Post Office Savings Scheme: ಪೋಸ್ಟ್​ ಆಫೀಸ್​ನ ಈ SCSS ಯೋಜನೆಯಡಿ ತಿಂಗಳಿಗೆ ರೂ. 8,334 ಉಳಿಸಿದರೆ 5 ವರ್ಷದಲ್ಲಿ 7 ಲಕ್ಷ ರೂ.

ಅಂಚೆ ಕಚೇರಿಯ ಈ ಹಿರಿಯ ನಾಗರಿಕರ ಯೋಜನೆಯಲ್ಲಿ ತಿಂಗಳಿಗೆ ರೂ. 8334 ಠೇವಣಿ ಮಾಡಿದಲ್ಲಿ ಮೆಚ್ಯೂರಿಟಿ ಆಗುವಾಗ 5 ವರ್ಷದಲ್ಲಿ 7 ಲಕ್ಷ ರೂಪಾಯಿ ದೊರೆಯುತ್ತದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

Post Office Savings Scheme: ಪೋಸ್ಟ್​ ಆಫೀಸ್​ನ ಈ SCSS ಯೋಜನೆಯಡಿ ತಿಂಗಳಿಗೆ ರೂ. 8,334 ಉಳಿಸಿದರೆ 5 ವರ್ಷದಲ್ಲಿ 7 ಲಕ್ಷ ರೂ.
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jan 24, 2022 | 11:53 AM

ಭಾರತದಲ್ಲಿ ಹಿರಿಯ ನಾಗರಿಕರಿಗೆ ಇನ್ನೂ ಡಿಜಿಟಲ್ ತಂತ್ರಜ್ಞಾನ ಅಷ್ಟೇನೂ ರೂಢಿಯಾಗಿಲ್ಲ. ಏಕೆಂದರೆ ತಂತ್ರಜ್ಞಾನ ಕಲಿಕೆ ಬಗ್ಗೆ ಆಸಕ್ತಿ ಇಲ್ಲ ಎಂಬ ಸಾಮಾನ್ಯ ಉತ್ತರ ಧುತ್ತನೆ ಎದುರಾಗುತ್ತದೆ. ಈ ಕಾರಣಕ್ಕೆ ಇತರರಿಗೆ ಹೋಲಿಸಿದರೆ ಹಿರಿಯ ನಾಗರಿಕರ ಮಧ್ಯೆ ಪೋಸ್ಟ್​ ಆಫೀಸ್ ಉಳಿತಾಯ ಯೋಜನೆಗಳು (Post Office Savings Scheme) ಜನಪ್ರಿಯವಾಗಿವೆ. ಇಂಡಿಯಾ ಪೋಸ್ಟ್​ ಹಲವಾರು ಉಳಿತಾಯ ಯೋಜನೆಗಳನ್ನು ಆಫರ್ ಮಾಡುತ್ತಿದ್ದು, ದೇಶದಲ್ಲಿ ಅವು ಬಹು ಜನಪ್ರಿಯವಾದ ಅಪಾಯದಿಂದ ಮುಕ್ತವಾದ ಉಳಿತಾಯ ಯೋಜನೆಗಳು. ಭಾರತದಲ್ಲಿ ಸರಾಸರಿ ಮಧ್ಯಮ ವರ್ಗದ ನಾಗರಿಕರಿಗೆ ಉತ್ತಮ ಯೋಜನೆಗಳಲ್ಲಿ ನಿಶ್ಚಿತ ಹಾಗೂ ಉತ್ತಮ ಬಡ್ಡಿ ದರ ಪಡೆಯುವುದು ಪ್ರಮುಖ ಆದ್ಯತೆಯಾಗಿದೆ. ತಮ್ಮ ನಿವೃತ್ತಿ ನಂತರ ಉಳಿತಾಯ ಗಳಳಿಸುವುದಕ್ಕೆ ಬಯಸುವ ಹಿರಿಯ ನಾಗರಿಕರಿಗೂ ಇದೇ ಅನ್ವಯ ಆಗುತ್ತದೆ. ಹಿರಿಯ ನಾಗರಿಕರಿಗೆ ನಿವೃತ್ತಿ ನಂತರ ನಿಶ್ಚಿತ ಆದಾಯ ದೊರೆಯುವಂತೆ ಮಾಡಲು ಅಂಚೆ ಕಚೇರಿಯಿಂದ ಹಿರಿಯ ನಾಗರಿಕರ ಉಳಿತಾಯ ಖಾತೆ ಅಥವಾ SGSS ಇದೆ.

