‘ಮಾಫಿಯಾ’ ಚಿತ್ರಕ್ಕಾಗಿ ಗೆಟಪ್​ ಬದಲಿಸಿ ಕ್ಯಾನ್ಸರ್​ ಪೀಡಿತರಿಗೆ ಕೂದಲು ದಾನ ಮಾಡಿದ ಪ್ರಜ್ವಲ್​ ದೇವರಾಜ್​

TV9 Digital Desk

| Edited By: ಮದನ್​ ಕುಮಾರ್​

Updated on: Nov 30, 2021 | 4:10 PM

Prajwal Devaraj: ಪ್ರಜ್ವಲ್​ ದೇವರಾಜ್​ ನಟಿಸುತ್ತಿರುವ 35ನೇ ಚಿತ್ರವಾಗಿ ‘ಮಾಫಿಯಾ’ ಮೂಡಿಬರಲಿದೆ. ಡಿ.2ರಂದು ಈ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಶೂಟಿಂಗ್​ ಆರಂಭಿಸಲು ನಿರ್ದೇಶಕ ಲೋಹಿತ್​ ಸಕಲ ತಯಾರಿ ಮಾಡಿಕೊಂಡಿದ್ದಾರೆ.

‘ಮಾಫಿಯಾ’ ಚಿತ್ರಕ್ಕಾಗಿ ಗೆಟಪ್​ ಬದಲಿಸಿ ಕ್ಯಾನ್ಸರ್​ ಪೀಡಿತರಿಗೆ ಕೂದಲು ದಾನ ಮಾಡಿದ ಪ್ರಜ್ವಲ್​ ದೇವರಾಜ್​
ಲೋಹಿತ್ ಎಚ್., ಪ್ರಜ್ವಲ್ ದೇವರಾಜ್, ಕುಮಾರ್ ಬಿ.

ನಟ ಪ್ರಜ್ವಲ್​ ದೇವರಾಜ್​ (Prajwal Devaraj) ಅವರು ಡಿಫರೆಂಟ್​ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಜಂಟಲ್​ಮ್ಯಾನ್​, ಇನ್ಸ್​ಪೆಕ್ಟರ್​ ವಿಕ್ರಂ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದ ಅವರ ಕೈಯಲ್ಲಿ ಈಗ ಹಲವು ಚಿತ್ರಗಳಿವೆ. ಅರ್ಜುನ್​ ಗೌಡ, ವೀರಂ, ಅಬ್ಬರ, ಮಾಫಿಯಾ ಮುಂತಾದ ಸಿನಿಮಾಗಳ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಅಭಿಮಾನಿಗಳಿಗಾಗಿ ಪ್ರತಿ ಸಿನಿಮಾದಲ್ಲಿಯೂ ಅವರು ಬೇರೆ ಬೇರೆ ಗೆಟಪ್​ಗಳನ್ನು ಪ್ರಯತ್ನಿಸುತ್ತಿದ್ದಾರೆ. ‘ವೀರಂ’ ಚಿತ್ರದ ಪಾತ್ರಕ್ಕಾಗಿ ಉದ್ದ ಕೂದಲು ಬಿಟ್ಟಿದ್ದ ಪ್ರಜ್ವಲ್​ ದೇವರಾಜ್​ ಅವರು ‘ಮಾಫಿಯಾ’ (Mafia Kannada Movie) ಚಿತ್ರಕ್ಕಾಗಿ ಮತ್ತೆ ಗೆಟಪ್​ ಬದಲಿಸಿದ್ದಾರೆ. ‘ಮಮ್ಮಿ’, ‘ದೇವಕಿ’ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿರುವ ನಿರ್ದೇಶಕ ಲೋಹಿತ್​ ಎಚ್​. (Lohith H) ಅವರು ‘ಮಾಫಿಯಾ’ ಸಿನಿಮಾದಲ್ಲಿ ಪ್ರಜ್ವಲ್​ ದೇವರಾಜ್​ಗೆ ಆ್ಯಕ್ಷನ್​-ಕಟ್​ ಹೇಳಲಿದ್ದಾರೆ.

