AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀನಗರದಲ್ಲಿ ಎಚ್ಚೆತ್ತ ಪೊಲೀಸರಿಂದ ಸ್ಥಳೀಯ ನಿವಾಸಿಗಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ

ಶ್ರೀನಗರದಲ್ಲಿ ಎಚ್ಚೆತ್ತ ಪೊಲೀಸರಿಂದ ಸ್ಥಳೀಯ ನಿವಾಸಿಗಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Apr 30, 2025 | 5:55 PM

Share

ಧ್ವನಿವರ್ಧಕಗಳಲ್ಲದೆ ರಸ್ತೆಯ ಬದಿಗಿರುವ ಖಾಲಿ ಗೋಡೆಗಳ ಮೇಲೂ ಶ್ರೀನಗರದ ನಿವಾಸಿಗಳಿಗೆ ಉಗ್ರರು, ಅವರ ಸಂಘಟನೆಗಳು ಮತ್ತು ಅವರ ಬಗ್ಗೆ ಸಹಾನುಭೂತಿ ಇರುವವರ ಬಗ್ಗ್ಗೆ ಎಚ್ಚರದಿಂದ ಇರುವಂತೆ ಸೂಚಿಸುವ ಪೋಸ್ಟರ್ ಮತ್ತ್ತ ಹ್ಯಾಂಡ್ ಬಿಲ್​ಗಳನ್ನು ಅಂಟಿಸಿ ಜಾಗೃತಿ ಮೂಡಿಸಲಾಗುತ್ತಿದೆ. ನಾವು ಈಗಅಗಲೇ ವರದಿ ಮಾಡಿರುವ ಹಾಗೆ ಉಗ್ರರಿಗೆ ನೆರವಾದ ಮನೆಗಳನ್ನು ಧ್ವಂಸಗೊಳಿಸಲಾಗಿದೆ.

ಶ್ರೀನಗರ, ಏಪ್ರಿಲ್ 30: ಕಳೆದ ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿ ಭಾರತೀಯರನ್ನು ಇನ್ನಿಲ್ಲದಂತೆ ಒಗ್ಗೂಡಿಸಿದೆ. ಆ ರಾಜ್ಯದಲ್ಲಂತೂ ಉಗ್ರಗಾಮಿಗಳ ವಿರುದ್ಧ ಕಟ್ಚೆಚ್ಚರ ವಹಿಸಲಾಗುತ್ತಿದೆ. ರಾಜಧಾನಿ ಶ್ರೀನಗರದಲ್ಲಿ  (Srinagar) ವಾಸವಾಗಿರುವ ಜನ ಇತ್ತೆಹಾದ್ ಅಲ್ ಮುಸ್ಲಿಮೀನ್ ಮತ್ತು ಆವಾಮಿ ಆ್ಯಕ್ಷನ್ ಕಮಿಟಿ ಜೊತೆ ಯಾವುದೆ ರೀತಿಯ ಸಂಬಂಧ ಇಟ್ಟುಕೊಳ್ಳಬಾರದೆಂದು ಶ್ರೀನಗರ ಪೊಲೀಸ್ ನಗರದಾದ್ಯಂತ ಧ್ವನಿವರ್ಧಕಗಳ ಮೂಲಕ ಸಾರುತ್ತಿದೆ. ಒಂದು ವೇಳೆ ಈ ಸಂಘಟನೆಗಳೊಂದಿಗೆ ಸಂಬಂಧ ಇದ್ದರೂ ಅದನ್ನು ಮುರಿದುಕೊಳ್ಳವಂತೆ ಸೂಚಿಸಲಾಗುತ್ತಿದೆ.

ಇದನ್ನೂ ಓದಿ: ಯುದ್ಧಕ್ಕೆ ಪ್ರಚೋದನೆ: ಪಾಕ್​ನಿಂದ ಗಡಿಯಲ್ಲಿ ಗುಂಡಿನ ದಾಳಿ, ಭಾರತೀಯ ಸೇನೆಯಿಂದ ಪ್ರತಿದಾಳಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.