TCS FY21 Q4 results: ಟಿಸಿಎಸ್ ಲಾಭ ರೂ. 9246 ಕೋಟಿ; ಪ್ರತಿ ಷೇರಿಗೆ ತಲಾ 15 ರೂ. ಡಿವಿಡೆಂಡ್

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕಂಪೆನಿಯ ಜನವರಿಯಿಂದ ಮಾರ್ಚ್ ತಿಂಗಳ FY21 ನಾಲ್ಕನೇ ತ್ರೈಮಾಸಿಕದ ಫಲಿತಾಂಶ ಪ್ರಕಟಿಸಲಾಗಿದೆ. ಕಂಪೆನಿಯು ಈ ತ್ರೈಮಾಸಿಕದಲ್ಲಿ 9246 ಕೋಟಿ ರೂಪಾಯಿ ಲಾಭ ಗಳಿಸಿದ್ದು, ರೂ. 15 ಅಂತಿಮ ಡಿವಿಡೆಂಡ್ ಘೋಷಣೆ ಮಾಡಲಾಗಿದೆ.

TCS FY21 Q4 results: ಟಿಸಿಎಸ್ ಲಾಭ ರೂ. 9246 ಕೋಟಿ; ಪ್ರತಿ ಷೇರಿಗೆ ತಲಾ 15 ರೂ. ಡಿವಿಡೆಂಡ್
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್
Follow us
Srinivas Mata
|

Updated on: Apr 12, 2021 | 7:40 PM

ಮುಂಬೈ: ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ಭಾರತದ ಎರಡನೇ ಅತಿ ದೊಡ್ಡ ಲಿಸ್ಟೆಡ್ ಕಂಪೆನಿ ಆದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಜನವರಿಯಿಂದ ಮಾರ್ಚ್ ತ್ರೈಮಾಸಿಕದ ಫಲಿತಾಂಶವನ್ನು ಏಪ್ರಿಲ್ 11ರಂದು ಪ್ರಕಟಿಸಿದೆ. ಸತತವಾಗಿ ಶೇ 6.3ರಷ್ಟು ಬೆಳವಣಿಗೆ ದಾಖಲಿಸಿರುವ ಕಂಪೆನಿಯು ಒಟ್ಟು 9,246 ಕೋಟಿ ರೂಪಾಯಿ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ರೂ. 8049 ಕೋಟಿ ಲಾಭ ಗಳಿಸಿತ್ತು. ಈ ತ್ರೈಮಾಸಿಕದಲ್ಲಿ ಸಮಗ್ರ ಆದಾಯವು ಶೇಕಡಾ 4ರಷ್ಟು ಏರಿಕೆ ಆಗಿದ್ದು, 43,705 ಕೋಟಿ ರೂಪಾಯಿ ಆಗಿದೆ. ಕಳೆದ ಸಾಲಿನ ತ್ರೈಮಾಸಿಕಕ್ಕೆ ಹೋಲಿಸಿದರೆ ದೊಡ್ಡ ವ್ಯವಹಾರಗಳು ಬಂದಿದ್ದು, ಕರೆನ್ಸಿಗಳ ಮೌಲ್ಯದಲ್ಲಿನ ವ್ಯತ್ಯಾಸ ಮತ್ತು ಬೇಡಿಕೆಯಲ್ಲಿ ಚೇತರಿಕೆ ಈ ಎಲ್ಲ ಸೇರಿಕೊಂಡು ಇಂಥದ್ದೊಂದು ಬೆಳವಣಿಗೆ ಆಗಿದೆ.

