ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಈ ಆಹಾರಗಳು ಸಹಾಯಕ
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಪದಾರ್ಥಗಳು ಇಂದಿನ ದಿನಗಳಲ್ಲಿ ಅಗತ್ಯವಾಗಿದೆ. ರೋಗಗಳಿಂದ ದೇಹವನ್ನು ರಕ್ಷಿಸಿಕೊಳ್ಳಲು ಆಹಾರ ಸಹಾಯಕವಾಗಿರುತ್ತದೆ. ಹೀಗಾಗಿ ಈ ಆಹಾರಗಳು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ.
Updated on: Jan 27, 2022 | 4:11 PM

ಕೊರೋನಾ ಆವರಿಸಿದ ದಿನದಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವತ್ತ ಹೆಚ್ಚಿನ ಗಮನ ನೀಡುವಂತಾಗಿದೆ. ಆದ್ದರಿಂದ ಈ ಆಹಾರಗಳನ್ನು ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

ಗೆಣಸಿನಲ್ಲಿರುವ ವಿಟಮಿನ್ ಎ ಅಂಶ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಖರ್ಜೂರದಲ್ಲಿರುವ ಫೈಬರ್, ಮಿನರಲ್ಸ್ ಅಂಶಗಳು ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ನೀಡುತ್ತವೆ.

ಆ್ಯಂಟಿ ಆಕ್ಸಿಡೆಂಟ್ ಮತ್ತು ಒಮೇಗಾ 3 ಇರುವ ಗೋಡಂಬಿ, ಬಾದಾಮಿಯು ದೇಹಕ್ಕೆ ಬೇಕಾದ ಪೋಷಕೋಂಶಗಳನ್ನು ನೀಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಕ್ಯಾರೆಟ್, ಮೂಲಂಗಿಯಂತಹ ತರಕಾರಿಗಳು ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ನೀಡಿ ರೋಗದಿಂದ ಹೋರಾಡುವ ಶಕ್ತಿಯನ್ನು ನೀಡುತ್ತವೆ.

ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ತುಪ್ಪ ಸಹಾಯಕವಾಗಿದೆ. ಅಲ್ಲದೆ ದೇಹವನ್ನು ಸದೃಢವಾಗಿಡಲು ನೆರವಾಗುತ್ತದೆ.

ನೆಲ್ಲಿಕಾಯಿಯಲ್ಲಿನ ವಿಟಮಿನ್ ಸಿ ಅಂಶಗಳು ನೆಗಡಿ, ಶೀತ, ಕೆಮ್ಮಿನಂತಹ ಅನಾರೋಗ್ಯದಂತಹ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ,

ಯಥೇಚ್ಛವಾದ ಕಬ್ಬಿಣಾಂಶ ಹೊಂದಿರುವ ಬೆಲ್ಲವು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಸಾಸಿವೆ ಕಾಳಿನ ಎಲೆಗಳು ವಿಟಮಿನ್ ಎ ಮತ್ತು ಸಿ ಗುಣಗಳನ್ನು ಹೊಂದಿದೆ. ಹೀಗಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಂಶಗಳು ಇದರಲ್ಲಿವೆ.

ರಾಗಿಯು ದೇಹಕ್ಕೆ ಅಗತ್ಯವಿರುವ ಪ್ರೋಟೀನ್ಗಳನ್ನು ನೀಡುತ್ತದೆ. ಇದು ದೇಹವನ್ನು ಬೆಚ್ಚಗಿರಿಸಿ ಚಳಿಯಿಂದ ರಕ್ಷಿಸುತ್ತದೆ.



















