Viral Video; ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್ ಅಧಿಕಾರಿ
ಹೋಮ್ ಗಾರ್ಡ್ ಪೊಲೀಸ್ ಅಧಿಕಾರಿಯೊಬ್ಬರು ನೀರಿನ ಸುಳಿಗೆ ಸಿಲುಕಿದ್ದ ನಾಯಿಯನ್ನು ತನ್ನ ಪ್ರಾಣ ಒತ್ತೆಯಿಟ್ಟು ರಕ್ಷಸಿದ ಘಟನೆ ನಡೆದಿದೆ. ವಿಡಿಯೋವನ್ನು ಐಪಿಎಸ್ ಅಧಿಕಾರಿ ದಿಪಾಂಶು ಕಬ್ರಾ ಎನ್ನುವವರು ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕಾಣಿಸಿಕೊಳ್ಳುವ ವೈರಲ್ ವಿಡಿಯೋಗಳು ನೆಟ್ಟಿಗರ ಮನ ಮುಟ್ಟುವಂತೆ ಇರುತ್ತವೆ. ಹೃದಯ ಸ್ಪರ್ಶಿ ಘಟನೆಗಳು, ಮಾನವೀಯ ಘಟನೆಗಳು ನೋಡುಗರನ್ನು ಧನಾತ್ಮಕವಾಗಿ ಯೋಚಿಸುವಂತೆ ಮಾಡುತ್ತದೆ. ಅಂತಹದ್ದೆ ಒಂದು ಘಟನೆ ಈಗ ತೆಲಂಗಾಣ (Telangana) ದಲ್ಲಿ ನಡೆದಿದೆ. ಹೋಮ್ ಗಾರ್ಡ್ (Home Guard) ಪೊಲೀಸ್ ಅಧಿಕಾರಿಯೊಬ್ಬರು ನೀರಿನ ಸುಳಿಗೆ ಸಿಲುಕಿದ್ದ ನಾಯಿಯನ್ನು ತನ್ನ ಪ್ರಾಣ ಒತ್ತೆಯಿಟ್ಟು ರಕ್ಷಸಿದ ಘಟನೆ ನಡೆದಿದೆ. ವಿಡಿಯೋವನ್ನು ಐಪಿಎಸ್ ಅಧಿಕಾರಿ (IPS Officer) ದಿಪಾಂಶು ಕಬ್ರಾ ಎನ್ನುವವರು ಹಂಚಿಕೊಂಡಿದ್ದಾರೆ.
तेज़ लहरों के बीच फंसे कुत्ते को देखकर @TelanganaCOPs के होम गार्ड मुजीब ने तुरंत JCB बुलाई और खुद उसे बचाने के लिए लहरों में उतर गए. उनके जज्बे को दिल से सलाम. मानवता की सेवा के लिए #Khaakhi कोई भी जोखिम उठाने से पीछे नहीं हटती. pic.twitter.com/sJlBoOwvov
— Dipanshu Kabra (@ipskabra) January 25, 2022
ವಿಡಿಯೋದಲ್ಲಿ ಜೋರಾಗಿ ನೀರು ಹರಿಯುತ್ತಿದ್ದ ಪಕ್ಕದಲ್ಲಿ ನಾಯಿಯೊಂದು ಹೆದರಿಕೊಂಡು ಕುಳಿತಿರವುದನ್ನು ಕಾಣಬಹುದು. ನಂತರ ಹೆದರಿದ ನಾಯಿಯನ್ನು ನೋಡಿ ಜೆಸಿಬಿಯ ಮೂಲಕ ಅಲ್ಲಿಗೆ ತೆರಳಿ ಪೊಲೀಸ್ ಅಧಿಕಾರಿಯೊಬ್ಬರು ನಾಯಿಯನ್ನು ರಕ್ಷಿಸಿದ್ದಾರೆ. ನಾಯಿಯನ್ನು ರಕ್ಷಿಸಿದ ಪೊಲೀಸ್ ಅಧಿಕಾರಿಯನ್ನು ಮುಝಿಬ್ ರಶೀದ್ ಎಂದು ಗುರುತಿಸಲಾಗಿದೆ. ಇವರು ತೆಲಂಗಾಣ ರಾಜ್ಯ ಪೊಲೀಸ್ ಅಧಿಕಾರಿಯಾಗಿದ್ದಾರೆ. ವಿಡಿಯೋ ನೋಡಿ ನೆಟ್ಟಿಗರು ಮಾನವೀಯ ಗುಣ ಇನ್ನೂ ಇದೆ ಎಂದು ಕಾಮೆಂಟ್ ಮಾಡಿದ್ದಾರೆ.
ವಿಡಿಯೋವನ್ನು ಹಂಚಿಕೊಂಡ ಐಪಿಎಸ್ ಅಧಿಕಾರಿ, ನೀರಿನ ಸುಳಿಯನ್ನು ನೋಡಿ ಹೆದರಿ ಕುಳಿತ ನಾಯಿಯನ್ನು ರಕ್ಷಿಸಿದ ನಮ್ಮ ಅಧಿಕಾರಿ ಸ್ವತಃ ಜೆಸಿಬಿಯನ್ನು ಕರೆಸಿ ಪ್ರಾಣಿಯನ್ನು ರಕ್ಷಿಸಿದ್ದಾರೆ. ಅವರ ಪ್ರಾಣವನ್ನು ಲೆಕ್ಕಿಸದೆ ನಾಯಿಯನ್ನು ರಕ್ಷಿಸಿದ ಅವರ ದೈರ್ಯಕ್ಕೆ ನನ್ನ ಸಲಾಂ ಎಂದು ಕ್ಯಾಪ್ಷನ್ ನೀಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅದ ವೀಡಿಯೋ ನೆಟ್ಟಿಗರ ಮನ ಗೆದ್ದಿದೆ. ವಿಡಿಯೋ ಹಂಚಿಕೊಂಡಾಗಿನಿಂದ ಈವರೆಗೆ 7 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು ಪೊಲೀಸ್ ಅಧಿಕಾರಿಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಇದನ್ನೂ ಓದಿ;
Viral Video; ಹಿಮಪಾತದ ನಡುವೆ ಜೆಸಿಬಿ ಏರಿ ಮದುವೆ ಮಂಟಪಕ್ಕೆ ಬಂದ ವರ
Viral: ಆಲೂಗಡ್ಡೆ ಪದಾರ್ಥ ಎಸೆದು ಕಿತ್ತಾಡಿಕೊಂಡ ಮಹಿಳಾ ಖೈದಿಗಳು; ಅವರಿಗೆ ನ್ಯಾಯಾಲಯ ವಿಧಿಸಿದ ದಂಡವೆಷ್ಟು ಗೊತ್ತಾ?
Published On - 9:45 am, Fri, 28 January 22