಾಗಿ ಸಹಾಯಧನ ನೀಡಿದ್ದವು.

ಇದು ಕೇವಲ ಒಂದು ಕನಸು ಅರವಿಂದ್ ಕನಸು ತುಂಬಾ ಚಿಕ್ಕದು. ಈ ಬಾರಿಯ ಕೇಂದ್ರ ಬಜೆಟ್​ನಲ್ಲಿ ತನ್ನಂಥವರಿಗೂ ನೆರವು ಸಿಗುವಂಥ ಬೆಳವಣಿಗೆ ಆಗಬೇಕು ಎಂಬುದು ಅವರ ನಿರೀಕ್ಷೆ. ಒಂದು ವೇಳೆ ಆದಾಯ ಹೆಚ್ಚಾದರೆ ಎರಡು ವರ್ಷಗಳ ಹಿಂದೆ ಮಾಡಿದ 10 ಸಾವಿರ ರೂಪಾಯಿ ಸಾಲ ತೀರಿಸಿಕೊಳ್ಳಬಹುದು ಎನ್ನುವುದು ಅವರ ನಿರೀಕ್ಷೆ. ಇದು ಸಾಧ್ಯವಾಗಲು ಮೊದಲು ಅವರಿಗೆ ಕಾಯಂ ಕೆಲಸ ಸಿಗಬೇಕಿದೆ. ರೈತರಂತೆ ಕಾರ್ಮಿಕರಿಗಾಗಿಯೂ ಸರ್ಕಾರ ಯೋಜನೆ ಆರಂಭಿಸಬೇಕು. ಕೆಲಸದಿಂದ ತೆಗೆಯುವ ಸಂದರ್ಭದಲ್ಲಿಯೂ ಕಾರ್ಮಿಕರ ಕೈಗೆ ಒಂದಿಷ್ಟು ಹಣ ಸಿಗುವಂತೆ ಆಗಬೇಕು. ಆಗ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಜೀವನ ನಡೆಸಲು ಅವಕಾಶವಾಗುತ್ತದೆ ಎನ್ನುವುದು ಅವರ ಆಶಯ.

ಈ ಕುರಿತು ಟಿವಿ9ಗೆ ಪ್ರತಿಕ್ರಿಯಿಸಿದ ಕಾರ್ಮಿಕರ ಸಂಘಟನೆ ಲ್ಯಾಬೋರ್ನೆಟ್‌ನ ಸಹ ಸಂಸ್ಥಾಪಕಿ ಗಾಯತ್ರಿ ವಾಸುದೇವನ್, ದೇಶದಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಿಸಲು ಸಾಕಷ್ಟು ಸುಧಾರಣಾ ಕ್ರಮಗಳು ಅಗತ್ಯವಿದೆ. ಇದಕ್ಕಾಗಿ, ಇ-ಶ್ರಮ್ ಪೋರ್ಟಲ್ ಒಂದು ಮಹತ್ವದ ಮೈಲಿಗಲ್ಲು ಎಂದು ಭಾವಿಸಬಹುದಾಗಿದೆ. ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿರುವ ಪ್ರತಿ ಕಾರ್ಮಿಕರಿಗೆ ಪ್ರತಿ ತಿಂಗಳು ಸ್ವಲ್ಪ ಹಣ ಸಿಗುವ ವ್ಯವಸ್ಥೆಯನ್ನು ಸರ್ಕಾರ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: Budget 2022: ಬಜೆಟ್‌ನಿಂದ ಸ್ವ- ಉದ್ಯೋಗಿಗಳ ನಿರೀಕ್ಷೆಗಳೇನು? ಈ ಬಾರಿ ಅವರ ಕನಸುಗಳು ನನಸಾಗುತ್ತವೆಯೇ? ಇದನ್ನೂ ಓದಿ: Union Budget 2022: ಕೇಂದ್ರ ಬಜೆಟ್​ 2022ರಿಂದ ವಲಸೆ ಕಾರ್ಮಿಕರ ನಿರೀಕ್ಷೆಗಳೇನು?

Published On - 7:07 pm, Mon, 24 January 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್