AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol and Diesel Rate Today: ಬೆಂಗಳೂರು ಹಾಗೂ ಇತರ ನಗರಗಳ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ? ಇಲ್ಲಿದೆ ವಿವರ

Petrol Diesel Price Today, 24-01-2022: ಭಾರತದ ತೈಲ ಕಂಪನಿಗಳು ಇಂದು (ಜನವರಿ 24, ಸೋಮವಾರ) ಬೆಳಗ್ಗೆ ಪೆಟ್ರೋಲ್​-ಡೀಸೆಲ್​ ಬೆಲೆಯನ್ನು ಬಿಡುಗಡೆ ಮಾಡಿದ್ದು,ಇಂದು ಕೂಡ ಇಂಧನಗಳ ದರದಲ್ಲಿ(Fuel Price) ಯಾವುದೇ ಬದಲಾವಣೆಯಾಗಿಲ್ಲ.

Petrol and Diesel Rate Today: ಬೆಂಗಳೂರು ಹಾಗೂ ಇತರ ನಗರಗಳ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ? ಇಲ್ಲಿದೆ ವಿವರ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Jan 24, 2022 | 7:38 AM

Share

Petrol Diesel Price Today| ದೆಹಲಿ: ವೀಕೆಂಡ್ ಕೆಲಸಗಳನ್ನು ಮುಗಿಸಿಕೊಂಡು ಜನರು ಮತ್ತೆ ತಮ್ಮ ತಮ್ಮ ಕಾರ್ಯಗಳಿಗೆ ಹೊರಗೆ ತೆರಳಲು ಅಣಿಯಾಗಿದ್ದಾರೆ. ಸೋಮವಾರ ಬಂತೆಂದರೆ ಮತ್ತೆ ಕೆಲಸ ಶುರು. ವಾರಾಂತ್ಯ ಕರ್ಫ್ಯೂವನ್ನು ಕರ್ನಾಟಕ ಸರ್ಕಾರ ಹಿಂತೆಗೆದುಕೊಂಡಿದೆ. ಹೀಗಾಗಿ ಭಾನುವಾರವೂ ನೀವು ಓಡಾಟ ನಡೆಸಿರಬಹುದು. ಇದೀಗ ಮತ್ತೆ ಆಫೀಸಿಗೆ ಹೊರಡುವಾಗ ವಾಹನಕ್ಕೆ ಇಂಧನ ತುಂಬಿಸುವುದನ್ನು ಬಿಡುವಂತಿಲ್ಲ. ಈ ಕಾರಣದಿಂದ ವಾಹನ ಸವಾರರಿಗೆ ಇಂಧನ ದರ (Fuel Price) ಎಷ್ಟಿದೆ ಎಂಬ ಕುತೂಹಲ ಇದ್ದೇ ಇರುತ್ತದೆ. ಇಂದಿನ ಪೆಟ್ರೋಲ್ ಬೆಲೆ (Petrol Price) ಮತ್ತು ಡೀಸೆಲ್ ದರವನ್ನು (Diesel Price) ಇಲ್ಲಿ ತಿಳಿಸಲಾಗಿದೆ. ಭಾರತದ ತೈಲ ಕಂಪನಿಗಳು ಇಂದು (ಜನವರಿ 24, ಸೋಮವಾರ) ಬೆಳಗ್ಗೆ ಪೆಟ್ರೋಲ್​-ಡೀಸೆಲ್​ ಬೆಲೆಯನ್ನು ಬಿಡುಗಡೆ ಮಾಡಿದ್ದು,ಇಂದು ಕೂಡ ಇಂಧನಗಳ ದರದಲ್ಲಿ(Fuel Price) ಯಾವುದೇ ಬದಲಾವಣೆಯಾಗಿಲ್ಲ. ಕಳೆದ ಎರಡೂವರೆ ತಿಂಗಳುಗಳಿಂದಲೂ ತೈಲಗಳ ಬೆಲೆ ಸ್ಥಿರವಾಗಿಯೇ ಇದೆ. 

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 95.41 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 86.67 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 100.58 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 85.01 ರೂಪಾಯಿ ದಾಖಲಾಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 109.98 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 94.14 ರೂಪಾಯಿ ಇದೆ. ಅದೇ ರೀತಿ ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 101.40 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 91.43 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ಬೆಲೆ 104.67 ರೂಪಾಯಿ ಹಾಗೂ ಲೀಟರ್ ಡೀಸೆಲ್ ಡೀಸೆಲ್ ದರ 89.79 ರೂಪಾಯಿ ನಿಗದಿಯಾಗಿದೆ.

ಹೈದರಾಬಾದ್ನಲ್ಲಿ ಲೀಟರ್ ಪೆಟ್ರೋಲ್ ದರ 108.20 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 94.62 ರೂಪಾಯಿ ನಿಗದಿಯಾಗಿದೆ. ಗುಜರಾತ್ನ ಗಾಂಧಿನಗರದಲ್ಲಿ ಲೀಟರ್ ಪೆಟ್ರೋಲ್ ದರ 95.35 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 89.33 ರೂಪಾಯಿ ನಿಗದಿಯಾಗಿದೆ. ಕೇರಳದ ತಿರುವನಂತಪುರಂನಲ್ಲಿ ಲೀಟರ್ ಪೆಟ್ರೋಲ್ಗೆ 106.36 ರೂಪಾಯಿ ಇದ್ದು, ಲೀಟರ್ ಡೀಸೆಲ್ ಬೆಲೆ 93.47 ರೂಪಾಯಿ ನಿಗದಿಯಾಗಿದೆ. ಲಕ್ನೋದಲ್ಲಿ ಲೀಟರ್ ಪೆಟ್ರೋಲ್ ದರ 95.28 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 86.80 ರೂಪಾಯಿ ನಿಗದಿಯಾಗಿದೆ. ಶ್ರೀಗಂಗಾನಗರದಲ್ಲಿ ಲೀಟರ್ ಪೆಟ್ರೋಲ್ಗೆ 114.01 ರೂಪಾಯಿ ಹಾಗೂ ಲೀಟರ್ ಡೀಸೆಲ್ಗೆ 98.39 ರೂಪಾಯಿ ದಾಖಲಾಗಿದೆ. ಭೋಪಾಲ್ನಲ್ಲಿ ಲೀಟರ್ ಪೆಟ್ರೋಲ್ ದರ 107.23 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 90.87 ರೂಪಾಯಿ ಇದೆ. ಗುವಾಹಟಿಯಲ್ಲಿ ಲೀಟರ್ ಪೆಟ್ರೋಲ್ ದರ 94.58 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 86.80 ರೂಪಾಯಿ ನಿಗದಿಯಾಗಿದೆ.

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ                                                                                                              ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.

ವಿವಿಧ ನಗರದಲ್ಲಿ ಪೆಟ್ರೋಲ್ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.htm

Published On - 7:34 am, Mon, 24 January 22

Follow Us
CET ಪರೀಕ್ಷೆ: ಆಭರಣ ಧರಿಸಿ ಬಂದಿದ್ದ ವಿದ್ಯಾರ್ಥಿಗಳಿಗೆ ಶಾಕ್​​
CET ಪರೀಕ್ಷೆ: ಆಭರಣ ಧರಿಸಿ ಬಂದಿದ್ದ ವಿದ್ಯಾರ್ಥಿಗಳಿಗೆ ಶಾಕ್​​
Video: ಮದುವೆ ಒಂದು ವಾರವಿರುವಾಗ ಪ್ರೇಮಿಯೊಂದಿಗೆ ಓಡಿ ಹೋಗಲು ಯುವತಿ ಯತ್ನ
Video: ಮದುವೆ ಒಂದು ವಾರವಿರುವಾಗ ಪ್ರೇಮಿಯೊಂದಿಗೆ ಓಡಿ ಹೋಗಲು ಯುವತಿ ಯತ್ನ
ಕೇವಲ 3.30 ರೂಪಾಯಿಗೆ ಒಂದು ಮೊಟ್ಟೆ ಲಭ್ಯ
ಕೇವಲ 3.30 ರೂಪಾಯಿಗೆ ಒಂದು ಮೊಟ್ಟೆ ಲಭ್ಯ
18 ಹಲ್ಲುಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲು ದಂತ ವೈದ್ಯರ ಯತ್ನ, ಬಾಲಕಿ ಸಾವು
18 ಹಲ್ಲುಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲು ದಂತ ವೈದ್ಯರ ಯತ್ನ, ಬಾಲಕಿ ಸಾವು
ಮತದಾನದ ವೇಳೆ ಮುರ್ಷಿದಾಬಾದ್​ನಲ್ಲಿ ಬಾಂಬ್ ದಾಳಿ, ಹಲವರಿಗೆ ಗಾಯ
ಮತದಾನದ ವೇಳೆ ಮುರ್ಷಿದಾಬಾದ್​ನಲ್ಲಿ ಬಾಂಬ್ ದಾಳಿ, ಹಲವರಿಗೆ ಗಾಯ
ರಾಯಚೂರು: ಸ್ಟೀರಿಂಗ್ ಕಟ್ ಆಗಿ ಪಲ್ಟಿಯಾದ KKRTC ಬಸ್, ತಪ್ಪಿದ ಭಾರಿ ದುರಂತ
ರಾಯಚೂರು: ಸ್ಟೀರಿಂಗ್ ಕಟ್ ಆಗಿ ಪಲ್ಟಿಯಾದ KKRTC ಬಸ್, ತಪ್ಪಿದ ಭಾರಿ ದುರಂತ
ಕೊಡಗು: ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ, ಹೋಂಸ್ಟೇ ಪರವಾನಗಿ ರದ್ದು
ಕೊಡಗು: ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ, ಹೋಂಸ್ಟೇ ಪರವಾನಗಿ ರದ್ದು
ಮಿರ್ಜಾಪುರದಲ್ಲಿ ಎರಡು ಟ್ರಕ್​ಗಳ ನಡುವೆ ಸಿಲುಕಿ ನಜ್ಜುಗುಜ್ಜಾದ ವಾಹನಗಳು
ಮಿರ್ಜಾಪುರದಲ್ಲಿ ಎರಡು ಟ್ರಕ್​ಗಳ ನಡುವೆ ಸಿಲುಕಿ ನಜ್ಜುಗುಜ್ಜಾದ ವಾಹನಗಳು
ಸಾಮಾನ್ಯ ವ್ಯಕ್ತಿಯಂತೆ ಬಂದು ಮತ ಚಲಾಯಿಸಿದ ಸೂಪರ್ ಸ್ಟಾರ್ ರಜನಿಕಾಂತ್ 
ಸಾಮಾನ್ಯ ವ್ಯಕ್ತಿಯಂತೆ ಬಂದು ಮತ ಚಲಾಯಿಸಿದ ಸೂಪರ್ ಸ್ಟಾರ್ ರಜನಿಕಾಂತ್ 
ರಾಜಗಾಂಭಿರ್ಯದಿಂದ ರಸ್ತೆಗೆ ಬಂದ ಹುಲಿ: ಅಪರೂಪದ ವಿಡಿಯೋ ಇಲ್ಲಿದೆ
ರಾಜಗಾಂಭಿರ್ಯದಿಂದ ರಸ್ತೆಗೆ ಬಂದ ಹುಲಿ: ಅಪರೂಪದ ವಿಡಿಯೋ ಇಲ್ಲಿದೆ