Gold Rate Today: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ದರ ಏರಿಕೆ; ಗ್ರಾಹಕರು ಕಂಗಾಲು!, ಬೆಂಗಳೂರಿನ ದರ ಇಲ್ಲಿದೆ

Gold Price Today: ದಿನೇ ದಿನೇ ಚಿನ್ನದ ದರ ಏರಿಕೆಯಾಗುತ್ತಲೇ ಇದೆ. ಪ್ರತಿನಿತ್ಯ ಚಿನ್ನದ ದರ ಹೆಚ್ಚಳವಾಗುತ್ತಿರುವುದನ್ನು ಗಮನಿಸುತ್ತಿದ್ದ ಗ್ರಾಹಕರು ಕಂಗಾಲಾಗಿದ್ದಾರೆ.

Gold Rate Today: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ದರ ಏರಿಕೆ; ಗ್ರಾಹಕರು ಕಂಗಾಲು!, ಬೆಂಗಳೂರಿನ ದರ ಇಲ್ಲಿದೆ
ಪ್ರಾತಿನಿಧಿಕ ಚಿತ್ರ

ದೆಹಲಿ: ಚಿನ್ನದ ದರ ಇಂದು ಗುರುವಾರ ಏರಿಕೆಯಾಗಿದೆ. ಒಂದು ಕಡೆ ಕೊರೊನಾ ಸಾಂಕ್ರಾಮಿಕ ಪ್ರಕರಣಗಳು ದೇಶದಲ್ಲಿ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಚಿನ್ನದ ಮೌಲ್ಯ ಕೂಡಾ ತೀವ್ರ ಗತಿಯಲ್ಲಿ ಏರಿಕೆ ಕಾಣುತ್ತಿದೆ. ನಿನ್ನೆ ಬುಧವಾರ ಚಿನ್ನದ ದರದಲ್ಲಿ ಕೊಂಚ ಇಳಿಕೆ ಕಂಡಿತ್ತು. ಇಂದು ಮತ್ತೆ ಚಿನ್ನದ ದರ ಹೆಚ್ಚಾಳವಾಗಿದೆ. ಕಳೆದೆರಡು ವಾರಗಳಿಂದ ಚಿನ್ನದ ದರವನ್ನು ಪರಿಶೀಲಿಸಿದಾಗ ಚಿನ್ನದ ದರ ದಿನ ಸಾಗುತ್ತಿದ್ದಂತೆಯೇ ಹೆಚ್ಚಾಳವಾಗುತ್ತಲೇ ಇದೆ.

ಇಂದು ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರವನ್ನು 250 ರೂಪಾಯಿ ಹೆಚ್ಚಿಸಲಾಗಿದೆ. ಹೈದರಾಬಾದ್​ನಲ್ಲಿ 10 ಗ್ರಾಂ ಚಿನ್ನದ ದರ 400 ರೂಪಾಯಿ ಏರಿಕೆಯಾಗಿದೆ. ಅಂತೆಯೇ ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ 400 ರೂಪಾಯಿ ಏರಿಕೆಯಾಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಇಂದು ದರ ಕೊಂಚ ಏರಿಕೆ ಕಂಡಿದ್ದು, 10 ಗ್ರಾ ಚಿನ್ನದ ದರ 90 ರೂಪಾಯಿ ಏರಿಕೆಯಾಗಿದೆ. ನಗರದಿಂದ ನಗರಕ್ಕೆ ಚಿನ್ನದ ದರ ವ್ಯತ್ಯಾಸವನ್ನು ಕಾಣಬಹುದು.

ಈ ತಿಂಗಳಿನಲ್ಲಿ ಸುಮಾರು 14 ದಿನಗಳ ಕಾಲ ಚಿನ್ನದ ದರ ಏರಿಕೆಯಿಂದ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ಒಟ್ಟು 2,300 ರೂಪಾಯಿ ಏರಿಕೆಯಾಗಿದೆ. ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,950 ರೂಪಾಯಿ ಆಗಿದೆ. ಹಾಗೆಯೇ 24 ಕ್ಯಾರೆಟ್​ 10 ಗ್ರಾಂ ಚಿನ್ನದ ದರ 50,120 ರೂಪಾಯಿಗೆ ಏರಿಕೆಯಾಗಿದೆ. ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,740 ರೂಪಾಯಿ ಇದೆ. ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,990 ರೂಪಾಯಿಗೆ ಮಾರಾಟವಾಗುತ್ತಿದೆ.

ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,850 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,850 ರೂಪಾಯಿ ಆಗಿದೆ. ಕೋಲ್ಕತ್ತಾದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,800 ರೂಪಾಯಿ ಇದೆ. ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,080 ರೂಪಾಯಿ ಆಗಿದೆ. ಕೇರಳದಲ್ಲಿ ಚಿನ್ನದ ದರವನ್ನು ಗಮನಿಸಿದಾಗ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,800 ರೂಪಾಯಿ ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,780 ರೂಪಾಯಿ ಇದೆ.

ಹೈದರಾಬಾದ್​ನ ಚಿನ್ನದ ದರವನ್ನು ಪರಿಶೀಲಿಸಿದಾಗ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,800 ರೂಪಾಯಿ ಇದೆ. ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,780 ರೂಪಾಯಿ ಆಗಿದೆ. ವಿಜಯವಾಡದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,800 ರೂಪಾಯಿ ಇದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,780 ರೂಪಾಯಿ ಇದೆ.

ಇದನ್ನೂ ಓದಿ: Gold investments: ಭಾರತದ ಯುವಜನತೆಗೆ ಚಿನ್ನದ ಹೂಡಿಕೆ ಮೇಲಿನ ವ್ಯಾಮೋಹ ಉಳಿದಿದೆಯಾ?

Gold Price Today: ಕೂಡಿಟ್ಟ ಹಣಕ್ಕೆ ಚಿನ್ನ ಕೊಳ್ಳಬಹುದೇ ಎಂದು ಯೋಚಿಸಿ.. ಚಿನ್ನಾಭರಣದ ದರ ಹೀಗಿದೆ!

(Gold Rate Today in Bangalore Mumbai Hyderabad Chennai and Delhi silver price on April 15th 2021)

Published On - 8:48 am, Thu, 15 April 21

Click on your DTH Provider to Add TV9 Kannada