AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾಕ್ಕೆ ಮತ್ತೊಂದು ಹೊಡೆತ! 24 ದೈತ್ಯ ಕಂಪನಿಗಳು ಭಾರತಕ್ಕೆ ಬರಲು ರೆಡಿ

ಕೊರೊನಾದಿಂದ ಬಸವಳಿದಿರುವ ಆರ್ಥಿಕತೆಗೆ ಇದು ನಿಜಕ್ಕೂ ಬೂಸ್ಟರ್! ಉದ್ಯೋಗಾವಕಾಶ ಮೊಟಕುಗೊಳಿಸಿರುವ ಕೊರೊನಾದಿಂದ ಬಳಲಿರುವ ಭಾರತಕ್ಕೆ ಇದು ಟಾನಿಕ್ ನೀಡಿದಂತೆ. ಬರೋಬ್ಬರಿ 24 ಕಂಪನಿಗಳು ಮೊಬೈಲ್ ಫೋನ್ ಕಾರ್ಖಾನೆಗಳು ಭಾರತದಲ್ಲಿ ತನ್ನ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಯೋಜಿಸುತ್ತಿವೆ. ಚೀನಾದಿಂದ ಹೊರಬರುವ ಈ ಕಂಪನಿಗಳನ್ನು ತನ್ನತ್ತ ಸೆಳೆಯುವ ಕೇಂದ್ರ ಸರ್ಕಾರದ ಪ್ರಯತ್ನಗಳು ಸಫಲಗೊಳ್ಳುತ್ತಿವೆ ಎನ್ನಬಹುದಾಗಿದೆ. ಎಲೆಕ್ಟ್ರಾನಿಕ್ಸ್ ವಿಭಾಗದ ದೈತ್ಯ ಕಂಪನಿಗಳಾದ ಸ್ಯಾಮ್‌ಸಂಗ್ ಮತ್ತು ಆಪಲ್ ಭಾರತಕ್ಕೆ ಬರಲು ಆಸಕ್ತಿ ತೋರಿವೆ. ಹಾಗೂ ಭಾರತದಲ್ಲಿ ಮೊಬೈಲ್ ಫೋನ್ ಕಾರ್ಖಾನೆಗಳನ್ನು ಸ್ಥಾಪಿಸಲು ಈ […]

ಚೀನಾಕ್ಕೆ ಮತ್ತೊಂದು ಹೊಡೆತ! 24 ದೈತ್ಯ ಕಂಪನಿಗಳು ಭಾರತಕ್ಕೆ ಬರಲು ರೆಡಿ
ಪ್ರಾತಿನಿಧಿಕ ಚಿತ್ರ
Follow us
ಸಾಧು ಶ್ರೀನಾಥ್​
|

Updated on: Aug 18, 2020 | 4:47 PM

ಕೊರೊನಾದಿಂದ ಬಸವಳಿದಿರುವ ಆರ್ಥಿಕತೆಗೆ ಇದು ನಿಜಕ್ಕೂ ಬೂಸ್ಟರ್! ಉದ್ಯೋಗಾವಕಾಶ ಮೊಟಕುಗೊಳಿಸಿರುವ ಕೊರೊನಾದಿಂದ ಬಳಲಿರುವ ಭಾರತಕ್ಕೆ ಇದು ಟಾನಿಕ್ ನೀಡಿದಂತೆ. ಬರೋಬ್ಬರಿ 24 ಕಂಪನಿಗಳು ಮೊಬೈಲ್ ಫೋನ್ ಕಾರ್ಖಾನೆಗಳು ಭಾರತದಲ್ಲಿ ತನ್ನ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಯೋಜಿಸುತ್ತಿವೆ. ಚೀನಾದಿಂದ ಹೊರಬರುವ ಈ ಕಂಪನಿಗಳನ್ನು ತನ್ನತ್ತ ಸೆಳೆಯುವ ಕೇಂದ್ರ ಸರ್ಕಾರದ ಪ್ರಯತ್ನಗಳು ಸಫಲಗೊಳ್ಳುತ್ತಿವೆ ಎನ್ನಬಹುದಾಗಿದೆ.

