Bank fixed deposits: ಹಿರಿಯ ನಾಗರಿಕರ ವಿಶೇಷ ಫಿಕ್ಸೆಡ್ ಡೆಪಾಸಿಟ್ಸ್​ಗಳ ಬಡ್ಡಿ ದರ ಜೂನ್ 30ರ ತನಕ ವಿಸ್ತರಣೆ

Special FD schemes: ಹಿರಿಯ ನಾಗರಿಕರಿಗಾಗಿ ಇದು ಬ್ಯಾಂಕ್​ಗಳ ವಿಶೇಷ ಫಿಕ್ಸೆಡ್ ಡೆಪಾಟ್ಸ್ ಸ್ಕೀಮ್​ಗಳನ್ನು ಜೂನ್ 30, 2021ರ ತನಕ ವಿಸ್ತರಣೆ ಮಾಡಲಾಗಿದೆ. ಪ್ರಮುಖ ಬ್ಯಾಂಕ್​ಗಳಲ್ಲಿನ ಬಡ್ಡಿ ದರಗಳ ಮಾಹಿತಿ ಈ ಲೇಖದಲ್ಲಿದೆ.

Bank fixed deposits: ಹಿರಿಯ ನಾಗರಿಕರ ವಿಶೇಷ ಫಿಕ್ಸೆಡ್ ಡೆಪಾಸಿಟ್ಸ್​ಗಳ ಬಡ್ಡಿ ದರ ಜೂನ್ 30ರ ತನಕ ವಿಸ್ತರಣೆ
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: Apr 16, 2021 | 6:33 PM

ಹಿರಿಯ ನಾಗರಿಕರಿಗಾಗಿ ವಿಶೇಷ ಬ್ಯಾಂಕ್ ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್) ಯೋಜನೆಗಳನ್ನು ಜೂನ್ 30, 2021ರ ತನಕ ವಿಸ್ತರಣೆ ಮಾಡಲಾಗಿದೆ. 5 ವರ್ಷದ ತನಕ ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್​ಗಳು ವಾರ್ಷಿಕ ಶೇ 5.5ರಷ್ಟು ರಿಟರ್ನ್ ನೀಡುತ್ತಿವೆ. ಹಲವು ಹಿರಿಯ ನಾಗರಿಕರು, ಅದರಲ್ಲೂ ಠೇವಣಿಯ ರಿನೀವಲ್ ಹತ್ತಿರ ಬರುತ್ತಿರುವವರಿಗೆ ಇದರಿಂದ ಅನುಕೂಲ ಆಗುತ್ತದೆ. 5 ವರ್ಷ ಮತ್ತು ಮೇಲ್ಪಟ್ಟ ಅವಧಿಗೆ ಹಿರಿಯ ನಾಗರಿಕರಿಗಾಗಿ 2020ರ ಮೇ ತಿಂಗಳಿನಲ್ಲಿ ಕೆಲವು ಬ್ಯಾಂಕ್​ಗಳಿಂದ ವಿಶೇಷ ಎಫ್​ಡಿ ಯೋಜನೆಗಳನ್ನು ಪರಿಚಯಿಸಲಾಯಿತು. ಇಂಥ ಯೋಜನೆಗಳಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರಿಕರಿಗಾಗಿ ಈಗಾಗಲೇ ಅರ್ಹರಿರುವ ಬಡ್ಡಿ ದರಕ್ಕಿಂತ ಹೆಚ್ಚಿನದನ್ನು ಪಾವತಿ ಮಾಡಲಾಗುತ್ತದೆ. ದೀರ್ಘಾವಧಿಗೆ ಬ್ಯಾಂಕ್ ಎಫ್.ಡಿ.ಯಲ್ಲಿ ಹೂಡಿಕೆ ಮಾಡಬೇಕು ಎಂದುಕೊಳ್ಳುವವರಿಗೆ ಜೂನ್ 30, 2021ರ ತನಕ ಅವಕಾಶ ದೊರೆತಂತಾಗಿದೆ.

ಪ್ರಮುಖ ವಾಣಿಜ್ಯ ಬ್ಯಾಂಕ್​ಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ), ಬ್ಯಾಂಕ್ ಆಫ್ ಬರೋಡ, ಐಸಿಐಸಿಐ ಬ್ಯಾಂಕ್ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್​ನಿಂದ ಹಿರಿಯ ನಾಗರಿಕರ ಅನುಕೂಲಕ್ಕಾಗಿ ವಿಶೇಷ ಫಿಕ್ಸೆಡ್ ಡೆಪಾಸಿಟ್ ಯೋಜನೆಗಳನ್ನು ಪರಿಚಯಿಸಲಾಗಿದೆ. ಮಾಮೂಲಿ ಎಫ್​ಡಿ ಯೋಜನೆಗಳು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ ಶೇಕಡಾ 0.5ರಷ್ಟು ಬಡ್ಡಿಯನ್ನು ದೊರಕಿಸಿಕೊಟ್ಟರೆ, ವಿಶೇಷ ಎಫ್.ಡಿ. ಯೋಜನೆಯು ಹಿರಿಯ ನಾಗರಿಕರಿಗೆ ಅದರ ಮೇಲೂ ಬಡ್ಡಿ ದರವನ್ನು ದೊರಕಿಸುತ್ತದೆ. ಹೊಸದಾಗಿ ಮಾಡುವ ಠೇವಣಿಗೆ ಹಾಗೂ ರಿನೀವಲ್​ಗೆ ಎರಡಕ್ಕೂ ಹೆಚ್ಚುವರಿ ಬಡ್ಡಿ ದರ ಅನ್ವಯ ಆಗುತ್ತದೆ.

ವಿಶೇಷ ಎಫ್​ಡಿ ಯೋಜನೆ ಅಡಿಯಲ್ಲಿ, ಹಿರಿಯರ ನಾಗರಿಕರಿಗೆ ಈಗಾಗಲೇ ಇರುವ ಹೆಚ್ಚುವರಿಯಾದ ಶೇ 0.50 ಬಡ್ಡಿ ದರದ ಜತೆಗೆ ಹೆಚ್ಚಿನ ಬಡ್ಡಿ ಸಿಗುತ್ತದೆ. 5 ವರ್ಷ ಮೇಲ್ಪಟ್ಟ ಠೇವಣಿಗೆ ಹೆಚ್ಚುವರಿಯಾಗಿ ಶೇ 0.80 ಅಥವಾ ಅದಕ್ಕಿಂತ ಹೆಚ್ಚಿನ ಬಡ್ಡಿ ದೊರೆಯುತ್ತದೆ.

ವಿಶೇಷ ಎಫ್.ಡಿ.: ಎಸ್​ಬಿಐ Vs ಐಸಿಐಸಿಐ ಬ್ಯಾಂಕ್ Vs ಎಚ್​ಡಿಎಫ್​ಸಿ ಬ್ಯಾಂಕ್ Vs ಬ್ಯಾಂಕ್ ಆಫ್ ಬರೋಡಾ ಎಸ್​ಬಿಐ “Wecare Deposit” ಹಿರಿಯ ನಾಗರಿಕರಿಗಾಗಿ ಇರುವ ಡೆಪಾಸಿಟ್​ನಲ್ಲಿ 5 ವರ್ಷ ಮತ್ತು ಮೇಲ್ಪಟ್ಟ ಅವಧಿಗೆ ಶೇ 0.3ರಷ್ಟು ಹೆಚ್ಚುವರಿ ಮತ್ತು 10 ವರ್ಷದ ಅವಧಿಗೆ ಶೇ 6.2ರಷ್ಟು ವಾರ್ಷಿಕ ಬಡ್ಡಿ ದೊರೆಯುತ್ತದೆ.

ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ಸ್ ಎಫ್.ಡಿ. ದರವು 5 ವರ್ಷ ಮೇಲ್ಪಟ್ಟ ಮತ್ತು 10 ವರ್ಷದೊಳಗಿನ ಅವಧಿಗೆ ವಾರ್ಷಿಕ ಶೇ 0.30ರಷ್ಟು ಹೆಚ್ಚಿಗೆ ದೊರೆಯುತ್ತದೆ.

ಎಚ್​ಡಿಎಫ್​ಸಿ ಬ್ಯಾಂಕ್​ನ ಸೀನಿಯರ್ ಸಿಟಿಜನ್ ಕೇರ್ ಎಫ್​ಡಿಯು 5 ವರ್ಷ ಮೇಲ್ಪಟ್ಟು ಮತ್ತು 10 ವರ್ಷದೊಳಗಿನ ಅವಧಿಗೆ ಶೇ 0.25ರಷ್ಟು ಬಡ್ಡಿ ದರ ನೀಡುತ್ತದೆ.

ಬ್ಯಾಂಕ್ ಆಫ್ ಬರೋಡದ ಹಿರಿಯ ನಾಗರಿಕರಿಗಾಗಿ ಇರುವ ವಿಶೇಷ ಎಫ್​ಡಿ ಯೋಜನೆಯಲ್ಲಿ 5 ವರ್ಷ ಮೇಲ್ಪಟ್ಟ ಮತ್ತು 10 ವರ್ಷದೊಳಗಿನ ಅವಧಿಗೆ ಹೆಚ್ಚುವರಿಯಾಗಿ ಶೇ 1ರಷ್ಟು ಬಡ್ಡಿ ದೊರೆಯುತ್ತದೆ.

ಮುಖ್ಯಾಂಶಗಳು: ಎಫ್​ಡಿಯ ಬಡ್ಡಿ ಆದಾಯವು ಪೂರ್ಣವಾಗಿ ತೆರಿಗೆ ವ್ಯಾಪ್ತಿಗೆ ಬರುತ್ತದೆ. ತೆರಿಗೆ ಎಷ್ಟು ಬೀಳುತ್ತದೆ ಎಂಬುದನ್ನು ಹೂಡಿಕೆ ಮಾಡುವಾಗ ನೋಡಿಕೊಳ್ಳಬೇಕಾಗುತ್ತದೆ. ಇದರ ಜತೆಗೆ ದೀರ್ಘಾವಧಿಗೆ ಹಣವನ್ನು ಹೂಡಿಕೆ ಮಾಡುವ ಮೊದಲು, ಇತರ ಹೂಡಿಕೆ ಅವಕಾಶಗಳಿಗೆ ಅಗತ್ಯ ಪ್ರಮಾಣದ ನಗದು ಇದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು. ಒಂದು ವೇಳೆ ಅವಧಿಗೆ ಪೂರ್ವವಾಗಿ ಎಫ್​ಡಿ ಮುರಿಯುವ ಸಂದರ್ಭದಲ್ಲಿ ಠೇವಣಿದಾರರಿಗೆ ಕಡಿಮೆ ಬಡ್ಡಿ ದೊರೆಯುತ್ತದೆ. ಈ ಪ್ರಮಾಣವನ್ನು ಮುಂಚಿತವಾಗಿಯೇ ತಿಳಿದುಕೊಳ್ಳಬೇಕು. ಹಣ ಉಳಿಸುವುದಕ್ಕಾದರೆ ಎಫ್​ಡಿ ಮಾಡುವುದು ಸರಿ. ಆದರೆ ಹಣ ವೃದ್ಧಿಯಾಗಿ, ಬೆಳೆಯಬೇಕು ಅಂದುಕೊಂಡಲ್ಲಿ ದೀರ್ಘಾವಧಿಯ ಹಣದುಬ್ಬರವನ್ನು ಮೀರಿ ಅನುಕೂಲ ಆಗುವುದು ಅಸಾಧ್ಯ ಎಂಬುದು ಗಮನದಲ್ಲಿದೆ.

ಹಿರಿಯ ನಾಗರಿಕರು ಇತರ ಹೂಡಿಕೆ ಆಯ್ಕೆಗಳಾದ ಪ್ರಧಾನ ಮಂತ್ರಿ ವಯ ವಂದನಾ ಯೋಜನಾ (PMVVY), ಪೋಸ್ಟ್ ಆಫೀಸ್ ಮಂತ್ಲಿ ಇನ್​ಕಮ್ ಸ್ಕೀಮ್ (PO MIS), ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ಸ್ (SCSS) ಇವುಗಳನ್ನು ಸಹ ಪರಿಗಣಿಸಬಹುದು. ತಮ್ಮ ರಿಸ್ಕ್ ಪ್ರೊಫೈಲ್, ನಗದು ಮತ್ತು ತೆರಿಗೆ ಸ್ಲ್ಯಾಬ್ ಇತ್ಯಾದಿಗಳನ್ನು ಯಾವುದೇ ನಿಶ್ಚಿತ ಆದಾಯದ ಮೇಲೆ ಹೂಡಿಕೆ ಮಾಡುವ ಮೊದಲಿಗೆ ಹಿರಿಯ ನಾಗರಿಕರು ಅಳೆದು ನಿರ್ಧರಿಸಬೇಕು.

ಇದನ್ನೂ ಓದಿ: Want to retire rich? ನಿವೃತ್ತಿ ನಂತರ ಆರ್ಥಿಕವಾಗಿ ನೆಮ್ಮದಿಯಾಗಿರಲು ಇಲ್ಲಿವೆ 10 ನಿಯಮಗಳು

ಇದನ್ನೂ ಓದಿ: Payments Bank: ಪೇಮೆಂಟ್ಸ್ ಬ್ಯಾಂಕ್​ಗಳ ಗ್ರಾಹಕರು 2 ಲಕ್ಷ ರೂಪಾಯಿ ತನಕ ಬ್ಯಾಲೆನ್ಸ್ ಇಡಲು ಅವಕಾಶ

(Special FD rate of interest for senior citizens extended till June 30, 2021, in these major commercial banks)

ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