ರಿಲೀಸ್​ ದಿನಾಂಕ ಲಾಕ್​ ಮಾಡಿದ ‘ವೀರಂ’; ಮೇ 6ಕ್ಕೆ ಪ್ರಜ್ವಲ್​ ದೇವರಾಜ್​ ಸಿನಿಮಾ ಬಿಡುಗಡೆ

ರಿಲೀಸ್​ ದಿನಾಂಕ ಲಾಕ್​ ಮಾಡಿದ ‘ವೀರಂ’; ಮೇ 6ಕ್ಕೆ ಪ್ರಜ್ವಲ್​ ದೇವರಾಜ್​ ಸಿನಿಮಾ ಬಿಡುಗಡೆ
ಪ್ರಜ್ವಲ್​ ದೇವರಾಜ್​, ನಿರ್ದೇಶಕ ಕುಮಾರ್​ ರಾಜ್​, ನಿರ್ಮಾಪಕ ಶಶಿಧರ್​ ಕೆ.ಎಂ.

Veeram Movie Release Date: ಪ್ರಜ್ವಲ್​ ದೇವರಾಜ್, ರಚಿತಾ ರಾಮ್​ ಅಭಿನಯದ ‘ವೀರಂ’ ಸಿನಿಮಾ ಮೇ 6ರಂದು ರಿಲೀಸ್​ ಆಗಲಿದೆ. ಈ ಚಿತ್ರದಲ್ಲಿ ವಿಷ್ಣುವರ್ಧನ್​ ಅಭಿಮಾನಿಯಾಗಿ ಪ್ರಜ್ವಲ್​​ ಕಾಣಿಸಿಕೊಳ್ಳಲಿದ್ದಾರೆ.

TV9kannada Web Team

| Edited By: Madan Kumar

Jan 27, 2022 | 12:06 PM


ಎಲ್ಲ ಭಾಷೆಯ ಚಿತ್ರರಂಗದಲ್ಲೂ ಈಗ ರಿಲೀಸ್​ ದಿನಾಂಕಕ್ಕಾಗಿ ಪೈಪೋಟಿ ಶುರುವಾಗಿದೆ. ಸೂಕ್ತ ಸಮಯದಲ್ಲಿ ತಮ್ಮ ಸಿನಿಮಾವನ್ನು ರಿಲೀಸ್​ ಮಾಡಬೇಕಾದ ಸವಾಲು ಎಲ್ಲ ನಿರ್ಮಾಪಕರ ಎದುರಿಗಿದೆ. ಕೊರೊನಾ ಮೂರನೇ ಅಲೆ ಹಾವಳಿಯಿಂದಾಗಿ ಚಿತ್ರೋದ್ಯಮದಲ್ಲಿ ಮತ್ತೆ ಅನಿಶ್ಚಿತತೆ ಶುರುವಾಯಿತು. ಅನೇಕ ದೊಡ್ಡ ದೊಡ್ಡ ಸಿನಿಮಾಗಳು ತಮ್ಮ ರಿಲೀಸ್​ ಡೇಟ್​ ಮುಂದೂಡಿಕೊಂಡವು. ‘ರಾಧೆ ಶ್ಯಾಮ್​’, ‘ಆರ್​ಆರ್​ಆರ್​’, ‘ಆಚಾರ್ಯ’ ರೀತಿಯ ಬಿಗ್​ ಬಜೆಟ್​ ಚಿತ್ರಗಳ ರಿಲೀಸ್​ ದಿನಾಂಕ ಮುಂದೂಡಿಕೆ ಆಗಿದ್ದರಿಂದ ಇತರೆ ಸಿನಿಮಾಗಳ ಮೇಲೆ ಪರಿಣಾಮ ಬೀರಿತು. ಅದರ ನಡುವೆಯೂ ಅನೇಕ ಸಿನಿಮಾಗಳು ಸೂಕ್ತ ಬಿಡುಗಡೆ ದಿನಾಂಕವನ್ನು ಲಾಕ್​ ಮಾಡಿಕೊಳ್ಳುತ್ತಿವೆ. ಪ್ರಜ್ವಲ್​ ದೇವರಾಜ್​ (Prajwal Devaraj) ನಟನೆಯ ‘ವೀರಂ’ ಸಿನಿಮಾ ಕೂಡ ಕೂಡ ತೆರೆಕಾಣಲು ಸಜ್ಜಾಗಿದೆ. ಮೇ 6ರಂದು ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದಾರೆ. ಈ ಚಿತ್ರಕ್ಕೆ ಶಶಿಧರ್​ ಕೆ.ಎಂ. ಬಂಡವಾಳ ಹೂಡಿದ್ದಾರೆ. ಕುಮಾರ್​ ರಾಜ್​ ನಿರ್ದೇಶನ ಮಾಡಿದ್ದಾರೆ. ಭಿನ್ನ ಗೆಟಪ್​ನಲ್ಲಿ ಪ್ರಜ್ವಲ್​ ದೇವರಾಜ್​ ಕಾಣಿಸಿಕೊಳ್ಳಲಿದ್ದು, ಈಗಾಗಲೇ ಟೀಸರ್​ ಮತ್ತು ಪೋಸ್ಟರ್​ಗಳ ಮೂಲಕ ‘ವೀರಂ’ (Veeram Kannada Movie) ಸಿನಿಮಾ ಹೈಪ್​ ಸೃಷ್ಟಿ ಮಾಡಿದೆ. ಈ ಚಿತ್ರದಲ್ಲಿ ಪ್ರಜ್ವಲ್​ಗೆ ರಚಿತಾ ರಾಮ್ (Rachita Ram)​ ಜೋಡಿ.

ಅನೇಕ ರಾಜ್ಯಗಳ ಚಿತ್ರಮಂದಿರಗಳಲ್ಲಿ ಇನ್ನೂ 50-50 ಆಕ್ಯುಪೆನ್ಸಿ ನಿಯಮ ಜಾರಿಯಲ್ಲಿದೆ. ಕೊರೊನಾ ಪಾಟಿಸಿವ್​ ಪ್ರಕರಣಗಳ ಸಂಖ್ಯೆ ಇಳಿಮುಖ ಆದ ನಂತರವೇ ಶೇ.100ರಷ್ಟು ಆಸನಭರ್ತಿಗೆ ಅವಕಾಶ ಸಿಗಲಿದೆ. ಆ ರೀತಿ ಸಹಜ ವಾತಾವರಣ ನಿರ್ಮಾಣ ಆಗಲು ಇನ್ನೂ ಒಂದಷ್ಟು ದಿನ ಕಾಯಬೇಕಿರುವುದು ಅನಿವಾರ್ಯ. ಅದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ‘ವೀರಂ’ ಸಿನಿಮಾ ರಿಲೀಸ್​ ಡೇಟ್​ ಘೋಷಿಸಿದೆ. ಎಲ್ಲವೂ ಪ್ಲ್ಯಾನ್​ ಪ್ರಕಾರವೇ ನಡೆದರೆ ಮೇ 6ರಂದು ಅದ್ದೂರಿಯಾಗಿ ಈ ಸಿನಿಮಾ ಬಿಡುಗಡೆ ಆಗಲಿದೆ.

