IMDb top 10 of 2021: ಈ ವರ್ಷದ ಟಾಪ್​ 10 ಸಿನಿಮಾ, ವೆಬ್​ ಸೀರಿಸ್​ ಯಾವುದು? ಇಲ್ಲಿದೆ ಮಾಹಿತಿ  

ಜನವರಿ 1ರಿಂದ ನವೆಂಬರ್ 29ರವರೆಗೆ ರಿಲೀಸ್​ ಆದ ಸಿನಿಮಾಗಳನ್ನು ಇಟ್ಟುಕೊಂಡು ರೇಟಿಂಗ್​ ನೀಡಲಾಗಿದೆ. ಈ ಪಟ್ಟಿಯಲ್ಲಿ ತಮಿಳಿನ ‘ಜೈ ಭೀಮ್​’ ಸಿನಿಮಾ ಟಾಪ್​ನಲ್ಲಿದೆ.

IMDb top 10 of 2021: ಈ ವರ್ಷದ ಟಾಪ್​ 10 ಸಿನಿಮಾ, ವೆಬ್​ ಸೀರಿಸ್​ ಯಾವುದು? ಇಲ್ಲಿದೆ ಮಾಹಿತಿ  
ಈ ವರ್ಷದ ಟಾಪ್​ 10 ಸಿನಿಮಾ, ವೆಬ್​ ಸೀರಿಸ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 10, 2021 | 5:42 PM

2021ರ ಕೊನೆಯ ತಿಂಗಳಲ್ಲಿ ನಾವಿದ್ದೇವೆ. ಇನ್ನು 21 ದಿನಗಳು ಕಳೆದರೆ ಈ ವರ್ಷ ಪೂರ್ಣಗೊಳ್ಳಲಿದೆ. ಕಳೆದ ವರ್ಷದಂತೆ ಈ ವರ್ಷವೂ ಕೊವಿಡ್​ ಕಾಣಿಸಿಕೊಂಡಿತ್ತು. ಇದರ ಪರಿಣಾಮ ಚಿತ್ರರಂಗದ ಮೇಲಾಗಿತ್ತು. ಹೀಗಾಗಿ ಸಿನಿಮಾ ಕ್ಷೇತ್ರದಲ್ಲಿ ಸರಿಯಾದ ಬೆಳೆ ತೆಗೆಯೋಕೆ ಸಾಧ್ಯವಾಗಿಲ್ಲ. ಆದಾಗ್ಯೂ ವರ್ಷದ ಆರಂಭದಲ್ಲಿ ಹಾಗೂ ಕೊನೆಯಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್​ ಆಗಿವೆ. ಒಟಿಟಿ ವ್ಯಾಪ್ತಿ ಹೆಚ್ಚುತ್ತಿರುವುದರಿಂದ ಹಲವರು ವೆಬ್​ ಸೀರಿಸ್​ನತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಹಾಗಾದರೆ, ಸಿನಿಮಾ ಹಾಗೂ ವೆಬ್​ ಸೀರಿಸ್​ಗಳಿಗೆ ರೇಟಿಂಗ್​ ನೀಡುವ ಐಎಂಡಿಬಿಯಲ್ಲಿ ಈ ವರ್ಷ ಟಾಪ್​ನಲ್ಲಿರುವ ಸಿನಿಮಾಗಳು ಯಾವವು?  ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಜನವರಿ 1ರಿಂದ ನವೆಂಬರ್ 29ರವರೆಗೆ ರಿಲೀಸ್​ ಆದ ಸಿನಿಮಾಗಳನ್ನು ಇಟ್ಟುಕೊಂಡು ರೇಟಿಂಗ್​ ನೀಡಲಾಗಿದೆ. ಈ ಪಟ್ಟಿಯಲ್ಲಿ ತಮಿಳಿನ ‘ಜೈ ಭೀಮ್​’ ಸಿನಿಮಾ ಟಾಪ್​ನಲ್ಲಿದೆ. ಸೂರ್ಯ ನಟನೆಯ ಈ ಸಿನಿಮಾ ಎಲ್ಲ ಕಡೆಗಳಲ್ಲಿ ಮೆಚ್ಚುಗೆ ಗಳಿಸಿಕೊಂಡಿತ್ತು. ಹೀಗಾಗಿ, ಐಎಂಡಿಬಿಯಲ್ಲಿ ಪ್ರಥಮ ಸ್ಥಾನ ಇದಕ್ಕೆ ದೊರೆತಿದೆ. ಸಿದ್ದಾರ್ಥ್​ ಮಲ್ಹೋತ್ರಾ ನಟನೆಯ ಶೇರ್​ಷಾ ಎರಡನೇ ಸ್ಥಾನದಲ್ಲಿದೆ.