ಕಳೆದ ಎರಡು ವರ್ಷಗಳಿಂದಲೂ ಪ್ರಜ್ವಲ್​ ದೇವರಾಜ್​ ಅವರು ಉದ್ದ ಕೂದಲು ಬಿಟ್ಟಿದ್ದರು. ಆದರೆ ಈಗ ‘ಮಾಫಿಯಾ’ ಚಿತ್ರಕ್ಕಾಗಿ ಅವರು ಗೆಟಪ್​ ಚೇಂಜ್​ ಆಗುತ್ತಿದೆ. ಹಾಗಾಗಿ ಹೇರ್​ ಕಟ್​ ಮಾಡಿಸಿದ್ದಾರೆ. ವಿಶೇಷ ಎಂದರೆ, ತಮ್ಮ ಕೂದಲನ್ನು ಅವರು ಕ್ಯಾನ್ಸರ್​ ರೋಗಿಗಳಿಗಾಗಿ ದಾನ ಮಾಡಿದ್ದಾರೆ. ಆ ಮೂಲಕ ಇತರರಿಗೂ ಮಾದರಿ ಆಗಿದ್ದಾರೆ.  ಕ್ಯಾನ್ಸರ್​ ರೋಗಕ್ಕೆ ಚಿಕಿತ್ಸೆ ಪಡೆಯುವವರಿಗೆ ಕೂದಲು ಉದುರುತ್ತದೆ. ಅಂತವರಿಗೆ ಸಹಾಯ ಆಗಲಿ ಎಂದು ಅನೇಕರು ಕೂದಲು ದಾನ ಮಾಡುತ್ತಾರೆ. ‘ಪೊಗರು’ ಶೂಟಿಂಗ್​ ಮುಗಿದ ಬಳಿಕ ನಟ ಧ್ರುವ ಸರ್ಜಾ ಕೂಡ ಕೂದಲು ದಾನ ಮಾಡಿದ್ದರು. ಅನೇಕ ನಟಿಯರು ಕೂದಲು ದಾನ ಮಾಡಿದ ಉದಾಹರಣೆ ಕೂಡ ಇದೆ.

ಪ್ರಜ್ವಲ್​ ದೇವರಾಜ್​ ನಟಿಸುತ್ತಿರುವ 35ನೇ ಚಿತ್ರವಾಗಿ ‘ಮಾಫಿಯಾ’ ಮೂಡಿಬರಲಿದೆ. ಡಿ.2ರಂದು ಈ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಶೂಟಿಂಗ್​ ಆರಂಭಿಸಲು ನಿರ್ದೇಶಕ ಲೋಹಿತ್​ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಡಿ.6ರಿಂದ ಚಿತ್ರೀಕರಣ ಶುರು ಆಗಲಿದೆ. ಪ್ರಜ್ವಲ್​ ದೇವರಾಜ್​ ಅವರಿಗೆ ಜೋಡಿಯಾಗಿ ಕನ್ನಡದ ಬಹುಬೇಡಿಕೆಯ ನಟಿ ಅದಿತಿ ಪ್ರಭುದೇವ ಅವರು ನಟಿಸಲಿದ್ದಾರೆ.

ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ. ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ‘ಟಗರು’, ‘ಸಲಗ’ ಮುಂತಾದ ಚಿತ್ರಗಳಿಗೆ ಸಂಭಾಷಣೆ ಬರೆದು ಗಮನ ಸೆಳೆದಿರುವ ಮಾಸ್ತಿ ಅವರು ‘ಮಾಫಿಯಾ’ ಚಿತ್ರಕ್ಕೂ ಡೈಲಾಗ್​ ಬರೆಯುತ್ತಿದ್ದಾರೆ. ತರುಣ್ ಅವರು ಕ್ಯಾಮರಾ ಕೆಲಸ ನಿಭಾಯಿಸಲಿದ್ದಾರೆ. ಮುಹೂರ್ತದ ಬಳಿಕ ಈ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲಿದೆ.

ಇದನ್ನೂ ಓದಿ:

ಡಿಸೆಂಬರ್​ ಪೂರ್ತಿ ಮನರಂಜನೆಯ​ ಸುಗ್ಗಿ; ಪ್ರತಿ ವಾರವೂ ಬಿಗ್​ ರಿಲೀಸ್​: ಇಲ್ಲಿದೆ ಪೂರ್ತಿ ಲಿಸ್ಟ್​

ಓಟಿಟಿಯಲ್ಲಿ ಡಿಸೆಂಬರ್ ಧಮಾಕಾ; ಮನರಂಜನೆ ನೀಡಲು ಬರುತ್ತಿವೆ ಬಹುನಿರೀಕ್ಷಿತ ಸಿನಿಮಾ, ವೆಬ್​ ಸಿರೀಸ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada