ಪೋಸ್ಟ್ ಆಫೀಸ್ ಟರ್ಮ್ ಡೆಪಾಸಿಟ್ ವರ್ಸಸ್ ಎಸ್​ಬಿಐ ಎಫ್​ಡಿ; ಯಾವುದರ ಬಡ್ಡಿ ದರ ಎಷ್ಟಿದೆ?

ಪೋಸ್ಟ್ ಆಫೀಸ್ ಟರ್ಮ್ ಡೆಪಾಸಿಟ್ ವರ್ಸಸ್ ಎಸ್​ಬಿಐ ಎಫ್​ಡಿ; ಯಾವುದರ ಬಡ್ಡಿ ದರ ಎಷ್ಟಿದೆ?
ಸಾಂದರ್ಭಿಕ ಚಿತ್ರ

ಪೋಸ್ಟ್ ಆಫೀಸ್​ ಟೈಮ್ ಡೆಪಾಸಿಟ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿ ದರ ಇವೆರಡರ ಹೋಲಿಕೆ ಇರುವಂಥ ಮಾಹಿತಿ ಇದು. ಹೂಡಿಕೆಗೆ ಯಾವುದು ಉತ್ತಮ ಆಗಬಹುದು ಎಂಬುದನ್ನು ನಿರ್ಧರಿಸಲು ಅನುಕೂಲ ಆಗುತ್ತದೆ.

TV9kannada Web Team

| Edited By: Srinivas Mata

Jan 07, 2022 | 5:09 PM

ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳು ಹಾಗೂ ಖಾಸಗಿ ಬ್ಯಾಂಕ್‌ಗಳು ನೀಡುವ ವಿವಿಧ ಫಿಕ್ಸೆಡ್ ಡೆಪಾಸಿಟ್ (ಎಫ್‌ಡಿ) ಆಯ್ಕೆಗಳಿಂದ ಉಳಿತಾಯದಾರರು ತಮಗೆ ಇಷ್ಟವಾದದ್ದನ್ನು ಆಯ್ಕೆ ಮಾಡಬಹುದು. ಅಂತಹ ಉಳಿತಾಯ ಯೋಜನೆಗಳ ಅವಧಿಯು ಏಳು ದಿನಗಳಿಂದ ಹತ್ತು ವರ್ಷಗಳವರೆಗೆ ಇರುತ್ತದೆ. ಹೂಡಿಕೆಗೆ ಆಯ್ಕೆ ಮಾಡಿದ ಅವಧಿ ಮತ್ತು ಹೂಡಿಕೆ ಮಾಡಿದ ಮೊತ್ತದಿಂದ ಬಡ್ಡಿ ದರವನ್ನು ನಿರ್ಧರಿಸಲಾಗುತ್ತದೆ. ಇವುಗಳು ಅತ್ಯುತ್ತಮ ಬಂಡವಾಳ ರಕ್ಷಣೆ ಮತ್ತು ನಿಯಮಿತ ಆದಾಯವನ್ನು ನೀಡುವ ಸರ್ಕಾರಿ ಬೆಂಬಲಿತ ಹೂಡಿಕೆ ಆಗಿದೆ. ಎಫ್‌ಡಿಯಲ್ಲಿ ಹೂಡಿಕೆ ಮಾಡಿದ ಮೊತ್ತವನ್ನು ಮುಕ್ತಾಯದವರೆಗೆ ಹಿಂಪಡೆಯಲು ಆಗುವುದಿಲ್ಲ. ಅವಧಿ ಮುಗಿಯುವುದಕ್ಕೆ ಪೂರ್ವವಾಗಿಯೇ ಹಿಂಪಡೆಯಬಹುದು. ಆದರೆ ಬ್ಯಾಂಕ್​ಗಳು ಅದಕ್ಕೆ ಬಡ್ಡಿಯನ್ನು ವಿಧಿಸುತ್ತವೆ. ಎಫ್​ಡಿ ಖಾತೆ ತೆರೆಯಲು ಕನಿಷ್ಠ ಹೂಡಿಕೆ ರೂ. 5,000 ಅಗತ್ಯವಿದೆ. ಎಫ್​ಡಿಯ ಬಡ್ಡಿ ದರವು ಶೇ 4ರಿಂದ ಶೇ 7.5ರ ವರೆಗೆ ಆಯ್ಕೆ ಮಾಡಿದ ಮೆಚ್ಯೂರಿಟಿ ಅವಧಿಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುತ್ತದೆ.

ರಿಸರ್ವ್ ಬ್ಯಾಂಕ್‌ ಆಫ್ ಇಂಡಿಯಾದ ಅಂಗಸಂಸ್ಥೆ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಎಲ್ಲ ಬ್ಯಾಂಕ್ ಎಫ್‌ಡಿಗಳಿಗೆ ರೂ. 5 ಲಕ್ಷದವರೆಗೆ ವಿಮೆ ಮಾಡುತ್ತದೆ. ಎಫ್‌ಡಿ ಹೊಂದಿರುವ ಬ್ಯಾಂಕ್ ದಿವಾಳಿಯಾದರೂ ಸಣ್ಣ ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸಲಾಗಿದೆ.

ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್‌ಗಳು ಅಥವಾ ಪೋಸ್ಟ್ ಆಫೀಸ್ ಟರ್ಮ್ ಡೆಪಾಸಿಟ್‌ಗಳು ಬ್ಯಾಂಕ್ ಎಫ್‌ಡಿಗಳನ್ನು ಹೋಲುತ್ತವೆ. ಇದು ಭಾರತ ಸರ್ಕಾರದ ಇಂಡಿಯಾ ಪೋಸ್ಟ್​ನಿಂದಲೂ ಲಭ್ಯವಿದೆ. ಇದರ ದರವು ತ್ರೈಮಾಸಿಕ ಹೊಂದಾಣಿಕೆಯನ್ನು ಒಳಗೊಂಡಿದೆ. ಪೋಸ್ಟ್ ಆಫೀಸ್ ಟರ್ಮ್ ಡೆಪಾಸಿಟ್‌ಗಳು 1, 2, 3 ಮತ್ತು 5 ವರ್ಷಗಳ ಅವಧಿಯನ್ನು ಹೊಂದಿರುತ್ತವೆ. ಪೋಸ್ಟ್ ಆಫೀಸ್ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವನ್ನು ನಿಯತಕಾಲಿಕವಾಗಿ ಬದಲಾಯಿಸಲಾಗುತ್ತದೆ. ಸರ್ಕಾರಿ ಸೆಕ್ಯೂರಿಟಿಗಳು ಮತ್ತು ಬಾಂಡ್‌ಗಳ ಕಾರ್ಯಕ್ಷಮತೆಯು ಈ ದರಗಳನ್ನು ನಿರ್ಧರಿಸುತ್ತದೆ. 5 ವರ್ಷದ ಪೋಸ್ಟ್ ಆಫೀಸ್ ಟರ್ಮ್ ಡೆಪಾಸಿಟ್ ಸಮಾನವಾದ ಸರ್ಕಾರಿ ಸೆಕ್ಯೂರಿಟಿಗಳ ಮೇಲೆ 25 ಬೇಸಿಸ್ ಪಾಯಿಂಟ್ ಬಡ್ಡಿದರದ ಪ್ರೀಮಿಯಂ ಅನ್ನು ಹೊಂದಿರುತ್ತದೆ.

ಪೋಸ್ಟ್ ಆಫೀಸ್ ಬಡ್ಡಿ ದರ ಹೂಡಿಕೆ ಅವಧಿಯ ದರ 1 ವರ್ಷ ಶೇ 5.50 2 ವರ್ಷಗಳು ಶೇ 5.50 3 ವರ್ಷಗಳು ಶೇ 5.50 5 ವರ್ಷಗಳು ಶೇ 6.7

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಫ್​ಡಿ ಬಡ್ಡಿ ದರ 7 ದಿನಗಳಿಂದ 45 ದಿನಗಳು ಶೇ 2.9 46 ದಿನಗಳಿಂದ 179 ದಿನಗಳು ಶೇ 3.9 180 ದಿನಗಳಿಂದ 210 ದಿನಗಳು ಶೇ 4.4 211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಶೇ 4.4 1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ ಶೇ 5 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಶೇ 5.1 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ ಶೇ 5.3 5 ವರ್ಷಗಳು ಮತ್ತು 10 ವರ್ಷಗಳವರೆಗೆ ಶೇ 5.4

ಮೇಲಿನ ಬಡ್ಡಿ ದರಗಳು ಸಾಮಾನ್ಯ ಜನರಿಗೆ 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತವಾಗಿದೆ. ಎಫ್‌ಡಿ ದರಗಳು ಸಾಮಾನ್ಯ ಜನರಿಗೆ ಶೇ 2.9ರಿಂದ ಶೇ 5.4ರ ವರೆಗೆ ಬದಲಾಗುತ್ತವೆ. ಆದರೆ ಹಿರಿಯ ನಾಗರಿಕರಿಗೆ ಎಲ್ಲ ಅವಧಿಗಳಿಗೆ ಮೇಲಿನ ದರಗಳ ಮೇಲೆ ಹೆಚ್ಚುವರಿ ಶೇ 0.8ರಷ್ಟು ನೀಡಲಾಗುತ್ತದೆ.

ಇದನ್ನೂ ಓದಿ: SBI Special FD: ಎಸ್​ಬಿಐ ವಿಶೇಷ ಎಫ್​ಡಿ ಯೋಜನೆ ಮಾರ್ಚ್ 31, 2022ರ ತನಕ ವಿಸ್ತರಣೆ

Follow us on

Related Stories

Most Read Stories

Click on your DTH Provider to Add TV9 Kannada