ಡ್ಯಾನ್ಸ್​​ ಮಾಡಲು ಹುಡುಗಿಯನ್ನು ಎತ್ತಲು ಹೋಗಿ ಆಯತಪ್ಪಿ ಬಿದ್ದ ವರ; ವಿಡಿಯೋ ವೈರಲ್​​

ಡ್ಯಾನ್ಸ್​​ ಮಾಡಲು ಹುಡುಗಿಯನ್ನು ಎತ್ತಲು ಹೋಗಿ ಆಯತಪ್ಪಿ ಬಿದ್ದ ವರ; ವಿಡಿಯೋ ವೈರಲ್​​
ವಿಡಿಯೋದಿಂದ ಸೆರೆಹಿಡಿದ ಚಿತ್ರ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​ ಆಗಿದೆ. ಮದುವೆಯಲ್ಲಿ ವಧುವರರ ನೃತ್ಯ ಮಾಡುವ ವೇಳೆ ಆಯತಪ್ಪಿ ಇಬ್ಬರೂ ಬಿದ್ದ ವಿಡಿಯೋ ಇನ್ಸ್ಟಾಗ್ರಾಮ್​ನಲ್ಲಿ ವೈರಲ್​ ಆಗಿದೆ.

TV9kannada Web Team

| Edited By: Pavitra Bhat Jigalemane

Jan 23, 2022 | 5:25 PM

ಮದುವೆಗಳೆಂದರೆ ಶಾಸ್ತ್ರ ಸಂಪ್ರದಾಯದಿಂದ ಕೂಡಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆಗಳಲ್ಲಿ ಆಡಂಬರಗಳೇ ಹೆಚ್ಚಾಗಿವೆ. ಹಾಡು, ಕುಣಿತ ಸೇರಿದಂತೆ ಮದುವೆಯ ಹಿಂದಿನ ದಿನ ಪಾರ್ಟಿಗಳನ್ನೂ ಅರೆಂಜ್​ ಮಾಡುತ್ತಾರೆ. ಇಲ್ಲಿ ಮದ್ಯಪಾನ ಮಾಡಿ ತಾಳತಪ್ಪಿದರೂ ಹೆಜ್ಜೆಹಾಕುವ ಅದೆಷ್ಟೋ ವಧುವರರನ್ನು ಕಾಣಬಹುದು. ಆದರೆ ಅದೇ ಎಂಜಾಯ್​ಮೆಂಟ್​ ಕೆಲವೊಮ್ಮೆ ಅನಾಹುತಕ್ಕೆ ಕಾರಣವಾಗುತ್ತದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​ ಆಗಿದೆ. ಮದುವೆಯಲ್ಲಿ ವಧುವರರ ನೃತ್ಯ ಮಾಡುವ ವೇಳೆ ಆಯತಪ್ಪಿ ಇಬ್ಬರೂ ಬಿದ್ದ ವಿಡಿಯೋ ಇನ್ಸ್ಟಾಗ್ರಾಮ್​ನಲ್ಲಿ ವೈರಲ್​ ಆಗಿದೆ.

ಟ್ರೋಲ್ ಪೇಜ್​ ಒಂದು ವಿಡಿಯೊ ಹಂಚಿಕೊಂಡು ಟ್ರೋಲ್​ ಮಾಡಿದ್ದು, ನೆಟ್ಟಿಗರು ವಿಡಿಯೋ ನೋಡಿ ನಗೆಗಡಲಲ್ಲಿ ತೇಲಿದ್ದಾರೆ. ವಿಡಿಯೋದಲ್ಲಿ ಎರಡು ಜೋಡಿಗಳು ಡ್ಯಾನ್ಸ್​ ಮಾಡಲು ಪ್ರಯತ್ನಿಸುವುದನ್ನು ಕಾಣಬಹುದು. ಆದರೆ ಎಲ್ಲರೂ ಕಂಠ ಪೂರ್ತಿ ಕುಡಿದಿದ್ದಾರೆ ಎಂದು ಅವರ ನಡಿಗೆಯ ಶೈಲಿಯಲ್ಲೇ ಹೇಳಬಹುದು. ಹುಡುಗ ಹುಡುಗಿ ಇಬ್ಬರೂ ಡ್ಯಾನ್ಸ್​ ಮಾಡಲು ವೇದಿಕೆಗೆ ಬರುತ್ತಾರೆ, ಆಗ ಹುಡುಗ ಹುಡುಗಿಯನ್ನು ಎತ್ತಿಕೊಳ್ಳಲು ಹೋಗುತ್ತಾನೆ. ಈ ವೇಳೆ ಆಯತಪ್ಪಿ ಇಬ್ಬರೂ ವೇದಿಕೆಯ ಮೇಲೆಯೇ ಬೀಳುತ್ತಾರೆ. ಇದರ ವಿಡಿಯೋ ಈಗ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದೆ. ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ವಿಡಿಯೋ ಒಂದು ಲಕ್ಷಕ್ಕೂ ಹೆಚ್ಚು ಲೈಕ್ಸ್​ಗಳಿಸಿದ್ದು, ಲಕ್ಷಾಂತರ ಜನ ವೀಕ್ಷಿಸಿ ಕಾಮೆಂಟ್​ ಮಾಡಿದ್ದರೆ.

ಮದುವೆ ಮನೆಗಳಲ್ಲಿ ವಿಚಿತ್ರ ಘಟನೆಗಳು ನಡೆಯುವುದು ಸಾಮಾನ್ಯ. ಇತ್ತೀಚೆಗೆ ತಮಿಳುನಾಡಿನಲ್ಲಿ ವಧು ಡ್ಯಾನ್ಸ್ ಮಾಡುತ್ತಾ ಮಂಟಪಕ್ಕೆ ಬಂದಿದ್ದಾಳೆ ಎಂದು ವರ ಕಪಾಳ ಮೋಕ್ಷ ಮಾಡಿದ್ದಾನೆ. ಇದರಿಂದ ಕೋಪಗೊಂಡ ವಧು, ವರನಿಗೂ ತಿರುಗಿಸಿ ಹೊಡೆದಿದ್ದು, ಅದೇ ಮಂಟಪದಲ್ಲಿ ಬೇರೆ ಹುಡುಗನನ್ನು ಮದುವೆಯಾದ ಘಟನೆ ನಡೆದಿತ್ತು.

ಇದನ್ನೂ ಓದಿ:

Viral Video: ಕಚ್ಚಾ ಬಾದಾಮ್​ ಹಾಡಿಗೆ ಸಖತ್​ ಸ್ಟೆಪ್​ ಹಾಕಿದ ದಕ್ಷಿಣ ಕೊರಿಯಾದ ಅಮ್ಮ-ಮಗಳು

ಸುಭಾಷ್​ ಚಂದ್ರ ಬೋಸ್ ​125ನೇ ಜನ್ಮದಿನ; ಮರಳಿನ ಕಲಾಕೃತಿ ಮೂಲಕ ಸ್ಮರಿಸಿದ ಕಲಾವಿದ ಸುದರ್ಶನ್​ ಪಟ್ನಾಯಕ್​

Follow us on

Related Stories

Most Read Stories

Click on your DTH Provider to Add TV9 Kannada