ಪುನೀತ್ ಅಂದರೆ ಪಂಚಪ್ರಾಣ -ಅದಕ್ಕಾಗಿ ಧಾರವಾಡದ ಈ ಮಹಿಳೆ ಅಪ್ಪು ಸಮಾಧಿವರೆಗೆ ಓಡಿಕೊಂಡು ಬರುತ್ತಿದ್ದಾರೆ!

ದಾರಿ ಮಧ್ಯೆ ಎಲ್ಲಿ ಅನುಕೂಲ ಸಿಗುತ್ತದೆಯೋ ಅಲ್ಲಿಯೇ ಉಳಿದುಕೊಂಡು ಮತ್ತೆ ಹಗಲು ಹೊತ್ತಿನಲ್ಲಿ ಪ್ರಯಾಣ ಶುರು ಮಾಡಲಾಗುತ್ತದೆ. ಇನ್ನು ವಾಹನದಲ್ಲಿ ಅವಶ್ಯಕ ವಸ್ತುಗಳನ್ನು ತೆಗೆದುಕೊಳ್ಳಲಾಗಿದೆ. ಮಧ್ಯಾಹ್ನ ಹಾಗೂ ರಾತ್ರಿ ಹೊತ್ತಿನಲ್ಲಿ ಅಡುಗೆ ಮಾಡಿಕೊಂಡು, ಊಟ ಮಾಡಿ ಮತ್ತೆ ಪ್ರಯಾಣ ಮುಂದುವರೆಸಲಿರುವ ದಾಕ್ಷಾಯಿಣಿ, 13 ದಿನಕ್ಕೆ ಬೆಂಗಳೂರು ತಲುಪಲಿದ್ದಾರೆ. ಈ ವೇಳೆ ಅಪ್ಪು ಕುಟುಂಬಸ್ಥರನ್ನು ಭೇಟಿಯಾಗೋ ಇಚ್ಛೆ ಕೂಡ ಈ ಕುಟುಂಬಕ್ಕೆ ಇದೆ.

ಪುನೀತ್ ಅಂದರೆ ಪಂಚಪ್ರಾಣ -ಅದಕ್ಕಾಗಿ ಧಾರವಾಡದ ಈ ಮಹಿಳೆ ಅಪ್ಪು ಸಮಾಧಿವರೆಗೆ ಓಡಿಕೊಂಡು ಬರುತ್ತಿದ್ದಾರೆ!
ಧಾರವಾಡದ ಕುಟುಂಬದವರಿಗೆ ಪುನೀತ್ ರಾಜ್ ಅಂದರೆ ಪಂಚಪ್ರಾಣ -ಅದಕ್ಕಾಗಿ ರನ್ನಿಂಗ್ ಮಾಡಿಕೊಂಡು ಅಪ್ಪು ಸಮಾಧಿವರೆಗೆ ಮಹಿಳೆಯ ಪಯಣ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Nov 30, 2021 | 1:53 PM

ಪವರ್ ಸ್ಟಾರ್ ಪುನೀತ್ ರಾಜಕುಮಾರ ನಿಧನರಾಗಿ ಒಂದು ತಿಂಗಳು ಕಳೆದಿದೆ. ಒಂದು ತಿಂಗಳು ಕಳೆದರೂ ಇನ್ನೂ ಕೂಡ ಎಲ್ಲರ ಮನದಲ್ಲಿ ಅವರನ್ನು ಕಳೆದುಕೊಂಡ ನೋವು ಕೊಂಚವೂ ಕಡಿಮೆಯಾಗಿಲ್ಲ. ಅವರ ಸಮಾಜ ಸೇವಾ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತಾ ಅವರ ಅಭಿಮಾನಿಗಳು ತಾವು ಕೂಡ ಅಂಥದ್ದೇ ಕೆಲಸ ಮಾಡುತ್ತಿದ್ದಾರೆ. ಧಾರವಾಡದ ಕುಟುಂಬವೊಂದು ಪುನೀತ್ ರಾಜಕುಮಾರ್ ಅವರ ಅಭಿಮಾನಿಯಾಗಿದ್ದು, ಅವರನ್ನು ಕಣ್ಣಾರೆ ನೋಡಬೇಕೆಂದುಕೊಂಡಿತ್ತು. ಆದರೆ ಅದು ಕೊನೆಯವರೆಗೂ ಸಾಧ್ಯವಾಗಿರಲೇ ಇಲ್ಲ. ಇದೇ ಕಾರಣಕ್ಕೆ ಇದೀಗ ಆ ಕುಟುಂಬದ ಮಹಿಳೆಯೊಬ್ಬರು ಪುನೀತ್ ಸಮಾಧಿಗೆ ಹೋಗಿ, ಶ್ರದ್ಧಾಂಜಲಿ ಸಲ್ಲಿಸಲು ನಿರ್ಧರಿಸಿದ್ದಾರೆ. ಇದರಲ್ಲಿ ಏನು ವಿಶೇಷ ಅನ್ನೋದನ್ನು ಕೇಳಿದರೆ ಎಂಥವರೂ ಅಚ್ಚರಿಪಡುತ್ತಾರೆ.