ವೆಬ್​ ಸೀರಿಸ್​ಗಳ ಪೈಕಿ ‘ಆಸ್ಪಿರಂಟ್ಸ್​’ ಮೊದಲ ಸ್ಥಾನ ಕಾಯ್ದುಕೊಂಡಿದೆ. ‘ದಿ ಫ್ಯಾಮಿಲಿ ಮ್ಯಾನ್’ ಮೊದಲಾದ ಸೀರಿಸ್​ಗಳು ಕೂಡ ಈ ಪಟ್ಟಿಯಲ್ಲಿವೆ. ಹಾಗಾದರೆ, ಈ ಬಾರಿ ಟಾಪ್​ 10ರಲ್ಲಿ ಇರುವ ಸಿನಿಮಾ ಹಾಗೂ ವೆಬ್​ ಸೀರಿಸ್​ಗಳು ಯಾವವು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸಿನಿಮಾ

  1. ಜೈ ಭೀಮ್​
  2. ಶೇರ್​ಷಾ
  3. ಸೂರ್ಯವಂಶಿ
  4. ಮಾಸ್ಟರ್​
  5. ಸರ್ದಾರ್​ ಉಧಮ್​
  6. ಮಿಮಿ
  7.  ಕರ್ಣನ್​
  8. ಶಿದ್ದತ್​
  9. ದೃಶ್ಯಂ​ 2
  10. ಹಸೀನ್​ ದಿಲ್​ರುಬಾ

ವೆಬ್​ ಸೀರಿಸ್​  

  1. ಆಸ್ಪಿರೆಂಟ್ಸ್​
  2. ಢಿಂಡೋರಾ
  3. ದಿ ಫ್ಯಾಮಿಲಿ ಮ್ಯಾನ್​
  4. ದಿ ಲಾಸ್ಟ್​ ಅವರ್
  5. ಸನ್​ ಫ್ಲವರ್​
  6. ಕ್ಯಾಂಡಿ
  7. ರೇ
  8. ಗ್ರಹಣ್​
  9. ನವೆಂಬರ್ ಸ್ಟೋರಿ
  10. ಮುಂಬೈ ಡೈರೀಸ್​ 26/11

ಸಿನಿಮಾಗಳಿಗೆ ನೀಡುವ ರೇಟಿಂಗ್ ನೋಡಿಕೊಂಡು ಚಿತ್ರ ವೀಕ್ಷಣೆ ಮಾಡುವವರು ಅನೇಕರಿದ್ದಾರೆ. ಅವರಿಗೆ ಐಎಂಡಿಬಿ ಸಹಕಾರಿಯಾಗಲಿದೆ. ಸಿನಿಮಾಗೆ ಕೊಡುವ ಅಂಕವನ್ನು ನೋಡಿಕೊಂಡು ಚಿತ್ರಮಂದಿರ ಅಥವಾ ಒಟಿಟಿಯತ್ತ ಹೆಜ್ಜೆ ಹಾಕಬಹುದು. ಇದರಿಂದ ಸಮಯ ಹಾಗೂ ಹಣ ಎರಡೂ ಉಳಿತಾಯ ಆಗಲಿದೆ.

ಇದನ್ನೂ ಓದಿ: ‘ಆರ್​ಆರ್​ಆರ್​’ ಸಿನಿಮಾದ ಅಸಲಿ ಹೀರೋ ಯಾರು? ಸತ್ಯ ಬಿಚ್ಚಿಟ್ಟ ರಾಜಮೌಳಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