- Kannada News Photo gallery Actress Mouni Roy ties the knot with Suraj Nambiar in Goa: Here is the Wedding Photos
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೌನಿ ರಾಯ್; ಇಲ್ಲಿದೆ ಅದ್ದೂರಿ ಮದುವೆಯ ಕಲರ್ಫುಲ್ ಫೋಟೋ ಆಲ್ಬಂ
Mouni Roy Marriage Photos: ಪ್ರಿಯಕರ ಸೂರಜ್ ನಂಬಿಯಾರ್ ಜೊತೆ ಮೌನಿ ರಾಯ್ ಹಸೆಮಣೆ ಏರಿದ್ದಾರೆ. ಗೋವಾದ ಒಂದು ರೆಸಾರ್ಟ್ನಲ್ಲಿ ಗುರುವಾರ (ಜ.27) ಈ ವಿವಾಹ ನೆರವೇರಿದೆ. ಮದುವೆ ಫೋಟೋಗಳು ವೈರಲ್ ಆಗಿವೆ.
Updated on: Jan 27, 2022 | 2:06 PM

Actress Mouni Roy ties the knot with Suraj Nambiar in Goa

Actress Mouni Roy ties the knot with Suraj Nambiar in Goa

ಉದ್ಯಮಿ ಆಗಿರುವ ಸೂರಜ್ ನಂಬಿಯಾರ್ ಅವರು ಕೇರಳ ಮೂಲದವರು. ಮೌನಿ ರಾಯ್ ಪಶ್ಚಿಮ ಬಂಗಾಳದವರು ಹಾಗಾಗಿ ಎರಡೂ ಕುಟುಂಬದ ಸಂಪ್ರದಾಯದ ಪ್ರಕಾರ ಮದುವೆ ನಡೆಯುತ್ತಿದೆ.

ಮಲಯಾಳಿ ಪದ್ಧತಿಯಂತೆ ಜ.27ರ ಬೆಳಗ್ಗೆ ಮದುವೆ ನಡೆದಿದೆ. ಸಂಜೆ ಬೆಂಗಾಲಿ ಸಂಪ್ರದಾಯದ ಪ್ರಕಾರ ವಿವಾಹ ಶಾಸ್ತ್ರಗಳು ನೆರವೇರಲಿವೆ. ಮದುವೆಯ ಫೋಟೋ ಕಂಡು ಫ್ಯಾನ್ಸ್ ಖುಷಿಯಾಗಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಈ ಮದುವೆಗೆ ಎಲ್ಲರನ್ನೂ ಆಹ್ವಾನಿಸಲು ಸಾಧ್ಯವಾಗಿಲ್ಲ. ಕೇವಲ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ. ಕಿರುತೆರೆ ಮತ್ತು ಸಿನಿಮಾ ಕ್ಷೇತ್ರದ ಆಪ್ತರು ಈ ಮದುವೆಗೆ ಸಾಕ್ಷಿ ಆಗಿದ್ದಾರೆ.

ಹಿಂದಿ ಕಿರುತೆರೆಯಲ್ಲಿ ಮೌನಿ ರಾಯ್ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಕ್ಯೂಂ ಕಿ ಸಾಸ್ ಭಿ ಕಭಿ ಬಹು ಥಿ, ನಾಗಿನ್ ಮುಂತಾದ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಅವರು ಮನೆ ಮಾತಾಗಿದ್ದಾರೆ.




