ಮಾರುತಿ ಸುಜುಕಿ ಆಯ್ದ ಕಾರಿನ ಮಾಡೆಲ್​ಗಳ ಬೆಲೆಯಲ್ಲಿ ತಕ್ಷಣದಿಂದಲೇ ರೂ. 22,500 ತನಕ ಹೆಚ್ಚಳ

Maruti Suzuki price hike: ಭಾರತದ ಅತಿ ದೊಡ್ಡ ಕಾರು ತಯಾರಿಕೆ ಕಂಪೆನಿಯಾದ ಮಾರುತಿ ಸುಜುಕಿಯಿಂದ ತಕ್ಷಣದಿಂದಲೇ ಅನ್ವಯ ಆಗುವಂತೆ ಆಯ್ದ ಮಾಡೆಲ್​ಗಳ ಬೆಲೆಯಲ್ಲಿ ರೂ. 22,500 ತನಕ ಬೆಲೆ ಏರಿಕೆ ಮಾಡಲಾಗಿದೆ. ಇನ್​ಪುಟ್ ವೆಚ್ಚ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಮಾರುತಿ ಸುಜುಕಿ ಆಯ್ದ ಕಾರಿನ ಮಾಡೆಲ್​ಗಳ ಬೆಲೆಯಲ್ಲಿ ತಕ್ಷಣದಿಂದಲೇ ರೂ. 22,500 ತನಕ ಹೆಚ್ಚಳ
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: Apr 16, 2021 | 4:49 PM

ಭಾರತದ ಅತಿದೊಡ್ಡ ಕಾರು ತಯಾರಿಕೆ ಸಂಸ್ಥೆ ಮಾರುತಿ ಸುಜುಕಿ ಏಪ್ರಿಲ್ 16ರಂದು ಘೋಷಣೆ ಮಾಡಿದ ಪ್ರಕಾರ, ಆಯ್ದ ಮಾಡೆಲ್​ಗಳ ಬೆಲೆಯಲ್ಲಿ ರೂ. 22,500 ತನಕ ತಕ್ಷಣದಿಂದಲೇ ಜಾರಿಗೆ ಬರುವಂತೆ ಏರಿಕೆ ಮಾಡಲಾಗಿದೆ. ಇನ್​ಪುಟ್ ವೆಚ್ಚದ ಹೆಚ್ಚಳವನ್ನು ಭಾಗಶಃ ಸರಿತೂಗಿಸುವ ನಿಟ್ಟಿನಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ವಿವಿಧ ಇನ್​ಪುಟ್ ವೆಚ್ಚದ ಹೆಚ್ಚಳವಾದ ಹಿನ್ನೆಲೆಯಲ್ಲಿ ಆಯ್ದ ಮಾಡೆಲ್​ಗಳ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. ಆದರೆ ಯಾವ ಆಯ್ದ ಮಾಡೆಲ್​ಗಳು ಎಂಬ ಮಾಹಿತಿಯನ್ನು ರೆಗ್ಯುಲೇಟರಿ ಫೈಲಿಂಗ್​ನಲ್ಲಿ ತಿಳಿಸಿಲ್ಲ. “ವಿವಿಧ ಇನ್​ಪುಟ್ ವೆಚ್ಚ ಹೆಚ್ಚಳವಾದ ಹಿನ್ನೆಲೆಯಲ್ಲಿ ಆಯ್ದ ಮಾಡೆಲ್​ಗಳ ಬೆಲೆಯನ್ನು ಏರಿಕೆ ಮಾಡಿರುವುದನ್ನು ನಿಮಗೆ ತಿಳಿಸುತ್ತಿದ್ದೇವೆ. ವೇಯ್ಟೆಡ್ ಸರಾಸರಿ ಬೆಲೆ ಏರಿಕೆಯು ಎಕ್ಸ್ ಶೋರೂಂ ದರಗಳು (ದೆಹಲಿ) ಎಲ್ಲ ಮಾಡೆಲ್​ಗಳಲ್ಲಿ ಶೇ 1.6ರಷ್ಟಾಗುತ್ತದೆ. ಹೊಸ ಬೆಲೆಯು ಇಂದಿನಿಂದ, ಏಪ್ರಿಲ್ 16, 2021ರಿಂದಲೇ ಜಾರಿಗೆ ಬರಲಿದೆ,” ಎಂದು ಸಂಸ್ಥೆಯು ರೆಗ್ಯುಲೇಟರಿ ಫೈಲಿಂಗ್​ನಲ್ಲಿ ತಿಳಿಸಿದೆ.

