Petrol Diesel Price: ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ.. ಎಷ್ಟಾಗಿರಬಹುದು ಇಂಧನ ಬೆಲೆ?
Petrol Rate in Bengaluru: ಪೆಟ್ರೋಲ್, ಡೀಸೆಲ್ ದರ ತೀವ್ರವಾಗಿ ಬದಲಾಗುತ್ತಿರುವ ಕಾರಣ ಇದು ಸಾರ್ವಜನಿಕರಿಗೆ ಅನಾನುಕೂಲವನ್ನು ತಂದೊಡ್ಡುತ್ತದೆ. ಈ ಹಿಂದೆ ಪೆಟ್ರೋಲ್ ಮತ್ತು ಡೀಸೆಲ್ ದರ ಕೊಂಚ ಇಳಿಕೆಯತ್ತ ಸಾಗುತ್ತಿದ್ದಂತೆ ಕಂಡರೂ ಒಮ್ಮೆಲೆ ದರ ಏರಿಕೆಯಾಗುತ್ತಿತ್ತು.
ಬೆಂಗಳೂರು: ಪೆಟ್ರೋಲ್, ಡೀಸೆಲ್ ಸೇರಿದಂತೆ ಇತರ ಇಂಧನವು ಜನಸಾಮಾನ್ಯರ ದೈನಂದಿನ ಅಗತ್ಯಗಳಲ್ಲಿ ಒಂದು. ಕಚ್ಚಾ ತೈಲದ ಅಂತರಾಷ್ಟ್ರೀಯ ಬೆಲೆಗೆ ಅನುಗುಣವಾಗಿ ಪೆಟ್ರೋಲ್ ಡೀಸೆಲ್ ದರವನ್ನು ನಿರ್ಧರಿಸಲಾಗುತ್ತದೆ. ತಿಂಗಳಿಗೆ ಎರಡು ಬಾರಿ ಪೆಟ್ರೋಲ್, ಡೀಸೆಲ್ ದರವನ್ನು ನಿರ್ಧರಿಸಲಾಗುತ್ತಿತ್ತು. ಈ ವಿಧಾನ ಸುಮಾರು 15 ವರ್ಷಗಳವರೆಗೆ ಚಾಲ್ತಿಯಲ್ಲಿತ್ತು. ತದ ನಂತರ ದೈನಂದಿನ ಪೆಟ್ರೋಲ್, ಡೀಸೆಲ್ ದರವನ್ನು ಪರಿಚಯಿಸಲಾಯಿತು ಹಾಗೂ ಇದರ ಜವಾಬ್ದಾರಿಯನ್ನು ತೈಲ ಕಂಪನಿಗಳಿಗೆ ಹಸ್ತಾಂತರಿಸಲಾಗಿದೆ.
ಪೆಟ್ರೋಲ್, ಡೀಸೆಲ್ ದರ ತೀವ್ರವಾಗಿ ಬದಲಾಗುತ್ತಿರುವ ಕಾರಣ ಇದು ಸಾರ್ವಜನಿಕರಿಗೆ ಅನಾನುಕೂಲವನ್ನು ತಂದೊಡ್ಡುತ್ತಿದೆ. ಏಪ್ರಿಲ್ 15 ನೇ ತಾರೀಕು ಅಂದರೆ ನಿನ್ನೆ ಗುರುವಾರ ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲಿಗೆ 16 ಪೈಸೆ, ಹಾಗೂ ಪ್ರತಿ ಲೀಟರ್ ಡೀಸೆಲಿಗೆ 15 ಪೈಸೆ ಇಳಿಕೆಯಾಗಿದೆ.
ಇದಾದ ನಂತರ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 93 ರೂಪಾಯಿ 43 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ದರ 85 ರೂಪಾಯಿ 60 ಪೈಸೆಗೆ ಇಳಿಕೆಯಾಗಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 16 ಪೈಸೆ ಕಡಿಮೆಯಾಗಿ 90 ರೂಪಾಯಿ 40 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ದರದಲ್ಲಿ 14 ಪೈಸೆ ಕಡಿಮೆಯಾಗಿ 80 ರೂಪಾಯಿ 73 ಪೈಸೆಗೆ ತಲುಪಿದೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 96 ರೂಪಾಯಿ 83 ಪೈಸೆ ಇದೆ. ಅದೇ ರೀತಿ ಪ್ರತಿ ಲೀಟರ್ ಡೀಸೆಲ್ ದರ 87 ರೂಪಾಯಿ 81 ಪೈಸೆಯಷ್ಟಿದೆ.
ಕಳೆದ ಮಾರ್ಚ್ ತಿಂಗಳ ಕೊನೆಯ 30ನೇ ತಾರೀಕಿನಂದು ಪೆಟ್ರೋಲ್, ಡೀಸೆಲ್ ದರವನ್ನು ಕಡಿತಗೊಳಿಸಲಾಗಿತ್ತು. ತದ ನಂತರ ದೆಹಲಿಯಲ್ಲಿ ಪ್ರತಿ ಲಿಟರ್ ಪೆಟ್ರೋಲ್ ದರ 22 ಪೈಸೆ ಹಾಗೂ ಡೀಸೆಲ್ನಲ್ಲಿ 23 ಪೈಸೆ ಕಡಿತಗೊಳಿಸಲಾಯಿತು. ಒಟ್ಟು ಮೂರು ಬಾರಿ ಮಾರ್ಚ್ನಲ್ಲಿ ಇಂಧನ ದರ ಕಡಿತದಿಂದಾಗಿ ಪೆಟ್ರೋಲ್ ದರದಲ್ಲಿ ಒಟ್ಟು 61 ಪೈಸೆ ಹಾಗೂ ಡೀಸೆಲ್ ದರದಲ್ಲಿ ಒಟ್ಟು 60 ಪೈಸೆ ಕಡಿಮೆಯಾಗಿದೆ. ಇಂಧನ ದರವನ್ನು ಕಡಿತಗೊಳಿಸಲು ಪ್ರಮುಖ ಕಾರಣವೆಂದರೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿತಗೊಂಡಿರುವುದು. ಕಚ್ಚಾ ತೈಲ ದರ ಬ್ಯಾರೆಲ್ಗೆ 71 ಡಾಲರ್ನಿಂದ ಬ್ಯಾರೆಲ್ಗೆ 63 ಡಾಲರ್ಗೆ ಕುಸಿದಿದೆ. ಕಳೆದ ಫೆಬ್ರವರಿ ತಿಂಗಳಿನಲ್ಲಿ 16 ಬಾರಿ ಪೆಟ್ರೋಲ್, ಡೀಸೆಲ್ ದರವನ್ನು ಏರಿಸಲಾಗಿತ್ತು. ಅದಾದ ನಂತರದಲ್ಲಿ ಪೆಟ್ರೋಲ್, ಡೀಸೆಲ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.
ವಿವಿಧ ನಗರದ ಪೆಟ್ರೋಲ್ ದರ ಎಷ್ಟಿದೆ ಎಂಬ ಕುತೂಹಲವಿದ್ದರೆ ದರದ ಮಾಹಿತಿ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ
https://tv9kannada.com/business/petrol-price-today.html
ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ
https://tv9kannada.com/business/diesel-price-today.html
ಇದನ್ನೂ ಓದಿ: Petrol Diesel Price: ಗ್ರಾಹಕರು ಕೊಂಚ ನಿರಾಳ.. ಪೆಟ್ರೋಲ್ ದರದಲ್ಲಿ 18 ಪೈಸೆ ಇಳಿಕೆ!