ಹೆಸರೇ ಹೇಳುವಂತೆ ಈ ಯೋಜನೆಯನ್ನು ಹಿರಿಯ ನಾಗರಿಕರಿಗಾಗಿ ಇಂಡಿಯಾ ಪೋಸ್ಟ್ ಪರಿಚಯಿಸಿದೆ. ಇದು 60 ವರ್ಷ ಮೇಲ್ಪಟ್ಟ ಭಾರತೀಯರಿಗಾಗಿ ಇದೆ. ಇದರರ್ಥ ಏನೆಂದರೆ, ಈ ಯೋಜನೆಗಳನ್ನು ಆರಂಭಿಸುವಾಗ ಚಂದಾದಾರರ ವಯಸ್ಸು 60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟಿರಬೇಕು. ಷರತ್ತುಗಳ ಅನ್ವಯ ಆಗುವಂತೆ ಕೆಲವು ಫಲಾನುಭವಿಗಳಿಗೆ ರಿಸರ್ವೇಷನ್ಸ್​ ಇರುತ್ತದೆ. ಈ ಮೂಲಕ ಚಂದಾದಾರರು ನಿಶ್ಚಿತ ಹಾಗೂ ಗೌರವಯುತವಾದ ರಿಟರ್ನ್ಸ್​ ಅನ್ನು ಅಂಚೆ ಕಚೇರಿಯಿಂದ ಪಡೆಯುತ್ತಾರೆ.

ಅಂಚೆ ಕಚೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆ ಕ್ಯಾಲ್ಕುಲೇಟರ್ ಈ ಪಾಲಿಸಿಯಲ್ಲಿ ಪ್ರತಿ ತಿಂಗಳು ರೂ. 8,334 ಠೇವಣಿ ಮಾಡಿದಲ್ಲಿ ಆ ಖಾತೆ ಮೆಚ್ಯೂರ್​ ಆಗುವ ಅವಧಿಯಾದ 5 ವರ್ಷದ ಹೊತ್ತಿಗೆ 7 ಲಕ್ಷ ರೂಪಾಯಿ ದೊರೆಯುತ್ತದೆ. ತಿಂಗಳಿಗೆ 8,334 ರೂಪಾಯಿ ಅಂದರೆ ಚಂದಾದಾರರು 5 ವರ್ಷದಲ್ಲಿ 5 ಲಕ್ಷ ರೂಪಾಯಿ ಠೇವಣಿ ಮಾಡಿರುತ್ತಾರೆ. ಬಡ್ಡಿಯು ಸೇರಿಕೊಂಡು ಮೊತ್ತವು 7 ಲಕ್ಷ ರೂಪಾಯಿ ಆಗುತ್ತದೆ. ಈ ತನಕ ಯೋಜನೆಯಲ್ಲಿ ಬಡ್ಡಿ ದರ ಶೇ 7.4ರಷ್ಟಿದ್ದು, ಅದರ ಆಧಾರದಲ್ಲಿ ಇಷ್ಟು ಮೊತ್ತ ಬರುತ್ತದೆ. ಅಂದ ಹಾಗೆ ಈ ದರದಲ್ಲಿ ಲೆಕ್ಕಾಚಾರ ಗಮನಿಸಿದರೆ ಬಡ್ಡಿ 1.85 ಲಕ್ಷ ಆಗುತ್ತದೆ. ಆದ್ದರಿಂದ ಗ್ರಾಸ್ ಮೊತ್ತವು ಈ ಐದು ವರ್ಷಗಳಲ್ಲಿ 6,85,000 ರೂಪಾಯಿ ಆಗುತ್ತದೆ. ಈ ಯೋಜನೆ ಅಡಿಯಲ್ಲಿ ಬಡ್ಡಿಯನ್ನು ತ್ರೈಮಾಸಿಕವಾಗಿ ಲೆಕ್ಕ ಹಾಕಲಾಗುತ್ತದೆ. ಫಲಾನುಭವಿ ಪ್ರತಿ ತ್ರೈಮಾಸಿಕದಲ್ಲಿ ರೂ. 9250 ಬಡ್ಡಿ ಪಡೆಯುತ್ತಾರೆ. ಪಿಪಿಎಫ್​ ಖಾತೆಯ ರೀತಿಯಲ್ಲೇ ಬಟ್ಟಿ ದರ ನೀಡಲಾಗುತ್ತದೆ.

