Viral Video; ಹಿಮಪಾತದ ನಡುವೆ ಜೆಸಿಬಿ ಏರಿ ಮದುವೆ ಮಂಟಪಕ್ಕೆ ಬಂದ ವರ

ಹಿಮಪಾತದ ನಡುವೆ ವರನೊಬ್ಬ ಜೆಸಿಬಿ ಏರಿಕೊಂಡು ಮಂಟಪಕ್ಕೆ ಬಂದಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಅಗಿದೆ.

Viral Video; ಹಿಮಪಾತದ ನಡುವೆ ಜೆಸಿಬಿ ಏರಿ ಮದುವೆ ಮಂಟಪಕ್ಕೆ ಬಂದ ವರ
ಜೆಸಿಬಿಯಲ್ಲಿ ಬಂದ ವರ
Follow us
TV9 Web
| Updated By: Pavitra Bhat Jigalemane

Updated on: Jan 27, 2022 | 5:46 PM

ಇತ್ತೀಚಿನ ದಿನಗಳಲ್ಲಿ ಮದುವೆಗಳನ್ನು ವಿಭಿನ್ನವಾಗಿ ಆಚರಿಸುವುದನ್ನು ಕಾಣಬಹುದು. ವಧು ವರರ ಎಂಟ್ರಿಯನ್ನು ಹೊಸ ಕಲ್ಪನೆಗಳ ಮೂಲಕ ಮಾಡುವ ಈವೆಂಟ್​ ಮ್ಯಾನೇಜ್ಮೆಂಟ್​ ಕಂಪನಿಗಳು ಹುಟ್ಟಿಕೊಂಡ ಮೇಲೆ ಮಂಟಪಕ್ಕೆ ವಧು ವರರ ಆಗಮನದ ಕಲ್ಪನೆಗಳೇ ಬದಲಾಗಿವೆ. ಪ್ರತೀ ಬಾರಿ ವಿಭಿನ್ನ ರೀತಿಯಲ್ಲಿ ವಧು ವರರು ಮಂಟಪಕ್ಕೆ ಆಗಮಿಸುವ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.  ಅದೇ ರೀತಿ ಇದೀಗ ವರನೊಬ್ಬ ಜೆಸಿಬಿ (JCB) ಯಲ್ಲಿ ಮದುವೆ ಮಂಟಪಕ್ಕೆ ಆಗಮಿಸಿದ ವಿಡಿಯೋ ವೈರಲ್​ ಅಗಿದೆ. ಚಳಿಗಾಲವಾದ ಕಾರಣ  ಉತ್ತರಭಾರತದ ರಾಜ್ಯಗಳಲ್ಲಿ ಹಿಮಪಾತ (Snowfall) ವಾಗುತ್ತಿದೆ. ರಸ್ತೆಯೂ ಕಾಣದಷ್ಟು ದಟ್ಟ ಮಂಜು  ಹಾಗೂ ಹಿಮಪಾತ ಸಂಭವಿಸುತ್ತಿದೆ. ಈ ನಡುವೆ ವರನೊಬ್ಬ (Groom) ನಡೆದುಕೊಂಡು ಬರಲು ಅಥವಾ ಕಾರಿನಲ್ಲಿ ಬರಲು ಸಾಧ್ಯವಾಗದೆ ಜೆಸಿಬಿಯಲ್ಲಿ ಬಂದಿದ್ದಾರೆ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral)​ ಆಗಿದೆ.

ಹಿಮಪಾತದ ನಡುವೆ ವರ ಜೆಸಿಬಿಯಲ್ಲಿ ಬರುವ ವಿಡಿಯೋವನ್ನು @Anilkimta2. ಎನ್ನುವ ಟ್ವಿಟರ್​ ಬಳಕೆದಾರರು ಹಂಚಿಕೊಂಡಿದ್ದಾರೆ. ಭಾರಿ ಪ್ರಮಾಣದಲ್ಲಿ ಹಿಮಪಾತ, ದಟ್ಟ ಮಂಜು ಕವಿದ ಕಾರಣ ವರನನ್ನು ಜೆಸಿಬಿಯಲ್ಲಿ ಕರೆತರಲಾಯಿತು ಎಂದು ಕ್ಯಾಪ್ಷನ್​ ನೀಡುವ ಮೂಲಕ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಸದ್ಯ ವಿಡಿಯೋ ಸಖತ್ ವೈರಲ್​ ಆಗಿದ್ದು, ಮಂಜಿನ ನಡುವೆ ಜೆಸಿಬಿಯನ್ನು ಓಡಿಸಿಕೊಂಡು ಬರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹದು.

ಈ ಹಿಂದೆ ಪಾಕಿಸ್ತಾನ ಪತ್ರಕರ್ತರೊಬ್ಬರು ಹಂಚಿಕೊಂಡ ವಿಡಿಯೋದಲ್ಲಿ ವಧುವರರಿಬ್ಬರೂ ಜೆಸಿಬಿಯನ್ನು ಓಡಿಸಿಕೊಂಡು ಮದುವೆ ಮಂಟಪಕ್ಕೆ ಬಂದಿದ್ದರು. ಇದರ ವಿಡಿಯೋವನ್ನು ಅವರು  ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಬಳಿಕ ಎಲ್ಲೆಡೆ ವೈರಲ್​ ಆಗಿದತ್ತು. ಇದೀಗ ಹಿಮಪಾತದ ಕಾರಣ ವರ ಜೆಸಿಬಿ ಏರಿ ಬಂದ ವಿಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ;

ಕಚ್ಚಾ ಬಾದಾಮ್​ ಹಾಡಿಗೆ ಸಖತ್​ ಹೆಜ್ಜೆ ಹಾಕಿದ ಸ್ಪೈಸ್​ ಜೆಟ್​ನ ಗಗನಸಖಿ; ವಿಡಿಯೋ ವೈರಲ್​​

ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್