ಆರ್​ಆರ್​ಆರ್​ ಚಿತ್ರ ಓಟಿಟಿಯಲ್ಲಿ ಬರೋದು ಯಾವಾಗ? ಕಾತರದ ಪ್ರಶ್ನೆಗೆ ಸಿಕ್ತು ಉತ್ತರ

RRR Movie: ‘ಆರ್​ಆರ್​ಆರ್​’ ಸಿನಿಮಾ 2022ರ ಜ.7ರಂದು ತೆರೆಕಾಣಲಿದೆ. ಕೊವಿಡ್​ ರೂಪಾಂತರಿಯ ಭಯದಿಂದ ಕೆಲವರು ಚಿತ್ರಮಂದಿರಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಅಂಥವರು ಈ ಚಿತ್ರವನ್ನು ಓಟಿಟಿಯಲ್ಲಿ ನೋಡಲು ಬಯಸುತ್ತಾರೆ.

ಆರ್​ಆರ್​ಆರ್​ ಚಿತ್ರ ಓಟಿಟಿಯಲ್ಲಿ ಬರೋದು ಯಾವಾಗ? ಕಾತರದ ಪ್ರಶ್ನೆಗೆ ಸಿಕ್ತು ಉತ್ತರ
ಆರ್​ಆರ್​ಆರ್​ನಲ್ಲಿ ಎನ್​ಟಿಆರ್​
Follow us
TV9 Web
| Updated By: ಮದನ್​ ಕುಮಾರ್​

Updated on: Dec 11, 2021 | 7:28 AM

ಅದ್ದೂರಿ ಬಜೆಟ್​ನಲ್ಲಿ ‘ಆರ್​ಆರ್​ಆರ್​’ ಚಿತ್ರ (RRR Movie) ಮೂಡಿಬಂದಿದೆ. ಡಿ.9ರಂದು ಟ್ರೇಲರ್​ ಬಿಡುಗಡೆಯಾಗಿ ಧೂಳೆಬ್ಬಿಸಿದೆ. 2022ರ ಜ.7ರಂದು ವಿಶ್ವಾದ್ಯಂತ ಈ ಚಿತ್ರ ತೆರೆಕಾಣಲಿದೆ. ರಾಜಮೌಳಿ (SS Rajamouli) ನಿರ್ದೇಶನದ ಸಿನಿಮಾ ಎಂದರೆ ನಿರೀಕ್ಷೆ ಜೋರಾಗಿಯೇ ಇರುತ್ತದೆ. ಜ್ಯೂ. ಎನ್​ಟಿಆರ್​ (Jr NTR) ಮತ್ತು ರಾಮ್​ ಚರಣ್​ (Ram Charan) ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಆಲಿಯಾ ಭಟ್​ (Alia Bhatt) ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಜಯ್​ ದೇವಗನ್​ ಅವರಿಗೂ ಪ್ರಮುಖ ಪಾತ್ರವಿದೆ. ಈ ಎಲ್ಲ ಕಾರಣಗಳಿಂದಾಗಿ ಈ ಸಿನಿಮಾ ಹೆಚ್ಚು ಹೈಪ್​ ಸೃಷ್ಟಿ ಮಾಡಿದೆ. ಕೊವಿಡ್​ ರೂಪಾಂತರಿಯ ಭಯದಿಂದ ಕೆಲವರು ಚಿತ್ರಮಂದಿರಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಅಂಥವರು ಈ ಸಿನಿಮಾವನ್ನು ಓಟಿಟಿ ಪ್ಲಾಟ್​ಫಾರ್ಮ್​ (OTT platform) ಮೂಲಕ ನೋಡಲು ಬಯಸುತ್ತಾರೆ. ಹಾಗಾದರೆ ‘ಆರ್​ಆರ್​ಆರ್​’ ಸಿನಿಮಾ ಓಟಿಟಿಯಲ್ಲಿ ಲಭ್ಯವಾಗೋದು ಯಾವಾಗ? ಈ ಪ್ರಶ್ನೆಗೆ ಚಿತ್ರತಂಡದವರಿಂದಲೇ ಉತ್ತರ ಸಿಕ್ಕಿದೆ.

ತೆಲುಗಿನಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾ ಕನ್ನಡ, ಮಲಯಾಳಂ, ಹಿಂದಿ, ತಮಿಳು ಮುಂತಾದ ಭಾಷೆಗಳಿಗೆ ಡಬ್​ ಆಗಿದೆ. ಹಾಗಾಗಿ ಎಲ್ಲ ರಾಜ್ಯಗಳಿಗೂ ತೆರಳಿ ‘ಆರ್​ಆರ್​ಆರ್​’ ಚಿತ್ರತಂಡ ಪ್ರಚಾರ ಮಾಡುತ್ತಿದೆ. ಈ ವೇಳೆ ಓಟಿಟಿ ರಿಲೀಸ್​ ಬಗ್ಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ಚಿತ್ರತಂಡದ ಕಡೆಯಿಂದ ಉತ್ತರ ಸಿಕ್ಕಿದೆ. ಚಿತ್ರಮಂದಿರದಲ್ಲಿ ಈ ಸಿನಿಮಾ ತೆರೆಕಂಡು ಕನಿಷ್ಠ 90 ದಿನಗಳು ಕಳೆದ ಬಳಿಕ ಓಟಿಟಿಯಲ್ಲಿ ಪ್ರಸಾರ ಆರಂಭಿಸಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಆದರೆ ನಿರ್ದಿಷ್ಟ ದಿನಾಂಕವನ್ನು ಅವರು ತಿಳಿಸಿಲ್ಲ.

ಆರ್​ಆರ್​ಆರ್​ ಸಿನಿಮಾದ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಅವತರಣಿಕೆಗಳ ಓಟಿಟಿ ಪ್ರಸಾರದ ಹಕ್ಕನ್ನು ಜೀ5 ಸಂಸ್ಥೆ ಖರೀದಿಸಿದೆ. ಹಿಂದಿ ವರ್ಷನ್​ ನೆಟ್​ಫ್ಲಿಕ್ಸ್​ ಪಾಲಾಗಿದೆ. ಓಟಿಟಿ ವಹಿವಾಟಿನಿಂದಾಗಿ ಈ ಚಿತ್ರಕ್ಕೆ ಬಹುಕೋಟಿ ರೂಪಾಯಿ ಆದಾಯ ಹರಿದು ಬಂದಿದೆ.

ಕನ್ನಡದ ನಟ ಅರುಣ್​ ಸಾಗರ್​ ಕೂಡ ಈ ಚಿತ್ರದಲ್ಲೊಂದು ಪಾತ್ರ ಮಾಡಿದ್ದಾರೆ. ಎಂಎಂ ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ‘ಜನನಿ’, ‘ಹಳ್ಳಿ ನಾಟು’ ಹಾಡುಗಳು ಜನಮನ ಗೆದ್ದಿವೆ. ಟ್ರೇಲರ್​ ನೋಡಿದ ಬಳಿಕ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.

ಇದನ್ನೂ ಓದಿ:

RRR: ಬೆಂಗಳೂರಲ್ಲಿ ತೆಲುಗು ನಟರನ್ನು ನೋಡಲು ಮುಗಿಬಿದ್ದ ಜನ; ಆರ್​ಆರ್​ಆರ್​ ಸುದ್ದಿಗೋಷ್ಠಿ ವೇಳೆ ನೂಕುನುಗ್ಗಲು

RRR​ ಸುದ್ದಿಗೋಷ್ಠಿ: ಕರುನಾಡಿಗೆ ಬಂದ ರಾಜಮೌಳಿ, ಆಲಿಯಾ, ರಾಮ್​ ಚರಣ್​, ಜ್ಯೂ. ಎನ್​ಟಿಆರ್​ ಹೇಳಿದ್ದೇನು?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