WhatsApp: ವಾಟ್ಸ್ಆ್ಯಪ್ ಪರಿಚಯಿಸಲಿರುವ ಹೊಸ ಅಪ್ಡೇಟ್ ಕಂಡು ದಂಗಾದ ಗ್ರೂಪ್ ಅಡ್ಮಿನ್​ಗಳು: ಏನದು ಆಯ್ಕೆ?

WhatsApp group admins: ವಾಟ್ಸ್ಆ್ಯಪ್ ಇದೀಗ ಗ್ರೂಪ್ ಅಡ್ಮಿನ್​ಗಳಿಗೆ ವಿಶೇಷ ಅಧಿಕಾರವೊಂದನ್ನು ನೀಡುವ ಫೀಚರ್ ಅನ್ನು ಪರಿಚಯಿಸುತ್ತಿದೆ. ಈ ಹೊಸ ವೈಶಿಷ್ಟ್ಯಗಳು ಶೀಘ್ರದಲ್ಲೇ ಬರಬಹುದು. ಹೀಗಾಗಿ ಗ್ರೂಪ್‌ ಅಡ್ಮಿನ್‌ಗಳು ಸದಸ್ಯರ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಬಹುದು.

TV9 Web
| Updated By: Vinay Bhat

Updated on: Jan 27, 2022 | 3:38 PM

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ತನ್ನ ಬಳಕೆದಾರರ ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣ ವಾಟ್ಸ್ಆ್ಯಪ್ ಒಳಗೊಂಡಿರುವ ಫೀಚರ್ಸ್. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಸದಾ ಒಂದಲ್ಲ ಒಂದು ಹೊಸ ಆಯ್ಕೆಯನ್ನು ಪರಿಚಯಿಸಿ ಅಪ್ಡೇಟ್​ಗಳನ್ನು ನೀಡುವ ವಾಟ್ಸ್ಆ್ಯಪ್ ಇದೀಗ ಡಿಲೀಟ್ ಮೆಸೇಜ್ ಆಯ್ಕೆಯಲ್ಲಿ ಬದಲಾವಣೆ ತರಲು ಮುಂದಾಗಿದೆ.

1 / 7
ಹೌದು, ವಾಟ್ಸ್ಆ್ಯಪ್ ಇದೀಗ ಗ್ರೂಪ್ ಅಡ್ಮಿನ್​ಗಳಿಗೆ ವಿಶೇಷ ಅಧಿಕಾರವೊಂದನ್ನು ನೀಡುವ ಫೀಚರ್ ಅನ್ನು ಪರಿಚಯಿಸುತ್ತಿದೆ. ಈ  ಹೊಸ ವೈಶಿಷ್ಟ್ಯಗಳು ಶೀಘ್ರದಲ್ಲೇ ಬರಬಹುದು. ಹೀಗಾಗಿ ಗ್ರೂಪ್‌ ಅಡ್ಮಿನ್‌ಗಳು ಸದಸ್ಯರ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಬಹುದು.

2 / 7
ಇದರ ಪ್ರಕಾರ ಗ್ರೂಪ್ ಅಡ್ಮಿನ್​ಗಳು ಗ್ರೂಪ್​ನಲ್ಲಿ ಬಂದ ಯಾವುದೇ ಮೆಸೇಜ್​ಗಳನ್ನು ಡಿಲೀಟ್ ಮಾಡುವ ಅಧಿಕಾರ ಹೊಂದಿರುತ್ತಾರೆ. ಇದು ಸ್ಪಾಮ್ ಮೆಸೇಜ್ ಅಥವಾ ಯಾವುದಾದರು ಅಶ್ಲೀಲ ಸಂಭಾಷಣೆ, ವಿಡಿಯೋ, ಫೋಟೋಗಳನ್ನು ತೆರವು ಮಾಡಲು ಸಹಕಾರಿ ಆಗುತ್ತಾದೆ. ಅಂದರೆ, ಗ್ರೂಪ್​ನಲ್ಲಿ ಬೇರೆ ಯಾರಾದರು ಅನಗತ್ಯ ಮೆಸೇಜ್ಗಳನ್ನು ಕಳುಹಿಸಿದರೆ ಅದನ್ನು ಅಡ್ಮಿನ್ ಡಿಲೀಟ್ ಮಾಡಬಹುದಾಗಿದೆ.

