ಜಮ್ಮುವಿನಲ್ಲಿ ಪಾಕಿಸ್ತಾನದಿಂದ ಶೆಲ್ ದಾಳಿ; ಬಿಎಸ್ಎಫ್ ಯೋಧ ಸಾವು, 7 ಸೈನಿಕರಿಗೆ ಗಾಯ
ನಂಬಿಸಿ ಕುತ್ತಿಗೆ ಕೊಯ್ಯಲು ಪ್ರಯತ್ನಿಸಿದ ಪಾಕಿಸ್ತಾನದ ಡ್ರೋನ್ ದಾಳಿಯನ್ನು ತಡೆಯಲು ಭಾರತ ಸೇನೆ ಪ್ರಯತ್ನಿಸಿದೆ. ಆದರೆ, ಜಮ್ಮುವಿನ ಆರ್ಎಸ್ ಪುರದಲ್ಲಿ ನಡೆದ ಶೆಲ್ ದಾಳಿಯಲ್ಲಿ ಬಿಎಸ್ಎಫ್ ಎಸ್ಐ ಎಂಡಿ ಇಮ್ತಿಯಾಜ್ ಪ್ರಾಣ ಕಳೆದುಕೊಂಡಿದ್ದಾರೆ, ಇನ್ನೂ 7 ಸೈನಿಕರಿಗೆ ಗಾಯಗಳಾಗಿವೆ. ಅನಿರೀಕ್ಷಿತವಾಗಿ ಪಾಕಿಸ್ತಾನ ಈ ದಾಳಿ ನಡೆಸಿದ್ದರಿಂದ ಭಾರತ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಕೆಲವೆಡೆ ದಾಳಿಗಳು ನಡೆದಿವೆ. ಈ ಮೂಲಕ ಪಾಕಿಸ್ತಾನ ಯಾವುದೇ ಕಾರಣಕ್ಕೂ ನಂಬಿಕೆಗೆ ಅರ್ಹವಾದ ದೇಶವಲ್ಲ ಎಂಬುದನ್ನು ಆ ದೇಶವೇ ಸಾಬೀತುಪಡಿಸಿಕೊಂಡಿದೆ.
ಶ್ರೀನಗರ, ಮೇ 10: ಪಾಕಿಸ್ತಾನ ನಂಬಿಸಿ ಬೆನ್ನ ಹಿಂದೆ ಚೂರಿ ಹಾಕುವ ಬುದ್ಧಿಯನ್ನು ಮತ್ತೆ ಪ್ರದರ್ಶಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಬಳಿ ಬೇಡಿಕೊಂಡು ಭಾರತವನ್ನು ಕದನವಿರಾಮಕ್ಕೆ ಒಪ್ಪಿಸಿದ್ದ ಪಾಕಿಸ್ತಾನ ಭಾರತ ಕದನವಿರಾಮಕ್ಕೆ ಒಪ್ಪಿಕೊಂಡು ಸಂಜೆ 5 ಗಂಟೆಯಿಂದಲೇ ಗಡಿಯಲ್ಲಿ ಸಹಜಸ್ಥಿತಿ ನಿರ್ಮಾಣ ಮಾಡುವುದಾಗಿ ಘೋಷಿಸಿದ ಕೂಡಲೆ ಕಂತ್ರಿಯಂತೆ ಭಾರತದೊಳಗೆ ನುಗ್ಗಿ ಡ್ರೋನ್ ಹಾಗೂ ಶೆಲ್ ದಾಳಿ ನಡೆಸಿದೆ. ನಂಬಿಸಿ ಕುತ್ತಿಗೆ ಕೊಯ್ಯಲು ಪ್ರಯತ್ನಿಸಿದ ಪಾಕಿಸ್ತಾನದ ಡ್ರೋನ್ ದಾಳಿಯನ್ನು ತಡೆಯಲು ಭಾರತ ಸೇನೆ ಪ್ರಯತ್ನಿಸಿದೆ. ಆದರೆ, ಜಮ್ಮುವಿನ ಆರ್ಎಸ್ ಪುರದಲ್ಲಿ ನಡೆದ ಶೆಲ್ ದಾಳಿಯಲ್ಲಿ ಬಿಎಸ್ಎಫ್ ಎಸ್ಐ ಎಂಡಿ ಇಮ್ತಿಯಾಜ್ ಪ್ರಾಣ ಕಳೆದುಕೊಂಡಿದ್ದಾರೆ, ಇನ್ನೂ 7 ಸೈನಿಕರಿಗೆ ಗಾಯಗಳಾಗಿವೆ. ಅನಿರೀಕ್ಷಿತವಾಗಿ ಪಾಕಿಸ್ತಾನ ಈ ದಾಳಿ ನಡೆಸಿದ್ದರಿಂದ ಭಾರತ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಕೆಲವೆಡೆ ದಾಳಿಗಳು ನಡೆದಿವೆ. ಈ ಮೂಲಕ ಪಾಕಿಸ್ತಾನ ಯಾವುದೇ ಕಾರಣಕ್ಕೂ ನಂಬಿಕೆಗೆ ಅರ್ಹವಾದ ದೇಶವಲ್ಲ ಎಂಬುದನ್ನು ಆ ದೇಶವೇ ಸಾಬೀತುಪಡಿಸಿಕೊಂಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ

