AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತಿಥಿ ದೇವೋ ಭವ, ಈ ಆಟೋ ಡ್ರೈವರ್ ವಿದೇಶಿ ಮಹಿಳೆಗೆ ಕೊಟ್ಟ ಗೌರವ ನೋಡಿ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವಿಡಿಯೋಗಳು ಕೆಲವೊಮ್ಮೆ ನಮ್ಮ ಗಮನ ಸೆಳೆಯುತ್ತಿದೆ. ಕೆಲವು ದೃಶ್ಯಗಳನ್ನು ಕಂಡಾಗ ಇವತ್ತಿಗೂ ಮಾನವೀಯತೆ ಜೀವಂತವಾಗಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಆಟೋದಲ್ಲಿ ಪ್ರಯಾಣಿಸಿದ ವಿದೇಶಿ ಮಹಿಳೆಯ ಕೈಯಲ್ಲಿ ಹಣವಿಲ್ಲದೇ ಇದ್ದರೂ ತಲುಪಬೇಕಾದ ಸಸ್ಥಳಕ್ಕೆ ಬಿಟ್ಟು, ಆಟೋ ಚಾಲಕನು ನಗು ಮೊಗದಿಂದಲೇ ಮಾತನಾಡಿಸಿ ಪರವಾಗಿಲ್ಲ ಎನ್ನುತ್ತಾ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ. ಈ ಹೃದಯ ಸ್ಪರ್ಶಿ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ವ್ಯಕ್ತಿಯನ್ನು ಮೆಚ್ಚಿಕೊಂಡಾಡಿದ್ದಾರೆ.

ಅತಿಥಿ ದೇವೋ ಭವ, ಈ ಆಟೋ ಡ್ರೈವರ್ ವಿದೇಶಿ ಮಹಿಳೆಗೆ ಕೊಟ್ಟ ಗೌರವ ನೋಡಿ
ವೈರಲ್ ವಿಡಿಯೋ Image Credit source: Instagram
ಸಾಯಿನಂದಾ
|

Updated on: May 11, 2025 | 11:11 AM

Share

ಈಗಿನ ಕಾಲದಲ್ಲಿ ಒಳ್ಳೆತನ ಹಾಗೂ ಮಾನವೀಯತೆ (humanity) ಗೆ ಬೆಲೆಯಿಲ್ಲ ಎಂದು ಹೇಳುವುದನ್ನು ನೋಡಿರಬಹುದು. ಕೈಯಲ್ಲಿ ದುಡ್ಡಿದ್ದರೆ ಮಾತ್ರ ಎಲ್ಲರೂ ನಿಮ್ಮನ್ನು ಗೌರವದಿಂದ ಕಾಣುತ್ತಾರೆ. ಆದರೆ ಕೆಲವೊಂದು ವಿಡಿಯೋಗಳನ್ನು ಕಂಡಾಗ ಈ ಜಗತ್ತಿನಲ್ಲಿ ಕಷ್ಟಕ್ಕೆ ಮಿಡಿಯುವ ಮಾನವೀಯ ಗುಣವುಳ್ಳ ವ್ಯಕ್ತಿಗಳು ಇದ್ದಾರೆ ಎನಿಸುತ್ತದೆ. ಇದಕ್ಕೆ ಈ ವಿಡಿಯೋವು ಸಾಕ್ಷಿಯಾಗಿದೆ. ಹೌದು, ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಆಟೋಚಾಲಕನ ಬಳಿ ವಿದೇಶಿ ಮಹಿಳೆ (foreign women) ಯೂ ಕೈಯಲ್ಲಿ ದುಡ್ಡಿಲ್ಲ ಎಂದಿದ್ದು ನಗುತ್ತಲೇ ಪರವಾಗಿಲ್ಲ ಎನ್ನುತ್ತಾ ತನ್ನ ಕೈಯಲ್ಲಿ ದುಡ್ಡಿಲ್ಲ ಎಂದು ನೇರವಾಗಿ ಹೇಳಿದ್ದಾಳೆ. ಈ ಆಟೋ ಚಾಲಕ (auto driver) ನು ಮಹಿಳೆಗೆ ಬೈಯದೇ ನಗುತ್ತಲೇ ಆಕೆಗೆ ಪರವಾಗಿಲ್ಲ ಎಂದು ಹೇಳಿದ್ದು ಈ ಘಟನೆಗೆ ಸಂಬಂಧ ಪಟ್ಟ ವಿಡಿಯೋವೊಂದು ವೈರಲ್ ಆಗಿದೆ.