ಈ ಸಿನಿಮಾದಲ್ಲಿ ವಿಷ್ಣುವರ್ಧನ್​ ಅಭಿಮಾನಿಯಾಗಿ ಪ್ರಜ್ವಲ್​ ದೇವರಾಜ್​ ಕಾಣಿಸಿಕೊಳ್ಳಲಿದ್ದಾರೆ. ಹೀರೋ ಕೈ ಮೇಲೆ ಇರುವ ವಿಷ್ಣು ದಾದಾ ಟ್ಯೂಟೂ ಸಖತ್ ಹೈಲೈಟ್​ ಆಗಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ರಚಿತಾ ರಾಮ್​ ನಟಿಸಿದ್ದಾರೆ. ಹಿರಿಯ ಕಲಾವಿದೆ ಶ್ರುತಿ ಕೂಡ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಶಿಷ್ಯ ದೀಪಕ್​, ಶ್ರೀನಗರ ಕಿಟ್ಟಿ, ಅಚ್ಯುತ್​ ಕುಮಾರ್​ ಮುಂತಾದವರಿಂದಾಗಿ ಈ ಸಿನಿಮಾದ ಪಾತ್ರವರ್ಗ ಹಿರಿದಾಗಿದೆ. ಸದ್ಯ ಈ ಸಿನಿಮಾಗೆ ಪೋಸ್ಟ್​ ಪ್ರೊಡಕ್ಷನ್​ ಕೆಲಸ ನಡೆಯುತ್ತಿದೆ.

ಲವಿತ್​ ಛಾಯಾಗ್ರಹಣ, ಅನೂಪ್​ ಸಿಳೀನ್​ ಸಂಗೀತ ನಿರ್ದೇಶನ, ರವಿಚಂದ್ರನ್​ ಸಂಕಲನ, ಡಿಫರೆಂಡ್​ ಡ್ಯಾನಿ ಸಾಹಸ ನಿರ್ದೇಶನ ‘ವೀರಂ’ ಚಿತ್ರಕ್ಕಿದೆ. ಈ ಹಿಂದೆ ‘ಡಾಟರ್​ ಆಫ್​ ಪಾರ್ವತಮ್ಮ’ ಸಿನಿಮಾವನ್ನು ನಿರ್ಮಾಣ ಮಾಡಿದ್ದ ಶಶಿಧರ್​ ಕೆ.ಎಂ. ಅವರು ‘ವೀರಂ’ ಚಿತ್ರವನ್ನು ಪಕ್ಕಾ ಮಾಸ್​ ಶೈಲಿಯಲ್ಲಿ ನಿರ್ಮಿಸಿದ್ದಾರೆ ಎಂಬುದಕ್ಕೆ ಟೀಸರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಸಿನಿಮಾ ನೋಡಲು ಪ್ರಜ್ವಲ್​ ದೇವರಾಜ್​ ಫ್ಯಾನ್ಸ್​ ಕಾಯುತ್ತಿದ್ದಾರೆ. ನಿರ್ಮಾಪಕ ಶಶಿಧರ್​ ಅವರಿಗೆ ನಿರ್ದೇಶನದಲ್ಲೂ ಆಸಕ್ತಿ ಇದೆ. ಅವರ ನಿರ್ದೇಶನದಲ್ಲಿ ‘ಶುಗರ್​ ಲೆಸ್​’ ಸಿನಿಮಾ ಮೂಡಿಬರುತ್ತಿದ್ದು, ಶೀಘ್ರದಲ್ಲೇ ಅದರ ರಿಲೀಸ್​ ಡೇಟ್​ ಕೂಡ ಘೋಷಣೆ ಆಗಲಿದೆ.

ಇದನ್ನೂ ಓದಿ:

ರಿಲೀಸ್​ ಡೇಟ್​ ಮುಂದೂಡಿಕೊಂಡ ‘ಗಜಾನನ ಆ್ಯಂಡ್​ ಗ್ಯಾಂಗ್​’; ಚಿತ್ರತಂಡ ನೀಡಿದ ಕಾರಣ ಏನು?

ಪುನೀತ್​ ನಟನೆಯ ‘ಜೇಮ್ಸ್​’ ಶೂಟಿಂಗ್​ ಮುಕ್ತಾಯ; ರಿಲೀಸ್​ ಡೇಟ್​ ತಿಳಿಯಲು ಕಾದಿರುವ ಅಭಿಮಾನಿಗಳು

Follow us on

Most Read Stories

Click on your DTH Provider to Add TV9 Kannada