Fixed deposits benefits: ಫಿಕ್ಸೆಡ್ ಡೆಪಾಸಿಟ್​ನಿಂದ ಬಡ್ಡಿ ಹೊರತುಪಡಿಸಿ 5 ಅನುಕೂಲಗಳಿವು

ಬ್ಯಾಂಕ್​ಗಳಲ್ಲಿ ಎಫ್​.ಡಿ. ಇಡುವುದರಿಂದ ಬಡ್ಡಿ ರೂಪದಲ್ಲಿ ತಿಂಗಳು ತಿಂಗಳು ಆದಾಯ ಬರುತ್ತದೆ ಅನ್ನೋದು ಮಾತ್ರ ಅನುಕೂಲವಾ? ಅದನ್ನು ಹೊರತುಪಡಿಸಿ ಈ 5 ಅನುಕೂಲಗಳಿವೆ.

Fixed deposits benefits: ಫಿಕ್ಸೆಡ್ ಡೆಪಾಸಿಟ್​ನಿಂದ ಬಡ್ಡಿ ಹೊರತುಪಡಿಸಿ 5 ಅನುಕೂಲಗಳಿವು
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on:May 05, 2021 | 4:11 PM

ಬ್ಯಾಂಕ್​ನಲ್ಲಿ ಫಿಕ್ಸೆಡ್​ ಡೆಪಾಸಿಟ್​ (ಎಫ್​.ಡಿ.) ಇಟ್ಟವರನ್ನು ಅದೇನೋ ದಡ್ಡರು ಅನ್ನೋ ಹಾಗೆ, ಇನ್ವೆಸ್ಟ್​ಮೆಂಟ್ ಐಡಿಯಾಗಳೇ ಇಲ್ಲದ ಓಬೀರಾಯನ ಕಾಲದವರ ಥರ ನೋಡುವವರು ಹೆಚ್ಚಾಗಿದ್ದಾರೆ. ಷೇರು ಮಾರ್ಕೆಟ್, ಚಿನ್ನ, ರಿಯಲ್ ಎಸ್ಟೇಟ್, ಕ್ರಿಪ್ಟೋ ಕರೆನ್ಸಿಯೂ ಸೇರಿದಂತೆ ಇನ್ನೂ ಏನೇನೂ ಇನ್ವೆಸ್ಟ್ ಇನ್​ಸ್ಟ್ರುಮೆಂಟ್​ ಇದ್ದರೂ ಎಫ್​.ಡಿ.ಯಲ್ಲಿ, ಅದರಲ್ಲೂ ಅಷ್ಟು ಕಡಿಮೆ ಬಡ್ಡಿ ತಗೊಂಡು ಏನು ಮಾಡುವುದಕ್ಕೆ ಸಾಧ್ಯ ಅನ್ನೋದು ಹಲವರ ಪ್ರಶ್ನೆ. ಅಂಥ ಹಲವರ ಪ್ರಶ್ನೆಗೆ ಈ ಲೇಖನದಲ್ಲಿ ಉತ್ತರ ಇದೆ. ಯಾವಾಗ ಮಾರ್ಕೆಟ್​ನಲ್ಲಿ ಏರಿಳಿತಗಳು ಹೆಚ್ಚಿರುತ್ತವೋ ಆಗ ಎಫ್​.ಡಿ. ಅತ್ಯುತ್ತಮ ಹೂಡಿಕೆ ದಾರಿ ಎನ್ನುತ್ತಾರೆ ತಜ್ಞರು. ಆರ್​ಬಿಐ ಅಡಿಯಲ್ಲಿ ಬರುವ ನಂಬಿಕಸ್ತ ಕಮರ್ಷಿಯಲ್ ಬ್ಯಾಂಕ್​ನಲ್ಲಿ ಎಫ್​.ಡಿ. ಇಟ್ಟರೆ ರಾತ್ರಿ ಹೊತ್ತು ನೆಮ್ಮದಿಯಾಗಿ ನಿದ್ದೆ ಮಾಡಬಹುದು. ಒಂದೇನೆಂದರೆ ಬಡ್ಡಿ ದರ ಸ್ವಲ್ಪ ಕಡಿಮೆ ಬರುತ್ತದೆ, ಅಷ್ಟೇ.

ಹೆಚ್ಚಿನ ರಿಸ್ಕ್ ಇಲ್ಲದೆ, ತಿಂಗಳು ತಿಂಗಳು ಆದಾಯ ಬರಬೇಕು ಎಂದು ನಿರೀಕ್ಷೆ ಮಾಡುವವರ ಪಾಲಿಗೆ ಈಗಲೂ ಎಫ್​ಡಿ ಹಾಟ್ ಫೇವರಿಟ್. ನಿಶ್ಚಿತ ಆದಾಯ, ಸುರಕ್ಷತೆ. ಇವೆರಡು ಬಿಟ್ಟು ಮತ್ತೇನು ಬೇಕು ಹೇಳಿ. ಓಹ್, ಒಂದ್ನಿಮಿಷ ತಾಳಿ. ಫಿಕ್ಸೆಡ್ ಡೆಪಾಸಿಟ್ ಅಂದರೆ ಅಷ್ಟೇ ಅಲ್ಲ. ಅದರ ಆಚೆಗೂ ಅನುಕೂಲಗಳಿವೆ. ಹಾಗೇ ಸರಳವಾಗಿ ಪಟ್ಟಿ ಮಾಡಿಕೊಂಡರೆ 5 ಅನುಕೂಲಗಳು ಛಕಾಛಕ್ ಸಿಕ್ಕಿಬಿಟ್ಟವು. ಏನು ಅವು ಎಂದು ತಿಳಿಯುವುದಕ್ಕೆ ಮುಂದೆ ಓದಿ.