ರನ್ನಿಂಗ್ ಮೂಲಕ ಅಪ್ಪು ಸಮಾಧಿವರೆಗೆ 13 ದಿನಗಳಲ್ಲಿ ಮಹಿಳೆಯ ಪಯಣ

ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ಉಮೇಶ ಪಾಟೀಲ್ ಕುಟುಂಬದವರಿಗೆ ಅಪ್ಪು ಅಂದರೆ ಪಂಚಪ್ರಾಣ. ಅವರ ಪತ್ನಿ ದಾಕ್ಷಾಯಿಣಿ ಪಾಟೀಲ್ ಅವರಿಗಂತೂ ಅಪ್ಪು ಅಂದರೆ ದೇವರ ಸಮಾನ. ಅಷ್ಟಕ್ಕೂ ಅಪ್ಪುನನ್ನು ದಾಕ್ಷಾಯಿಣಿ ಇಷ್ಟ ಪಡೋದಕ್ಕೆ ಕಾರಣ ಅಪ್ಪು ಫಿಟ್ ಅಂಡ್ ಫೈನ್ ಆಗಿದ್ದು. ದಾಕ್ಷಾಯಿಣಿ ಹೈಸ್ಕೂಲು, ಕಾಲೇಜು ದಿನಗಳಲ್ಲಿ ಒಳ್ಳೆಯ ಓಟಗಾರ್ತಿ. ವಿದ್ಯಾರ್ಥಿನಿಯಾಗಿದ್ದಾಗ ಅನೇಕ ಬಹುಮಾನಗಳನ್ನು ಕೂಡ ಪಡೆದುಕೊಂಡವರು. ಆದರೆ ಬಳಿಕ ಮದುವೆಯಾಗಿ ಸಂಸಾರದ ಜಂಜಡದಲ್ಲಿ ಬಿದ್ದುಬಿಟ್ಟರು. 30 ವರ್ಷದ ದಾಕ್ಷಾಯಿಣಿ ಅಪ್ಪು ಅವರ ಎಲ್ಲ ಸಿನಿಮಾಗಳನ್ನು ತಪ್ಪದೇ ನೋಡುತ್ತಿದ್ದರು. ಇದೀಗ ದಾಕ್ಷಾಯಿಣಿ ಮೂರು ಮಕ್ಕಳ ತಾಯಿ. ಇಂಥ ಮಹಿಳೆ ಇದೀಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ತಮ್ಮ ಮನಗುಂಡಿ ಗ್ರಾಮದಿಂದ ಬೆಂಗಳೂರಿನಲ್ಲಿನ ಪುನಿತ್ ಸಮಾಧಿವರೆಗೆ ಓಡುತ್ತಲೇ ಹೋಗಲಿರೋ ದಾಕ್ಷಾಯಿಣಿ, ಆ ಮೂಲಕ ತನ್ನ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ಇದೀಗ ಓಟವನ್ನು ಆರಂಭಿಸಿರೋ ದಾಕ್ಷಾಯಿಣಿ ಒಟ್ಟು 13 ದಿನಗಳಲ್ಲಿ ಬೆಂಗಳೂರು ತಲುಪಲಿದ್ದಾರೆ.

ಒಮ್ಮೆಯೂ ನೋಡಲು ಸಾಧ್ಯವಾಗಲಿಲ್ಲ ಅನ್ನುವ ನೋವು…

dharwad woman dakshayani patil an ardent fan runs all the way to puneeth rajkumar samadhi in bangalore 2

ದಾಕ್ಷಾಯಣಿ ಅಪ್ಪು ಅವರ ಅಪ್ಪಟ ಅಭಿಮಾನಿ. ಆದರೆ ಅಪ್ಪುನನ್ನು ಒಮ್ಮೆಯೂ ನೋಡಲು ಸಾಧ್ಯವಾಗಲಿಲ್ಲವಂತೆ. ಹೀಗಾಗಿ ಅವರ ಸಮಾಧಿ ದರ್ಶನವನ್ನಾದರೂ ಮಾಡೋಣ ಅಂದುಕೊಂಡರಂತೆ.

