Infosys- TCS recruitment 2021: ಇನ್ಫೋಸಿಸ್, ಟಿಸಿಎಸ್​ನಿಂದ 66,000 ಮಂದಿ ನೇಮಕಾತಿ ನಿರೀಕ್ಷೆ

ಭಾರತದ ಪ್ರಮುಖ ಐ.ಟಿ. ಸೇವೆ ಒದಗಿಸುವ ಕಂಪೆನಿಗಳಾದ ಇನ್ಫೋಸಿಸ್ ಮತ್ತು ಟಿಸಿಎಸ್ ಕಂಪೆನಿಗಳಿಂದ 2021- 22ನೇ ಹಣಕಾಸು ವರ್ಷಕ್ಕೆ 66,000 ಮಂದಿಯ ನೇಮಕಾತಿ ಆಗುವ ನಿರೀಕ್ಷೆ ಇದೆ.

Infosys- TCS recruitment 2021: ಇನ್ಫೋಸಿಸ್, ಟಿಸಿಎಸ್​ನಿಂದ 66,000 ಮಂದಿ ನೇಮಕಾತಿ ನಿರೀಕ್ಷೆ
ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on: Apr 16, 2021 | 12:47 PM

ಇನ್ಫೋಸಿಸ್ ಮತ್ತು ಟಿಸಿಎಸ್ ನೇಮಕಾತಿ 2021: ಕೊರೊನಾ ವೈರಾಣು ಪ್ರಭಾವದಿಂದ ಆರ್ಥಿಕ ಹಿಂಜರಿತ ಎದುರಾಗಿದ್ದರೂ ದೇಶದ ಪ್ರಮುಖ ಇನ್ಫರ್ಮೇಷನ್ ಟೆಕ್ನಾಲಜಿ ಕಂಪೆನಿಗಳಾದ ಇನ್ಫೋಸಿಸ್ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಇವೆರಡೂ ಉದ್ಯೋಗಾಕಾಂಕ್ಷಿಗಳಿಗೆ ಭರವಸೆಯ ಬೆಳ್ಳಿ ಚುಕ್ಕಿಯಂತೆ ಆಗಿವೆ.

ಇನ್ಫೋಸಿಸ್ ಉದ್ಯೋಗ ನೇಮಕಾತಿ 2021 ಹಣಕಾಸು ವರ್ಷ 2021- 22ಕ್ಕೆ 26,000 ಮಂದಿ ಹೊಸಬರನ್ನು ನೇಮಿಸಿಕೊಳ್ಳುವುದಾಗಿ ಘೋಷಣೆ ಮಾಡಿದೆ. ಅದರಲ್ಲಿ ಭಾರತದಿಂದ 24,000 ಹೊಸಬರು ಮತ್ತು 2000 ಮಂದಿ ವಿದೇಶಿಗರು ಒಳಗೊಳ್ಳಲಿದ್ದಾರೆ. ಕಂಪೆನಿಯ ಪ್ರಕಾರ, ಹೊಸಬರು ವೇತನದ ಚಕ್ರದೊಳಗೆ 2021ರ ಜುಲೈನಿಂದ ಸೇರ್ಪಡೆ ಆಗಲಿದ್ದಾರೆ.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಕುಮಾರ್ ರಾವ್ ಮಾತನಾಡಿ, ಕಂಪೆನಿಯು ಮಾರ್ಕೆಟ್​ನಿಂದ ಪ್ರತಿಭೆಗಳನ್ನು ನೇಮಕ ಮಾಡಿಕೊಳ್ಳಲಿದೆ. ಈ ಮಧ್ಯೆ, ಕಂಪೆನಿಯು ಮತ್ತೆ ಮಾಮೂಲಿ ವೇತನದ ಚಕ್ರಕ್ಕೆ ಮರಳಿದೆ ಎಂದಿದ್ದಾರೆ.

ಇನ್ನು ಕಂಪೆನಿಯ ಮೂಲದ ಪ್ರಕಾರ, ಸದ್ಯಕ್ಕೆ 2.59 ಲಕ್ಷ (2,59,619) ಉದ್ಯೋಗಿಗಳು ಇದ್ದಾರೆ. ಕಳೆದ ಹಣಕಾಸು ವರ್ಷದಲ್ಲಿ ಕಂಪೆನಿಯು 21,000 ಹೊಸಬರನ್ನು ನೇಮಿಸಿಕೊಂಡಿದ್ದು, ಅದರಲ್ಲಿ 19,000 ಭಾರತೀಯರು ಒಳಗೊಂಡಿದ್ದಾರೆ.

ಟಿಸಿಎಸ್ ನೇಮಕಾತಿ 2021 ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಕಳೆದ ವರ್ಷ 40,000 ಜನರಷ್ಟು ಮಂದಿಯನ್ನು ನೇಮಕ ಮಾಡಿಕೊಂಡಿತ್ತು. ಅದೇ ರೀತಿ ಹಣಕಾಸು ವರ್ಷ 2021-22ರಲ್ಲಿ ಅದೇ ಸಂಖ್ಯೆಯ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಮಂದಿಯನ್ನು ನೇಮಿಸಿಕೊಳ್ಳುವ ನಿರೀಕ್ಷೆ ಇದೆ.

ಟಿಸಿಎಸ್​ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಡ್ ಮಾತನಾಡಿ, ಹೊಸ ನೇಮಕಾತಿಯನ್ನು FY22 ಮೊದಲ ತ್ರೈಮಾಸಿಕದಲ್ಲೇ ಮಾಡಿಕೊಳ್ಳಲಾಗುವುದು. ಇದು ಮೂರು ತ್ರೈಮಾಸಿಕಕ್ಕೂ ವಿಸ್ತರಣೆ ಆಗಬಹುದು ಎಂದು ಅವರು ಹೇಳಿದ್ದಾರೆ. ಅಂದ ಹಾಗೆ ಬೇಡಿಕೆ ಹೇಗೆ ಬರುತ್ತದೆ ಎಂಬುದರ ಮೇಲೆ ಇದು ನಿರ್ಧಾರ ಆಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: TCS FY21 Q4 results: ಟಿಸಿಎಸ್ ಲಾಭ ರೂ. 9246 ಕೋಟಿ; ಪ್ರತಿ ಷೇರಿಗೆ ತಲಾ 15 ರೂ. ಡಿವಿಡೆಂಡ್

ಇದನ್ನೂ ಓದಿ: ಇನ್ಫೋಸಿಸ್ ಲಾಭದಲ್ಲಿ ಶೇ 17ರಷ್ಟು ಏರಿಕೆ; ಪ್ರತಿ ಷೇರಿಗೆ 15 ರೂ. ಡಿವಿಡೆಂಡ್, 9,200 ಕೋಟಿ ತನಕ ಷೇರು ಬೈಬ್ಯಾಕ್

(India’s leading companies TCS and Infosys expected to recruit 66,000 freshers in 2021- 22)

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?