ಗುಮಾಸ್ತನ ಸಣ್ಣ ಎಡವಟ್ಟು.. ಬ್ಯಾಂಕ್ಗೆ ಬಂತು 7 ಸಾವಿರ ಕೋಟಿ ರೂ ಆಪತ್ತು
ಲೋನ್ ವಿಭಾಗದ ಗುಮಾಸ್ತನೊಬ್ಬನ ಸಣ್ಣ ತಪ್ಪಿನಿಂದ ವಿಶ್ವದ ಪ್ರತಿಷ್ಠಿತ ಸಿಟಿಗ್ರೂಪ್ ಬ್ಯಾಂಕ್ ಇದೀಗ ಕೋಟ್ಯಂತರ ರೂಪಾಯಿ ಕಳೆದುಕೊಳ್ಳುವ ಸಾಧ್ಯತೆ ಎದುರಾಗಿದೆ. ಕಳೆದ ಬುಧವಾರ ಸಿಟಿಗ್ರೂಪ್ ಬ್ಯಾಂಕ್ನ ಲೋನ್ ವಿಭಾಗದ ಸಿಬ್ಬಂದಿ ಕೆಲವು ಸಾಲದಾತ ಸಂಸ್ಥೆಗಳಿಗೆ ಆಕಸ್ಮಿಕವಾಗಿ 900 ಮಿಲಿಯನ್ ಡಾಲರ್ (7,000 ಕೋಟಿ ರೂ.) ಹಣವನ್ನು ಅವರ ಬ್ಯಾಂಕ್ ಖಾತೆಗಳಿಗೆ ಟ್ರಾನ್ಸ್ಫರ್ ಮಾಡಿಬಿಟ್ಟಿದೆ. ಇದೀಗ, ತಾನು ವರ್ಗಾಯಿಸಿರುವ ಮೊತ್ತವನ್ನು ಆಯಾ ಸಂಸ್ಥೆಗಳಿಂದ ವಾಪಸ್ ಕೇಳುತ್ತಿದೆ. ಆದರೆ, ಕೆಲವು ಗ್ರಾಹಕರು ಹಣವನ್ನು ವಾಪಸ್ ಮಾಡಲು ನಿರಾಕರಿಸಿದ್ದಾರಂತೆ. ಇದರಿಂದ ಬ್ಯಾಂಕ್ […]
ಲೋನ್ ವಿಭಾಗದ ಗುಮಾಸ್ತನೊಬ್ಬನ ಸಣ್ಣ ತಪ್ಪಿನಿಂದ ವಿಶ್ವದ ಪ್ರತಿಷ್ಠಿತ ಸಿಟಿಗ್ರೂಪ್ ಬ್ಯಾಂಕ್ ಇದೀಗ ಕೋಟ್ಯಂತರ ರೂಪಾಯಿ ಕಳೆದುಕೊಳ್ಳುವ ಸಾಧ್ಯತೆ ಎದುರಾಗಿದೆ.
ಕಳೆದ ಬುಧವಾರ ಸಿಟಿಗ್ರೂಪ್ ಬ್ಯಾಂಕ್ನ ಲೋನ್ ವಿಭಾಗದ ಸಿಬ್ಬಂದಿ ಕೆಲವು ಸಾಲದಾತ ಸಂಸ್ಥೆಗಳಿಗೆ ಆಕಸ್ಮಿಕವಾಗಿ 900 ಮಿಲಿಯನ್ ಡಾಲರ್ (7,000 ಕೋಟಿ ರೂ.) ಹಣವನ್ನು ಅವರ ಬ್ಯಾಂಕ್ ಖಾತೆಗಳಿಗೆ ಟ್ರಾನ್ಸ್ಫರ್ ಮಾಡಿಬಿಟ್ಟಿದೆ. ಇದೀಗ, ತಾನು ವರ್ಗಾಯಿಸಿರುವ ಮೊತ್ತವನ್ನು ಆಯಾ ಸಂಸ್ಥೆಗಳಿಂದ ವಾಪಸ್ ಕೇಳುತ್ತಿದೆ. ಆದರೆ, ಕೆಲವು ಗ್ರಾಹಕರು ಹಣವನ್ನು ವಾಪಸ್ ಮಾಡಲು ನಿರಾಕರಿಸಿದ್ದಾರಂತೆ. ಇದರಿಂದ ಬ್ಯಾಂಕ್ ಪೇಚಿಗೆ ಸಿಲುಕಿದ್ದು ಹಣ ವಾಪಸ್ ಪಡೆಯಲು ಹರಸಾಹಸ ಪಡುತ್ತಿದೆ.
