Viral Video: ಕಚ್ಚಾ ಬಾದಾಮ್​ ಹಾಡಿಗೆ ಸಖತ್​ ಸ್ಟೆಪ್​ ಹಾಕಿದ ದಕ್ಷಿಣ ಕೊರಿಯಾದ ಅಮ್ಮ-ಮಗಳು

ಕ್ಷಿಣ ಕೋರಿಯಾದ  ಅಮ್ಮ  ಮಗಳ ಜೋಡಿ ಇದೇ ಕಚ್ಚಾ ಬಾದಾಮ್​ ಹಾಡಿಗೆ ಡ್ಯಾನ್ಸ್​ ಮಾಡಿದ್ದು, ಸಖತ್​ ವೈರಲ್​ ಆಗಿದೆ. ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

Viral Video: ಕಚ್ಚಾ ಬಾದಾಮ್​ ಹಾಡಿಗೆ ಸಖತ್​ ಸ್ಟೆಪ್​ ಹಾಕಿದ ದಕ್ಷಿಣ ಕೊರಿಯಾದ ಅಮ್ಮ-ಮಗಳು
ಅಮ್ಮ ಮಗಳ ಡ್ಯಾನ್ಸ್​
Follow us
TV9 Web
| Updated By: Pavitra Bhat Jigalemane

Updated on: Jan 23, 2022 | 2:56 PM

ಸಾಮಾಜಿಕ ಜಾಲತಾಣದಲ್ಲಿ ಕೆಲವು ವಿಡಿಯೋಗಳು ವೈರಲ್​  ಆಗಿ ಹಲವು ದಿನಗಳು ಕಳೆದರೂ ಅದರ ಬಗೆಗಿನ ಮಾತುಗಳು ಮುಗಿಯುವುದಿಲ್ಲ. ಕೆಲವು ದಿನಗಳ ಹಿಂದೆ ಕಡಲೆಕಾಯಿ ಮಾರಾಟಗಾರನೊಬ್ಬ ಕಚ್ಚಾ ಬಾದಾಮ್ (Kacha Badam)​ ಹಾಡನ್ನು ಹಾಡಿ ಕಡಲೆಕಾಯಿಯನ್ನು ಮಾರಾಟ ಮಾಡುತ್ತಿದ್ದನು. ಇದರ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ನೆಟ್ಟಿಗರನನ್ನು ಸೆಳೆದಿದ್ದ ಕಚ್ಚಾ ಬಾದಾಮ್​ ಹಾಡು ಹಲವರ ಬಾಯಲ್ಲೂ ಓಡಾಡುತ್ತಿತ್ತು. ಇದೀಗ ಭಾರತದಲ್ಲಿ ಆರಂಭವಾದ ಕಚ್ಚಾ ಬಾದಾಮ್​ ಹಾಡು  ದಕ್ಷಿಣ ಕೋರಿಯಾ (South Korea) ವರೆಗೂ ತಲುಪಿದೆ. ಹೌದು ದಕ್ಷಿಣ ಕೊರಿಯಾದ  ಅಮ್ಮ  ಮಗಳ ಜೋಡಿ ಇದೇ ಕಚ್ಚಾ ಬಾದಾಮ್​ ಹಾಡಿಗೆ ಡ್ಯಾನ್ಸ್ (Dance)​ ಮಾಡಿದ್ದು, ಸಖತ್​ ವೈರಲ್​ ಆಗಿದೆ. ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಅಮ್ಮ ಮಗಳು ಡ್ಯಾನ್ಸ್​ ಮಾಡಿದ ವಿಡಿಯೋವನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ. ಸದ್ಯ ವಿಡಿಯೊ ಎಲ್ಲರ ಗಮನ ಸೆಳೆದಿದೆ.