ದಾಕ್ಷಾಯಣಿ ಅಪ್ಪು ಅವರ ಅಪ್ಪಟ ಅಭಿಮಾನಿ. ಆದರೆ ಅಪ್ಪುನನ್ನು ಒಮ್ಮೆಯೂ ನೋಡಲು ಸಾಧ್ಯವಾಗಲಿಲ್ಲವಂತೆ. ಹೀಗಾಗಿ ಅವರ ಸಮಾಧಿ ದರ್ಶನವನ್ನಾದರೂ ಮಾಡೋಣ ಅಂದುಕೊಂಡರಂತೆ. ಅಲ್ಲಿಗೆ ಎಲ್ಲರಂತೆ ಸುಮ್ಮನೆ ಹೋಗುವ ಬದಲಿಗೆ ಅವರು ತೋರಿಸಿಕೊಟ್ಟಿರುವ ಆದರ್ಶಗಳ ಬಗ್ಗೆ ಜಾಗೃತಿ ಮೂಡಿಸುತ್ತಾ ಸಾಗಿದರೆ ಒಳ್ಳೆಯದು ಅಂತಾ ನಿರ್ಧರಿಸಿದರು. ಅದೇ ಓಟ ಹಾಗೂ ನಡಿಗೆ ಮೂಲಕ ಅಪ್ಪುನ ಸಮಾಧಿವರೆಗೆ ಹೋಗುವುದು. ನಿತ್ಯ ಸುಮಾರು 40 ಕಿಮೀ. ಓಡುವ ಹಾಗೂ ನಡೆಯುವ ಗುರಿ ಹೊಂದಿರುವ ದಾಕ್ಷಾಯಣಿ ಅವರು ದಾರಿ ಮಧ್ಯೆ ನೇತ್ರದಾನ, ರಕ್ತದಾನ, ದೇಹದಾನಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಿದ್ದಾರೆ.

ಪತ್ನಿ ಸಾಹಸಕ್ಕೆ ಪತಿ ಉಮೇಶ ಪಾಟೀಲ್, ಗ್ರಾಮಸ್ಥರ ಸಾಥ್

ಇನ್ನು ದಾಕ್ಷಾಯಿಣಿ ತಮ್ಮ ಅಭಿಪ್ರಾಯವನ್ನು ಪರಿ ಉಮೇಶ ಪಾಟೀಲ್ ಅವರ ಮುಂದೆ ಹೇಳಿಕೊಂಡಾಗ, ಇದಕ್ಕೆ ಪತಿ ಒಪ್ಪಿಗೆ ಸೂಚಿಸಿದರು. ತಾವು ಕೂಡ ಕುಟುಂಬ ಸಮೇತ ದಾಕ್ಷಾಯಿಣಿ ಹಿಂದೆ ಬರೋದಾಗಿ ಹೇಳಿದರು. ಇನ್ನು ಉಮೇಶ ಈ ವಿಚಾರವನ್ನು ಗ್ರಾಮಸ್ಥರಿಗೆ ತಿಳಿಸಿದಾಗ ಗ್ರಾಮಸ್ಥರಿಗೂ ಅಚ್ಚರಿಯುಂಟಾಯಿತು. ಏಕೆಂದರೆ ಈ ವಯಸ್ಸಿನಲ್ಲಿ ಸುಮಾರು 500 ಕಿ.ಮೀ. ವರೆಗೆ ಸಾಗುವುದು ಸಾಮಾನ್ಯ ಸಂಗತಿಯಲ್ಲ. ಆದರೆ ದಾಕ್ಷಾಯಿಣಿ ತನ್ನ ನಿರ್ಧಾರವನ್ನು ಗಟ್ಟಿಯಾಗಿ ಹೇಳಿದ್ದರಿಂದ ಅವರು ಕೂಡ ಸಾಥ್ ನೀಡಿದರು. ಈ ಅಭಿಯಾನಕ್ಕೆ ಬೇಕಾದಿರೋ ಆರ್ಥಿಕ ಸಹಾಯವನ್ನು ಕೂಡ ಮಾಡಲು ನಿರ್ಧರಿಸಿದರು. ಇದೀಗ ವಾಹನದೊಂದಿಗೆ ಕುಟುಂಬ ಸಮೇತರಾಗಿ ದಾಕ್ಷಾಯಿಣಿ ಹಾಗೂ ಕುಟುಂಬದವರು. ದಾಕ್ಷಾಯಿಣಿ ಓಡುತ್ತಾ ಸಾಗುತ್ತಿದ್ದರೆ, ವಾಹನದಲ್ಲಿ ಮೂರು ಮಕ್ಕಳು ಹಾಗೂ ತಾಯಿ ಜತೆಗೆ ಪತಿ ಉಮೇಶ ಸಾಗುತ್ತಿದ್ದಾರೆ.