ಎಲೆಕ್ಟ್ರಾನಿಕ್ಸ್ ವಿಭಾಗದ ದೈತ್ಯ ಕಂಪನಿಗಳಾದ ಸ್ಯಾಮ್‌ಸಂಗ್ ಮತ್ತು ಆಪಲ್ ಭಾರತಕ್ಕೆ ಬರಲು ಆಸಕ್ತಿ ತೋರಿವೆ. ಹಾಗೂ ಭಾರತದಲ್ಲಿ ಮೊಬೈಲ್ ಫೋನ್ ಕಾರ್ಖಾನೆಗಳನ್ನು ಸ್ಥಾಪಿಸಲು ಈ ಕಂಪನಿಗಳು 1.5 ಬಿಲಿಯನ್ ಡಾಲರ್ ಹಣವನ್ನು ಹೂಡಿಕೆ ಮಾಡಲು ಸಿದ್ಧವಾಗಿವೆ ಎಂದು ತಿಳಿದುಬಂದಿದೆ.

ದೇಶದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಈ ಕಂಪನಿಗಳನ್ನು ಆಕರ್ಷಿಸುವಲ್ಲಿ ಭಾರತವು ವಿಯೆಟ್ನಾಂ, ಕಾಂಬೋಡಿಯಾ, ಮ್ಯಾನ್ಮಾರ್, ಬಾಂಗ್ಲಾದೇಶ ಮತ್ತು ಥೈಲ್ಯಾಂಡ್‌ನಂತಹ ದೇಶಗಳಿಗಿಂತ ಹಿಂದುಳಿದಿದೆ. ಆದಾಗ್ಯೂ, ಪಿಎಲ್ಐ ನೀತಿಯಿಂದಾಗಿ 153 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳ ಉತ್ಪಾದನೆಗೆ ಕಾರಣವಾಗಬಹುದು ಎನ್ನಲಾಗಿದೆ. ಜೊತೆಗೆ ಸುಮಾರು 10 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಬಹುದು ಎಂದು ಭಾರತ ಸರ್ಕಾರ ನಿರೀಕ್ಷಿಸಿದೆ.

ಈ ವರ್ಷದ ಮಾರ್ಚ್ನಲ್ಲಿ, ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಮೊಬೈಲ್ ಫೋನ್ ಉತ್ಪಾದನೆ ಮತ್ತು ನಿರ್ದಿಷ್ಟ ಎಲೆಕ್ಟ್ರಾನಿಕ್ ಘಟಕಗಳಲ್ಲಿ ದೊಡ್ಡ ಹೂಡಿಕೆಗಳನ್ನು ಆಕರ್ಷಿಸಲು ದೊಡ್ಡ ಪ್ರಮಾಣದ ಎಲೆಕ್ಟ್ರಾನಿಕ್ಸ್ ಉತ್ಪಾದನೆಗಾಗಿ, ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕ ಯೋಜನೆಯನ್ನು (production linked incentive scheme-PLI ಪಿಎಲ್ಐ) ಸರ್ಕಾರ ಘೋಷಿಸಿತ್ತು. ಈ ಯೋಜನೆಯು ಭಾರತದಲ್ಲಿರುವ ಕಂಪನಿಗಳು ಉತ್ಪಾದಿಸಲ್ಪಟ್ಟ ವಸ್ತುಗಳ ಮಾರಾಟ (ಮೂಲ ವರ್ಷಕ್ಕಿಂತ) ಶೇಕಡಾ 4 ರಿಂದ 6 ರವರೆಗೆ ಹೆಚ್ಚಾಗಲಿದೆ ಎನ್ನಲಾಗಿದೆ.