3 / 7
ಗ್ರೂಪ್ ಅಡ್ಮಿನ್ ಡಿಲೀಟ್ ಮೆಸೇಜ್ ಆಯ್ಕೆ ಸದ್ಯಕ್ಕೆ ಪರೀಕ್ಷಾ ಹಂತದಲ್ಲಿದೆ.  2.22.1.1 ಅಪ್ಡೇಟ್​ನಲ್ಲಿ ಈ ಫೀಚರ್ಸ್ ಬಳಕೆದಾರರಿಗೆ ಸಿಗಲಿದೆಯಂತೆ. ಮೆಸೇಜ್ ಡಿಲೀಟ್ ಆದ ಸಂದರ್ಭ This was removed by an admin ಎಂದು ಕಾಣಿಸುತ್ತದೆ.

4 / 7
ವಾಟ್ಸ್ಆ್ಯಪ್​ನಲ್ಲಿ ಈ ವರ್ಷ 2022 ರಲ್ಲಿ ಸಾಲು ಸಾಲು ಹೊಸ ಅಪ್ಡೇಟ್​ಗಳು ಬರಲು ತಯಾರಾಗಿದೆ. ಸಂದೇಶ ಪ್ರತಿಕ್ರಿಯೆಗಳು, ಸಮುದಾಯಗಳು (message reactions, communities) ಆಯ್ಕೆಗಳು, ಲಾಗೌಟ್ ಆಯ್ಕೆ, ಲಾಸ್ಟ್ ಸೀನ್ ಕೆಲವರಿಗೆ ಮಾತ್ರ ಕಾಣುವಂತೆ ಮಾಡುವುದು ಸೇರಿದಂತೆ ಇನ್ನು ಕೆಲವು ಅನುಕೂಲಕರ ಆಯ್ಕೆಗಳನ್ನು ಪರಿಚಯಿಸಲು ವಾಟ್ಸ್ಆ್ಯಪ್ ಸಿದ್ಧತೆ ನಡೆಸುತ್ತಿದೆ.

5 / 7
ಇದರ ಜೊತೆಗೆ ವಾಟ್ಸ್​ಆ್ಯಪ್​ನಲ್ಲಿ ಚಾಟ್‌ಗಳಲ್ಲಿ ವೈಯಕ್ತಿಕ ವಾಲ್‌ಪೇಪರ್‌ಗಳನ್ನು ಬದಲಾಯಿಸಲು ಅವಕಾಶ ನೀಡಲಿದೆ. ಅಂದರೆ ವಾಟ್ಸ್​ಆ್ಯಪ್​ ವೈಯುಕ್ತಿಕ ಚಾಟ್‌ ಬ್ಯಾಕ್‌ಗ್ರೌಂಡ್‌ ವಾಲ್‌ ಪೇಪರ್‌ನಲ್ಲಿ ಹೊಸ ಫೀಚರ್ಸ್‌ ಬರಲಿದೆ. ಈ ಹೊಸ ಫೀಚರ್ ಮೂಲಕ ಪ್ರತಿ ಚಾಟ್ ಮತ್ತು ಗುಂಪಿಗೆ ನಿಮಗಿಷ್ಟವಾದ ಬ್ಯಾಕ್‌ಗ್ರೌಂಡ್‌ ಸೆಟ್‌ ಮಾಡಬಹುದು. ಸದ್ಯದಲ್ಲೇ ಈ ಆಯ್ಕೆ ಬಳಕೆದಾರರಿಗೆ ಸಿಗಲಿದೆಯಂತೆ. ಇದಲ್ಲದೆ ವಾಟ್ಸ್​ಆ್ಯಪ್​ iOS 15 ನಲ್ಲಿ ಹೊಸ ಫೀಚರ್ಸ್‌ಗಳನ್ನು ಸೇರಿಸಿದೆ. ಇದು ಫೋಕಸ್ ಮೋಡ್‌ಗೆ ಬೆಂಬಲವನ್ನು ನೀಡಲಿದೆ.

6 / 7
ಅಲ್ಲದೆ ನೊಟಿಫಿಕೇಶನ್‌ ಜೊತೆಗೆ ಗ್ರೂಪ್‌ ಮತ್ತು ಪ್ರೊಫೈಲ್ ಚಿತ್ರಗಳನ್ನು ಡಿಸ್‌ಪ್ಲೇ ಮಾಡಲಿದೆ. ವಾಯ್ಸ್‌ ನೋಟ್‌ಗಳನ್ನು ರೆಕಾರ್ಡ್ ಮಾಡುವಾಗ ಅಪ್ಲಿಕೇಶನ್ ವಿರಾಮ ಮತ್ತು ಪುನರಾರಂಭದ ಬೆಂಬಲವನ್ನು ಸಹ ಸೇರಿಸಿದೆ.

7 / 7
Follow us