ವಿಡಿಯೋದಲ್ಲಿ ಅಮ್ಮ ಮಗಳು  ಅಕ್ಕಪಕ್ಕದಲ್ಲಿ ನಿಂತಿದ್ದು, ಇಬ್ಬರೂ ಒಂದೇ ರೀತಿಯ ಸ್ಟೆಪ್​ ಹಾಕುವುದನ್ನು ಕಾಣಬಹುದು. ಅವರ ಪ್ರತೀ ಸ್ಟೆಪ್​ಗೂ ಲೈಟ್​ನ ಬಣ್ಣಗಳು ಬದಲಾಗುವುದನ್ನು ಕಾಣಬಹುದು. ವಿಡಿಯೋದಲ್ಲಿ ಕಚ್ಚಾ ಬಾದಾಮ್​ ಹಾಡಿಗೆ ಅಮ್ಮ ಮಗಳ ಜೋಡಿ ಕಲರ್​ಫುಲ್​ ಆಗಿ ಡ್ಯಾನ್ಸ್​ ಮಾಡಿರುವುದನ್ನು ಕಾಣಬಹುದು. ಅದೇ ವಿಡಿಯೋದಲ್ಲಿ ಅಕ್ಷರಗಳನ್ನೂ ಹಾಕಲಾಗಿದ್ದು ಅದರಿಂದ ದಕ್ಷಿಣ ಕೊರಿಯಾದವರು ಎಂದು ತಿಳಿಯುತ್ತದೆ. ಅಲ್ಲದೆ ಇನ್ಸ್ಟಾಗ್ರಾಮ್​ನಲ್ಲಿ ಲುನಾ ಯೊಗಿನಿ ಆಫಿಷಯಲ್ ಖಾತೆ​ಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ದಕ್ಷಿಣ  ಕೊರಿಯಾ ಎಂದು ಲೊಕೇಶನ್ ನೀಡಲಾಗಿದೆ. ವಿಡಿಯೋಕ್ಕೆ ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಧನ್ಯವಾದಗಳು ಎನ್ನುವ ಕ್ಯಾಪ್ಷನ್​ ನೀಡಲಾಗಿದೆ.

ಸದ್ಯ ವೀಡಿಯೋ ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳನ್ನು ಗಳಿಸಿದ್ದು, ಭಾರತದ ಹಾಡಿಗೆ ವಿದೇಶಿಯರ ಡ್ಯಾನ್ಸ್​​ ಅನ್ನು ಮೆಚ್ಚಿಕೊಂಡಿದ್ದಾರೆ. ಕಚ್ಚಾ ಬಾದಾಮ್​ ಹಾಡನ್ನು  ಪಶ್ವಿಮ ಬಂಗಾಳದ ಬ್ರಿಬುರ್ಮ್ ಎನ್ನುವ​ ಹಳ್ಳಿಯೊಂದರಲ್ಲಿ ಕಡಲೆಕಾಯಿ ಮಾರಾಟ ಮಾಡುವ ವ್ಯಕ್ತಿಯೊಬ್ಬ ಹೇಳಿದ್ದನು.  ಬೂಬನ್​ ಬಡ್ಯಾಕರ್​ ಎನ್ನುವ ವ್ಯಕ್ತಿ ಬರಿಗಾಲಿನಲ್ಲಿ ಸೈಕಲ್​ ತುಳಿದುಕೊಂಡು ಮನೆಮನೆಗೆ ತೆರಳಿ ಕಡಲೆಕಾಯಿ ಮಾರುತ್ತಾನೆ. ಹೀಗೆ ಕಡಲೆಕಾಯಿ ಮಾರುವ ವೇಳೆ ಹಾಡುತ್ತಿದ್ದ ಹಾಡನ್ನು ಕಚ್ಚಾ ಬಾದಾಮ್​ ಹಾಡು ಎಂದೇ ವೈರಲ್​ ಆಗಿದೆ.

ಇದನ್ನೂ ಓದಿ:

ಮನೆಗೆ ಸರ್ಪ್ರೈಸ್ ಆಗಿ ಬಂತು ಲಕ್ಷಗಟ್ಟಲೆ ಮೌಲ್ಯದ ಪೀಠೋಪಕರಣಗಳು; ಎಲ್ಲಕ್ಕೂ ಕಾರಣ ಈ ಪುಟಾಣಿ ಪೋರನಂತೆ!

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್