ಅಷ್ಟಕ್ಕೂ ಅಗಿದ್ದೇನು? ಈ ಸ್ವಾರಸ್ಯಕರ ಪ್ರಸಂಗ ಶುರುವಾದದ್ದು ಪ್ರತಿಷ್ಠಿತ ಸೌಂದರ್ಯವರ್ಧಕ ತಯಾರಿಕಾ ಕಂಪನಿ ರೆವ್ಲಾನ್ ಮತ್ತು ಅದರ ಸಾಲದಾತರ ನಡುವಿನ ತಿಕ್ಕಾಟದಿಂದ. ರೆವ್ಲಾನ್ ಕಂಪನಿಯು ಕೆಲವು ವರ್ಷಗಳ ಹಿಂದೆ ಸಾಲದಾತರ ಬಳಿ ದೊಡ್ಡ ಮೊತ್ತದ ಲೋನ್ ಪಡೆದಿದ್ದು ಅದನ್ನು 2023ಕ್ಕೆ ಹಿಂದಿರುಗಿಸುವ ಒಪ್ಪಂದ ಮಾಡಿಕೊಂಡಿತ್ತು.
ಈ ನಡುವೆ ಸಾಲದಾತರ ಲೋನ್ ಮೊತ್ತವನ್ನು ಕೂಡಲೇ ಹಿಂದಿರುಗಿಸಲು ಕೇಳಿಕೊಂಡಿದ್ದಾರಂತೆ. ಇದಕ್ಕೆ ರೆವ್ಲಾನ್ ಕಂಪನಿಯ ಆಡಳಿತ ಮಂಡಳಿ ನಿರಾಕರಿಸಿದೆ. ಹೀಗಾಗಿ, ಸಾಲದಾತರು ಕಂಪನಿಯ ವಿರುದ್ಧ ಕೋರ್ಟ್ನಲ್ಲಿ ಕೇಸ್ ದಾಖಲಿಸಿದ್ದರಂತೆ. ಜೊತೆಗೆ, ಸಾಲದ ಒಪ್ಪಂದದ ನಿರ್ವಹಣೆ ವಹಿಸಿಕೊಂಡಿದ್ದ ಸಿಟಿಗ್ರೂಪ್ ಕೇಸ್ನ ಮತ್ತೊಬ್ಬ ಪ್ರತಿವಾದಿಯಾಗಿ ಸೇರಿಸಿತ್ತು.
ಇದೀಗ, ಕೇಸ್ನ ವಿಚಾರಣೆ ಕೋರ್ಟ್ನಲ್ಲಿ ನಡೆಯುತ್ತಿರುವ ವೇಳೆಯಲ್ಲಿ ಈ ಪ್ರಸಂಗ ಸಂಭವಿಸಿದ್ದು ಇದೀಗ ಸಿಟಿಗ್ರೂಪ್ನ ಹಣವನ್ನ ವಾಪಸ್ ನೀಡಲು ಕೆಲವು ಸಾಲದಾತ ಸಂಸ್ಥೆಗಳು ಸುತರಾಂ ನಿರಾಕರಿಸಿದ್ದಾರಂತೆ. ರಸ್ತೆ ಬದಿಯಲ್ಲಿ ಹೋಗುವಾಗ ಹಣದ ಕಂತೆ ಸಿಕ್ಕಷ್ಟು ಸಂತೋಷದಲ್ಲಿರುವ ಸಂಸ್ಥೆಗಳಿಂದ ಮೊತ್ತ ವಾಪಸ್ ಪಡೆಯಲು ಸಿಟಿಗ್ರೂಪ್ ಪಡೆಬೇಕಾಗಿರುವ ಪಾಡು ಅಷ್ಟಿಷ್ಟಲ್ಲ.