AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಕ್​ ಫ್ರಮ್​ ಹೋಮ್​ ಸಂಕಷ್ಟ; ಮದುವೆಯ ದಿನವೂ ಲ್ಯಾಪ್​ ಟಾಪ್​, ಫೋನ್​ ಹಿಡಿದು ಕುಳಿತ ವಧು

ವರ್ಕ್​ ಫ್ರಮ್​ ಹೋಮ್​ ನಿಂದ ಯುವತಿಯೊಬ್ಬಳು ಆಕೆಯ ಮದುವೆಯ ದಿನವೂ ಆಫೀಸ್​ ಫೋನ್​ ಕಾಲ್​ನಲ್ಲಿ ಮಾತನಾಡುತ್ತಿರುವ ವಿಡಿಯೋ ಇನ್ಸ್ಟಾಗ್ರಾಮ್​ನಲ್ಲಿ ವೈರಲ್​ ಆಗಿದೆ. 

ವರ್ಕ್​ ಫ್ರಮ್​ ಹೋಮ್​ ಸಂಕಷ್ಟ; ಮದುವೆಯ ದಿನವೂ ಲ್ಯಾಪ್​ ಟಾಪ್​, ಫೋನ್​ ಹಿಡಿದು ಕುಳಿತ ವಧು
ವಧು
TV9 Web
| Edited By: |

Updated on:Jan 28, 2022 | 2:53 PM

Share

ಕೊರೋನಾ ಬಂದಾಗಿನಿಂದ ವರ್ಕ್​ ಫ್ರಮ್​ ಹೋಮ್ (Work From Home) ಎಲ್ಲರನ್ನೂ ಆವರಿಸಿದೆ. ಮದುವೆ, ಸಮಾರಂಭಗಳು ಯಾವುದೇ ಇದ್ದರೂ ಹೋಗಲು ಸಾಧ್ಯವಾಗದೆ ಕೆಲಸ ಮಾಡಬೇಕಾದ ಸ್ಥಿತಿ ಕೆಲವು ಕಡೆ ಇದೆ. ಇದೀಗ ವರ್ಕ್​ ಫ್ರಮ್​ ಹೋಮ್​ ನಿಂದ ಯುವತಿಯೊಬ್ಬಳು ಆಕೆಯ ಮದುವೆಯ ದಿನವೂ ಆಫೀಸ್​ ಫೋನ್​ ಕಾಲ್​ನಲ್ಲಿ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇನ್ಸ್ಟಾಗ್ರಾಮ್​ನಲ್ಲಿ ವಿಡಿಯೋ ವೈರಲ್​ (Viral Video) ಆಗಿದೆ.  ಮದುವೆಯ ದಿನ ವಧು (Bride) ತಯಾರುಗುತ್ತಿರುವ ವೇಳೆ ಪದೇ ಪದೇ ಫೋನ್​ ಕಾಲ್​ಗಳು ಆಕೆಗೆ ಕಿರಿಕಿರಿ ಉಂಟು ಮಾಡುತ್ತಿರುತ್ತದೆ. ಇದರಿಂದ ಆಕೆ ಕೋಪಗೊಂಡು ಮಾತನಾಡುವ ವಿಡಿಯೋ ವೈರಲ್​ ಆಗಿದೆ.

ಬ್ರೈಡ್​ ಮೇಕಪ್​​ ಆರ್ಟಿಸ್ಟ್​ ಸೋನಾ ಕಪೂರ್​ ಎನ್ನುವವರು ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮದುವೆ ಮಂಟಪಕ್ಕೆ ಹೋಗಲು ಪೂರ್ಣವಾಗಿ ವಧು ಸಿದ್ಧವಾಗಿರುತ್ತಾಳೆ. ಆ ಸಮಯದಲ್ಲಿ ಆಕೆ ಲ್ಯಾಪ್​ಟಾಪ್​ ಹಿಡಿದು, ಆಗಾಗ ಬರುವ ಫೋನ್​ ಕಾಲ್​ಗಳನ್ನು ರಿಸೀವ್ ಮಾಡುತ್ತಾಳೆ. ಈ ನಡುವೆ  ವಧು ಸಿಟ್ಟಿನಲ್ಲಿ ಇಂದು ನನ್ನ ಮದುವೆ ಇದೆ, ಯಾರಾದರೂ ಇವರಿಗೆ ಹೇಳಿ ಎನ್ನುವುದನ್ನು ಕಾಣಬಹುದು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವರ್ಕ್​ ಫ್ರಮ್​ ಹೋಮ್​ನ ಕತೆ ಎಂದು ಕ್ಯಾಪ್ಷನ್​ ನಿಡಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ಈವರೆಗೆ 5 ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದಿದೆ. ಕೊರೊನಾ ಕಾರಣದಿಂದ ಕಂಪನಿಗಳು ವರ್ಕ್​ ಫ್ರಮ್​ ಹೋಮ್​ ನೀಡಿದೆ. ಇದರಿಂದ ಕೆಲಸಗಾರರು ಮಾನಸಿಕ ಕಿರಿಕಿರಿ, ಒತ್ತಡವನ್ನು ಅನುಭವಿಸುತ್ತಲೇ ಇದ್ದಾರೆ.

ಇದನ್ನೂ ಓದಿ:

ಪ್ರವಾಸಿಗನನ್ನು ಪ್ರೀತಿಯಿಂದ ಅಪ್ಪಿಕೊಂಡ ಕೋತಿ; ಮೆಕ್ಸಿಕೋದಲ್ಲೊಂದು ಹೃದಯಸ್ಪರ್ಶಿ ಘಟನೆ : ವಿಡಿಯೋ ವೈರಲ್​

Published On - 2:31 pm, Fri, 28 January 22

Follow Us
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