ಈ ನಡೆಯ ಬಗ್ಗೆ ಹೇಳಿಕೆ ನೀಡಿರುವ ಸಿಟಿ ಸಮೂಹ, ಈಗಿನ ನಿರ್ಧಾರದಿಂದ ಹೂಡಿಕೆ ಮತ್ತು ಸಂಪನ್ಮೂಲವನ್ನು ಎಲ್ಲಿ ದೊಡ್ಡ ಮಟ್ಟದಲ್ಲಿ ವ್ಯಾಪಿಸುವುದಕ್ಕೆ ಹಾಗೂ ಬೆಳವಣಿಗೆಗೆ ಅವಕಾಶ ಇದೆಯೋ ಅಲ್ಲಿ ತೊಡಗಿಸಲಾಗುತ್ತದೆ. ಸಿಟಿ ಗ್ರೂಪ್ ಸಿಇಒ ಜೇನ್ ಫ್ರೇಸರ್ ಮಾತನಾಡಿ, ಈ 13 ಮಾರುಕಟ್ಟೆಯಲ್ಲಿ ಸರಿಯಾದ ಸ್ಪರ್ಧೆ ನೀಡುವುದಕ್ಕೆ ಆಗುತ್ತಿಲ್ಲ. ಆದ್ದರಿಂದ ಅಲ್ಲಿಂದ ಹೊರಬರುತ್ತಿದ್ದೇವೆ ಎಂದಿದ್ದಾರೆ.
ಈಗಿನ ಹೊಸ ವ್ಯೂಹದ ಪರಿಣಾಮದಿಂದ ನಮ್ಮ ಸಂಪತ್ತು ದ್ವಿಗುಣ ಆಗುತ್ತದೆ. ಏಷ್ಯಾ ಮತ್ತು EMEA (ಯುರೋಪ್-ಮಧ್ಯಪ್ರಾಚ್ಯ-ಆಫ್ರಿಕಾ)ದಲ್ಲಿ ಇರುವ ನಮ್ಮ ಗ್ರಾಹಕ ಬ್ಯಾಂಕಿಂಗ್ ಫ್ರಾಂಚೈಸಿಗಳನ್ನು ಸಿಂಗಾಪೂರ್, ಹಾಂಕಾಂಗ್, ಯುಎಇ ಮತ್ತು ಲಂಡನ್ಯಿಂದ ನಿರ್ವಹಣೆ ಮಾಡುತ್ತೇವೆ. ಇದರೊಂದಿಗೆ ಈ ಮುಖ್ಯ ಹಬ್ಗಳಲ್ಲಿ ವೆಲ್ತ್ ಮ್ಯಾನೇಜ್ಮೆಂಟ್ ಉದ್ಯಮದಲ್ಲಿ ಆಕರ್ಷಕ ರಿಟರ್ನ್ಸ್ ಮತ್ತು ಪ್ರಬಲ ಬೆಳವಣಿಗೆ ಕಾಣಲು ಸಹಕಾರ ಆಗುತ್ತದೆ ಎಂದು ಫ್ರೇಸರ್ ಹೇಳಿದ್ದಾರೆ.
ಇನ್ನು ಇತರ 13 ಮಾರುಕಟ್ಟೆಗಳಲ್ಲಿ ಅದ್ಭುತವಾದ ಮಾರುಕಟ್ಟೆ ಇದೆ. ನಾವು ಅಲ್ಲಿ ಸ್ಪರ್ಧಿಸಬೇಕು. ನಮ್ಮ ಬಂಡವಾಳ, ಹೂಡಿಕೆ ಡಾಲರ್ಗಳು, ಮತ್ತು ಇತರ ಸಂಪನ್ಮೂಲಗಳನ್ನು ಹೆಚ್ಚಿನ ರಿಟರ್ನ್ಸ್ ನೀಡುವ ಅವಕಾಶ ಇರುವ ಮತ್ತು ಏಷ್ಯಾದ ನಮ್ಮ ಸಾಂಸ್ಥಿಕ ವ್ಯವಹಾರದಲ್ಲಿ ನಿಯೋಜಿಸುತ್ತೇವೆ. ಷೇರುದಾರರಿಗೆ ನೀಡುತ್ತಿರುವ ರಿಟರ್ನ್ಸ್ ಹೆಚ್ಚಿಸಲು ಕೆಲಸ ಮಾಡುತ್ತಿದ್ದು, ನಮ್ಮ ವ್ಯೂಹಾತ್ಮಕ ನಿರ್ಧಾರದ ಬಗ್ಗೆ ನಿಮಗೆ ತಿಳಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗುಮಾಸ್ತನ ಸಣ್ಣ ಎಡವಟ್ಟು.. ಬ್ಯಾಂಕ್ಗೆ ಬಂತು 7 ಸಾವಿರ ಕೋಟಿ ರೂ ಆಪತ್ತು
(Citigroup announced on April 15th that, to shutter retail banking in 13 countries including India)