AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಫೇಲ್​ನಿಂದ ಹಿಡಿದು ಧಾರ್ಮಿಕ ಸ್ಥಳಗಳ ಮೇಲಿನ ದಾಳಿವರೆಗೆ ಶೆಹಬಾಜ್ ಬಾಯಿಂದ ಬಂದ ಸುಳ್ಳಿನ ಸರಮಾಲೆ

ಭಾರತ ಪಾಕಿಸ್ತಾನದಲ್ಲಿ ನಡೆಸಿದ ಆಪರೇಷನ್​ ಸಿಂಧೂರ್​ ಬಳಿಕ ಪಾಕಿಸ್ತಾನದ ಪ್ರಧಾನಿ ಅಲ್ಲಿಯ ಜನರಲ್ಲಿ ವಿಜಯದ ಭಾವನೆಯನ್ನು ಮೂಡಿಸುವಲ್ಲಿ ನಿರತರಾಗಿದ್ದಾರೆ. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್​ ಭಾನುವಾರ ರಾತ್ರಿ ಮಾಡಿದ ಭಾಷಣದಲ್ಲಿ ಭಾರತದ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.ಶೆಹಬಾಜ್ ಷರೀಫ್ ತಮ್ಮ ಭಾಷಣದಲ್ಲಿ ಪಾಕಿಸ್ತಾನ ವಾಯುಪಡೆಯು ಭಾರತದ ರಫೇಲ್ ಯುದ್ಧ ವಿಮಾನಗಳನ್ನು ಗುರಿಯಾಗಿಸಿಕೊಂಡು ಅವುಗಳನ್ನು ನಿಷ್ಕ್ರಿಯಗೊಳಿಸಿದೆ ಎಂದು ಹೇಳಿದ್ದರು.

ರಫೇಲ್​ನಿಂದ ಹಿಡಿದು ಧಾರ್ಮಿಕ ಸ್ಥಳಗಳ ಮೇಲಿನ ದಾಳಿವರೆಗೆ ಶೆಹಬಾಜ್  ಬಾಯಿಂದ ಬಂದ ಸುಳ್ಳಿನ ಸರಮಾಲೆ
ಶೆಹಬಾಜ್
ನಯನಾ ರಾಜೀವ್
|

Updated on: May 11, 2025 | 8:00 AM

Share

ಇಸ್ಲಾಮಾಬಾದ್, ಮೇ 11: ಪೆಹಲ್ಗಾಮ್(Pahalgam) ದಾಳಿಯ ಪ್ರತೀಕಾರವಾಗಿ ಭಾರತವು ಆಪರೇಷನ್ ಸಿಂಧೂರ್(Operation Sindoor) ಹೆಸರಿನಲ್ಲಿ ಪಾಕಿಸ್ತಾನದ ಉಗ್ರರ ತಾಣಗಳ ಮೇಲೆ ದಾಳಿ ನಡೆಸಿತ್ತು. 100ಕ್ಕೂ ಅಧಿಕ ಉಗ್ರರನ್ನು ಹತ್ಯೆಗೈದಿತ್ತು. ಆದರೆ ಪಾಕಿಸ್ತಾನ ಇದಕ್ಕೆ ಪ್ರತಿಯಾಗಿ ಮತ್ತಷ್ಟು ಅಮಾಯಕರನ್ನು ಹತ್ಯೆಗೈದಿತ್ತು. ಭಾರತದ ಮೇಲೆ ನಿರಂತರ ದಾಳಿ ನಡೆಸುತ್ತಲೇ ಇದೆ. ಭಾರತವು ಅದಕ್ಕೆ ತಕ್ಕ ಉತ್ತರ ಕೊಟ್ಟಿದೆ. ಆದರೆ ಭಾರತವು ಅಮಾಯಕ ನಾಗರಿಕರಾಗಲಿ, ಧಾರ್ಮಿಕ ಸ್ಥಳಗಳನ್ನಾಗಲು ಗುರಿಯಾಗಿಸಿ ದಾಳಿ ಮಾಡಿಲ್ಲ ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿದೆ. ಆದರೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್​ ಭಾರತವ ವಿರುದ್ಧ ಸುಳ್ಳುಗಳ ಸರಮಾಲೆಯನ್ನೇ ಹೆಣೆದಿದ್ದಾಎ. ಅವರು ಹೇಳಿರುವ ಸುಳ್ಳು ಮತ್ತು ಇರುವ ಸತ್ಯಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

ಭಾರತ ಪಾಕಿಸ್ತಾನದಲ್ಲಿ ನಡೆಸಿದ ಆಪರೇಷನ್​ ಸಿಂಧೂರ್​ ಬಳಿಕ ಪಾಕಿಸ್ತಾನದ ಪ್ರಧಾನಿ ಅಲ್ಲಿಯ ಜನರಲ್ಲಿ ವಿಜಯದ ಭಾವನೆಯನ್ನು ಮೂಡಿಸುವಲ್ಲಿ ನಿರತರಾಗಿದ್ದಾರೆ. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್​ ಭಾನುವಾರ ರಾತ್ರಿ ಮಾಡಿದ ಭಾಷಣದಲ್ಲಿ ಭಾರತದ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.

ಇದನ್ನೂ ಓದಿ
Image
ಕದನವಿರಾಮ ಉಲ್ಲಂಘಿಸಿದ ಪಾಕಿಸ್ತಾನ; ತೀವ್ರ ಕ್ರಮಕ್ಕೆ ಭಾರತೀಯ ಸೇನೆಗೆ ಸೂಚನೆ
Image
ಸೂಕ್ಷ್ಮ ಸಂದರ್ಭದಲ್ಲಿ ಏನೋನೋ ಮಾತನಾಡಿದ್ರೆ ಏನೇನು ಅವಾಂತರವಾಗುತ್ತೆ ನೋಡಿ
Image
ಭಾರತ-ಪಾಕ್​ ಉದ್ವಿಗ್ನತೆ ಶಮನಕ್ಕೆ ಜೈಶಂಕರ್ ಜತೆ ಮಾತುಕತೆ
Image
ಪಾಕಿಸ್ತಾನದ ಸುಳ್ಳಿನ ಸರಮಾಲೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಭಾರತ

ಮೊದಲನೆಯ ಸುಳ್ಳು, ರಫೇಲ್​ ಹೊಡೆದುರುಳಿಸಲಾಗಿದೆ ಡಾನ್ ವರದಿ ಪ್ರಕಾರ, ಶೆಹಬಾಜ್ ಷರೀಫ್ ತಮ್ಮ ಭಾಷಣದಲ್ಲಿ ಪಾಕಿಸ್ತಾನ ವಾಯುಪಡೆಯು ಭಾರತದ ರಫೇಲ್ ಯುದ್ಧ ವಿಮಾನಗಳನ್ನು ಗುರಿಯಾಗಿಸಿಕೊಂಡು ಅವುಗಳನ್ನು ನಿಷ್ಕ್ರಿಯಗೊಳಿಸಿದೆ ಎಂದು ಹೇಳಿದ್ದರು. ಅಂತಹ ಯಾವುದೇ ಘಟನೆಯನ್ನು ಭಾರತೀಯ ವಾಯುಪಡೆ ಅಥವಾ ರಕ್ಷಣಾ ಸಚಿವಾಲಯ ದೃಢಪಡಿಸಿಲ್ಲ ಅಥವಾ ಅಂಥಾ ನಷ್ಟದ ಕುರಿತು ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.

ಮತ್ತಷ್ಟು ಓದಿ: ಕದನವಿರಾಮ ಉಲ್ಲಂಘಿಸಿದ ಪಾಕಿಸ್ತಾನ; ಸೂಕ್ತ ಕ್ರಮಕ್ಕೆ ಭಾರತೀಯ ಸೇನೆಗೆ ಸೂಚನೆ

ಭಾರತವು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಸ್ವಲ್ಪ ಹೊತ್ತಲ್ಲೇ ಪಾಕಿಸ್ತಾನವು ಭಾರತದ ಮಿಲಿಟರಿ ಸೌಕರ್ಯಗಳನ್ನು ನಾಶಪಡಿಸಿತು ಎಂದು ಷರೀಫ್ ಹೇಳಿಕೊಂಡಿದ್ದಾರೆ. ಆದರೆ ಸತ್ಯವೇನೆಂದರೆ ಪಾಕಿಸ್ತಾನ ಹೆಚ್ಚಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯು ತಡೆಹಿಡಿದಿತ್ತು.

ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಸುಳ್ಳು ಭಾರತವು ಧಾರ್ಮಿಕ ಸ್ಥಳಗಳು ಹಾಗೂ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ ಎಂದು ಶೆಹಬಾಜ್ ಷರೀಫ್​ ಹೇಳಿದ್ದು ಸುಳ್ಳು. ಎಲ್ಲಾ ಉದ್ದೇಶಿತ ದಾಳಿಗಳನ್ನು ಭಯೋತ್ಪಾದಕ ಮೂಲಸೌಕರ್ಯ ಮತ್ತು ಅಡಗುತಾಣಗಳ ಮೇಲೆ ನಡೆಸಲಾಗಿದೆ. ಸೇನೆಯ ನೀತಿಯು ಸಂವಿಧಾನದ ಆಶಯಕ್ಕೆ ಅನುಗುಣವಾಗಿದೆ ಮತ್ತು ನಾಗರಿಕ ಅಥವಾ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡಿಲ್ಲ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