ಓಟಿಟಿಯಲ್ಲಿ ನೋಡಬಹುದು ‘ಭಜರಂಗಿ 2’ ಸಿನಿಮಾ; ಶಿವರಾಜ್​ಕುಮಾರ್​ ಅಭಿಮಾನಿಗಳಿಗೆ ಗುಡ್​ ನ್ಯೂಸ್​

ಓಟಿಟಿಯಲ್ಲಿ ನೋಡಬಹುದು ‘ಭಜರಂಗಿ 2’ ಸಿನಿಮಾ; ಶಿವರಾಜ್​ಕುಮಾರ್​ ಅಭಿಮಾನಿಗಳಿಗೆ ಗುಡ್​ ನ್ಯೂಸ್​
ಶಿವರಾಜ್​ಕುಮಾರ್

Bhajarangi 2 on Zee5: ಡಿ.23ರಿಂದ ‘ಜೀ 5’ ಆ್ಯಪ್​ ಮೂಲಕ ‘ಭಜರಂಗಿ 2’ ಚಿತ್ರ ಬಿತ್ತರ ಆಗಲಿದೆ. ಈ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಮತ್ತು ಭಾವನಾ ಮೆನನ್​ ಜೋಡಿಯಾಗಿ ನಟಿಸಿದ್ದಾರೆ.

TV9kannada Web Team

| Edited By: Madan Kumar

Dec 18, 2021 | 3:55 PM

ಸಿನಿಮಾಗಳನ್ನು ವೀಕ್ಷಿಸಲು ಈಗ ಚಿತ್ರಮಂದಿರ ಅಥವಾ ಟಿವಿ ಮಾತ್ರವೇ ವೇದಿಕೆಯಾಗಿ ಉಳಿದಿಲ್ಲ. ಓಟಿಟಿ ಪ್ಲಾಟ್​ಫಾರ್ಮ್​ (OTT platform) ಕೂಡ ಪ್ರಬಲವಾಗಿದೆ. ಅನೇಕ ಸ್ಟಾರ್​ ನಟರ ಸಿನಿಮಾಗಳನ್ನು ಪ್ರೇಕ್ಷಕರು ಓಟಿಟಿಯಲ್ಲಿ ನೋಡಿ ಆನಂದಿಸುತ್ತಿದ್ದಾರೆ. ಕೊವಿಡ್​ ನಂತರದ ಪರಿಸ್ಥಿತಿಯಲ್ಲಿ ಓಟಿಟಿಗಳ ಕಡೆಗೆ ಜನರ ಆಸಕ್ತಿ ಹೆಚ್ಚಿದೆ. ಈಗ ಶಿವರಾಜ್​ಕುಮಾರ್ (Shivarajkumar)​ ನಟನೆಯ ‘ಭಜರಂಗಿ 2’ ಸಿನಿಮಾ (Bhajarangi 2) ಕೂಡ ಓಟಿಟಿ ಪ್ಲಾಟ್​ಫಾರ್ಮ್​ನಲ್ಲಿ ವೀಕ್ಷಣೆಗೆ ಲಭ್ಯವಾಗುತ್ತಿದೆ. ಎ. ಹರ್ಷ ನಿರ್ದೇಶನದ ಈ ಸಿನಿಮಾ ಬಿಗ್​ ಬಜೆಟ್​ನಲ್ಲಿ ಮೂಡಿಬಂದಿದೆ. ಅ.29ರಂದು ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ‘ಭಜರಂಗಿ 2’ ಬಿಡುಗಡೆ ಆಗಿತ್ತು. ಥಿಯೇಟರ್​ನಲ್ಲಿ ಈ ಚಿತ್ರವನ್ನು ಮಿಸ್​ ಮಾಡಿಕೊಂಡವರು ‘ಜೀ 5’ (Zee5, ) ಮೂಲಕ ಮನೆಯಲ್ಲೇ ಕುಳಿತು ನೋಡಬಹುದು.

ಓಟಿಟಿ ಮೂಲಕ ಸಿನಿಮಾ ವೀಕ್ಷಿಸುವವರ ಸಂಖ್ಯೆ ಹೆಚ್ಚಿದೆ. ಅಂಥವರಿಗಾಗಿ ಶಿವರಾಜ್​ಕುಮಾರ್​ ನಟನೆಯ ‘ಭಜರಂಗಿ 2’ ಚಿತ್ರ ಭರ್ಜರಿ ಮನರಂಜನೆ ನೀಡಲಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ಭಾವನಾ ಮೆನನ್​ ಅಭಿನಯಿಸಿದ್ದಾರೆ. ಭಜರಂಗಿ ಲೋಕಿ, ಶ್ರುತಿ, ಶಿವರಾಜ್​ ಕೆ.ಆರ್​. ಪೇಟೆ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ಡಿ.23ರಿಂದ ‘ಜೀ 5’ ಆ್ಯಪ್​ ಮೂಲಕ ‘ಭಜರಂಗಿ 2’ ಚಿತ್ರ ಬಿತ್ತರ ಆಗಲಿದೆ. ಈ ಸಿನಿಮಾಗೆ ಖ್ಯಾತ ನಿರ್ಮಾಪಕರಾದ ಜಯಣ್ಣ-ಭೋಗೇಂದ್ರ ಬಂಡವಾಳ ಹೂಡಿದ್ದಾರೆ. ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ.

ಪುನೀತ್​ ನಿಧನದ ದಿನವೇ ರಿಲೀಸ್​ ಆಗಿದ್ದ ಚಿತ್ರ:

ಅ.29ರಂದು ಅದ್ದೂರಿಯಾಗಿ ‘ಭಜರಂಗಿ 2’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿತ್ತು. ಮುಂಜಾನೆ ಅನೇಕ ಕಡೆಗಳಲ್ಲಿ ಶೋ ಆರಂಭವಾಗಿತ್ತು. ಎಲ್ಲೆಡೆ ಹೌಸ್​ಫುಲ್​ ಪ್ರದರ್ಶನವಾಗಿ, ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್​ ಸಿಗುತ್ತಿರುವುದು ನೋಡಿ ಇಡೀ ತಂಡಕ್ಕೆ ಖುಷಿ ಆಗಿತ್ತು. ಕೆಲವು ಚಿತ್ರಮಂದಿರಗಳಿಗೆ ಶಿವಣ್ಣ ಭೇಟಿ ನೀಡಿದ್ದರು. ಅದಾಗಿ ಕೆಲವೇ ಗಂಟೆಗಳು ಕಳೆಯುವುದರೊಳಗೆ ಕನ್ನಡ ಚಿತ್ರರಂಗದ ಪಾಲಿಗೆ ಕಹಿ ಸುದ್ದಿಯೊಂದು ಸಿಡಿಲಿನಂತೆ ಬಂದೆರಗಿತ್ತು. ಪುನೀತ್​ ರಾಜ್​ಕುಮಾರ್​ ಹೃದಯಾಘಾತದಿಂದ ನಿಧನರಾದರು ಎಂಬ ಸುದ್ದಿ ಕೇಳಿ ಎಲ್ಲವೂ ಸ್ತಬ್ದವಾದಂತಾಗಿತ್ತು. ಆ ಘಟನೆ ಬಳಿಕ ಚಿತ್ರಮಂದಿರದ ಕಡೆಗೆ ಬರಲು ಬಹುತೇಕರು ಹಿಂದೇಟು ಹಾಕಿದ್ದರು.

ಜೀ5ನಲ್ಲಿ ಲಭ್ಯವಿದೆ ‘ಕನ್ನಡಿಗ’ ಸಿನಿಮಾ

ರವಿಚಂದ್ರನ್ ನಟನೆಯ ‘ಕನ್ನಡಿಗ’ ಸಿನಿಮಾ ಕೂಡ ಓಟಿಟಿ ಮೂಲಕ ಬಿಡುಗಡೆ ಆಗಿದೆ. ‘ಜಟ್ಟ’, ‘ಮೈತ್ರಿ’ ಸಿನಿಮಾಗಳ ಮೂಲಕ ಖ್ಯಾತಿ ಪಡೆದ ಗಿರಿರಾಜ್​ ಅವರು ನಿರ್ದೇಶನ ಮಾಡಿರುವ ಈ ಸಿನಿಮಾ ಡಿ.17ರಿಂದ ಜೀ5 ಮೂಲಕ ವೀಕ್ಷಣೆಗೆ ಲಭ್ಯ ಆಗಿದೆ.

ಇದನ್ನೂ ಓದಿ:

ಆರ್​ಆರ್​ಆರ್​ ಚಿತ್ರ ಓಟಿಟಿಯಲ್ಲಿ ಬರೋದು ಯಾವಾಗ? ಕಾತರದ ಪ್ರಶ್ನೆಗೆ ಸಿಕ್ತು ಉತ್ತರ

ಕನ್ನಡ ಧ್ವಜ ಸುಟ್ಟವರ ವಿರುದ್ಧ ಶಿವಣ್ಣ, ಜಗ್ಗೇಶ್​ ಆಕ್ರೋಶ; ಕಿಡಿಗೇಡಿಗಳ ಕೃತ್ಯಕ್ಕೆ ಸ್ಯಾಂಡಲ್​ವುಡ್​ ಖಂಡನೆ

Follow us on

Related Stories

Most Read Stories

Click on your DTH Provider to Add TV9 Kannada