ಓವರ್​ಡ್ರಾಫ್ಟ್ ಅನುಕೂಲ ಬ್ಯಾಂಕ್​ನಲ್ಲಿರುವ ಎಫ್​ಡಿ ಮೇಲೆ ಗ್ರಾಹಕರಿಗೆ ಓವರ್​ಡ್ರಾಫ್ಟ್ ವ್ಯವಸ್ಥೆ ಇದೆ. ಹೀಗೊಂದು ಅನುಕೂಲ ಇರುವುದರಿಂದ ಹೂಡಿಕೆದಾರರಿಗೆ ಹಣದ ತುರ್ತು ಇರುವಾಗ ಬ್ಯಾಂಕ್​ನಿಂದ ಹಣ ಪಡೆಯಬಹುದು.

ಇನ್ಷೂರೆನ್ಸ್, ಹೆಲ್ತ್​ಕೇರ್ ಅನುಕೂಲಗಳು ಈಚಿನ ದಿನಮಾನಗಳಲ್ಲಿ ಎಫ್​.ಡಿ.ಗಳ ಮೇಲೆ ಮೌಲ್ಯವರ್ಧಿತ ಅನುಕೂಲಗಳನ್ನು ನೀಡುತ್ತವೆ. ಬ್ಯಾಂಕ್​ಗಳಿಂದ ಫಿಕ್ಸೆಡ್​ ಡೆಪಾಸಿಟ್​ಗಳ ಮೇಲೆ ಉಚಿತ ಇನ್ಷೂರೆನ್ಸ್ ಹಾಗೂ ಹೆಲ್ತ್​ಕೇರ್ ಅನುಕೂಲಗಳನ್ನು ನೀಡುತ್ತವೆ.

ಆದಾಯ ತೆರಿಗೆ ಅನುಕೂಲಗಳು ಭಾರತೀಯ ಬ್ಯಾಂಕ್​ಗಳು ತೆರಿಗೆ ಉಳಿತಾಯ ಫಿಕ್ಸೆಡ್ ಡೆಪಾಸಿಟ್​ಗಳನ್ನು ನೀಡುತ್ತವೆ. ಆದಾಯ ತೆರಿಗೆ ಕಾಯ್ದೆ 1961 ಸೆಕ್ಷನ್ 80C ಅಡಿಯಲ್ಲಿ ಹೂಡಿಕೆದಾರರು ತೆರಿಗೆ ವಿನಾಯಿತಿ ಕ್ಲೇಮ್ ಮಾಡಬಹುದು.

ಖಾತ್ರಿ ರಿಟರ್ನ್ ಬ್ಯಾಂಕ್​ ಫಿಕ್ಸೆಡ್ ಡೆಪಾಸಿಟ್ ರಿಟರ್ನ್ಸ್​ನಲ್ಲಿ ಯಾವುದೇ ಏರಿಳಿತ ಇರುವುದಿಲ್ಲ. ಬ್ಯಾಂಕ್​ ಎಫ್​ಡಿಯಲ್ಲಿ ಸಣ್ಣ ಸಣ್ಣ ಮೊತ್ತವನ್ನು 15 ದಿನದಿಂದ 3 ತಿಂಗಳ ಕಡಿಮೆ ಅವಧಿಗೆ ಮಾಡಬಹುದು.

ಬ್ಯಾಂಕ್​ ಎಫ್​.ಡಿ.ಗಳ ಸರಳ ನಿರ್ವಹಣೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್​ ಫಿಕ್ಸೆಡ್​ ಡೆಪಾಸಿಟ್​ಗಳಿಗೆ ದೀರ್ಘ ಪ್ರಕ್ರಿಯೆಗಳ ಅಗತ್ಯ ಇಲ್ಲ. ಈಗಿನ ಇಂಟರ್​ನೆಟ್​ ಬ್ಯಾಂಕಿಂಗ್ ಕಾಲದಲ್ಲಿ ಯಾರಾದರೂ ತಮ್ಮ ಕಂಪ್ಯೂಟರ್ ಅಥವಾ ಲ್ಯಾಪ್​ಟಾಪ್ ಮೂಲಕ ಕೆಲವು ನಿಮಿಷಗಳಲ್ಲಿ ಎಫ್​ಡಿ ಖಾತೆ ತೆರೆಯಬಹುದು ಮತ್ತು ಕ್ಲೋಸ್ ಮಾಡಬಹುದು.

ಇದನ್ನೂ ಓದಿ: Bank fixed deposits: ಹಿರಿಯ ನಾಗರಿಕರ ವಿಶೇಷ ಫಿಕ್ಸೆಡ್ ಡೆಪಾಸಿಟ್ಸ್​ಗಳ ಬಡ್ಡಿ ದರ ಜೂನ್ 30ರ ತನಕ ವಿಸ್ತರಣೆ

ಇದನ್ನೂ ಓದಿ: ಎಸ್​ಬಿಐ ಫಿಕ್ಸೆಡ್ ಡೆಪಾಸಿಟ್ಸ್ ವರ್ಸಸ್ ಅಂಚೆ ಕಚೇರಿ ಡೆಪಾಸಿಟ್ಸ್; ಎಲ್ಲಿ, ಎಷ್ಟು ಬಡ್ಡಿ ಸಿಗುತ್ತದೆ?

(Here are the 5 benefits of bank fixed deposits apart from monthly interest income to investor)​

Published On - 4:10 pm, Wed, 5 May 21