ದಾರಿ ಮಧ್ಯೆ ಅನುಕೂಲ ಸಿಕ್ಕಲ್ಲಿ ವಾಸ್ತವ್ಯ

ದಾರಿ ಮಧ್ಯೆ ಎಲ್ಲಿ ಅನುಕೂಲ ಸಿಗುತ್ತದೆಯೋ ಅಲ್ಲಿಯೇ ಉಳಿದುಕೊಂಡು ಮತ್ತೆ ಹಗಲು ಹೊತ್ತಿನಲ್ಲಿ ಪ್ರಯಾಣ ಶುರು ಮಾಡಲಾಗುತ್ತದೆ. ಇನ್ನು ವಾಹನದಲ್ಲಿ ಅವಶ್ಯಕ ವಸ್ತುಗಳನ್ನು ತೆಗೆದುಕೊಳ್ಳಲಾಗಿದೆ. ಮಧ್ಯಾಹ್ನ ಹಾಗೂ ರಾತ್ರಿ ಹೊತ್ತಿನಲ್ಲಿ ಅಡುಗೆ ಮಾಡಿಕೊಂಡು, ಊಟ ಮಾಡಿ ಮತ್ತೆ ಪ್ರಯಾಣ ಮುಂದುವರೆಸಲಿರುವ ದಾಕ್ಷಾಯಿಣಿ, 13 ದಿನಕ್ಕೆ ಬೆಂಗಳೂರು ತಲುಪಲಿದ್ದಾರೆ. ಈ ವೇಳೆ ಅಪ್ಪು ಕುಟುಂಬಸ್ಥರನ್ನು ಭೇಟಿಯಾಗೋ ಇಚ್ಛೆ ಕೂಡ ಈ ಕುಟುಂಬಕ್ಕೆ ಇದೆ.

ಅಪ್ಪು ಅಂದರೆ ನನಗೆ ಪಂಚಪ್ರಾಣ – ದಾಕ್ಷಾಯಿಣಿ ಪಾಟೀಲ್

ಈ ಬಗ್ಗೆ ಟಿವಿ-9 ಡಿಜಿಟಲ್ ಜತೆಗೆ ಮಾತನಾಡಿದ ದಾಕ್ಷಾಯಿಣಿ ಪಾಟೀಲ್, ನನಗೆ ಮೊದಲಿನಿಂದಲೂ ಅಪ್ಪು ಅಂದರೆ ಪ್ರೀತಿ. ಅವರ ಎಲ್ಲ ಸಿನೇಮಾ ನೋಡಿದ್ದೇನೆ. ಕಳೆದ ಬಾರಿ ಧಾರವಾಡಕ್ಕೆ ಅವರು ಶೂಟಿಂಗ್ ಗೆ ಬಂದಾಗ ಭೇಟಿಯಾಗಬೇಕು ಅನ್ನೋ ಆಸೆ ಇತ್ತು. ಆದರೆ ಅದು ಸಾಧ್ಯವಾಗಲೇ ಇಲ್ಲ. ಆದರೆ ಇದೀಗ ಅವರ ಸಾವು ನಮ್ಮನ್ನು ದುಃಖಕ್ಕೆ ದೂಡಿದೆ. ಅವರನ್ನು ನೋಡಲು ಸಾಧ್ಯವಾಗಲಿಲ್ಲ. ಆದರೆ ಕೊನೆಗೆ ಅವರ ಸಮಾಧಿಯನ್ನಾದರೂ ನೋಡೋಣ ಅಂತಾ ನಿರ್ಧಾರ ಮಾಡಿದ್ದೇನೆ. ಅವರು ನನ್ನ ನೆಚ್ಚಿನ ಆರಾಧ್ಯದೈವವಾಗಿದ್ದರಿಂದ, ಅವರ ಸಮಾಜ ಸೇವೆಯಂತೆ ನಾನು ಕೂಡ ಅಭಿಯಾನ ಮಾಡುತ್ತಾ ಅಲ್ಲಿಗೆ ಹೋಗಲು ನಿರ್ಧರಿಸಿದ್ದೇನೆ. ನನಗೆ ಪತಿ ಹಾಗೂ ಗ್ರಾಮಸ್ಥರು ಧೈರ್ಯ ನೀಡಿದ್ದಾರೆ. ಅಲ್ಲಿಗೆ ಹೋಗಿ ಅಪ್ಪು ಸಮಾಧಿ ನೋಡುವವರೆಗೂ ನನಗೆ ಸಮಾಧಾನವೇ ಇಲ್ಲ ಅನ್ನುವಂತಾಗಿದೆ ಅಂತಾ ಹೇಳಿದರು. – ನರಸಿಂಹಮೂರ್ತಿ ಪ್ಯಾಟಿ

Puneeth Rajkumar: ಧಾರವಾಡದಿಂದ ಬೆಂಗಳೂರುವರೆಗೆ ದಾಕ್ಷಾಯಿಣಿ ರನ್ನಿಂಗ್ |Tv9Kannada

Published On - 11:28 am, Tue, 30 November 21

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು