ಇನ್ಫೋಸಿಸ್ ಲಾಭದಲ್ಲಿ ಶೇ 17ರಷ್ಟು ಏರಿಕೆ; ಪ್ರತಿ ಷೇರಿಗೆ 15 ರೂ. ಡಿವಿಡೆಂಡ್, 9,200 ಕೋಟಿ ತನಕ ಷೇರು ಬೈಬ್ಯಾಕ್

ಭಾರತದ ಎರಡನೇ ಅತಿ ದೊಡ್ಡ ಐಟಿ ಕಂಪೆನಿಯಾದ ಇನ್ಫೋಸಿಸ್ ಬುಧವಾರದಂದು ಜನವರಿಯಿಂದ ಮಾರ್ಚ್ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದೆ. 9200 ಕೋಟಿ ರೂ. ತನಕದ ಬೈಬ್ಯಾಕ್ ಮತ್ತು ರೂ. 15 ಅಂತಿಮ ಡಿವಿಡೆಂಡ್ ಘೋಷಣೆ ಮಾಡಿದೆ.

ಇನ್ಫೋಸಿಸ್ ಲಾಭದಲ್ಲಿ ಶೇ 17ರಷ್ಟು ಏರಿಕೆ; ಪ್ರತಿ ಷೇರಿಗೆ 15 ರೂ. ಡಿವಿಡೆಂಡ್, 9,200 ಕೋಟಿ ತನಕ ಷೇರು ಬೈಬ್ಯಾಕ್
ಇನ್ಫೋಸಿಸ್ (ಸಾಂದರ್ಭಿಕ ಚಿತ್ರ)
Follow us
Srinivas Mata
|

Updated on: Apr 14, 2021 | 8:53 PM

ಭಾರತದ ಎರಡನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ (ಇನ್ಫರ್ಮೇಷನ್ ಟೆಕ್ನಾಲಜಿ) ಕಂಪೆನಿಯಾದ ಇನ್ಫೋಸಿಸ್ ಬುಧವಾರದಂದು ಘೋಷಣೆ ಮಾಡಿರುವ ಜನವರಿಯಿಂದ ಮಾರ್ಚ್ ತ್ರೈಮಾಸಿಕದ ಫಲಿತಾಂಶದ ಪ್ರಕಾರ, ನಿವ್ವಳ ಲಾಭ ರೂ. 5078 ಕೋಟಿ (ಮೈನಾರಿಟಿ ಇಂಟರೆಸ್ಟ್​ಗೂ ಮುನ್ನ) ಗಳಿಸಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಶೇ 17.1ರಷ್ಟು ಏರಿಕೆ ದಾಖಲಿಸಿದೆ. ಕಳೆದ ವರ್ಷ ಇದೇ ತ್ರೈಮಾಸಿಕದ ಅವಧಿಯಲ್ಲಿ 4,321 ಕೋಟಿ ರೂಪಾಯಿ ಲಾಭ ಪಡೆದಿತ್ತು. ಈ ತ್ರೈಮಾಸಿಕದಲ್ಲಿ ಇನ್ಫೋಸಿಸ್ ರೂ. 9,147 ಕೋಟಿ ರೂಪಾಯಿ ಒಟ್ಟು ಲಾಭ ಗಳಿಸಿದೆ. ಮಾರ್ಚ್ ತ್ರೈಮಾಸಿಕ ಅಂತ್ಯಕ್ಕೆ 26,311 ಕೋಟಿ ರೂಪಾಯಿ ಆದಾಯ ಬಂದಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 13.1ರಷ್ಟು ಏರಿಕೆ ಆಗಿದೆ ಎಂದು ಕಂಪೆನಿಯು ತನ್ನ ರೆಗ್ಯುಲೇಟರಿ ಫೈಲಿಂಗ್​ನಲ್ಲಿ ತಿಳಿಸಿದೆ.

ಬೆಂಗಳೂರು ಮೂಲದ ಇನ್ಫೋಸಿಸ್ ಬುಧವಾರದಂದು 9,200 ಕೋಟಿ ತನಕದ ಷೇರು ಮರುಖರೀದಿ, ಪ್ರತಿ ಷೇರಿಗೆ ಗರಿಷ್ಠ ಮೊತ್ತ ರೂ. 1750ಕ್ಕೆ ಘೋಷಣೆ ಮಾಡಿದೆ. ಮಂಗಳವಾರದ ದಿನಾಂತ್ಯದ ಷೇರಿನ ಬೆಲೆಗೆ ಶೇ 25ರಷ್ಟು ಪ್ರೀಮಿಯಂ ಬೆಲೆಗೆ ಮರುಖರೀದಿ ಘೋಷಿಸಲಾಗಿದೆ. ಕಳೆದ ಐದು ವರ್ಷದಲ್ಲಿ ಇನ್ಫೋಸಿಸ್​ನಿಂದ ಮಾಡುತ್ತಿರುವ ಮೂರನೇ ಮರುಖರೀದಿ ಇದು. 2017ರ ಡಿಸೆಂಬರ್​ನಲ್ಲಿ 13,000 ಕೋಟಿ ರೂಪಾಯಿಯ ಮೊದಲನೇ ಬೈಬ್ಯಾಕ್ ಪೂರ್ಣಗೊಳಿಸಿತು. ಆಗ 11.3 ಕೋಟಿ ಈಕ್ವಿಟಿ ಷೇರುಗಳನ್ನು ತಲಾ 1,150ರಂತೆ ಹಿಂಪಡೆಯಲಾಯಿತು. 2019ರ ಆಗಸ್ಟ್​ನಲ್ಲಿ 11.05 ಕೋಟಿ ಷೇರುಗಳನ್ನು ರೂ. 8,260 ಕೋಟಿಗೆ ಸರಾಸರಿ ಪ್ರತಿ ಷೇರಿಗೆ 747.38ರಂತೆ ಮರುಖರೀದಿಸಲಾಯಿತು.

ಕಂಪೆನಿಯಿಂದ ಅಂತಿಮ ಡಿವಿಡೆಂಡ್ ತಲಾ 15 ರೂಪಾಯಿ ಘೋಷಿಸಲಾಗಿದೆ. ಇನ್ಫೋಸಿಸ್ ಕಂಪೆನಿಯ ಹಣಕಾಸು ವರ್ಷದ ಕೊನೆಯ ಮಾರ್ಚ್​ಗೆ ಆದಾಯವು 1,00,472 ಕೋಟಿ ಮುಟ್ಟಿದೆ. ಆಪರೇಟಿಂಗ್ ಮಾರ್ಜಿನ್ 320 ಬೇಸಿಸ್ ಪಾಯಿಂಟ್ ಹೆಚ್ಚಾಗಿ ಶೇ 24.5 ಮುಟ್ಟಿದೆ. ಇನ್ನು ಬೇಸಿಕ್ ಅರ್ನಿಂಗ್ ಪರ್ ಷೇರ್ (ಇಪಿಎಸ್) ಶೇ 12.5ರಷ್ಟು ಬೆಳವಣಿಗೆ ಕಂಡಿದೆ.

ಇದನ್ನೂ ಓದಿ: TCS FY21 Q4 results: ಟಿಸಿಎಸ್ ಲಾಭ ರೂ. 9246 ಕೋಟಿ; ಪ್ರತಿ ಷೇರಿಗೆ ತಲಾ 15 ರೂ. ಡಿವಿಡೆಂಡ್

(Bengaluru-based IT company Infosys announces FY21 Q4 results on Wednesday. 17% YoY growth at net profit Rs 5078 crore.)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