ಮಾರುತಿ ಸುಜುಕಿ ಕಂಪೆನಿಯು ಆಲ್ಟೋದಿಂದ S- Cross ತನಕ ನಾನಾ ಮಾಡೆಲ್​ಗಳನ್ನು ಮಾರಾಟ ಮಾಡುತ್ತದೆ. ಅವುಗಳ ಬೆಲೆ ರೂ. 2.99 ಲಕ್ಷದಿಂದ ಆರಂಭವಾಗಿ ರೂ. 12.39 ಲಕ್ಷದ ತನಕ (ಎಕ್ಸ್- ಶೋರೂಂ ದರ ದೆಹಲಿ) ಇದೆ. ಇದಕ್ಕೂ ಮುನ್ನ ಮಾರ್ಚ್ 22ರಂದು ಘೋಷಣೆ ಮಾಡಿದ ಪ್ರಕಾರ, ವಿವಿಧ ಇನ್​ಪುಟ್ ವೆಚ್ಚ ಹೆಚ್ಚಳವಾದ ಹಿನ್ನೆಲೆಯಲ್ಲಿ ವಾಹನದ ಬೆಲೆ ಏರಿಕೆ ಮಾಡುವ ಬಗ್ಗೆ ತಿಳಿಸಿತ್ತು. ಜನವರಿ 18ರಂದು ಸಹ ಬೆಲೆ ಏರಿಕೆ ಬಗ್ಗೆ ಘೋಷಣೆ ಮಾಡಿತ್ತು. ದೆಹಲಿ ಎಕ್ಸ್- ಶೋರೂಂ ದರಕ್ಕೆ 34,000 ರೂಪಾಯಿ ತನಕ ಹೆಚ್ಚಳ ಮಾಡುವುದಾಗಿ ತಿಳಿಸಿತ್ತು.

ಮಾರುತಿ ಸುಜುಕಿ ಈ ಹಿಂದೆ ಆಲ್ಟೊ ಬೆಲೆಯನ್ನು ರೂ. 9000 ತನಕ, ಎಸ್​ಪ್ರೆಸ್ಸೊ ದರ ರೂ. 7000 ಹೆಚ್ಚಾಗಿತ್ತು. ಇನ್ನು ಬಲೆನೋ ಬೆಲೆ ರೂ. 19,400ರ ತನಕ ಮೇಲೇರಿತ್ತು. ಇನ್ನು ವ್ಯಾಗನ್​R, ಬ್ರೆಜಾ ಮತ್ತು ಸೆಲೆರಿಯೋ ಕಾರಿನ ಬೆಲೆಗಳು ಕ್ರಮವಾಗಿ ರೂ. 2500ದಿಂದ ರೂ. 18,200, ರೂ. 10,000 ಮತ್ತು 14,400ರ ತನಕ ಜನವರಿಯಲ್ಲಿ ಮೇಲೇರಿದ್ದವು. ಏಪ್ರಿಲ್ 5ನೇ ತಾರೀಕಿನಂದು ಮಾರುತಿ ಸುಜುಕಿ ತಿಳಿಸಿದ ಪ್ರಕಾರ, 2021ರ ಮಾರ್ಚ್ ತಿಂಗಳ ಒಟ್ಟು ಉತ್ಪಾದನೆಯು 1,72,433 ಆಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 92,540 ಯೂನಿಟ್ ಉತ್ಪಾದನೆ ಮಾಡಿತ್ತು.

ಇದನ್ನೂ ಓದಿ: ಕಣ್ಣು ಹಾಯಿಸಿದ ಕಡೆಗೆಲ್ಲ ಕಾಣುವ ಸೆಮಿಕಂಡಕ್ಟರ್ ಎಂಬ ಸರ್ವಾಂತರ್ಯಾಮಿ ಬಗ್ಗೆ ನಿಮಗೆಷ್ಟು ಗೊತ್ತು?

( Maruti Suzuki India Limited increased selected car model price up to Rs 22,500 with immediate effect. That is from April 16, 2021)

ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​
ಬಾಕ್ಸಿಂಗ್ ಡೇ ಟೆಸ್ಟ್​ಗಾಗಿ ಬೆವರಿಳಿಸಿದ ಟೀಮ್ ಇಂಡಿಯಾ ಬೌಲರ್​ಗಳು
ಬಾಕ್ಸಿಂಗ್ ಡೇ ಟೆಸ್ಟ್​ಗಾಗಿ ಬೆವರಿಳಿಸಿದ ಟೀಮ್ ಇಂಡಿಯಾ ಬೌಲರ್​ಗಳು
Weekly Astrology: ಡಿಸೆಂಬರ್ 23 ರಿಂದ 29ರ ವರೆಗಿನ ರಾಶಿ ಭವಿಷ್ಯ
Weekly Astrology: ಡಿಸೆಂಬರ್ 23 ರಿಂದ 29ರ ವರೆಗಿನ ರಾಶಿ ಭವಿಷ್ಯ