ಮೆಚ್ಯೂರಿಟಿ ಅವಧಿ ಹಾಗೂ ಬಡ್ಡಿ ದರ ಈಗಾಗಲೇ ತಿಳಿಸಿದಂತೆ ಈ ಯೋಜನೆ ಅಡಿಯಲ್ಲಿ ಬಡ್ಡಿ ದರ ಶೇ 7.4ರಷ್ಟು. ಮೆಚ್ಯೂರಿಟಿ ಅವಧಿ 5 ವರ್ಷಗಳು. ಅದರ ಆಚೆಗೂ ಅವಧಿಯನ್ನು ವಿಸ್ತರಣೆ ಮಾಡಬಹುದು. ಫಲಾನುಭವಿ ಆದವರು ಒಂದು ಸಲದ ಮೂರು ವರ್ಷದ ವಿಸ್ತರಣೆಗೆ ಅಪ್ಲೈ ಮಾಡಬಹುದು. ಆದರೆ ಹಾಗೆ ಅಪ್ಲೈ ಮಾಡುವುದಿದಲ್ಲಿ ಮೆಚ್ಯೂರ್ ಆದ ಒಂದು ವರ್ಷದ ಅವಧಿಯೊಳಗೆ ಆಗಬೇಕು.

ಅರ್ಹತೆ ಪೋಸ್ಟ್​ ಆಫೀಸ್ ಹಿರಿಯ ನಾಗರಿಕರ ಉಳಿತಾಯ ಯೋಜನೆ ಅಡಿಯಲ್ಲಿ 60 ವರ್ಷ ಅತವಾ ಅದಕ್ಕಿಂತ ಹೆಚ್ಚು ವಯಸ್ಸಿನವರು ಖಾತೆಯನ್ನು ತೆರೆಯಬಹುದು. ಆದರೂ 55 ವರ್ಷ ಮೇಲ್ಪಟ್ಟವರು ತಮ್ಮ ನಿವೃತ್ತಿ ಬೆನಿಫಿಟ್​ಗಳನ್ನು ಪಡೆದ ಒಂದು ತಿಂಗಳ ಒಳಗೆ ಎಸ್​ಸಿಎಸ್​ಎಸ್​ ಖಾತೆಯನ್ನು ತೆರೆಯಬಹುದು. ರಕ್ಷಣಾ ಸಿಬ್ಬಂದಿಗೆ ಮಿತಿ 50 ವರ್ಷಗಳು.

ಇದನ್ನೂ ಓದಿ: ಪೋಸ್ಟ್ ಆಫೀಸ್ ಟರ್ಮ್ ಡೆಪಾಸಿಟ್ ವರ್ಸಸ್ ಎಸ್​ಬಿಐ ಎಫ್​ಡಿ; ಯಾವುದರ ಬಡ್ಡಿ ದರ ಎಷ್ಟಿದೆ?

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್