ಟಿಸಿಎಸ್ ಕಂಪೆನಿಯ ಷೇರು ಮಾರ್ಚ್ ತ್ರೈಮಾಸಿಕದಲ್ಲಿ ಶೇ 11ರಷ್ಟು ಏರಿಕೆ ಕಂಡಿದೆ. ಹಾಗೆ ನೋಡಿದರೆ ಇದೇ ಅವಧಿಯಲ್ಲಿ ನಿಫ್ಟಿ ಐಟಿ ಸೂಚ್ಯಂಕವು ದಾಖಲಿಸಿರುವುದು ಶೇ 6.6ರ ಬೆಳವಣಿಗೆ ಮಾತ್ರ. 2020- 21ರ ಸಾಲಿನಲ್ಲಿ ಈ ಷೇರು ಶೇ 74ರಷ್ಟು ಗಳಿಕೆ ಕಂಡಿದೆ. ಇನ್ನು ಮಾಹಿತಿ ತಂತ್ರಜ್ಞಾನ (ಐ.ಟಿ.) ಸೂಚ್ಯಂಕವು ಈ ಅವಧಿಯಲ್ಲಿ ಶೇ 102ರಷ್ಟು ಗಳಿಕೆಯನ್ನು ಕಂಡಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕಂಪೆನಿಯ ಷೇರು ಏಪ್ರಿಲ್ 9, 2021ರಂದು ದಾಖಲೆಯ ಮೊತ್ತವಾದ ರೂ. 3,358.80 ತಲುಪಿದೆ. ಕಳೆದ ಎರಡು ವಾರದಲ್ಲಿ ಶೇಕಡಾ 8ಕ್ಕಿಂತ ಹೆಚ್ಚಿನ ಗಳಿಕೆಯನ್ನು ದಾಖಲಿಸಿದೆ. ಅಮೆರಿಕ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ದುರ್ಬಲವಾಗಿದ್ದರಿಂದ ಇಂಥದ್ದೊಂದು ಬೆಳವಣಿಗೆ ಕಂಡಿದೆ. ಇನ್ನು ಟಿಸಿಎಸ್​ನ ಆಡಳಿತ ಮಂಡಳಿಯು ಅಂತಿಮ ಲಾಭಾಂಶ (ಡಿವಿಡೆಂಡ್) ಆಗಿ ಪ್ರತಿ ಷೇರಿಗೆ ರೂ. 15ರಂತೆ ಘೋಷಣೆ ಮಾಡಿದೆ.

2020- 21ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪೆನಿಗೆ 19,388 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ನಿವ್ವಳದ ಆಧಾರದಲ್ಲಿ ಇದು ಒಂದು ತ್ರೈಮಾಸಿಕದಲ್ಲಿ ಸೇರ್ಪಡೆಯಾದ ಅತಿ ದೊಡ್ಡ ಸಂಖ್ಯೆಯಾಗಿದೆ. ಒಟ್ಟಾರೆ ಸಿಬ್ಬಂದಿ ಸಂಖ್ಯೆ 4,88,649 ಆಗಿದ್ದು, ಈ ವರ್ಷ 40,185 ಮಂದಿಯನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಕಂಪೆನಿಯ ಕೆಲಸ ಬಿಡುವ ಪ್ರಮಾಣ ಸಾರ್ವಕಾಲಿಕ ಕನಿಷ್ಠ ಮಟ್ಟವಾದ ಶೇ 7.2 ಮುಟ್ಟಿದೆ. 154 ರಾಷ್ಟ್ರಗಳ ನಾಗರಿಕರು ಟಿಸಿಎಸ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಒಟ್ಟು ಉದ್ಯೋಗಿಗಳ ಪೈಕಿ ಮಹಿಳೆಯರ ಸಂಖ್ಯೆ ಶೇ 36.5ರಷ್ಟಿದೆ.

ಇದನ್ನೂ ಓದಿ: Bloodbath in stock market | ಕೊರೊನಾ ಎರಡನೇ ಅಲೆ ಆತಂಕದಲ್ಲಿ ಷೇರುಪೇಟೆ ಹೂಡಿಕೆದಾರರ 6 ಲಕ್ಷ ಕೋಟಿ ರೂ. ಖಲಾಸ್

(TCS announced FY21 Q4 results on April 12, 2021. Board approved Rs 15 as the final dividend.)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್