taragivingjoyfully ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ದೆಹಲಿಗೆ ಬಂದಿದ್ದ ವಿದೇಶಿ ಮಹಿಳೆಯೊಬ್ಬರು, ಆಟೋದಲ್ಲಿ ಪ್ರಯಾಣಿಸಿದ್ದಾಳೆ. ಆದರೆ ಆಕೆಯ ಬಳಿಉಲ್ಲಿ ಹಣ ಇರಲಿಲ್ಲ. ಈ ವಿದೇಶಿ ಮಹಿಳೆಯ ಬಳಿ ಆಟೋ ಚಾರ್ಜ್ ಕೇಳಿದ್ದು, ಆಕೆ ತನ್ನ ಬಳಿ ಹಣವಿಲ್ಲ ಎನ್ನುವುದನ್ನು ಹೇಳಿದ್ದಾಳೆ. ಅಷ್ಟೇ ಅಲ್ಲದೇ ಕರೆನ್ಸಿಯನ್ನು ಬದಲಾಯಿಸಲು ಎಲ್ಲದರೂ ನಿಲ್ಲಿಸುವಂತೆ ಹೇಳಿದ್ದು, ಪರವಾಗಿಲ್ಲ, ನೀವು ಹೋಗಿ, ನನಗೆ ಚಾರ್ಜ್ ಕೊಡುವುದು ಬೇಡ ಎಂದು ಹೇಳಿದ್ದು ಈ ವ್ಯಕ್ತಿಯ ಮಾತು ಕೇಳಿ ವಿದೇಶಿ ಮಹಿಳೆಯೂ ಶಾಕ್ ಆಗಿದ್ದಾಳೆ. ಈ ವ್ಯಕ್ತಿಯೂ ತುಂಬಾ ಒಳ್ಳೆಯ ವ್ಯಕ್ತಿ, ಹೀಗಾಗಿ ಇವನಿಗೆ ತನ್ನಿಂದ ಆದ ಸಹಾಯ ಮಾಡುತ್ತೇನೆ. ಆ ದೇವರು ಒಳ್ಳೆಯದು ಮಾಡಲಿ ಎಂದು ಕೊನೆಯ ತನ್ನ ಕೈಯಲ್ಲಿದ್ದ 2,000 ರೂ. ನೀಡುವ ಮೂಲಕ ಒಳ್ಳೆಯ ಮನಸ್ಸಿನ ವ್ಯಕ್ತಿಗೆ ಸಹಾಯ ಮಾಡಿದ್ದಾಳೆ.

ಇದನ್ನೂ ಓದಿ
Image
ಐಷಾರಾಮಿ ಮನೆಗಿಂತ ಸಣ್ಣ ಅಪಾರ್ಟ್ಮೆಂಟ್ ಗಳೇ ಬೆಸ್ಟ್, ಅಸಲಿ ವಿಚಾರ ಇಲ್ಲಿದೆ
Image
ಬಾಯಿ ಚಪ್ಪರಿಸಿಕೊಂಡು ತಿನ್ನುವ ಬಿರಿಯಾನಿಗೆ ಈ ಹೆಸರು ಬಂದದ್ದು ಹೇಗೆ?
Image
ಕಲ್ಲಿನಿಂದ ನ್ಯಾಚುರಲ್‌ ಮೆಹಂದಿ ರೆಡಿ ಮಾಡಿದ ಯುವತಿ
Image
ತಾಯಿ ಶ್ವಾನದ ಕೈಕಾಲು ಹಿಡಿದು ಮರಿಗಳಿಗೆ ಎದೆ ಹಾಲು ಕುಡಿಸಿದ ಹುಡುಗ್ರು

ಇದನ್ನೂ ಓದಿ :ಐಷಾರಾಮಿ ಮನೆಗಿಂತ ಸಣ್ಣ ಅಪಾರ್ಟ್ಮೆಂಟ್ ಗಳೇ ಬೆಸ್ಟ್, ಅಸಲಿ ವಿಚಾರ ಬಹಿರಂಗ ಪಡಿಸಿದ ಭಾರತೀಯ ಮಹಿಳೆ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋ ವೊಂದು ಇಪ್ಪತ್ತೋಂಭತ್ತು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡುವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ‘ಆಟೋ ಚಾಲಕನನಗುವಿನಲ್ಲೇ ಮುಗ್ದ ತೆ ಅಡಗಿದೆ. ಆತನ ಒಳ್ಳೆಯ ಮನಸ್ಸಿಗೆ ದೇವರು ಖಂಡಿತ ಒಳ್ಳೆಯದ್ದನ್ನೇ ಮಾಡುತ್ತಾನೆ’ ಎಂದಿದ್ದಾರೆ. ಇನ್ನೊಬ್ಬರು, ‘ಭಾರತೀಯರ ಮನಸ್ಸುಗಳೇ ಹಾಗೆ ಕಷ್ಟ ಎಂದರೆ ಒಂದು ಕ್ಷಣ ಮಿಡಿಯುತ್ತಾರೆ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನೀವು ನಿಜಕ್ಕೂ ತುಂಬಾ ಒಳ್ಳೆಯವರು, ಒಳ್ಳೆಯ ಮನಸ್ಸಿನ ವ್ಯಕ್ತಿಗಳು ಭೇಟಿಯಾದಾಗ ಮಾತ್ರ ಇಂತಹ ಘಟನೆಗಳು ನಡೆಸಲು ಸಾಧ್ಯ ಎಂದಿದ್ದಾರೆ. ಇನ್ನು ಕೆಲವರು ಈ ಆಟೋ ಚಾಲಕನ ಒಳ್ಳೆತನಕ್ಕೆ ಕಾಮೆಂಟ್ ಗಳ ಮಹಾಪೂರವೇ ಹರಿದು ಬಂದಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು