AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fixed Deposits: ಫಿಕ್ಸೆಡ್ ಡೆಪಾಸಿಟ್​ಗಳ ಮೇಲಿನ ಬಡ್ಡಿ ದರ ಹೆಚ್ಚಳ ಮಾಡಿದ ಎಸ್​ಬಿಐ; ಇತರ ಪ್ರಮುಖ ಬ್ಯಾಂಕ್​ಗಳಲ್ಲಿ ಎಷ್ಟಿದೆ?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ನಿಶ್ಚಿತ ಠೇವಣಿ ಮೇಲಿನ ಬಡ್ಡಿ ದರ ಹೆಚ್ಚಳ ಮಾಡಿದೆ. ಇತರ ಪ್ರಮುಖ ಬ್ಯಾಂಕ್​ಗಳಲ್ಲಿ ಎಫ್​ಡಿ ಬಡ್ಡಿ ದರ ಎಂಬುದರ ಹೋಲಿಕೆ ಇಲ್ಲಿದೆ.

Fixed Deposits: ಫಿಕ್ಸೆಡ್ ಡೆಪಾಸಿಟ್​ಗಳ ಮೇಲಿನ ಬಡ್ಡಿ ದರ ಹೆಚ್ಚಳ ಮಾಡಿದ ಎಸ್​ಬಿಐ; ಇತರ ಪ್ರಮುಖ ಬ್ಯಾಂಕ್​ಗಳಲ್ಲಿ ಎಷ್ಟಿದೆ?
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Jan 17, 2022 | 12:54 PM

Share

ದೇಶದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಶನಿವಾರದಂದು 10 ಬೇಸಿಸ್ ಪಾಯಿಂಟ್ ಅಥವಾ ಶೇ 0.10ರ ವರೆಗೆ ನಿಶ್ಚಿತ ಠೇವಣಿ (Fixed Deposits) ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ ಎಂದು ಘೋಷಿಸಿತು. ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ವೆಬ್‌ಸೈಟ್ ಪ್ರಕಾರ, 1 ವರ್ಷದ ಮೇಲ್ಪಟ್ಟು 2 ವರ್ಷಗಳಿಗಿಂತ ಕಡಿಮೆ ಅವಧಿಯ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ 5.0ರಿಂದ ಶೇ 5.1ಕ್ಕೆ ಹೆಚ್ಚಿಸಲಾಗಿದೆ. ಹಿರಿಯ ನಾಗರಿಕರಿಗೆ ದರವನ್ನು ಶೇ 5.50ರಿಂದ ಶೇ 5.60ಕ್ಕೆ ಹೆಚ್ಚಿಸಲಾಗಿದೆ.

ಎಚ್​ಡಿಎಫ್​ಸಿ ಬ್ಯಾಂಕ್ ಇತ್ತೀಚಿನ ಎಫ್​ಡಿ ಬಡ್ಡಿ ದರ ಜನವರಿ 12, 2022ರಿಂದ ಜಾರಿಗೆ ಬರುತ್ತವೆ ಎಚ್‌ಡಿಎಫ್‌ಸಿ ಬ್ಯಾಂಕ್ ನಿಶ್ಚಿತ ಠೇವಣಿಗಳ (ಎಫ್‌ಡಿ) ಬಡ್ಡಿದರವನ್ನು ಹೆಚ್ಚಿಸಿದೆ. ಹೆಚ್ಚಿದ ಬಡ್ಡಿ ದರಗಳು ಜನವರಿ 12, 2022ರಿಂದ ಪ್ರಾರಂಭ ಆಗುವ ಎಫ್​ಡಿಗಳಿಗೆ ಅನ್ವಯಿಸುತ್ತವೆ. ಎಚ್​ಡಿಎಫ್​ಸಿ ಬ್ಯಾಂಕ್ ಆಯ್ದ ಅವಧಿಗಳ ಮೇಲಿನ ದರಗಳನ್ನು ಹೆಚ್ಚಿಸಿದೆ. 2 ವರ್ಷದಿಂದ 3 ವರ್ಷಗಳಲ್ಲಿ ಮೆಚ್ಯೂರ್ ಆಗುವ ಫಿಕ್ಸೆಡ್​ ಡೆಪಾಸಿಟ್​ಗಳು ಈಗ ಶೇ 5.20ರಷ್ಟು ನೀಡುತ್ತದೆ. ಬ್ಯಾಂಕ್ 3 ವರ್ಷದಿಂದ 5 ವರ್ಷಗಳವರೆಗೆ ಮೆಚ್ಯೂರ್ ಆಗುವ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ. ಈ ಠೇವಣಿಗಳು ಶೇ 5.40ರಷ್ಟು, ಮೆಚ್ಯೂರಿಟಿ ಅವಧಿ 5 ವರ್ಷದಿಂದ 10 ವರ್ಷಗಳವರೆಗೆ ಶೇ 5.60ರಷ್ಟು ಬಡ್ಡಿಯನ್ನು ನೀಡುತ್ತವೆ. ಇತರ ಅವಧಿಯ ಎಫ್​ಡಿ ಮೇಲಿನ ಬಡ್ಡಿ ದರಗಳು ಬದಲಾಗದೆ ಇರುತ್ತವೆ.

ಕೊಟಕ್ ಮಹೀಂದ್ರಾ ಬ್ಯಾಂಕ್​ನ ಇತ್ತೀಚಿನ ಎಫ್​ಡಿ ಬಡ್ಡಿ ದರ ಜನವರಿ 6, 2022ರಿಂದ ಜಾರಿಗೆ ಬರುತ್ತವೆ ಕೊಟಕ್ ಮಹೀಂದ್ರಾ ಬ್ಯಾಂಕ್ ವಿವಿಧ ಅವಧಿಗಳಲ್ಲಿ ನಿಶ್ಚಿತ ಠೇವಣಿಗಳ (ಎಫ್‌ಡಿ) ಬಡ್ಡಿ ದರವನ್ನು ಹೆಚ್ಚಿಸಿದೆ. ಇತ್ತೀಚಿನ ಪರಿಷ್ಕರಣೆಯ ನಂತರ 7 ರಿಂದ 30 ದಿನಗಳು, 31 ರಿಂದ 90 ದಿನಗಳು ಮತ್ತು 91 ರಿಂದ 120 ದಿನಗಳಲ್ಲಿ ಮೆಚ್ಯೂರ್ ಆಗುವ ಎಫ್​ಡಿಗಳಿಗೆ ಕ್ರಮವಾಗಿ ಶೇ 2.5, ಶೇ 2.75 ಮತ್ತು ಶೇ 3ರ ಬಡ್ಡಿದರವನ್ನು ನೀಡುತ್ತದೆ.

ಐಸಿಐಸಿಐ ಬ್ಯಾಂಕ್ ಇತ್ತೀಚಿನ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರಗಳು ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್ 7 ದಿನಗಳಿಂದ 10 ವರ್ಷಗಳವರೆಗೆ ನಿಶ್ಚಿತ ಠೇವಣಿಗಳ (ಎಫ್‌ಡಿ) ಬಡ್ಡಿದರಗಳನ್ನು ಪರಿಷ್ಕರಿಸಿದೆ. ಈ ಪರಿಷ್ಕೃತ ಬಡ್ಡಿದರಗಳು ಹೊಸ ಠೇವಣಿಗಳಿಗೆ ಮತ್ತು ಅಸ್ತಿತ್ವದಲ್ಲಿರುವ ಅವಧಿಯ ಠೇವಣಿಗಳ ರಿನೀವಲ್​ಗೆ ಅನ್ವಯಿಸುತ್ತವೆ. ದೇಶೀಯ ಮತ್ತು NRO ಠೇವಣಿಗಳಿಗೆ ಐಸಿಐಸಿಐ ಬ್ಯಾಂಕ್‌ನ ಕನಿಷ್ಠ ಅವಧಿಯು 7 ದಿನಗಳು ಮತ್ತು ಠೇವಣಿ ಮಾಡಿದ ದಿನಾಂಕದಿಂದ 7 ದಿನಗಳ ಅವಧಿಯೊಳಗೆ ಅಕಾಲಿಕವಾಗಿ ಹಿಂತೆಗೆದುಕೊಳ್ಳುವ ಠೇವಣಿಗಳಿಗೆ ಯಾವುದೇ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ. NRE ಠೇವಣಿಗಳಿಗೆ ಕನಿಷ್ಠ ಅವಧಿಯು 1 ವರ್ಷ ಮತ್ತು ಠೇವಣಿ ದಿನಾಂಕದಿಂದ 1 ವರ್ಷದ ಅವಧಿಯೊಳಗೆ ಅಕಾಲಿಕವಾಗಿ ಹಿಂತೆಗೆದುಕೊಳ್ಳುವ ಠೇವಣಿಗಳಿಗೆ ಯಾವುದೇ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ.

ಹೊಸ ಬಡ್ಡಿ ದರಗಳು ದೇಶೀಯ, NRO ಮತ್ತು NRE ಠೇವಣಿಗಳಿಗೆ (5 ಕೋಟಿಗಿಂತ ಕಡಿಮೆ) ನವೆಂಬರ್ 16, 2021ರಿಂದ, ರೂ. 20.0 ಮಿಲಿಯನ್‌ಗಿಂತಲೂ ಕಡಿಮೆಯಿರುವ ಏಕ ಠೇವಣಿಗೆ ಮತ್ತು ರೂ 20.0 ಮಿಲಿಯನ್ ಮತ್ತು ಅದಕ್ಕಿಂತ ಹೆಚ್ಚಿನ ಏಕ ಠೇವಣಿ, ಆದರೆ ರೂ 50.0 ಮಿಲಿಯನ್‌ಗಿಂತ ಕಡಿಮೆಗೆ ನವೆಂಬರ್ 29, 2021ರಿಂದ ಅನ್ವಯ ಆಗುತ್ತದೆ.

ಐಸಿಐಸಿಐ ಬ್ಯಾಂಕ್ ಶೇ 2.5ರಿಂದ ಶೇ 5.50ವರೆಗಿನ ಬಡ್ಡಿದರಗಳನ್ನು 7 ದಿನಗಳಿಂದ 10 ವರ್ಷಗಳಲ್ಲಿ ಮೆಚ್ಯೂರ್ ಆವಾಗುವ ಠೇವಣಿಗಳ ಮೇಲೆ ನೀಡುತ್ತದೆ. ಈ ದರಗಳು 16 ನವೆಂಬರ್ 2021ರಿಂದ ಅನ್ವಯವಾಗುತ್ತವೆ. ಹಿರಿಯ ನಾಗರಿಕರು ಇತರರಿಗಿಂತ 50 ಬೇಸಿಸ್ ಪಾಯಿಂಟ್‌ಗಳ (bps) ಹೆಚ್ಚಿನ ಬಡ್ಡಿ ದರವನ್ನು ಪಡೆಯುವುದನ್ನು ಮುಂದುವರಿಸುತ್ತಾರೆ.

ಇದನ್ನೂ ಓದಿ: ಪೋಸ್ಟ್ ಆಫೀಸ್ ಟರ್ಮ್ ಡೆಪಾಸಿಟ್ ವರ್ಸಸ್ ಎಸ್​ಬಿಐ ಎಫ್​ಡಿ; ಯಾವುದರ ಬಡ್ಡಿ ದರ ಎಷ್ಟಿದೆ?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