IND vs WI: ಭಾರತ- ವಿಂಡೀಸ್ ಏಕದಿನ ಸರಣಿ; ಅತಿ ಹೆಚ್ಚು ಶತಕ ಸಿಡಿಸಿದ ಉಭಯ ತಂಡದ ಆಟಗಾರರಿವರು

IND vs WI: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಸ್ಕೋರರ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. 39 ಪಂದ್ಯಗಳಲ್ಲಿ 9 ಶತಕ ಸಿಡಿಸಿರುವ ವಿರಾಟ್ ವೆಸ್ಟ್ ಇಂಡೀಸ್ ವಿರುದ್ಧ ಗರಿಷ್ಠ 157 ರನ್ ಗಳಿಸಿದ್ದಾರೆ.

TV9 Web
| Updated By: ಪೃಥ್ವಿಶಂಕರ

Updated on: Jan 27, 2022 | 4:10 PM

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ODI ಸರಣಿಯು ಫೆಬ್ರವರಿ 6 ರಂದು ಪ್ರಾರಂಭವಾಗುತ್ತಿದ್ದು, ಈಗ ಎರಡು ತಂಡಗಳ ನಡುವೆ ಈಗಾಗಲೇ ನಿರ್ಮಾಣವಾಗಿರುವ ಕೆಲವು ದಾಖಲೆಗಳ ಬಗ್ಗೆ ನಿಮಗೆ ಹೇಳಲಿದ್ದೇವೆ. ವಿಶೇಷ ಸಂಗತಿಯೆಂದರೆ ವಿರಾಟ್ ಕೊಹ್ಲಿ ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

1 / 9
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಸ್ಕೋರರ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. 39 ಪಂದ್ಯಗಳಲ್ಲಿ 9 ಶತಕ ಸಿಡಿಸಿರುವ ವಿರಾಟ್ ವೆಸ್ಟ್ ಇಂಡೀಸ್ ವಿರುದ್ಧ ಗರಿಷ್ಠ 157 ರನ್ ಗಳಿಸಿದ್ದಾರೆ.

2 / 9
ಸಚಿನ್ ತೆಂಡೂಲ್ಕರ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ 39 ಪಂದ್ಯಗಳಲ್ಲಿ 4 ಶತಕಗಳನ್ನು ಬಾರಿಸಿದ್ದಾರೆ. ವಿಂಡೀಸ್ ವಿರುದ್ಧ ಲಿಟ್ಲ್ ಮಾಸ್ಟರ್ ಅವರ ಗರಿಷ್ಠ ಸ್ಕೋರ್ 141 ಆಗಿದೆ.

3 / 9
ಕ್ರಿಸ್ ಗೇಲ್ ಭಾರತದ ವಿರುದ್ಧ 41 ಏಕದಿನ ಪಂದ್ಯಗಳಲ್ಲಿ 4 ಶತಕಗಳನ್ನು ಬಾರಿಸಿದ್ದಾರೆ. ಕ್ರಿಸ್ ಗೇಲ್ ಅವರ ಗರಿಷ್ಠ ಸ್ಕೋರ್ 140.

4 / 9
ರೋಹಿತ್ ಶರ್ಮಾ ನಾಲ್ಕನೇ ಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ 33 ಏಕದಿನ ಪಂದ್ಯಗಳಲ್ಲಿ 3 ಶತಕ ಸಿಡಿಸಿರುವ ರೋಹಿತ್ 162 ರನ್ ಗಳಿಸಿ ಗರಿಷ್ಠ ಸ್ಕೋರರ್ ಆಗಿದ್ದಾರೆ.

5 / 9
ಪ್ರಸ್ತುತ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಕೂಡ ವೆಸ್ಟ್ ಇಂಡೀಸ್ ವಿರುದ್ಧ 3 ಶತಕ ಬಾರಿಸಿದ್ದಾರೆ. ವಿಂಡೀಸ್ ವಿರುದ್ಧ ಒಟ್ಟು 40 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

6 / 9
ವೆಸ್ಟ್ ಇಂಡೀಸ್ ವಿರುದ್ಧ ಯುವರಾಜ್ ಸಿಂಗ್ ಕೂಡ 3 ಶತಕಗಳನ್ನು ಬಾರಿಸಿದ್ದರು. ವೆಸ್ಟ್ ಇಂಡೀಸ್ ವಿರುದ್ಧ ಯುವಿ 31 ಪಂದ್ಯಗಳನ್ನು ಆಡಿದ್ದಾರೆ.

7 / 9
ವೆಸ್ಟ್ ಇಂಡೀಸ್‌ನ ಸ್ಯಾಮ್ಯುಯೆಲ್ಸ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ. ಅವರು ಭಾರತದ ವಿರುದ್ಧ 44 ಪಂದ್ಯಗಳನ್ನು ಆಡಿದ್ದಾರೆ ಮತ್ತು 3 ಶತಕಗಳನ್ನು ಗಳಿಸಿದ್ದಾರೆ.

8 / 9
ವೆಸ್ಟ್ ಇಂಡೀಸ್ ನ ಗಾರ್ಡನ್ ಗ್ರೀನಿಡ್ಜ್ ಕೂಡ ಭಾರತದ ವಿರುದ್ಧ 3 ಶತಕಗಳನ್ನು ಬಾರಿಸಿದ್ದರು. ಭಾರತದ ವಿರುದ್ಧ ಒಟ್ಟು 24 ಪಂದ್ಯಗಳನ್ನು ಆಡಿದ್ದಾರೆ.

9 / 9
Follow us