Petrol Diesel Price: ವಿವಿಧ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ಬೆಲೆ; ಏಪ್ರಿಲ್ ತಿಂಗಳಿನಲ್ಲಿ ಬದಲಾವಣೆ ಇದೆಯಾ?
Petrol Rate in Bengaluru: ವಿವಿಧ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ? ಕಚ್ಚಾ ತೈಲವು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿತ ಕಂಡಿದೆಯಾ? ಎಂಬುದರ ವಿವರ ಇಲ್ಲಿದೆ.

ಬೆಂಗಳೂರು: ಏಪ್ರಿಲ್ 15ನೇ ತಾರೀಕಿನಂದು ಪೆಟ್ರೋಲ್, ಡೀಸೆಲ್ ದರ ವ್ಯತ್ಯಾಸವಾಗಿಲ್ಲ. ಸರ್ಕಾರಿ ತೈಲ ಕಂಪನಿಗಳಿಂದ ಇಂಧನ ದರದಲ್ಲಿ ಯಾವುದೇ ಬದಲಾವಣೆಗಳಿಲ್ಲ. ಇದಕ್ಕೂ ಮುನ್ನ ಸತತವಾಗಿ 16 ದಿನಗಳ ಕಾಲ ಇಂಧನ ದರ ಬದಲಾಗದೇ ಸ್ಥಿರವಾಗಿಯೇ ಉಳಿದಿದೆ. ಕಚ್ಚಾ ತೈಲವು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್ಗೆ 66 ಡಾಲರ್ ದಾಟಿದೆ. ಮಾರ್ಚ್ ತಿಂಗಳಲ್ಲಿ ಒಟ್ಟು ಮೂರು ಬಾರಿ ಪೆಟ್ರೋಲ್, ಡೀಸೆಲ್ ದರವನ್ನು ಕಡಿತಗೊಳಿಸಲಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಇಲ್ಲಿಯವರೆಗೆ ಇಂಧನ ದರ ಕಡಿತ ಕಂಡು ಬಂದಿಲ್ಲ.
ಕಳೆದ ಮಾರ್ಚ್ ತಿಂಗಳ ಕೊನೆಯ 30ನೇ ತಾರೀಕಿನಂದು ಪೆಟ್ರೋಲ್, ಡೀಸೆಲ್ ದರವನ್ನು ಕಡಿತಗೊಳಿಸಲಾಗಿತ್ತು. ತದ ನಂತರ ದೆಹಲಿಯಲ್ಲಿ ಪ್ರತಿ ಲಿಟರ್ ಪೆಟ್ರೋಲ್ ದರ 22 ಪೈಸೆ ಹಾಗೂ ಡೀಸೆಲ್ನಲ್ಲಿ 23 ಪೈಸೆ ಕಡಿತಗೊಳಿಸಲಾಯಿತು. ಒಟ್ಟು ಮೂರು ಬಾರಿ ಮಾರ್ಚ್ನಲ್ಲಿ ಇಂಧನ ದರ ಕಡಿತದಿಂದಾಗಿ ಪೆಟ್ರೋಲ್ ದರದಲ್ಲಿ ಒಟ್ಟು 61 ಪೈಸೆ ಹಾಗೂ ಡೀಸೆಲ್ ದರದಲ್ಲಿ ಒಟ್ಟು 60 ಪೈಸೆ ಕಡಿಮೆಯಾಗಿದೆ. ಇಂಧನ ದರವನ್ನು ಕಡಿತಗೊಳಿಸಲು ಪ್ರಮುಖ ಕಾರಣವೆಂದರೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿತಗೊಂಡಿರುವುದು. ಕಚ್ಚಾ ತೈಲ ದರ ಬ್ಯಾರೆಲ್ಗೆ 71 ಡಾಲರ್ನಿಂದ ಬ್ಯಾರೆಲ್ಗೆ 63 ಡಾಲರ್ಗೆ ಕುಸಿದಿದೆ. ಕಳೆದ ಫೆಬ್ರವರಿ ತಿಂಗಳಿನಲ್ಲಿ 16 ಬಾರಿ ಪೆಟ್ರೋಲ್, ಡೀಸೆಲ್ ದರವನ್ನು ಏರಿಸಲಾಗಿತ್ತು. ಅದಾದ ನಂತರದಲ್ಲಿ ಪೆಟ್ರೋಲ್, ಡೀಸೆಲ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.
ನಗರದಿಂದ ನಗರಕ್ಕೆ ಪೆಟ್ರೋಲ್, ಡೀಸೆಲ್ ದರ ಬದಲಾಗುತ್ತದೆ. ಯಾವ ನಗರದಲ್ಲಿ ಹೆಚ್ಚು ದರದಲ್ಲಿ ಇಂಧನ ದರ ಮಾರಾಟವಾಗುತ್ತಿದೆ. ಯಾವ ನಗರದಲ್ಲಿ ಇಂಧನ ದರ ಕಡಿಮೆ ಇದೆ ಎಂಬುದರ ವಿವರ ಇಲ್ಲಿದೆ.
ನಗರ ಪೆಟ್ರೋಲ್ ದರ(ಪ್ರತಿ ಲೀ.) ಡೀಸೆಲ್ ದರ(ಪ್ರತಿ ಲೀ.) ದೆಹಲಿ 90.56 80.87 ಮುಂಬೈ 96.98 87.96 ಕೋಲ್ಕತ್ತಾ 90.77 83.75 ಚೆನ್ನೈ 92.58 85.88 ನೋಯ್ಡಾ 88.91 81.33 ಬೆಂಗಳೂರು 93.59 85.75 ಹೈದರಾಬಾದ್ 94.16 88.20 ಪಾಟ್ನಾ 92.89 86.12 ಜೈಪುರ 97.08 89.35 ಲಕ್ನೋ 88.85 81.27
ದೇಶೀಯ ತೈಲ ಕಂಪನಿಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ 15 ದಿನಗಳ ಕಚ್ಚಾ ತೈಲದ ಸರಾಸರಿ ಬೆಲೆಯ ಆಧಾರದ ಮೇಲೆ ಪೆಟ್ರೋಲ್, ಡೀಸೆಲ್ ಬೆಲೆಯನ್ನು ನಿರ್ಧರಿಸುತ್ತವೆ.
ವಿವಿಧ ನಗರದ ಪೆಟ್ರೋಲ್ ದರ ಎಷ್ಟಿದೆ ಎಂಬ ಕುತೂಹಲವಿದ್ದರೆ ದರದ ಮಾಹಿತಿ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ
https://tv9kannada.com/business/petrol-price-today.html
ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ
https://tv9kannada.com/business/diesel-price-today.html
Published On - 8:10 am, Thu, 15 April 21



